ನ್ಯೂಜ್ ಡೆಸ್ಕ್:ಜಾಗತಿಕ ಮಟ್ಟದಲ್ಲಿ ಔಷಧಿ ಸಸ್ಯಗಳ ಕುರಿತಾಗಿ ಬಹುರಾಷ್ಟ್ರೀಯ ಸಂಸ್ಥೆಯಾಗಿ ರೂಪಗೊಂಡಿರುವ ಬೆಂಗಳೂರು ಮೂಲದ ಸಮಿ-ಸಬಿನ್ಸಾ ಗ್ರೂಪ್ ಕಂಪನಿ ತನ್ನ ನಿರ್ವಹಣಾ ತಂಡಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಶ್ರೀನಿವಾಸಪುರ ಮೂಲದ ಡಾ.ದೇವರಾಜ್ ರೆಡ್ಡಿ ಅವರನ್ನು ಘೋಷಿಸಿದೆ. “ಸಮಿ-ಸಬಿನ್ಸಾ ಗ್ರೂಪ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಬಹು ಎತ್ತರಕ್ಕೆ ಬೆಳೆದಿದೆ,ಸಮಿ ಸಬಿನ್ಸಾ ಗುಂಪು ಸಂಶೋಧನಾ ಆಧಾರಿತ ಜಾಗತಿಕ (MNC) ಹರ್ಬಲ್ ಔಷಧ ತಯಾರಿಕಾ ಸಂಸ್ಥೆಯಾಗಿದ್ದು ಸುಮಾರು 18 ದೇಶಗಳಲ್ಲಿ ಕಾರ್ಯಚಟುವಟುವಟಿಕೆ ವಿಸ್ತರಿಸಿದೆ, ಗುಣಮಟ್ಟದ ಸಸ್ಯಧಾರಿತ ಉತ್ಪನ್ನಗಳಿಂದ ವಿಶ್ವಾದ್ಯಂತ ತನ್ನದೆ ಆದಂತ network ಹೊಂದಿದೆ. ಡಾ.ದೇವರಾಜ್ ರೆಡ್ಡಿ ಔಷಧಿ ಸಸ್ಯಗಳ ಕುರಿತಾಗಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾರೆ. ಜಾಗತಿಕ B2B ಮಾರುಕಟ್ಟೆಯಲ್ಲಿ ಪ್ರಮಾಣಿತ ಗಿಡಮೂಲಿಕೆಗಳ ಸಾರಗಳು ಮತ್ತು ಸಂಶ್ಲೇಷಿತ ಅಣುಗಳ ತಯಾರಿಕೆಗೆ ಸಂಬಂಧಿಸಿದ ಗಮನಾರ್ಹ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ.ಉತ್ಪಾದನೆ ಮತ್ತು ಗುಣಮಟ್ಟದ ಕಾರ್ಯಾಚರಣೆಗಳ ಯೋಜನೆಗಳನ್ನು ಅಭಿವೃದ್ಧಿಪಡಿದ್ದಾರೆ.ಇವರು ಕರ್ನಾಟಕದ ಮೈಸೂರು ವಿಶ್ವವಿದ್ಯಾನಿಲಯದಿಂದ ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿರುತ್ತಾರೆ.
