ನ್ಯೂಜ್ ಡೆಸ್ಕ್:ಪ್ರಪಂಚದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ವಿಶ್ವ ಪ್ರಸಿದ್ಧ, ಹಿಂದೆಲ್ಲ ತಿರುಪತಿ ಪ್ರಸಾದ ಎಂದರೆ ತುಪ್ಪದ ಘಮಲು ಅಸ್ವಾಧಿಸುತ್ತ ಕಣ್ಣಿಗೊತ್ತಿಕೊಂಡು ಸೇವನೆ ಮಾಡುವುದು ಆಸ್ತಿಕರ ಮಾತು.
ಇಂತಹ ಲಡ್ಡುಗೆ ಬಳಸುತ್ತಿದ್ದ ತುಪ್ಪ ಕರ್ನಾಟಕದ ಹೆಮ್ಮೆಯ ರೈತಾಪಿ ಜನರು ಉತ್ಪಾಧಿಸುವ ಹಾಲಿನಿಂದ ತಯಾರಿಸುವ ನಂದಿನಿ ತುಪ್ಪ ಅಗಿತ್ತು ನಂತರದ ಬೆಳವಣಿಗೆಯಲ್ಲಿ ಕಡಿಮೆ ಮೊತ್ತಕ್ಕೆ TTD ಬೋರ್ಡ್ ಗೆ ತುಪ್ಪ ಮಾರಾಟ ಮಾಡಲು ಕರ್ನಾಟಕ ಹಾಲು ಮಹಾಮಂಡಲಿ ಒಪ್ಪಿರಲಿಲ್ಲ ಇದನ್ನೆ ನೆಪ ಮಾಡಿಕೊಂಡ ಅಂದಿನ ತಿರುಮಲ-ತಿರುಪತಿ ದೇವಾಲಯದ ಆಡಳಿತ ಮಂಡಳಿಯವರು ನಂದಿನಿ ತುಪ್ಪ ತಿರಸ್ಕರಿಸಿ ದೂರದ ಉತ್ತರಪ್ರದೇಶದ ಪ್ರೀಮಿಯರ್ L-1 ಮತ್ತು ಆಲ್ಫಾ ಕಂಪನಿ L-2 ಅಡಿಯಲ್ಲಿ ತುಪ್ಪವನ್ನು ಪೂರೈಸಲು ಒಪ್ಪಂದ ಮಾಡಿಕೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ನಂದಿನಿ ಸಂಸ್ಥೆ ಪಾಲ್ಗೊಳ್ಳಲು ಅವಕಾಶ ನೀಡದೆ ಯೋಜಿತವಾಗಿ ಅಂದಿನ TTD ಬೋರ್ಡ್ ಅಧಿಕಾರಿಗಳು ನಂದಿನಿ ತುಪ್ಪವನ್ನು ದೂರ ಇಟ್ಟಿದ್ದರು.ಇದು ಮುಂದೆ ಆಂಧ್ರ ರಾಜಕೀಯದಲ್ಲೂ ಹಾಗು ಕರ್ನಾಟಕ ರಾಜಕೀಯದಲ್ಲೂ ದೊಡ್ದಮಟ್ಟದಲ್ಲಿ ಚರ್ಚೆಯಾಗಿ ಅರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.
