ಶ್ರೀನಿವಾಸಪುರ:ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಕೊಳೆತ ಶವವಾಗಿ ಕಾಡಿನಲ್ಲಿ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ತಾಲೂಕಿನ ಪಾತಪಲ್ಲಿ ಗ್ರಾಮದ ಗೆಟ್ ಬಳಿ ಅಂಗಡಿ ನಡೆಸುತ್ತಿರುವ ಅಪ್ಪಿರೆಡ್ಡಿ (45) ಎಂದು ಗುರುತಿಸಲಾಗಿದೆ.
ತಾಲ್ಲೂಕಿನ ಆವಲಕುಪ್ಪ ಗ್ರಾಮದ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದ್ದು ಆವಲಕುಪ್ಪ ಗ್ರಾಮದ ಕೆಲವರು ಮಳೆಗಾಲದಲ್ಲಿ ಕಾಡಿನಲ್ಲಿ ಸಿಗುವ ಹಣಬೆ ಹುಡುಕುತ್ತ ಹೋದಾಗ ಮೃತ ದೇಹ ಪತ್ತೆಯಾಗಿದೆ ಗ್ರಾಮಸ್ಥರು ತಕ್ಷಣ ಶ್ರೀನಿವಾಸಪುರ ಪೋಲಿಸರಿಗೆ ಮಾಹಿತಿ ತಿಳಿಸಿರುತ್ತಾರೆ.
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ನಾಪತ್ತೆಯಾದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಸೆಪ್ಟಂಬರ್ 7 ರಂದು ತಾಲ್ಲೂಕಿನ ಪಾತಪಲ್ಲಿ ಗ್ರಾಮದ ಅಪ್ಪಿರೆಡ್ಡಿ (45) ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕುರಿತಂತೆ ಪೋಲಿಸರು ಅನುಮಾನಿಸಿ ಕೂಡಲೇ ಅಪ್ಪಿರೆಡ್ಡಿ ಕುಟುಂಬಸ್ಥರನ್ನು ಕರಿಸಿ ಪರಿಶೀಲನೆ ನಡೆಸಿದಾಗ ಮೃತದೇಹ ಅಪ್ಪಿರೆಡ್ಡಿಯದು ಎಂದು ಕುಟುಂಬಸ್ಥರು ಖಚಿತ ಪಡಿಸಿದ ಹಿನ್ನಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುತ್ತಾರೆ.
ದ್ವಿಚಕ್ರ ವಾಹನ ರೋಣೂರಿನ ಬಳಿ ಪತ್ತೆ.
ಅಪ್ಪಿರೆಡ್ಡಿ (45) ಮೃತ ದೇಹ ತಾಲ್ಲೂಕಿನ ಆವಲಕುಪ್ಪ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾದರೇ ಆತನ ದ್ವಿಚಕ್ರ ವಾಹನ ತಾಲೂಕಿನ್ ರೋಣೂರು ಬಳಿಯ ಚೋಕ್ಕಿರೆಡ್ಡಿಪಲ್ಲಿ ಗ್ರಾಮದ ಬಳಿ ಪತ್ತೆಯಾಗಿದೆ. ಮೃತ ದೇಹ ಪತ್ತೆಯಾದ ಸ್ಥಳಕ್ಕೆ ಪೋಲಿಸ್ ಇನ್ಸಪೇಕ್ಟರ್ ನಾರಯಣಸ್ವಾಮಿ ಭೇಟಿ ನೀಡಿದ್ದು ಮಾಹಿತಿ ಪಡೆದು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಅಪ್ಪಿರೆಡ್ಡಿ ಪಾತಪಲ್ಲಿ ಗ್ರಾಮದವರಾಗಿದ್ದು ಮಕ್ಕಳ ವಿದ್ಯಭ್ಯಾಸದ ಸಲುವಾಗಿ ಕುಟುಂಬ ಶ್ರೀನಿವಾಸಪುರದಲ್ಲಿ ವಾಸವಿದ್ದು ಸೆಪ್ಟಂಬರ್ 7 ಮಂಗಳವಾರ ಕೋಲಾದವರು ಎನ್ನಲಾದ ವ್ಯಕ್ತಿಗಳೊಂದಿಗೆ ಪಟ್ಟಣದ ಪಲ್ಲಾರೆಡ್ಡಿ ಹೋಟೆಲ್ ನಲ್ಲಿ ಊಟ ಮಾಡಿ ನಂತರ ಮದ್ಯ ಖರಿದಿಸಿದ ಬಗ್ಗೆ ಮಾಹಿತಿ ಇದೆ ನಂತರ ಏನಾಯಿತು ಎಂಬುದು ತಿಳಿದಿಲ್ಲ ಎಂದು ಮೃತನ ಸಹೋದರ ಹೇಳಿದ್ದಾನೆ.
ವರದಿ: ಸುರೇಶ್ ನಂಬಿಹಳ್ಳಿ