ನ್ಯೂಜ್ ಡೆಸ್ಕ್:ವಾರ್ಡ್ ಮೆಂಬರ್,ಗ್ರಾಮಪಂಚಾಯಿತಿ ಸದಸ್ಯನೊ ಜಿಲ್ಲಾಪಂಚಾಯಿತಿ ಸದಸ್ಯನೊ ಇನ್ಯಾವೊದೊ ರಾಜಕೀಯದ ಸ್ಥಾನಮಾನ ಸಿಕ್ಕರೆ ಸಾಕು ಒಂದಷ್ಟು ಗಂಟು ಮಾಡಿಕೊಂಡು ಕೈಗೆ ಕುತ್ತಿಗೆಗೆ ಸಾಕಷ್ಟು ಬಂಗಾರ ಹೇರಿಕೊಂಡು ಅಹಂಕಾರದಿಂದ ಮೆರೆಯುತ್ತ ದೌಲತ್ತಿನ ಮಾತುಗಳನ್ನಾಡುವ ರಾಜಕಾರಣಿಗಳ ನಡುವೆ ನಾವು ಇದ್ದೀವಿ ಇಂತಹ ವ್ಯವಸ್ಥೆಯಲ್ಲೊಬ್ಬ ರಾಜಕೀಯ ಸಂತನೊ ಒಬ್ಬ ಇದ್ದಾನೆ ಎಂದರೆ ಎಲ್ಲರಿಗೂ ಆಶ್ಚರ್ಯ ಆಗಬಹುದು ಸತತವಾಗಿ 5 ಬಾರಿ ಗೆದ್ದು ಶಾಕಸನಾದರು ಇಂದಿಗೂ ಸೈಕಲ್ನಲ್ಲೆ ಓಡಾಟ,ಚಿಕ್ಕದಾದ ಹಳ್ಳಿಯ ಮನೆಯಲ್ಲೇ ವಾಸ ಜೀವನಾಧಾರಕ್ಕೆ ಕೃಷಿ ನಂಬಿಕೊಂಡಿರುವ ವ್ಯಕ್ತಿಯ ಬದಕು ಇದು ಸಾಧ್ಯ ಆಗಿರುವುದು ವಿಭಜಿತ ಆಂಧ್ರಪ್ರಶೇದದ ಖಮ್ಮಂ ಜಿಲ್ಲೆಯಲ್ಲಿ.
ಐದು ಬಾರಿ ಶಾಸಕರಾಗಿ ಗೆದ್ದರೂ ಸಿಂಪಲ್ ಆಗಿದ್ದಾರೆ ಸರಳತೆಯಿಂದ ಜೀವನ ಮಾಡುತ್ತಿದ್ದಾರೆ ಅವರೇ ಗುಮ್ಮಡಿ ನರಸಯ್ಯ.. ಖಮ್ಮಂ ಜಿಲ್ಲೆ ಈಗ ತೆಲಂಗಾಣ ರಾಜ್ಯದಲ್ಲಿದ್ದೆ ಇಲ್ಲಂದು ವಿಧಾನ ಸಭಾ ಕ್ಷೇತ್ರದಿಂದ 5 ಬಾರಿ ಗೆದ್ದು ಶಾಸಕರಾಗಿದ್ದಾರೆ. ಶಾಸಕರಾಗಿದ್ದ ಅವಧಿಯಲ್ಲೂ ಅವರು ಈ ಸರಳತೆಯನ್ನು ಉಳಿಸಿಕೊಂಡಿದ್ದರು.
ಗುಮ್ಮಡಿ ನರಸಯ್ಯ ಶಾಸಕರಾಗಿದ್ದಾಗ ರಾಜಧಾನಿ ಹೈದರಾಬಾದಿಗೆ ಬಸ್ಸು ಅಥಾವ ರೈಲಿನಲ್ಲಿ ಒಡಾಡುತ್ತಿದ್ದ ಅವರು ಇಂದಿನ ಜನಪ್ರತಿನಿಧಿಗಳಿಗಿಂತ ಭಿನ್ನ ಎನ್ನಬಹುದು ತಮ್ಮ ವೈಯಕ್ತಿಕ ಸಾಮಾನು ಸರಂಜಾಮುಗಳನ್ನು ತಾವೆ ಹೊತ್ತೊಯ್ಯುತ್ತಿದ್ದರಂತೆ.
