ಮುಳಬಾಗಿಲು:ಈಶ್ವರ ನಿರ್ವಿಕಾರ,ನಿರಾಭರಣ,ನಿರಹಂಕಾರ,ನಿರಾಡಂಬರಪ್ರಿಯ ನಿರ್ಮಲ-ನಿರ್ವಾಜ್ಯ ಭಕ್ತಿಗೆ ಅತ್ಯಂತ ವೇಗವಾಗಿ ಒಲಿಯುವ ದೇವರು ಎಂದರೆ ಪರಮೇಶ್ವರ ಮಹಾಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಬೇಗನೆ ನೀವಾರಣೆಯಾಗುತ್ತವೆ ಎಂಬ ನಂಬಿಕೆ ಶಿವಭಕ್ತರಲ್ಲಿದೆ, ಇದಕ್ಕಾಗಿ ಭಕ್ತರು ಶಿವನ ದೇವಾಲಯಗಳನ್ನು ಹುಡುಕಿ ದರ್ಶನ ಪಡೆಯುತ್ತಾರೆ.ಇಂತ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವಂತ ದೇವಾಲಯಗಳು ಭಾರತದಲ್ಲಿ ಹಲವಾರು ಇವೆ ಇದು ಅಚ್ಚರಿಗೆ ಕಾರಣವಾಗುತ್ತದೆ ಕಲ್ಲಿನಲ್ಲಿ ಕೆತ್ತಿರುವ ಶಿವನ ಲಿಂಗ ಬಣ್ಣ ಬದಲಾಯಿಸುತ್ತದ ಎಂಬ ವಿಸ್ಮಯ ಕಾಡುತ್ತದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗದ ದೇವಾಲಯಗಳಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಹೊರವಲಯದಲ್ಲಿ ಇರುವ ವಿರೂಪಾಕ್ಷಿಯಲ್ಲಿನ ಶ್ರೀ ವಿರೂಪಾಕ್ಷ ದೇವಾಲಯ ಎನ್ನುವುದು ವಿಶೇಷ.
ಈ ದೇವಾಲಯದ ಮಹಿಮೆಯನ್ನು ನೋಡಲು ದೇಶಾದ್ಯಂತ ಹಾಗು ಹೊರ ದೇಶದ ಭಕ್ತರು ಬರುತ್ತಾರೆ. ಇಲ್ಲಿನ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ ಈ ದೇವರನ್ನು ಪೂಜಿಸುವುದರಿಂದ ಸರ್ವ ದೋಷಗಳು ನೀವಾರಣೆಯಾಗುತ್ತದೆ ಎಂದು ಹೇಳುತ್ತಾರೆ.ಇಲ್ಲಿರುವ ಶ್ರೀ ವಿರೂಪಾಕ್ಷ ಮಹಾದೇವ ದೇವಾಲಯವು ಅತ್ಯಂತ ಪ್ರಸಿದ್ಧಿ ಮತ್ತು ಪುರಾತನ ದೇವಾಲಯವಾಗಿದೆ.ಇಲ್ಲಿನ ಶಿವಲಿಂಗವನ್ನು ಕೃತಯುಗದಲ್ಲಿ ಮಹಾಸಂಕಲ್ಪದೊಂದಿಗೆ ಅತ್ರಿ ಮಹಾಮುನಿಗಳು ಪ್ರತಿಷ್ಠಾಪಿಸಗಿದ್ದು ಎನ್ನುತ್ತಾರೆ.
ವಿಜಯನಗರದ ಅರಸರ ಆಳ್ವಿಕೆಯಲ್ಲಿ ಬೆಳಕಿಗೆ ಬಂದಿತು
ನಂತರ ಮೂರು ಯುಗಗಳು ಕಳೆದು ಕಾಲಗರ್ಭದಲ್ಲಿ ಅತ್ರಿಮಹಾಮುನಿಗಳು ಪ್ರತಿಷ್ಠಾಪಿಸಿದ ಲಿಂಗವನ್ನು ಹುತ್ತ ಆವರಿಸಿಕೊಂಡಿದ್ದು ಮುಂದೆ ಕಲಿಯುಗದಲ್ಲಿ ವಿಜಯನಗರ ಅರಸರ ಕಾಲಘಟ್ಟದಲ್ಲಿ ಉತ್ಖನನ ಮಾಡಲಾಗಿ ಶಿವಲಿಂಗ ಬೆಳಕಿಗೆ ಬಂದಿತು ಎಂದು ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ದೀಕ್ಷಿತ್ ಹೇಳುತ್ತಾರೆ. ಅತ್ರಿ ಮಹಾಮುನಿಗಳು ಪ್ರತಿಷ್ಟಾಪಿಸಿದ ಈ ಶಿವಲಿಂಗವನ್ನು ಪೂಜಿಸಿದರೆ ಯಾವುದೇ ರೀತಿಯ ದೋಷಗಳು ಜಾತಕದಲ್ಲಿನ ದೋಷಗಳು ನೀವಾರಣೆಯಾಗುತ್ತದೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಹೇಳುತ್ತಾರೆ.