ಬೆಂಗಳೂರು ಪೀಣ್ಯದಲ್ಲಿನ ಸಮಿ-ಸಬಿನ್ಸಾ ಗ್ರೂಪ್ನ ಕಾರ್ಪೊರೇಟ್ ಕಚೇರಿಯಲ್ಲಿ ಕಾರ್ಯಚಟುವಟಿಕೆ ಇದ್ದು ಎಲ್ಲಾ ಉತ್ಪನ್ನಗಳು, ಕಾರ್ಯಾಚರಣೆಗಳು, ರಫ್ತು ಮತ್ತು ವಾಣಿಜ್ಯಗಳ ಘಟಕದ ಮುಖ್ಯಸ್ಥರ ಜೊತೆ ನೇರವಾಗಿ ಸಂಪರ್ಕದಲ್ಲಿರುತ್ತಾರೆ. ಆದ್ದರಿಂದ ಉತ್ಪಾದನೆ, ಪ್ರಕ್ರಿಯೆ ಸುಧಾರಣೆಗಳು ಮತ್ತು ಗುಣಮಟ್ಟವನ್ನು ಕೇಂದ್ರೀಕರಿಸುವ ಮೂಲಕ ನಮ್ಮ ಮುಂದುವರಿದ ವಿಸ್ತರಣೆಯನ್ನು ಬೆಂಬಲಿಸಲು ರಚನೆ ಮತ್ತು ಮೇಲ್ವಿಚಾರಣೆಯನ್ನು ಹೊಂದುವುದು ಮುಖ್ಯವಾಗಿದೆ” ಎಂದು ಸಬಿನ್ಸಾದ ಜಾಗತಿಕ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶಾಹೀನ್ ಮಜೀದ್ ಹೇಳುತ್ತಾರೆ“ಡಾ. ದೇವರಾಜ್ ಅವರ ವೈಜ್ಞಾನಿಕ ಹಿನ್ನೆಲೆ ಮತ್ತು ವ್ಯವಹಾರದ ಅನುಭವವ ಸಮಿ-ಸಬಿನ್ಸಾ ಗ್ರೂಪ್ಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅವರ ಕಾರ್ಯತಂತ್ರದ ಮೇಲ್ವಿಚಾರಣೆಯು ನಮ್ಮ ಸಾಂಸ್ಥಿಕ ಬೆಳವಣಿಗೆ ಮತ್ತು ಕಾರ್ಯಾಚರಣೆಯ ಉತ್ಕೃಷ್ಟತೆಯನ್ನು ಚಾಲನೆ ಮಾಡುವಲ್ಲಿ ಪ್ರಮುಖವಾಗಿರುತ್ತದೆ ಎಂದಿರುತ್ತಾರೆ.
ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿ ಕೊಡಿಚೆರುವು ಗ್ರಾಮದ ಸಾಮಾನ್ಯ ರೈತಾಪಿ ಕುಟುಂಬ ಸೀತಮ್ಮ ಮತ್ತು ನರಸಿಂಹರೆಡ್ಡಿ ಪುತ್ರ.ಕೊಡಿಚೆರುವು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಪೊರೈಸಿ ಪ್ರೌಡಶಾಲೆ ಹಾಗು ಪಿ.ಯು.ಸಿಯನ್ನು ಶ್ರೀನಿವಾಸಪುರದ ಸರ್ಕಾರಿ ಕಾಲೇಜಿನಲ್ಲಿ ಪೊರೈಸಿ ನಂತರ ಚಿಂತಾಮಣಿಯಲ್ಲಿ, ರಸಾಯನಶಾಸ್ತ್ರ ಪದವಿ ಗಳಿಸಿ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಸೆಂಟ್ರಲ್ ಕಾಲೇಜುನಿಂದ ಪಡೆದು ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಪಿ. ಎಚ್. ಡಿ ಮುಗಿಸಿ ಸುಮಾರು 28 ವರುಷಗಳ ಕಾಲ ಸಂಶೋಧನೆ ಆಧಾರಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದು ವೈಜ್ಞಾನಿಕ ಮತ್ತು ವ್ಯವಹಾರದ ಅನುಭವ, ಉತ್ಪಾದನೆಯಲ್ಲಿ ಗುಣಮಟ್ಟದ ಕೇಂದ್ರೀಕರಿಣ, ಮಾರುಕಟ್ಟೆ ಮತ್ತು ರಫ್ತು ವಿಸ್ತರಣೆ ಕ್ಷೇತ್ರದಲ್ಲಿರುವ ಅನುಭವ ಹೊಂದಿದವರಾಗಿದ್ದಾರೆ.