ಶ್ರೀನಿವಾಸಪುರ: ಅರಕೇರಿಯ ಶ್ರೀಕೋದಂಡರಾಮಸ್ವಾಮಿ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಲೋಕಕಲ್ಯಾಣಾರ್ಥವಾಗಿ ಪೂಜೆ ಹವನ ಶ್ರೀರಾಮತಾರಕ ಹೋಮ ಹಾಗು ಶ್ರೀ ಸಿತಾರಾಮ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿತ್ತು.
ದೇವಾಲಯದ ಪ್ರಧಾನ ಪೊಷಕರಾದ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಕುಟುಂಬದವರಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ವೈಖಾನಸ ನಿಪುಣ ಯಲ್ದೂರುಶೇಷಾದ್ರಿ ನಡೆಸಿಕೊಟ್ಟರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ರಾಮತಾರಕ ಹೋಮ ಹಾಗು ಶ್ರೀ ಸಿತಾರಾಮ ಕಲ್ಯಾಣೋತ್ಸವ ನಡೆಸುವುದರಿಂದ ಶ್ರೀರಾಮಚಂದ್ರ ಸ್ವಾಮಿ ಅನುಗ್ರಹ ಸಿದ್ದಿಸುತ್ತದೆ ಸುಖ, ಸಮೃದ್ಧಿ ಪ್ರಾಪ್ತಿ ಹಾಗು ಕುಟುಂಬದಲ್ಲಿ ಒಗ್ಗಟ್ಟು ಮೂಡುತ್ತದೆ. ಸೀತಾಮಾತೆ ಪೂಜೆಯಿಂದ ಸಂಸಾರದಲ್ಲಿರುವ ಭಿನ್ನಾಭಿಪ್ರಾಯಗಳು ಮನಸ್ತಾಪಗಳು ದೂರವಾಗುತ್ತವೆ. ಲಕ್ಷ್ಮಣನ ಪೂಜೆಯಿಂದ ಕುಟುಂಬಕ್ಕೆ ಭಗವಂತ ಶ್ರೀರಾಮನ ರಕ್ಷಣೆ ದೊರೆಯುತ್ತದೆ.ಭರತನ ಪೂಜೆಯಿಂದ ಕುಟುಂಬದಲ್ಲಿ ನ್ಯಾಯ ನೀತಿ ನೆಲೆಸುತ್ತದೆ. ಶತ್ರುಘ್ನನ ಪೂಜೆಯಿಂದ ಸೋದರರ ನಡುವೆ ಉತ್ತಮ ಅನ್ಯೋನ್ಯತೆ ಕಂಡುಬರುತ್ತದೆ. ಶ್ರೀ ಆಂಜನೇಯ ಸ್ವಾಮಿಯ ಪೂಜೆಯಿಂದ ಶತ್ರುಗಳು ಮಿತ್ರರಾಗಿ ಬದಲಾಗುತ್ತಾರೆ. ಶತ್ರುಗಳಿಂದ ಉಂಟಾಗುತ್ತಿರುವ ತೊಂದರೆ ಸಂಪೂರ್ಣ ನೀವಾರಣೆಯಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೆಂಕಟಶಿವಾರೆಡ್ಡಿ,ಬೆಂಗಳೂರಿನ ಉದ್ಯಮಿ ರಾಮಾಂಜನೇಯ,ಡೈರಿ ಸೆಕ್ರೆಟರಿ ಶ್ರೀನಿವಾಸಯ್ಯಶೆಟ್ಟಿ,ಗ್ರಾಮದ ಹಿರಿಯರಾದ ಅಪ್ಪಯ್ಯಶೆಟ್ಟಿ,ಚಲಪತಿರಾವ್,ಗಿರಿರಾಜಶೆಟ್ಟಿ,ಪ್ರಕಾಶ್,ನಾಗೇಶ್ ವಿಶ್ವನಾಥ್,ರಾಮಯ್ಯಶೇಟ್ಟಿ,ಲಕ್ಷ್ಮಣ, ಮೋಹನಾಚಾರ್ಲು,ಮುಂತಾದವರು ಇದ್ದರು