ಬೆಂಗಳೂರು:ಕರ್ತವ್ಯ ನಿರತರಾಗಿದ್ದಾಗಲೇ ಹೃದಯಾಘಾತದಿಂದ ಮೃತ ಪಟ್ಟಿದ್ದ ವಿಜಯ ಕರ್ನಾಟಕ ಪತ್ರಿಕೆಯ ಬಳ್ಳಾರಿ ವರದಿಗಾರ ವೀರೇಶ್ ಜಿ.ಕೆ. ಅವರ ಕುಟುಂಬಕ್ಕೆ ನೆರವು ನೀಡುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ)ಮನವಿಮಾಡಿತ್ತು ಈ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2 ಲಕ್ಷ ರೂ ಪರಿಹಾರ ಮಂಜೂರು ಮಾಡಿ ಮಾನವೀಯತೆ ಮೆರೆದಿದ್ದಾರೆ.
ಪ್ರಜಾವಾಣಿ ಸೇರಿದಂತೆ ಹಲವು ಮಾಧ್ಯಮದಲ್ಲಿ ಕೆಲಸ ಮಾಡಿದ್ದ ವೀರೇಶ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬ ತೀವ್ರ ಸಂಕಷ್ಟದಲ್ಲಿದ್ದು ಈ ಬಗ್ಗೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ವಿಚಾರ ಮುಟ್ಟಿಸಿ ನಂತರ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಿದ್ದರು.
ಕೆಯುಡಬ್ಲೂಜೆ ಸಲ್ಲಿಸಿದ ಕೋರಿಕೆಗೆ ಸ್ಪಂದಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಹಾರ ಮಂಜೂರು ಮಾಡಿದ್ದಾರೆ.ಪರಿಹಾರ ಮಂಜೂರು ಮಾಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಈ ವಿಚಾರದಲ್ಲಿ ಸಹಕರಿಸಿದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಕೃತಜ್ಞತೆ ಸಲ್ಲಿಸಿದೆ.
Breaking News
- ಬೆಂಗಳೂರು-ಮದನಪಲ್ಲಿ ಹೆದ್ದಾರಿಯಲ್ಲಿ ಎರಡು ಪ್ರತ್ಯಕ ಅಪಘಾತ ಇಬ್ಬರ ಸಾವು!
- ರಸ್ತೆ ಸಾರಿಗೆ ನೌಕರರು ಕರೆ ನೀಡಿದ್ದ ಮುಷ್ಕರ ವಾಪಸ್! ಬಸ್ ಸಂಚಾರ ಇರುತ್ತದೆ
- ಮದನಪಲ್ಲಿಯಲ್ಲಿ ಅಯ್ಯಪ್ಪ ಮಾಲಾಧಾರಿ ಭಕ್ತನ ಮೇಲೆ ದಾಳಿ ಪ್ರಕ್ಷುಬ್ದ ವಾತವರಣ!
- ಚಿಂತಾಮಣಿಯ ರಶ್ಮಿಹರ್ಷರಿಗೆ ಮೋಸ್ಟ್ ಪಾಪ್ಯೂಲರ್ ವೈಶ್ಯ ಲೈಮ್ಲೈಟ್ ಪ್ರಶಸ್ತಿ.
- ಕಾಶ್ಮಿರ ಸೇನಾ ವಾಹನ ಅಪಘಾತ ಕರ್ನಾಟಕದ ಮೂರು ಯೋಧರ ಸಾವು!
- j&k ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದು ಐವರು ಯೋಧರ ಸಾವು!
- ಶ್ರೀನಿವಾಸಪುರ ಭೈರವೇಶ್ವರ ಹಾಸ್ಟಲ್ ವಿದ್ಯಾರ್ಥಿನಿ ಆತ್ಮಹತ್ಯೆ
- ಶ್ರೀನಿವಾಸಪುರ ಪ್ರೆಮಿಗಳ ಮದುವೆ ತಡೆಯಲು ಸಿನಿಮಾ ಶೈಲಿಯಲ್ಲಿ ಹೈಡ್ರಾಮ!
- ಶ್ರೀನಿವಾಸಪುರದ ಶಿಕ್ಷಕಿ ರಾಷ್ಟ್ರೀಯ ಕಬಡಿ ಪಂದ್ಯಾವಳಿಗೆ ಆಯ್ಕೆ
- ಶ್ರೀನಿವಾಸಪುರದ ಸರ್ಕಾರಿ ಕಚೇರಿ ಶಾಲ ಆವರಣಗಳೆ ಪಾರ್ಕಿಂಗ್ ಸ್ಥಳ!
Monday, December 30