ಶ್ರೀನಿವಾಸಪುರ: ರಷ್ಯಾ ದಾಳಿಯಿಂದ ಉಕ್ರೇನ್ ಅಕ್ಷರಶಃ ಯುದ್ದಭೂಮಿಯಾಗಿದೆ ಉಕ್ರೇನ್ ದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಭಾರತದ ವೈದ್ಯ ವಿದ್ಯಾರ್ಥಿಗಳು ಆತಂಕ ಗೊಂಡಿದ್ದಾರೆ ಇಂತಹ ಭಾರತದ ಸಾವಿರಾರು ವಿದ್ಯಾರ್ಥಿಗಳಲ್ಲಿ ಶ್ರೀನಿವಾಸಪುರದ ಪಡತಿಮ್ಮನಹಳ್ಳಿ ಗ್ರಾಮದ ಗೋವರ್ಧನ್ ಎಂಬ ನಾಲ್ಕನೇಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಯುದ್ದದ ತೀವ್ರತೆ ಹೆಚ್ಚಾದ ಹಿನ್ನಲೆಯಲ್ಲಿ ಸಾಹಸ ಪಟ್ಟು ಉಕ್ರೇನ್ ತೊರೆದು ಪಕ್ಕದ ದೇಶವಾದ ಹಂಗೇರಿಗೆ ಬಂದಿರುವುದಾಗಿ ತನ್ನ ಪೋಷಕರಿಗೆ ಸಂದೇಶ ಕಳಿಸಿ ಜೊತೆಗೆ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದ್ದಾನೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ತಾಲೂಕಿನ ಕಸಬಾ ಹೋಬಳಿ ಕೊಡಿಚರವು ಗ್ರಾಮಕ್ಕೆ ಹೊಂದಿಕೊಂಡಿರುವ ಪಡತಿಮ್ಮನಹಳ್ಳಿ ಗ್ರಾಮದ ಶಿವಾರೆಡ್ಡಿ ತನ್ನ ಮಗನ ವೈದ್ಯಕೀಯ ಶಿಕ್ಷಣದ ಆಸೆ ಪೊರೈಸುವ ಸಲುವಾಗಿ ಬೆಂಗಳೂರಿನ ಶೈಕ್ಷಣಿಕ ಮದ್ಯವರ್ತಿಯೊಬ್ಬರ ಮೂಲಕ ಉಕ್ರೇನ್ ದೇಶದ ವಿನ್ನಿಟ್ಸಿಯಾ ನಗರದ ನ್ಯಾಷನಲ್ ಪಿರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯ, VNMU ಸೇರಿದ್ದು ನಾಲ್ಕನೇಯ ವರ್ಷದ ವೈದ್ಯಕೀಯ ಕೋರ್ಸ್ ಮುಗಿಯುವ ಹಂತಕ್ಕೆ ಬಂದಿದ್ದು ಯುದ್ದದ ಕಾರ್ಮೊಡ ಹಿನ್ನಲೆಯಲ್ಲಿ ವಿದ್ಯಾರ್ಥಿ ಉಕ್ರೇನ್ ತೊರೆದಿರುತ್ತಾನೆ.
ತಾನು ವಾಸವಿದ್ದ ಉಕ್ರೇನ್ ದೇಶದ ವಿನ್ನಿಟ್ಸಿಯಾ ನಗರದಿಂದ ಸುಮಾರು ಒಂದು ಸಾವಿರ ಕೀ.ಮಿ ದೂರದ ಹಂಗೇರಿ ದೇಶಕ್ಕೆ ಅಂದಾಜು 12-15 ಗಂಟೆ ಪ್ರಯಾಣ ಮಾಡಿ ಉಕ್ರೇನ್ ದೇಶ ತೊರೆದಿರುತ್ತಾನೆ ಇದು ಗೋವರ್ಧನ್ ಪೋಷಕರಿಗೆ ನೆಮ್ಮದೀಯ ವಿಚಾರವಾಗಿದೆ.
ರಷ್ಯ-ಉಕ್ರೇನ್ ಯುದ್ದ ಪ್ರಾರಂಭವಾದ ಹಿನ್ನಲೆಯಲ್ಲಿ ವಿನ್ನಿಟ್ಸಿಯಾ ನಗರದ ಹೋಟೆಲೊಂದರಲ್ಲಿ ತಂಗಿದ್ದು ಯುದ್ದದ ತೀವ್ರತೆ ಹೆಚ್ಚಾದ ಹಿನ್ನಲೆಯಲ್ಲಿ ತನ್ನ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಸೆರಿಕೊಂಡು ಬಂಕರನಲ್ಲಿ ಅಡಗಿದ್ದು ಅಲ್ಲಿ ಆಹಾರ ನೀರಿನ ಸಮಸ್ಯೆಯಾದ ಹಿನ್ನಲೆಯಲ್ಲಿ ಅಲ್ಲಿಂದ ಕಾಲ್ನಡಿಗೆ ಮತ್ತು ರೈಲು ಪ್ರಯಾಣದ ಮೂಲಕ ಹಂಗೇರಿಗೆ ತಲುಪಿದ್ದಾನೆ. ಹಂಗೇರಿಯಿಂದ ಭಾರತ ಸರ್ಕಾರದ ಸಹಕಾರದೊಂದಿಗೆ ಏರೋಪ್ಲೇನ್ ಮೂಲಕ ಇಲ್ಲಿಗೆ ಬರಬೇಕಿದ್ದು ಈ ಎಲ್ಲಾ ಬೆಳವಣಿಗೆಗಳನ್ನು ಮಗ ಅಗಿಂದಾಗೆ ನಮಗೆ ವಿಡಿಯೋ ಕಾಲ್ ಮೂಲಕ ತಿಳಿಸುತ್ತಿದ್ದ ಎನ್ನುತ್ತಾರೆ ಶಿವಾರೆಡ್ದಿ.
ನಾಲ್ಕು ವರ್ಷದ ಹಿಂದೆ ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋದ ಗೋವರ್ಧನ್ ಆಗಿನಿಂದಲೂ ಒಂದು ಬಾರಿ ಮಾತ್ರ ಊರಿಗೆ ಬಂದಿರುತ್ತಾನಂತೆ, ನಾಲ್ಕನೇ ವರ್ಷದ ಕೋರ್ಸ್ ಮುಗಿಸಿ ಊರಿಗೆ ಬರುವ ಬಗ್ಗೆ ಪೋಷಕರಿಗೆ ತಿಳಿಸಿದ್ದ, ಇದರಿಂದ ತಂದೆ ತಾಯಿ ಮಗ ಬರುವನೆಂದು ಖುಷಿಯಿಂದ ಇದ್ದರು ಆದರೆ ಯುದ್ದದಿಂದ ಮಗ ಬರುತ್ತಾನೆ ಎಂಬುದು ನೋವಿನ ವಿಚಾರ ಎನ್ನುತ್ತಾರೆ ಪೋಷಕರು.
ಹಂಗೇರೀಯಾ ದೇಶದ ರಾಜಧಾನಿ ಬುಡಾಪೆಸ್ಟ್ ನಗರ ತಲುಪಿರುವ ಗೋವರ್ಧನ್ ಉಕ್ರೇನ್ ನಿಂದ ಇನ್ನೂ ಬರಬೇಕಿರುವ ತನ್ನ ಇತರೆ ಮಿತ್ರರ ಆಗಮನಕ್ಕಾಗಿ ಎರಡು ದಿನಗಳಿಂದ ಕಾಯುತ್ತಿರುವುದಾಗಿ ಹೇಳಲಾಗುತ್ತಿದೆ.