ಸಾಮನ್ಯ ಭಕ್ತರು ಸಹ ತಿರುಪತಿ ತಿಮ್ಮಪ್ಪನ ಲಡ್ಡು ರುಚಿ ಮೊದಲಿನಂತೆ ಇಲ್ಲ ನಂದಿನಿ ತುಪ್ಪ ಬಳಸುವ ಸಂದರ್ಭದಲ್ಲಿ ಲಡ್ಡು ಪರಿಮಳ ಅದ್ಭತವಾಗಿತ್ತು. ರುಚಿಯೂ ಅಮೋಘವಾಗಿತ್ತು. ನಂದಿನಿ ತುಪ್ಪವನ್ನು ಬಳಸುವುದನ್ನು ನಿಲ್ಲಿಸಿದ ನಂತರದಲ್ಲಿ ಮೊದಲಿನ ಪರಿಮಳ ಹಾಗೂ ಸ್ವಾದ ಈಗ ಲಡ್ದು ನಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಂದಿನಿಗೆ ಅವಕಾಶ ನೀಡಿದ ಆಂಧ್ರದ ನೂತನ ಸರ್ಕಾರ
ಎರಡು ತಿಂಗಳ ಹಿಂದೆ ಆಂಧ್ರದಲ್ಲಿ ನೂತನವಾಗಿ ರಚನೆಯಾಗಿದ್ದು NDA ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬಂದಿದೆ ಇದರ ಮೊದಲ ಕೆಲಸವಾಗಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತಕ್ಕೆ ಚುರುಕು ಮುಟ್ಟಿಸಿದಾಗ ಹಿಂದಿನ ಆಡಳಿತ ಮಂಡಳಿಯ ನಿರ್ಣಯಗಳನ್ನು ಪಕ್ಕಿಕ್ಕೆಟ್ಟು ಅಲ್ಲಿನ ಸರ್ಕಾರ ಹೊಸ ಅಧಿಕಾರಿಗಳನ್ನು ನೇಮಿಸಿತ್ತು ಅದರಂತೆ TTD ಬೋರ್ಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ಜೆ.ಶ್ಯಾಮಲರಾವ್ ಅವರನ್ನು ನೇಮಿಸಿತ್ತು ಅವರು ಮೊದಲ ಪ್ರಯತ್ನವಾಗಿ ಭಕ್ತರಿಗೆ ಗುಣಮಟ್ಟದ ಊಟ ತಿಂಡಿ ಪ್ರಸಾದ ಒದಗಿಸುವ ಪ್ರಯತ್ನವಾಗಿ ತಿರುಪತಿ ತಿರುಮಲ ದೇವಸ್ಥಾನದ ಆಡಳಿತ (ಟಿಡಿಪಿ) ಮಂಡಳಿ ಮತ್ತೆ ಕರ್ನಾಟಕದ ಕೆಎಂಎಫ್ ನೊಂದಿಗೆ ನಂದಿನಿ ತುಪ್ಪ ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪದ ಘಮಲು ಮತ್ತೆ ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದ ಲಡ್ಡುವಿನಲ್ಲಿ ಮೂಡಲಿದೆ.
ತಿರುಮಲ ತಿರುಪತಿಗೆ ಕೆಎಂಎಫ್ ನಂದಿನಿ ತುಪ್ಪ ಸರಬರಾಜು ಮಾಡಬೇಕೆಂದು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ಟೆಂಡರ್ ಮೂಲಕ ಬೇಡಿಕೆ ನೀಡಿದೆ.2024-24ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರಾರಂಭಿಕವಾಗಿ 350 ಮೆಟ್ರಿಕ್ ಟನ್ ನಂದಿನಿ ತುಪ್ಪ ಸರಬರಾಜು ಆಗಲಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹಕಚೇರಿ ಕೃಷ್ಣಾದಲ್ಲಿ ಮೊದಲ ಹಂತದ ತುಪ್ಪ ಸರಬರಾಜು ಟ್ಯಾಂಕರ್ಗೆ ಚಾಲನೆ ನೀಡಿದರು.
ಈ ಹಿಂದೆ ಹತ್ತು ವರ್ಷಗಳ ಕಾಲ ಆಂಧ್ರಪ್ರದೇಶದಲ್ಲಿರುವ ತಿರುಮಲ ದೇವಸ್ಥಾನಕ್ಕೆ ಅಗ್ಮಾರ್ಕ್ ಸ್ಪೆಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಶ್ರೀವಾರಿ ಪ್ರಸಾದ ತಯಾರಿಕೆಗೆ ಕೆಎಂಎಫ್ ಸರಬರಾಜು ಮಾಡಿತ್ತು. ಅಂತೆಯೇ ಇನ್ನು ಮುಂದೆಯೂ ಟ್ಯಾಂಕರ್ ಮೂಲಕ ಹಸುವಿನ ಶುದ್ಧ ತುಪ್ಪವನ್ನು ಸರಬರಾಜು ಮಾಡಲಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಕೆ.ಜಗದೀಶ್ ಅವರು ತಿಳಿಸಿದ್ದಾರೆ.