ನ್ಯೂಜ್ ಡೆಸ್ಕ್:ಆಂಧ್ರದ ಚಿತ್ತೂರು ಜಿಲ್ಲೆಯ ವೆಂಕಟಗಿರಿ ಕೋಟ (ವಿ.ಕೋಟ) ಮಂಡಲ ಕೇಂದ್ರ ಮುಳಬಾಗಿಲು ನಗರಕ್ಕೆ ಇಪ್ಪತೈದು ಕೀ.ಮಿ ದೂರದ ಊರು ಮಂಡಲ ಕೇಂದ್ರದಲ್ಲಿ ನಡೆದ ಸಣ್ಣ ಜಗಳ ಬಿರುಗಾಳಿಯಾಗಿ ಮಾರ್ಪಟ್ಟಿದೆ. ಪರಿಸ್ಥಿತಿ ಉದ್ವಿಗ್ನಗೊಂಡಿದ್ದರಿಂದ ಪೊಲೀಸರು ವಿ.ಕೋಟ ಪಟ್ಟಣದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ.
ಅಂಗಡಿ, ವ್ಯಾಪಾರ ಕೇಂದ್ರಗಳು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಕಚೇರಿಗಳು ಮುಚ್ಚಲಾಗಿದೆ ಚಿತ್ತೂರು ಜಿಲ್ಲಾಧಿಕಾರಿ ಸುಮಿತ್ ಕುಮಾರ್ ಹಾಗೂ ಎಸ್ಪಿ ಮಣಿಕಂಠ ಚಂದೋಲು ವಿ.ಕೋಟದಲ್ಲಿ ವಾಸ್ತವ್ಯ ಹೂಡಿ ಕಾಲಕಾಲಕ್ಕೆ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಬಿಗುವಿನ ವಾತಾವರಣ ನಿರ್ಮಾಣವಾಗಿರುವ ವಿ.ಕೋಟೆ ಪಟ್ಟಣದಲ್ಲಿ ಶಾಂತಿ ಸಭೆಗಳನ್ನು ಕರೆದ ಜಿಲ್ಲಾಡಳಿತ ಎರಡು ಕಡೆಯವರಾನ್ನು ಸಮಾಧಾನ ಪಡೆಸುವಂತ ಕೆಲಸವನ್ನು ಮಾಡುತ್ತಿದೆ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಅಧಿಕಾರಿಗಳು ಎರಡೂ ಕಡೆಯ ಜನರನ್ನು ಕರೆದು ಶಾಂತಿ ಸಭೆಗಳ ಮೂಲಕ ಮಾತುಕತೆ ನಡೆಸುತ್ತಿದ್ದಾರೆ.
ಸೋಮವಾರ ಮಹಿಳೆಯೊಬ್ಬರಿಗೆ ಕ್ರಿಕೆಟ್ ಚೆಂಡು ತಗುಲಿದ ನಂತರ ಉಂಟಾದ ವಿವಾದ ಘರ್ಷಣೆಗೆ ಕಾರಣವಾಗಿದ್ದು ಒಂದು ಗುಂಪಿನ ಜನ ಮತ್ತೊಂದು ಗುಂಪಿನ ಮೇಲೆ ಕತ್ತಿಗಳು ಮತ್ತು ರಾಡ್ಗಳಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.
ಪಲಮನೇರು ಶಾಸಕ ಅಮರನಾಥರೆಡ್ಡಿ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಗಾಲಿ ಭಾನುಪ್ರಕಾಶ್ ರೆಡ್ಡಿ ವಿ.ಕೋಟದಲ್ಲಿ ಪರಸ್ಪರ ಹಲ್ಲೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಗಾಯಾಳು ಕುಟುಂಬಗಳನ್ನು ಭೇಟಿ ಮಾಡಿದ್ದಾರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.ಜನತೆ ಸಂಯಮದಿಂದ ವರ್ತಿಸುವಂತೆ ಶಾಸಕ ಅಮರನಾಥರೆಡ್ಡಿ ಮನವಿ ಮಾಡಿದ್ದಾರೆ ಘಟನೆ ದುರದೃಷ್ಟಕರವಾಗಿದ್ದು, ಅಣ್ಣ-ತಮ್ಮಂದಿರಂತೆ ಒಗ್ಗಟ್ಟಾಗಿ ಇದ್ದ ಊರಿನಲ್ಲಿ ಸಣ್ಣ ಜಗಳ ಊರು ಹೊತ್ತಿ ಉರಿಯುವಂತ ಪರಿಸ್ಥಿಗೆ ತಲುಪಿರುವುದು ಬೇಸರದ ಸಂಗತಿ ಎಂದಿದ್ದಾರೆ.ಘರ್ಷಣೆಯಲ್ಲಿ ಅಂಗಡಿ ಮುಂಗಟ್ಟು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು ಸರಕಾರ ಶ್ರಮಿಸಲಿದೆ ಎಂದು ಶಾಸಕರು ಭರವಸೆ ನೀಡಿದ್ದಾರೆ,ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.
