ನ್ಯೂಜ್ ಡೆಸ್ಕ್:ಅಮೆರಿಕದಲ್ಲಿ ಸೊಳ್ಳೆ ಕಡಿತದಿಂದ ‘ಈಸ್ಟರ್ನ್ ಎಕ್ವೈನ್ ಎನ್ಸೆಫಾಲಿಟಿಸ್’ ಎಂಬ ವೈರಸ್ ಸೋಂಕಿಗೆ ಒಳಗಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದೇಶದ ಆಡಳಿತವು ಎಚ್ಚೆತ್ತುಕೊಂಡಿದ್ದು ಮ್ಯಾಸಚೂಸೆಟ್ಸ್, ವರ್ಮೊಂಟ್ ಮತ್ತು ಇತರ ಪ್ರದೇಶಗಳಲ್ಲಿ ಸರ್ಕಾರ ಹೈ ಅಲರ್ಟ್ ಘೋಷಿಸಿದೆ,ಸೊಳ್ಳೆಗಳಿಂದ ಈ ಸೋಂಕು ಹರಡುವ ಹಿನ್ನೆಲೆಯಲ್ಲಿ ಜನರಿಗೆ ಸ್ಪ್ರೇಗಳನ್ನು ನೀಡುತ್ತಿದ್ದು, ಟ್ರಕ್ಗಳ ಮೂಲಕವೂ ಸ್ಪ್ರೇ ಸಿಂಪಡಣೆ ಮಾಡಲಾಗುತ್ತಿದೆ. ಪ್ಲೇಮೌತ್ ಸೇರಿದಂತೆ ಹಲವು ಕೌಂಟಿಗಳಲ್ಲಿ ಈಗಾಗಲೇ ಸ್ಪ್ರೇ ಸಿಂಪಡಣೆ ಮಾಡಲಾಗಿದೆ.ಅನಧಿಕೃತ ಲಾಕ್ಡೌನ್ ಅನ್ನು ಜಾರಿಗೊಳಿಸಲಾಗುತ್ತಿದೆ. ಉದ್ಯಾನವನಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಹೆಲಿಕಾಪ್ಟರ್ ಮೂಲಕ ಔಷಧ ಸಿಂಪಡಿಸಲಾಗುತ್ತಿದೆ. ಈ ವೈರಸ್ ಸೋಂಕಿತರಲ್ಲಿ ಜ್ವರ, ಅತಿಸಾರ ಮತ್ತು ತಲೆನೋವಿನಂತಹ ಲಕ್ಷಣಗಳು ಕಂಡುಬರುತ್ತವೆ. ಅದಕ್ಕೆ ಸದ್ಯಕ್ಕೆ ಲಸಿಕೆ ಇಲ್ಲ ಎನ್ನಲಾಗಿದೆ.
Breaking News
- ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ಅಪಘಾತ ಆಂಧ್ರದ ಇಬ್ಬರ ಸಾವು!
- ಕುತೂಹಲಕ್ಕೆ ಕಾರಣವಾದ CMR ಶ್ರೀನಾಥ್ ಶ್ರೀನಿವಾಸಪುರ ಟೆಂಪಲ್ ರೌಂಡ್ಸ್!
- ಶ್ರೀನಿವಾಸಪುರದಾದ್ಯಂತ ದೇಗುಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ
- ಮೇಗಾಸ್ಟಾರ್ ಮಗನ “ಗೇಮ್ ಚೇಂಜರ್” ಸಿನಿಮಾ ಕಥೆ IAS ಅಧಿಕಾರಿದು!
- ತಮಿಳುನಾಡು ರಾಣಿಪೇಟೆ ಬಳಿ ರಸ್ತೆ ಅಪಘಾತ ಶ್ರೀನಿವಾಸಪುರದ ನಾಲ್ವರು ಸಾವು!
- ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ DC ರವಿ
- ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಉತ್ತನೂರು ರಾಮಣ್ಣ!
- ಅಯೋಧ್ಯೆ ರಾಮಾಲಯಕ್ಕೆ ರಹಸ್ಯ ಕ್ಯಾಮರಾದೊಂದಿಗೆ ಪ್ರವೇಶಿಸಿದ್ದ ವ್ಯಕ್ತಿ ವಶಕ್ಕೆ!
- ಶ್ರೀನಿವಾಸಪುರ-ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಯಲ್ಲಿ ಹಗಲು ಕಳ್ಳತನ!
- ರಾಯಲ್ಪಾಡು ಬಳಿ ಹಾಡು ಹಗಲು ಒಂಟಿ ಮನೆ ದೋಚಿರುವ ಕಳ್ಳರು!
Wednesday, January 15