ಶ್ರೀನಿವಾಸಪುರ: ಜಿಂಕೆಯನ್ನು ನುಂಗಿದ್ದ ಹೆಬ್ಬಾವಿನ ಮೇಲೆ ದಾಳಿ ಮಾಡಿದ ಗ್ರಾಮದ ಕೆಲವರು ಹೆಬ್ಬಾವನ್ನು ಕೊಂದಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಬಳಿಯ ಕೊರಕೋನಪಲ್ಲಿಯಲ್ಲಿ ನಡೆದಿದೆ.
ಕೊರಕೋನಪಲ್ಲಿ ಗ್ರಾಮದ ಕೆರೆಯಂಗಳದ ಬಳಿ ಜಿಂಕೆಯನ್ನು ನುಂಗಿದ್ದ ಹೆಬ್ಬಾವು ವಿಶ್ರಮಿಸಿಕೊಳ್ಳುತ್ತಿದ್ದು ಈ ಸಂದರ್ಬದಲ್ಲಿ ಗ್ರಾಮದ ಕೆಲವರು ಹಾವಿನ ಮೇಲೆ ದಾಳಿ ಮಾಡಿದ್ದಾರೆ ಇದರಿಂದ ಬೆದರಿದ ಹಾವು ಪ್ರತಿ ದಾಳಿಮಾಡಿದಾಗ ಮಾರಕಾಸ್ತ್ರಗಳಿಂದ ಹಾವನ್ನು ಕೊಚ್ಚಿ ಕೊಲೆ ಮಾಡಿ ಹಾವಿನ ಹೊಟ್ಟೆಯಲ್ಲಿದ್ದ ಜಿಂಕೆಯನ್ನು ಹೋರತಗೆದಿರುತ್ತಾರೆ.
ಅಂದಾಜು 5 ವರ್ಷ ವಯಸ್ಸಿನ 20 ಅಡಿ ಉದ್ದದ ಹೆಬ್ಬಾವು ಕೆರೆಯಂಗಳದಲ್ಲಿ 3 ವರ್ಷ ವಯಸ್ಸಿನ ಜಿಂಕೆಯನ್ನು ನುಂಗಿದೆ ಎಂದು
ಸ್ಥಳಕ್ಕೆ ಭೇಟಿ ನೀಡಿ ಪರಶಿಲಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದೃಡಪಡಿಸಿದ್ದು ಈ ಬಗ್ಗೆ ಹೆಬ್ಬಾವು ಕೊಂದ ಆರೋಪದಲ್ಲಿ ಮೂವರ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ಪ್ರಕರಣ ದಾಖಲಿಸಿರುವುದಾಗಿ ಗೌವನಪಲ್ಲಿ ಉಪ ವಲಯ ಅರಣಾಧಿಕಾರಿ ಶ್ರೀನಾಥಗೌಡ ತಿಳಿಸಿದ್ದಾರೆ.
ಹೆಬ್ಬಾವನ್ನು ಎಳೆದಾಡುತ್ತಿರುವ ದೃಶ್ಯಗಳ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತ ವೈರಲ್ ಆಗಿದೆ.
ಸುದ್ದಿ ಸಹಕಾರ: ನಂಬಳ್ಳಿಸುರೇಶ