- ಐದು ಜನ ಸದಸ್ಯರು ಗೈರು
- ಸಂಖ್ಯಾ ಬಲವಿದ್ದರು ಅಧ್ಯಕ್ಷ
- ಸ್ಥಾನ ಕಳೆದುಕೊಂಡ ಜೆಡಿಎಸ್
ಶ್ರೀನಿವಾಸಪುರ:ಪುರಸಭೆಯ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾದರೆ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಅಬ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಶ್ರೀನಿವಾಸಪುರ: ಪುರಸಭೆ ಅಧ್ಯಕ್ಷ ಹಾಗು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಭಾಸ್ಕರ್ ಅಧ್ಯಕ್ಷರಾಗಿ ಚುನಾಯಿತರಾದರೆ,ಉಪಾಧ್ಯಕ್ಷ ಸ್ಥಾನದಲ್ಲಿ ಜೆಡಿಎಸ್ ಅಬ್ಯರ್ಥಿ ಸುನಿತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಒಟ್ಟು 23 ಸಂಖ್ಯಾಬಲದ ಪುರಸಭೆಯಲ್ಲಿ ಕಾಂಗ್ರೇಸ್ 8 ಸದಸ್ಯರು ಜೆಡಿಎಸ್ 11 ಸದಸ್ಯರು,ಪಕ್ಷೇತರರು 4 ಸದಸ್ಯರಿದ್ದರು ಇವರಲ್ಲಿ ಕಳೆದ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಮೂವರು ಪಕ್ಷೇತರ ಅಬ್ಯರ್ಥಿಗಳು ಕಾಂಗ್ರೆಸ್ ಪರವಾಗಿ ಘೋಷಿಸಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೆ ಮತ್ತೊರ್ವ ಸದಸ್ಯ ಜೆಡಿಎಸ್ ಗೆ ಘೋಷಿಸಿದ್ದರು.
ಜೆಡಿಎಸ್ ಏಳು ಸದಸ್ಯರು ಗೈರು!
ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಂ.ಭಾಸ್ಕರ್ ಹಾಗು ಜೆಡಿಎಸ್ ಅಭ್ಯರ್ಥಿಯಾಗಿ ಬಿ.ವೆಂಕಟರೆಡ್ಡಿ ಸ್ಪರ್ದಿಸಿದ್ದರು.ಕಾಂಗ್ರೆಸ್ ಅಭ್ಯರ್ಥಿ ಬಿ.ಎಂ.ಭಾಸ್ಕರ್ ಪರವಾಗಿ 11 ಸದಸ್ಯರು ಬೆಂಬಲಿಸಿದರೆ ಜೆಡಿಎಸ್ ಅಭ್ಯರ್ಥಿ ಬಿ.ವೆಂಕಟರೆಡ್ಡಿ ಪರವಾಗಿ ಏಳು ಸದಸ್ಯರು ಮತ್ತು ಶಾಸಕ ಹಾಗು ಸಂಸದರ ಸೇರಿ 9 ಸದಸ್ಯರು ಬೆಂಬಲಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಬ್ಯರ್ಥಿ ಸುನಿತಾ ನಾಮ ಪತ್ರ ಸಲ್ಲಿಸಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.ಪುರಸಭೆ ಮಾಜಿ ಅಧ್ಯಕ್ಷೆ ಲಲಿತಾಶ್ರೀನಿವಾಸ್ ಸೇರಿದಂತೆ ನಾಲ್ವರು ಜೆಡಿಎಸ್ ಸದಸ್ಯರು ಸೇರಿ ಒಟ್ಟು ಐದು ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸದೆ ಗೈರು ಹಾಜರಾಗಿದ್ದರು ಇದರಿಂದ ಪುರಸಭೆಯಲ್ಲಿ ಸಂಖ್ಯಾಬಲವಿದ್ದರು ಜೆಡಿಎಸ್ ಅಧ್ಯಕ್ಷ ಸ್ಥಾನ ಕಳೆದುಕೊಂಡಿದೆ. ಚುನಾವಣೆಯಿಂದ ದೂರ ಉಳಿದ ಸದಸ್ಯರು
ಪುರಸಭೆ ವಾರ್ಡ್ ನಂ 4 ತ್ಯಾಗರಾಜ ಬಡಾವಣೆಯ ಸಯ್ಯದ್ ನಿಷತ್ ಫಾತಿಮಾ,ವಾರ್ಡ್ ನಂ 11 ಅಂಬೇಡ್ಕರ್ ಪಾಳ್ಯ ಮತ್ತು ಸ್ವೀಪರ್ ಕಾಲೋನಿಯ ಎಂ.ಎನ್.ಲಲಿತಾ ಶ್ರೀನಿವಾಸ್,ವಾರ್ಡ್ ನಂ 14 ಗಫಾರ್ ಖಾನ್ ಮೊಹ್ಹಾಲ್ಲಾ-2 ರಸೂಲ್ ಖಾನ್(ಆರ್.ಜಿ.ಪಿ),ವಾರ್ಡ್ ನಂ 16 ಜಾಕೀರ್ ಹುಸೇನ್ ಮೊಹಲ್ಲಾ-2 ಶಬ್ಭಿರ್ ಖಾನ್(ತೊತ್ಲಾ ಶಬ್ಭಿರ್),ವಾರ್ಡ್ ನಂ 21 ಹೈದರಾಲ್ಲಿ ಮೊಹ್ಹಲ್ಲಾ-2 ವಹಿದಾ ಬೇಗಂ(ಕಿಸಾನ್) ಐದು ಮಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಂಡಿರಲಿಲ್ಲ.
ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯ ವೀಕ್ಷಕರಾಗಿ ಅಪರ ಜಿಲ್ಲಾಧಿಕಾರಿ ಎಸ್.ಎಂ. ಮಂಗಳಾ, ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಚುನಾವಣಾಧಿಕಾರಿಗಳಾಗಿದ್ದರು ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಭಾಗವಹಿಸಿದ್ದರು.ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಪೋಲಿಸರು ಬಿಗಿ ಬಂದ್ ಬಸ್ತ್ ಏರ್ಪಡಿಸಿದ್ದರು ಜಿಲ್ಲಾ ಹೆಚ್ಚುವರಿ ಪೊಲೀಸ್ ರಕ್ಷಣಾಧಿಕಾರಿ ರವಿಶಂಕರ್ ಉಸ್ತುವಾರಿ ವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭಾಸ್ಕರ್ ಅಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪುರಸಭೆ ಕಚೇರಿ ಮುಂಬಾಗದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.