ನೂಜ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ದಿನೇ ದಿನೇ ರಂಗೇರುತ್ತಿದ್ದು, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ನೇತೃತ್ವದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶನಿವಾರ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು,ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಿಡಿಪಿ ಅಧಿಕಾರಕ್ಕೆ ಬಂದರೆ ಉಚಿತ 200 ಯೂನಿಟ್ ವಿದ್ಯುತ್ ನೀಡುವುದಾಗಿ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ.ಜೊತೆಗೆ ಆರ್ಟಿಕಲ್ 370 ಮತ್ತು 35ಎ ರದ್ದತಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸಲು ಕೆಲಸ ಮಾಡುತ್ತೆವೆ ಕಾಶ್ಮೀರಿ ವಿದ್ವಾಂಸರನ್ನು ಗೌರವಯುತವಾಗಿ ರಾಜ್ಯಕ್ಕೆ ಕರೆತಂದು ಅವರಿಗೆ ಡಬಲ್ ಬೆಡ್ ರೂಂ ಮನೆಗಳನ್ನು ನಿರ್ಮಿಸಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ಅಜೆಂಡಾ ಇಲ್ಲದೆ ಮೈತ್ರಿ ಇಲ್ಲ
ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್ಸಿ) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಎರಡೂ ಪಕ್ಷಗಳು ಯಾವುದೇ ಅಜೆಂಡಾ ಹೊಂದಿಲ್ಲ ಮತ್ತು ಕೇವಲ ಸೀಟು ಹಂಚಿಕೊಂಡು ಅಧಿಕಾರಕ್ಕೆ ಬರುವುದಷ್ಟೇ ಮೈತ್ರಿ ಉದ್ದೇಶ. ತಮ್ಮ ಪಕ್ಷವು ಯಾವುದೇ ಅಜೆಂಡಾ ಇಲ್ಲದೇ ಕೇವಲ ಸೀಟು ಹಂಚಿಕೆಯ ಮಾತುಕತೆಯಿಂದಾಗಿ ಯಾವುದೇ ಮೈತ್ರಿ ಅಡಿಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿರುತ್ತಾರೆ.