ಜಗಳಕ್ಕೆ ಕಾರಣ ಏನು? ವಿ.ಕೋಟದಲ್ಲಿ ಸೋಮವಾರ ಯುವಕರು ಕ್ರಿಕೆಟ್ ಆಡುತ್ತಿದ್ದರು ಅದೆ ಮಾರ್ಗವಾಗಿ ಸಾಗುತ್ತಿದ್ದ ಮಹಿಳೆಗೆ ಕ್ರಿಕೆಟ್ ಚೆಂಡು ಬಡಿದಿದೆ. ಇದನ್ನು ಪ್ರಶ್ನಿಸಿದ ಮಹಿಳೆಯನ್ನು ನಿಂದಿಸಲಾಗಿದೆ ಆಕೆ ಮತ್ತೆ ಕುಟುಂಬದವರೊಂದಿಗೆ ಸ್ಥಳಕ್ಕೆ ಬಂದಾಗ ಕ್ರಿಕೆಟ್ ಆಡುತ್ತಿದ್ದ ಯುವಕರ ಗುಂಪು ಮಹಿಳೆ ಹಾಗು ಮನೆಯವರ ಮೇಲೆ ಹಲ್ಲೆ ನಡೆಸಿದೆ.ಭಯದಿಂದ ಮನೆಯೊಳಗೆ ಹೋದರೂ ಬಿಡದೆ ಹತ್ತಾರು ಮಂದಿ ಬಂದು ಹಲ್ಲೆ ಮಾಡಿದ್ದಾರೆ. ಕತ್ತಿ ಮತ್ತು ರಾಡ್ ಗಳಿಂದ ದಾಳಿ ಮಾಡಿ ವಿದ್ವಂಸ ಸೃಷ್ಟಿಸಿದ್ದಾರೆ ಕ್ರಿಕೆಟ್ ಬಾಲ್ ತಗುಲಿದ ಬಳಿಕ ಮಹಿಳೆಯ ಪರವಾಗಿ ದೂರು ದಾಖಲಿಸಲು ಪೊಲೀಸರ ಮೊರೆ ಹೋಗಿದ್ದಾರೆ.ವಿ.ಕೋಟ ಪಟ್ಟಣ ಎರಡು ಗುಂಪುಗಳಾಗಿ ವಿಭಜನೆಗೊಂಡು ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ದಾಳಿ ನಡೆಸಿದೆ ಅದರಲ್ಲಿ ಒಂದು ಗುಂಪು ಕತ್ತಿಗಳು, ರಾಡುಗಳನ್ನು ಬಳಸಿ ಸಿಕ್ಕ-ಸಿಕ್ಕವರನ್ನು ಥಳಿಸಿದ್ದಾರೆ. ರಕ್ಷಣೆ ಕೋರಿ ಅಂಬೇಡ್ಕರ್ ವೃತ್ತದಲ್ಲಿ ಗುಂಪೊಂದು ಧರಣಿ ನಡೆಸಿದೆ ವಿಷಯ ತಿಳಿದ ತಕ್ಷಣ ಪಲಮನೇರು ಡಿಎಸ್ಪಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರನ್ನು ಸಮಾಧಾನ ಪಡಿಸುವ ಪ್ರಯತ್ನ ನಡೆಸಿದ್ದಾರೆ.
ಇನ್ನೊಂದು ಗುಂಪು ಪೋಲಿಸ್ ಠಾಣೆಗೆ ಬಂದಿದೆ ಅದೆ ಸಮಯಕ್ಕೆ ಮಹಿಳಾ ಗುಂಪೊಂದು ಬಂದಿದ್ದು ಅವರ ಮೇಲೂ ಹಲ್ಲೆಗಳು ನಡೆದ
ಪರಿಣಾಮ ಇಡೀ ಪ್ರದೇಶ ರಣರಂಗವಾಗಿದೆ ಹಲವು ಅಂಗಡಿಗಳು ಧ್ವಂಸಗೊಂಡಿವೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರೂ ಸಾಧ್ಯವಾಗದ ಪರಿಸ್ಥಿತಿ ವಿ.ಕೋಟೆಯಲ್ಲೆ ವಾಸ್ಥವ್ಯ ಹೂಡಿರುವ ಜಿಲ್ಲಾಧಿಕಾರಿ, ಎಸ್ಪಿ ಕಾನೂನು ಸುವೆವಸ್ಥೆ ಕಾಪಾಡಲು ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಘಟನೆಯಲ್ಲಿ ದಿನಪತ್ರಿಕೆ ವರದಿಗಾರನೊಬ್ಬ ಗಾಯಗೊಂಡಿದ್ದು ಪಟ್ಟಣದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಮುಂದೆನಾಗುತ್ತದೋ ಗೊತ್ತಿಲ್ಲದ ಪರಿಸ್ಥಿತಿಯಲ್ಲಿ ಅಲ್ಲಿನ ಜನ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದೆ ಎನ್ನಲಾಗುತ್ತಿದೆ.