ನ್ಯೂಜ್ ಡೆಸ್ಕ್:ತಿರುಪತಿ-ತಿರುಮಲ ಲಡ್ಡು ಪ್ರಸಾದ ತಯಾರಿಕೆಯಲ್ಲಿ ಬಳಸುವ ತುಪ್ಪದಲ್ಲಿ ಪ್ರಾಣಿ ಕೊಬ್ಬು ಇರುವ ಬಗ್ಗೆ ವಿವಾದ ದೇಶಾದ್ಯಂತ ಜೀವಂತವಾಗಿರುವಾಗಲೆ ತಮಿಳುನಾಡಿನ ಪ್ರಖ್ಯಾತ ಪಳನಿ ಮುರುಗನ್(ಸುಬ್ರಮಣ್ಯ) ದೇವಾಲಯ ಪ್ರಸಾದಲ್ಲಿ ಕಲಬೆರಕೆಯಾಗಿದೆ ಎಂದು ಖ್ಯಾತ ತಮಿಳು ಚಿತ್ರ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಆರೋಪಿಸಿದ್ದು, ಈ ಸಂಬಂಧ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಪ್ರಸಾದದಲ್ಲಿ ಮಕ್ಕಳಾಗದೇ ಇರುವ ಔಷದಿ ಮಿಶ್ರಣ!
ಬಕಾಸುರನ್,ದ್ರೌಪದಿ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಮೋಹನ್ ಜಿ ಕ್ಷತ್ರಿಯನ್ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿ ಪಳನಿ ದೇವಾಲಯದಲ್ಲಿ ನೀಡಲಾಗುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದೇ ಇರುವ ರೀತಿ ಮಾತ್ರೆಗಳನ್ನು ಬೆರೆಸುತ್ತಿದ್ದರು, ಅಲ್ಲಿ ಕೆಲಸ ಮಾಡುವ ನನಗೆ ಗೊತ್ತಿರುವವರೇ ಇದನ್ನು ನನಗೆ ಹೇಳಿದ್ದರು. ಇದರ ಬಗ್ಗೆ ದೇವಾಲಯವಾಗಲಿ, ಸರ್ಕಾರವಾಗಲಿ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಅಲ್ಲಿ ಕೆಲಸ ಮಾಡುತ್ತಿದ್ದವರೇ ಹೇಳಿಕೊಂಡಿರುವ ವಿಷಯ ಇದು ಎಂದು ಹೇಳಿದ್ದರು ಇದಕ್ಕೆ ತಮಿಳುನಾಡಿನಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ತೀವ್ರಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದು, ಇದರಿಂದ ಎಚ್ಚೆತ್ತ ತಿರುಚ್ಚಿ ಪೊಲೀಸರು ಕೂಡಲೇ ಅವರನ್ನು ಬಂಧಿಸಿದ್ದಾರೆ. ಮೋಹನ್ ಹೇಳಿಕೆ ಆಧರಿಸಿ ತಿರುಚಿ ಪೊಲೀಸರು ನಿರ್ದೇಶಕನನ್ನು ಚೆನ್ನೈನಲ್ಲಿ ಬಂಧಿಸಿ ತಿರುಚಿಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಇತ್ತ ಮೋಹನ್ ಬಂಧನದ ಬೆನ್ನಲ್ಲೆ ಪಳನಿ ದೇವಾಲಯದ ಪ್ರಸಾದವನ್ನು ಸಹ ಪರೀಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಪಳನಿ ದೇವಸ್ಥಾನದ ಪಂಚಾಮೃತದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಇಲಾಖೆ ಸಚಿವ ಶೇಖರ್ ಬಾಬು ಎಚ್ಚರಿಕೆ ನೀಡಿದ್ದಾರೆ.