ಶ್ರೀನಿವಾಸಪುರ:ಏಳ ಬಳಕೆ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ನೀರಾಕರಿಸಿ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಕೋರಿದರು
ಅವರು ಪುರಸಭಾ ಸಭಾಂಗಣದಲ್ಲಿ ಶ್ರೀನಿವಾಸಪುರ ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಡಿಮೆ ಉಪಯುಕ್ತತೆ ಮತ್ತು ಪರಿಸರ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕುರಿತು ಸರ್ಕಾರ ಅದೇಶಿಸಿದ್ದು ಈ ನಿಯಮ ಎಲ್ಲರೂ ಪಾಲಿಸುವ ಮೂಲಕ ಪ್ಲಾಸ್ಟಿಕ್ ಮುಕ್ತ ಜೀವನ ಸಾಗಿಸಲು ಮುಂದಾಗೋಣ ಪ್ಲಾಸ್ಟಿಕ್ನಿಂದ ಆಗುತ್ತಿರುವ ದುಷ್ಪರಿಣಾಮಗಳು ಮುಂದಿನ ಪೀಳಿಗೆ ಅನುಭವಿಸುವ ಸಮಸ್ಯೆಗಳ ಕುರಿತಂತೆ ಹೇಳಿದ ಅವರು ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಅನೇಕ ಬಾರಿ ದಂಡವನ್ನು ವಿಧಿಸಿದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಸಭೆಯಲ್ಲಿದ್ದ ವ್ಯಾಪಾರಸ್ಥರ ಬಳಗ ತಮ್ಮ ಬಳಿ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ದಿನಾಂಕ ಸೆಪ್ಟಂಬರ್ 5 ತನಕ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದರು ಇದಕ್ಕೆ ಉತ್ತರಿಸಿದ ಅಧ್ಯಕ್ಷ ಗಡವು ಮುಗಿದ ನಂತರ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿದರೆ ಗ್ರಾಹಕರು ಹಾಗು ಅಂಗಡಿ ಮಾಲೀಕರಿಗೆ, ಸಾಗಾಣಿಕೆದಾರರಿಗೂ ದಂಡವನ್ನು ವಿಧಿಸುವುದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ, ಟೀ-ಕಾಫೀ ಅಂಗಡಿ, ಬೀದಿ-ಬದಿ ವ್ಯಾಪಾರಸ್ಥರು ಚಿಕನ್-ಮಟನ್ ಅಂಗಡಿ,ಹೋಟೆಲ್, ಬೇಕರಿ, ಬಾರ್ ಮತ್ತು ರೆಸ್ಟೋರೆಂಟ್, ಕಲ್ಯಾಣ ಮಂಟಪಗಳಲ್ಲೂ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬಾರದು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷೆ ಸುನೀತಾ, ಮುಖ್ಯಾಧಿಕಾರಿ ವೈ. ಎನ್.ಸತ್ಯನಾರಾಯಣ, ಕಛೇರಿ ವ್ಯವಸ್ಥಾಪಕ ನವೀನ್ ಚಂದ್ರ ಆರೋಗ್ಯ ನಿರೀಕ್ಷ ಕೆ. ಜಿ. ರಮೇಶ್, ಕಂದಾಯಾಧಿಕಾರಿ ವಿ.ನಾಗರಾಜು, ಕಂದಾಯ ನಿರೀಕ್ಷಕ ಎನ್. ಶಂಕರ್ ವರ್ತಕರ ಸಂಘದ ಅಧ್ಯಕ್ಷ ಸೂರ್ಯನಾರ್ಯಣಶೆಟ್ಟಿ,ಬಿಂದು ಶ್ರೀನಿವಾಸ್,ವಾಸವಿ ಸೀತಾರಾಮ್ ಸೇರಿದಂತೆ ವಿವಿಧ ಬಗೆಯ ವರ್ತಕರು ಹೋಟೆಲ್ ಮಾಲಿಕರು ಸಭೆಯಲ್ಲಿ ಭಾಗವಹಿದ್ದರು.