ನ್ಯೂಜ್ ಡೆಸ್ಕ್:ಹಿರಿಯ ಕಮ್ಯುನಿಸ್ಟ್ ದಿಗ್ಗಜ ಸಿಪಿಎಂ(ಎಂ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ (72) ನಿಧನರಾಗಿದ್ದಾರೆ. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ಅವರು ಕಳೆದ ತಿಂಗಳು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. 1992 ರಿಂದ ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದ ಅವರು 2005 ರಿಂದ 2017 ರವರೆಗೆ ರಾಜ್ಯಸಭಾ ಸಂಸದರಾಗಿ ಕೆಲಸ ಮಾಡಿದ್ದಾರೆ. ಸಿಪಿಎಂ ಧುರೀಣ ಸೀತಾರಾಮ್ ಯೆಚೂರಿ ಅವರು ಸುದೀರ್ಘ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದು 2005 ರಲ್ಲಿ ಬಂಗಾಳದಿಂದ ರಾಜ್ಯಸಭೆಗೆ ಮೊದಲ ಬಾರಿಗೆ ಆಯ್ಕೆಯಾದ್ದ ಅವರು. ತೆಲುಗು, ಇಂಗ್ಲಿಷ್, ಹಿಂದಿ ಮತ್ತಿತರ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲವರಾಗಿದ್ದರು.
ಮಾರ್ಕ್ಸ್ವಾದದ ತತ್ವಗಳನ್ನು ನಂಬಿದ್ದ ಅವರು ಕಮ್ಯುನಿಸ್ಟ್ ನಾಯಕರಲ್ಲಿ ಅಗ್ರಗಣ್ಯ ನಾಯಕರಾಗಿ ಜನಪ್ರತಿನಿಧಿ ಸಭೆಗಳಲ್ಲಿ ತಮ್ಮದೆ ಶೈಲಿಯಲ್ಲಿ ಜನ ಸಾಮಾನ್ಯರ ಪರ ವಕಾಲತ್ತು ವಹಿಸುತ್ತ ಸರ್ಕಾರಗಳನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು.
ಯಚೂರಿ ವೈಯುಕ್ತಿಕ ಜೀವನ
ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಯಚೂರಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ ಈ ಕಮ್ಯುನಿಸ್ಟ್ ಅಗ್ರನೇತ ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಅಪ್ಪಟ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಅವರಿಗೆ ಹನ್ನೊಂದನೇ ವಯಸ್ಸಿನಲ್ಲಿ ಬ್ರಹ್ಮೋಪದೇಶವಾಗಿತ್ತಾದರೂ, ಅವರು ಫೈರ್ಬ್ರಾಂಡ್ ಕಮ್ಯುನಿಸ್ಟ್ ನಾಯಕನಾಗಿ ಬೆಳೆದರು ಇವರ ಪೋಷಕರು ಮೂಲತಃ ಆಂಧ್ರಪ್ರದೇಶದ ಕಾಕಿನಾಡದವರು.ಯಚೂರಿಸೀತಾರಾಮ್ ಹೈದರಾಬಾದ್ ನಲ್ಲಿ ವಿದ್ಯಾಭ್ಯಾಸ ಮಾಡಿ ನಂತರ, ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಬಿಎ ಮತ್ತು ಜವಾಹರ್ ಲಾಲ್ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದಿದ್ದರು.
ಯಚೂರಿ ರಾಜಕೀಯ ಹಾದಿ
1974ರಲ್ಲಿ ಎಸ್ಎಫ್ಐ ಸೇರಿದ ಸೀತಾರಾಂ, ಒಂದು ವರ್ಷದ ನಂತರ ಸಿಪಿಎಂ ಪಕ್ಷಕ್ಕೆ ಸೇರ್ಪಡೆಗೊಂಡರು. 1974 ರಲ್ಲಿ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ SFIಗೆ ಸೇರಿದರು,1977-78ರಲ್ಲಿ ಮೂರು ಬಾರಿ JNU ಅಧ್ಯಕ್ಷರಾಗಿ ಆಯ್ಕೆಯಾಗಿ,1978 ರಲ್ಲಿ SFI ನ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು,1984 ರಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಗೆ ಆಯ್ಕೆಯಾದ ಅವರು,ಪಶ್ಚಿಮ ಬಂಗಾಳದಿಂದ 2005 ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ,2015, 18, 22 ರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು, (ಜೆಎನ್ಯು) ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿಯ ವಿರೋಧಿಸಿದ ಹಿನ್ನಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ಅವರ ನಿಧನದಿಂದ ಕಮ್ಯುನಿಸ್ಟ್ ಸಿದ್ದಾಂತ ನಂಬಿದ್ದವರ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿದೆ.
ಪ್ರಧಾನಿ ಮೋದಿ ಸಂತಾಪ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಅವರನ್ನು “ಎಡಪಕ್ಷಗಳ ಪ್ರಮುಖ ಬೆಳಕು” ಎಂದು ಕರೆದಿದ್ದಾರೆ.”ಶ್ರೀ ಸೀತಾರಾಮ್ ಯೆಚೂರಿ ಜಿಯವರ ನಿಧನದಿಂದ ದುಃಖವಾಗಿದೆ. ಅವರು ಎಡಪಂಥೀಯರ ಪ್ರಮುಖ ಬೆಳಕಾಗಿದ್ದರು ಅವರು ಪರಿಣಾಮಕಾರಿ ಸಂಸದರಾಗಿಯೂ ಗುರುತಿಸಿಕೊಂಡರು. ಅವರ ಕುಟುಂಬದ ಮತ್ತು ಅಭಿಮಾನಿಗಳು ಓಂ ಶಾಂತಿ, ”ಎಂದು ಪ್ರಧಾನಿ ಮೋದಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಹುಲ್ ಟ್ವೀಟ್
ಕಾಂಗ್ರೆಸ್ ಸಂಸದ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸೀತಾರಾಮ್ ಯೆಚೂರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಯೆಚೂರಿ ದೇಶದ ಬಗ್ಗೆ ಆಳವಾದ ತಿಳುವಳಿಕೆಯುಳ್ಳ ಭಾರತದ ಕಲ್ಪನೆಯ ರಕ್ಷಕ ಎಂದು ಕರೆದಿದ್ದು ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ನನ್ನ ಪ್ರಾಮಾಣಿಕ ಸಂತಾಪಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.