ನ್ಯೂಜ್ ಡೆಸ್ಕ್:ಅಧಿಕಾರಿಗಳ ಅಕ್ರಮಕ್ಕೆ ಕೊನೆ ಮೊದಲು ಇಲ್ಲದಂತಾಗಿದೆ ನರೇಗಾ ಯೊಜನೆಯ ಅಡಿಯಲ್ಲಿ ಪ್ರಕೃತಿಯಲ್ಲೂ ಹಣ ಲಪಟಾಯಿಸುವ ದಂದೆ ಚಾಮರಾಜನಗರದಲ್ಲಿ ನಡದಿದೆ ಎನ್ನಲಾಗಿದ್ದು ಪರಿಸರ ಪ್ರೇಮಿಯೊಬ್ಬ ಸ್ವಯಂ ಬೆಳಸಿದ್ದ ಗಿಡಗಳಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGNREGA)ಯಲ್ಲಿ 1.87 ಲಕ್ಷ ಹಣ ಮಾಡಿಕೊಂಡಿರುವ ಘಟನೆ ನಡೆದಿದೆ ಎನ್ನಲಾಗಿದೆ.
ಪರಿಸರ ಪ್ರೇಮಿ ವೆಂಕಟೇಶ್ ಎನ್ನುವರು ಕಷ್ಟಪಟ್ಟು ಬಿಸಿಲಲ್ಲಿ ಬೆವರು ಸುರಿಸಿ ಸಸಿಗಳನ್ನು ನಟ್ಟಿದ್ದರು ಆದನ್ನು ಮನರೇಗಾದಡಿ ಅಧಿಕಾರಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಮನರೇಗಾದಡಿ ಅಕ್ರಮ ನಡೆಯಬಾರದೆಂದು ಹಲವು ಕಟ್ಟುಪಾಡುಗಳನ್ನು ರೂಪಿಸಲಾಗಿದೆ.ಇದರ ನಡುವೆಯೂ ಅಕ್ರಮ ನಡೆಯುತ್ತಿವೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ.ಚಾಮರಾಜನಗರ ಹೊರ ವಲಯದ ಬೇಡರಪುರ ಬಳಿಯ ವಿಶ್ವವಿದ್ಯಾಲಯದ ಬಳಿಯ ರಸ್ತೆ ಬದಿ ಹಾಗೂ ಆವರಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಣೆ ಮಾಡಿದ್ದರು ಇದನ್ನು ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು 2024-25 ರ ಸಾಲಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಎಂದು ತೋರಿಸಿ ನರೇಗಾ (MGNREGA) ಯೋಜನೆಯಲ್ಲಿ 1.87 ಲಕ್ಷ ರೂ ಎಂದು ದಾಖಲಿಸಿ ಅಕ್ರಮವಾಗಿ ಹಣಮಾಡಿಕೊಂಡಿದ್ದಾರೆ ಎಂಬ ಆರೋಪ ಇದೆ.
ಪರಿಸರ ಪ್ರೇಮಿ ವೆಂಕಟೇಶ್ ಹೇಳುವಂತೆ ನಾನು ಗಿಡ ನೆಟ್ಟಿರುವುದು ಸತ್ಯ ಆದರೆ ಅರಣ್ಯ ಇಲಾಖೆ ಇದಕ್ಕೆ ಬಿಲ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಯಾರದೋ ಬೆವರಿನ ದುಡಿಮೆ,ಮತ್ಯಾರಿಗೋ ಗಂಟಾಗಿದೆ ಗಿಡ ನೆಡದೆ ಅಧಿಕಾರಿಗಳು ಬಿಲ್ ಮಾಡಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಮನರೇಗಾ ಯೋಜನೆಯಡಿ ಗಿಡಗಳನ್ನು ನೆಟ್ಟಿದ್ದರೆ ನರೇಗಾ ಯೋಜನೆಯ ನಾಮಫಲಕದಲ್ಲಿ ಎಷ್ಟು ಗುಂಡಿ ತೆಗೆಯಲಾಗಿದೆ? ಎಷ್ಟು ಗಿಡಗಳನ್ನು ನೆಡಲಾಗಿದೆ? ಎಷ್ಟು ಕಾರ್ಮಿಕರನ್ನು ಬಳಸಲಾಗಿದೆ ಎನ್ನುವುದರ ವಿವರಗಳನ್ನು ಎಲ್ಲೂ ನಮೂದಿಸಿಲ್ಲ. 187 ಗಿಡಗಳನ್ನು ನೆಟ್ಟರೆ 1.87 ಲಕ್ಷ ರೂ. ಖರ್ಚಾಗುತ್ತಾ ಅನ್ನೋ ಪ್ರಶ್ನೆ ಕೂಡ ಉದ್ಭವಿಸುತ್ತದೆ. ವೆಂಕಟೇಶ್ ಗಿಡ ನೆಟ್ಟಿರುವುದು ಬಿಟ್ಟರೆ ಬೇರೆ ಯಾರೂ ಕೂಡ ಈ ಸ್ಥಳದಲ್ಲಿ ಗಿಡ ನೆಟ್ಟಿಲ್ಲ. ಇದ್ದರೂ ಕೂಡ ಬೆರಳೆಣಿಕೆಯಷ್ಟು ಗಿಡಗಳಿವೆ. ಅಧಿಕಾರಿಗಳ ಪ್ರಕಾರವೇ 187 ಗಿಡ ನೆಡಲು 1.87 ಲಕ್ಷ ರೂ. ಬೇಕಾ ಅನ್ನು ಹಲವು ರಿತಿಯ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಧಿಕಾರಿಗಳನ್ನು ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಗಿಡ ನೆಡಲೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರಂತೆ 180 ಗಿಡ ನೆಟ್ಟಿದ್ದಾರೆ ಅಂತಾ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇವೆ.ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.