ವಿಧಾನಸಭೆಗೆ ಆಟೋದಲ್ಲಿ ಒಡಾಡುತ್ತಿದ್ದ ಅವರು ತಂಗಲು ತಮ್ಮ ಪಕ್ಷದ ಕಚೇರಿಯಲ್ಲಿ ಮಲಗುತ್ತಿದ್ದ ಅವರಿಗೆ ಹೈದರಾಬಾದನಲ್ಲಿ ಆಸ್ತಿ ಏನೂ ಇಲ್ಲವಂತೆ.
ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಒಡಾಡಲು ಜೀಪ್ ಬಳಸಿದ್ದರಾದರೂ ಸಾರ್ವಜನಿಕ ಸಾರಿಗೆ ಆರ್.ಟಿ.ಸಿ ಬಸ್ ಅನ್ನು ಹೆಚ್ಚು ಬಳಿಸುತ್ತಿದ್ದರು. ಯಾರದರೂ ನಮಸ್ಕಾರ ಹೇಳಿದರೆ ನಿಂತು ಆತ್ಮೀಯವಾಗಿ ಮಾತನಾಡುವ ಅವರು ಆದಿವಾಸಿಗಳ ಬದುಕು-ಕಷ್ಟಗಳ ಬಗ್ಗೆ ಅಪಾರ ತಿಳುವಳಿಕೆ ಹೊಂದಿದ್ದ ಗುಮ್ಮಡಿ ನರಸಯ್ಯ ಅವರು ಸದಾ ಆದಿವಾಸಿಗಳ ಉನ್ನತಿಗಾಗಿ ಶ್ರಮಿಸುತ್ತಿದ್ದಾರಂತೆ.
ಇಲ್ಲಂದು ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅವರು ಬುಡಕಟ್ಟು ಜನಾಂಗದ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿ 1983ರಲ್ಲಿ ಅಂದಿನ ಚಿತ್ರ ನಟ ಎನ್.ಟಿ.ಆರ್ ಅವರ ಪ್ರಭಾವದ ತೆಲಗುದೇಶಂ ಪಕ್ಷದ ಪ್ರಭಂಜನವನ್ನು ಎದುರಿಸಿ ಸಿಪಿಐ (ಎಂಎಲ್) ಪಕ್ಷದ ಶಾಸಕರಾಗಿ ಆಯ್ಕೆಯಾದ ಅವರು ಸತತವಾಗಿ 1985, 1989, 1999, 2004 ರವರಿಗೆ ಐದು ಬಾರಿ ಶಾಸಕರಾಗಿ ಗೆದ್ದ ಅವರು ಶಾಸಕರ ಕೋಟಾದಲ್ಲಿ ಹೈದರಾಬಾದ್ನ ತಮಗೆ ನೀಡಿದ್ದ ಮನೆಯನ್ನೂ ಪಕ್ಷಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಶಾಸಕರಾಗಿ ಅವರ ಸಂಬಳ ಹಾಗು ಮಾಜಿ ಶಾಸಕರಾದ ನಂತರ ತಮ್ಮ ಸರ್ಕಾರಿ ಪಿಂಚಣಿ ಸೌಲಭ್ಯಗಳನ್ನು ಎಲ್ಲಾ ಪಕ್ಷದ ಸಂಘಟನೆಗೆ ನೀಡಿರುವ ಅವರು ಪಾರ್ಟಿ ಫುಲ್ ಟೈಮರ್ ಆಗಿ ಬರುವ ಅಲ್ಪ ಸಂಭಾವನೆಯಲ್ಲಿ ಕುಟುಂಬವನ್ನು ಪೋಷಿಸಿಕೊಳ್ಳುತ್ತಿದ್ದಾರೆ ವಯಸ್ಸು 70 ದಾಟಿದರೂ ಕೃಷಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕ್ಷೇತ್ರಗಳ ಪುನರ್ ವಿಂಗಡಣೆಯಾದ ಬಳಿಕ ಗುಮ್ಮಡಿ ನರಸಯ್ಯ ಅವರಿಗೆ ಒಳ್ಳೆಯ ಹಿಡಿತ ಇದ್ದ ಕೆಲವು ಮಂಡಲಗಳು ಪಿಣಪಾಕ ಕ್ಷೇತ್ರಕ್ಕೆ ವರ್ಗಾವಣೆಯಾಗಿ ಹೋದ ಹಿನ್ನಲೆಯಲ್ಲಿ 2009ರ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅವರು ಅಂದಿನಿಂದ ಪಕ್ಷದ ಚಟುವಟಿಕೆಗಳಿಗೆ ಸೀಮಿತವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಸಮಕಾಲೀನ ರಾಜಕಾರಣದಲ್ಲಿ ಇಂತಹ ನಾಯಕರು ಇದ್ದಾರೆ ಎಂದರೆ ನಂಬಲು ಅಸಾಧ್ಯ ಬುಡಕಟ್ಟು ಕೋಯ ಸಮುದಾಯಕ್ಕೆ ಸೇರಿದ ಗುಮ್ಮಡಿ ನರಸಯ್ಯ ಅವರು ಆದಿವಾಸಿಗಳ ಹಕ್ಕುಗಳಿಗಾಗಿ ಹಲವು ಹೋರಾಟಗಳನ್ನು ಮಾಡುತ್ತ ಇಂದಿಗೂ ಕೃಷಿಯನ್ನು ನಂಬಿ ಬದುಕುತ್ತಿರುವುದು ವಿಶೇಷ ಎನ್ನಬಹುದು.
ಗುಮ್ಮಡಿ ನರಸಯ್ಯ ಜೀವನ ಚರಿತ್ರೆ ಸಿನಿಮಾ
ಗುಮ್ಮಡಿ ನರಸಯ್ಯ ಅವರು ಸತತ 5 ಬಾರಿ ಶಾಸಕರಾಗಿದ್ದರೂ ತಮ್ಮ ಜೀವನವನ್ನು ಜನಸೇವೆಗೆ ಮುಡಿಪಾಗಿಟ್ಟು ಸರಳ ಜೀವನ ನಡೆಸುತ್ತಿರುವ ಜನನಾಯಕ. ಬೈಸಿಕಲ್ ನಲ್ಲಿ ಅಸೆಂಬ್ಲಿಗೆ ಹೋಗುತ್ತಿದ್ದ ಅವರು ರಸ್ತೆ ಬದಿ ನಿಂತು ಊಟ ಮಾಡುವುದು ಸದಾ ಜನರ ನಡುವೆ ಇರುವಂತ ನರಸಯ್ಯ ಅವರ ರಾಜಕೀಯ ಬೆಳವಣಿಗೆಯ ಕುರಿತಾಗಿ ಬಯೋಪಿಕ್ ಮಾಡಲು ಯೋಜಿಸಲಾಗಿದಿಯಂತೆ. ಕಳೆದ ಆರು ತಿಂಗಳಿಂದ ಕಥೆಯ ಅಧ್ಯಯನ ನಡೆಯುತ್ತಿದ್ದು, ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ ಎಂಬ ಮಾತು ತೆಲಗು ಸ್ನಿಮಾ ರಂಗದಲ್ಲಿ ಕೇಳಿಬರುತ್ತಿದೆ
ಈ ಸಿನಿಮಾವನ್ನು ಪರಮೇಶ್ವರ್ ಎಂಬ ನವ ನಿರ್ದೇಶಕ ನಿರ್ದೇಶಿಸುತ್ತಿರುವುದಾಗಿ ಇದು ನಿಜವಾಗಿದ್ದರೆ ಈ ಪೀಳಿಗೆಯ ಮತ್ತು ಮುಂದಿನ ಪೀಳಿಗೆಯ ಜನರು ಹಾಗೂ ರಾಜಕೀಯ ನಾಯಕರು ಒಬ್ಬ ಆದರ್ಶ ಹಾಗು ಪ್ರಾಮಾಣಿಕ ನಾಯಕನ ಕುರಿತಾದ ಮಾಹಿತಿ ಪಡೆಯುತ್ತಾರೆ.