ಮೂರು ಬಣ್ಣದಲ್ಲಿ ದರ್ಶನ ನೀಡುವ ಶಿವಲಿಂಗ
ಶ್ರೀ ವಿರೂಪಾಕ್ಷ ಮಹಾದೇವ ದೇವಸ್ಥಾನದಲ್ಲಿರುವ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣವನ್ನು ಬದಲಾಯಿಸುತ್ತದೆ ಎಂದರೆ ದೇವಾಲಯದ ಪ್ರಧಾನ ಅರ್ಚಕ ಹೇಳುವಂತೆ ಮುಂಜಾನೆ 6 ರಿಂದ ಮಧ್ಯಾನಃ 12 ಗಂಟೆಯವರಿಗೂ ರಕ್ತವರ್ಣದಲ್ಲಿ,ಮಧ್ಯಾನಃ 12 ರಿಂದ ಸಂಜೆ 4 ಗಂಟೆಯವರಿಗೆ ಸ್ಪಟಿಕ ಬಣ್ಣ ಶ್ವೇತವರ್ಣದಲ್ಲಿ ಮತ್ತು ಸಂಜೆ 4 ಗಂಟೆಯಿಂದ ಮಾರನೆ ದಿನ 6 ಗಂಟೆ ಮುಂಜಾನೆಯವರಿಗೂ ಮಧುಪರ್ಕ ಜೇನುತುಪ್ಪದ ಬಣ್ಣದಲ್ಲಿ ದರ್ಶನ ನೀಡುತ್ತಾನೆ.ದೇವಾಲಯದ ಪ್ರಾಂಗಣದಲ್ಲಿರುವ ಚೌಕಕಾರದ ವೃತ್ತದಲ್ಲಿ ನಿಂತು ಶ್ರೀ ವಿರೂಪಾಕ್ಷನನ್ನು ಪ್ರಾರ್ಥಿಸಿದರೆ ಈಷ್ಟಾರ್ಥಗಳು ಸಿದ್ದಿಸುತ್ತದೆ ಎಂಬ ನಂಬಿಕೆ ಇದೆ.

ವೈಜ್ಞಾನಿಕ ಪುರಾವೆಗಳಿಲ್ಲ
ಶಿವಲಿಂಗದ ಬಣ್ಣ ಬದಲಾವಣೆಯ ಹಿಂದಿನ ರಹಸ್ಯ ಯಾರಿಗೂ ಗೊತ್ತಿಲ್ಲ ಆದಾಗ್ಯೂ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಆದರೆ ಜನರ ನಂಬಿಕೆಗಳ ಪ್ರಕಾರ, ಇದು ಶಿವನ ಮಹಿಮೆಯಿಂದಾಗಿ ಸಂಭವಿಸುತ್ತದೆ ಎನ್ನುತ್ತಾರೆ ಸ್ಥಳೀಯರು. ಮುಳಬಾಗಿಲು ಪಟ್ಟಣದ ರಾಷ್ಟ್ರೀಯ ಹೆದ್ದಾರಿ 75 ಹಾಗು 69 ರಿಂದ ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಶ್ರೀ ವಿರೂಪಾಕ್ಷ ದೇವಾಲಯ ವಿಜಯನಗರ ಅರಸರ ಆಳಿದ ರಾಜಧಾನಿ ಹಂಪಿಯ ಶ್ರೀ ವಿರೂಪಾಕ್ಷ ದೇವಾಲಯ ಹೊಲುವಂತೆ ನಿರ್ಮಿಸಲಾಗಿದೆ.
ಸೂರ್ಯ ರಶ್ಮಿ ತಾಕುತ್ತದೆ
ಈ ನಿಗೂಢ ದೇವಾಲಯದಲ್ಲಿ ಶಿವರಾತ್ರಿಯಂದು ವಿಶೇಷ ಪೂಜೆ ನೆರವೇರುತ್ತದೆ ಅಂದು ಇಲ್ಲಿನ ಶಿವಲಿಂಗವನ್ನು ಸೂರ್ಯ ರಶ್ಮಿ ತಾಕುತ್ತದೆ ಎನ್ನುತ್ತಾರೆ,ಪ್ರತಿ ಸೋಮವಾರ ಮಾಸ ಶಿವರಾತ್ರಿ ಹಾಗು ಶಿವರಾತ್ರಿಯಂದು ಈ ದೇವಾಲಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರ ದಂಡೇ ಇರುತ್ತದೆ
ಪ್ರಧಾನ ಅರ್ಚಕ ಕುಮಾರಸ್ವಾಮಿ ದೀಕ್ಷಿತ್ ಮೊಬೈಲ್ ಸಂಖ್ಯೆ 9980980205