ಶ್ರೀನಿವಾಸಪುರ:ಆಕಸ್ಮಿಕ ಬೆಂಕಿ ತಗುಲಿ ಟನ್ ಗಟ್ಟಲೆ ಹಳೆ ಪ್ಲಾಸ್ಟಿಕ್ ಇದ್ದ ಗುಜರಿ ಅಂಗಡಿ ಧಗಧಗನೇ ಹೊತ್ತಿ ಉರಿದ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ಮಂಗಳವಾರ ತಡ ಸಂಜೆ ಸುಮಾರು 9 ಗಂಟೆ ರಾತ್ರಿಯಲ್ಲಿ ನಡೆದಿದೆ.
ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಹಳೆ ಮಾವಿನಕಾಯಿ ಮಂಡಿ ಮುಂಬಾಗದಲ್ಲಿ ಜಾವೀದ್ ಪಾಷ ಎನ್ನುವರಿಗೆ ಸೇರಿದ ಹಳೆಯ ಪ್ಲಾಸ್ಟಿಕ್ ಗೋದಾಮು ಇದ್ದು ಅಲ್ಲೆ ನಾನಾ ರೀತಿಯ ಹಳೆಯ ಗುಜರಿ ಸಾಮಾನುಗಳನ್ನು ತಗೆದುಕೊಳ್ಳುತ್ತಿದ್ದ ಅಂಗಡಿ ಇತ್ತು ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ಪ್ಲಾಸ್ಟಿಕ್ ರೀಸೈಕ್ಲಿಂಗ್ ಉಪಕರಣಗಳು ಮಿಷನರಿಗಳು ಸುಟ್ಟು ಭಸ್ಮವಾಗಿವೆ.
ಅಗ್ನಿಶಾಮಕ ದಳದ ಹರ ಸಾಹಸ
ಸ್ಥಳಕ್ಕೆ 3 ಅಗ್ನಿಶಾಮಕ ವಾಹನಗಳ 10 ಕ್ಕೂ ಹೆಚ್ಚು ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದು ವೀಪರಿತವಾದ ಗಾಳಿ ಇದ್ದ ಹಿನ್ನಲೆಯಲ್ಲಿ ಅಗ್ನಿ ಜ್ವಾಲೆ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಶ್ರಮಿಸಿ ಹರ ಸಾಹಸ ಪಟ್ಟು ಬೆಂಕಿ ನಂದಿಸಿರುತ್ತಾರೆ.
ಜೆಸಿಬಿ ಗಳ ಬಳಕೆ
ಬೆಂಕಿಯ ಕೆನ್ನಾಲಿಗೆಯಿಂದಾಗಿ ಆರಂಭದಲ್ಲಿ ಅಗ್ನಿಶಾಮಕ ಸಿಬ್ಬಂದಿಗೆ ಕಾರ್ಯಚರಣಗೆ ಹಿನ್ನಡೆಯಾದ ಹಿನ್ನಲೆಯಲ್ಲಿ ಗುಜರಿ ಅಂಗಡಿ ಬಳಿ ಬಯಲಲ್ಲಿ ಹಾಕಿದ್ದ ರಾಶಿರಾಶಿ ಟನ್ ಗಟ್ಟಲೆ ಹಳೆಯ ಪ್ಲಾಸ್ಟಿಕ್ ಡ್ರಿಪ್ ಪೈಪ್ ಗಳನ್ನು ಅಗ್ನಿಅವಘಡದ ಸ್ಥಳದಿಂದ ಸಾಗಿಸಲು ಜೆಸಿಬಿಗಳನ್ನು ಬಳಸಿದ ಪೋಲಿಸರು ಪ್ಲಾಸ್ಟಿಕ್ ಡ್ರಿಪ್ ಪೈಪ್ ಗಳನ್ನು ಜೆಸಿಬಿ ಮೂಲಕ ದೂರ ಸಾಗಿಸಿ ಮತ್ತಷ್ಟು ಅವಘಡವನ್ನು ತಪ್ಪಿಸಿದರು.
ಆತಂಕದಲ್ಲಿ ನಿವಾಸಿಗರು
ಜನ ವಸತಿ ಪ್ರದೇಶದಲ್ಲಿ ಟನ್ ಗಟ್ಟಲೆ ಹಳೆಯ ಪ್ಲಾಸ್ಟಿಕ್ ಸರಕು ಹಾಕಿಕೊಂಡು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ ಹಳೆಯ ಪ್ಲಾಸ್ಟಿಕ್ ಜೊತೆ ಇತರೆ ಕೆಮಿಕಲ್ ಕಾಲಿ ಪ್ಲಾಸ್ಟಿಕ್ ಕ್ಯಾನುಗಳು ಗುಜರಿಗೆ ಬರುತ್ತದೆ ಇದರಿಂದ ಕೆಮಿಕಲ್ ಸೋರುವುದು ಆಕಸ್ಮಿಕ ಬೆಂಕಿ ಅನಾಹುತಗಳು ಆದಂತ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕನಿಷ್ಠ ಪರಿಕರಗಳು ಅವರತ್ತಿರ ಇರುವುದಿಲ್ಲ ಈಗ ಬೆಂಕಿ ಹೊತ್ತಿಕೊಂಡಿದೆ ಬೆಂಕಿ ಕೆನ್ನಾಲಿಗೆ ಯಾವ ಕಡೆ ಬೇಕಾದರು ಸುತ್ತುತ್ತದೆ ಇದರಿಂದ ಮೀಟರ್ ಗಳ ಅಳತೆ ದೂರದಲ್ಲಿ ವಾಸಿಸುವಂತ ನಮ್ಮ ಪರಿಸ್ಥಿತಿ ಎನಾಗಬೇಡ ಎಂದು ಅತಂಕದಲ್ಲಿ ಹೇಳುತ್ತಾರೆ.