ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ದಿನನಿತ್ಯ ಕಾಲೇಜು ವಿದ್ಯಾರ್ಥಿನಿಯರು ಹಾಗು ಪ್ರೌಡಶಾಲೆ ಹೆಣ್ಮಕ್ಕಳು ಓಡಾಡುವ ಪ್ರದೇಶದಲ್ಲಿ ಫುಟ್ ಪಾತ್ ಗಳನ್ನು ಅತಿಕ್ರಮಿಸಿಕೊಂಡು ಪೆಟ್ಟಿ ಅಂಗಡಿಗಳು ಟೀ ಹೋಟೆಲ್ ಗಳು ಹಾಗು ತರಕಾರಿ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಲ್ಲದೆ ಅಲ್ಲೆ ಶಾಪಿಂಗ್ ಮಾಡಲು ಅಂಗಡಿಗಳನ್ನು ಒಪನ್ ಮಾಡುವ ಮೂಲಕ ಜನರಿಗೆ ತೊಂದರೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಶ್ರೀನಿವಾಸಪುರದ ಎಂ.ಜಿ.ರಸ್ತೆಯಲ್ಲಿ ದಾರಿ ಉದ್ದಕ್ಕೂ ಪಾದಚಾರಿ ಮಾರ್ಗ ಒಂದಲ್ಲ ಒಂದು ರೀತಿಯಲ್ಲಿ ಅತಿಕ್ರಮಣಕ್ಕೆ ಒಳಗಾಗಿದೆ ತರಕಾರಿ ಮಾರುಕಟ್ಟೆ ಬಳಿ ತರಕಾರಿ ಅಂಗಡಿಗಳು ಹಾಗು ಅವರೆಕಾಯಿ ಮಂಡಿ ವ್ಯಾಪರಸ್ಥರ ಕಾಟ ಆದರೆ,ಹಳೆ ಬಸ್ ನಿಲ್ದಾಣದಿಂದ ಕಾಲೇಜಿಗೆ ಹೋಗುವ ಮಾರ್ಗದಲ್ಲಿ ಇನ್ನೊಂದು ಕಥೆ ತೆರೆದುಕೊಳ್ಳುತ್ತದೆ,ತಾಲೂಕು ದಣಿ ತಹಶೀಲ್ದಾರ್ ಕಚೇರಿ ಇರುವ ಮಿನಿವಿಧಾನಸೌಧ ಕಾಂಪೌಂಡ್ ಗೋಡೆಗೆ ಒತ್ತಿಕೊಂಡು ಇರುವ ಪುಟ್ಬಾತ್ ನಲ್ಲಿ ಬಾಡಿಗೆ ಕಾರುಗಳ ನಿಲ್ದಾಣ ಮಾಡಿಕೊಳ್ಳಲಾಗಿದೆ ಮುಂದೆ ಇಂದಿರಾ ಕ್ಯಾಂಟಿನ್ ನಂತರ ಬಾಯ್ಸ್ ಮಿಡ್ಲ್ ಸ್ಕೂಲ್ ಹಾಗು ಸರ್ಕಾರಿ ಮಹಿಳಾ ಕಾಲೇಜು ಆವರಣದ ಗೆಟ್ ಮುಚ್ಚಿ ಗೊಡೆಗೆ ಬಳಿ ಇದ್ದ ಕಾಲುವೆ ಮೆಲೆ ವರಸೆಯಾಗಿ ಪೆಟ್ಟಿಗೆ ಅಂಗಡಿಗಳು ಹಾಗು ಟೀ ಅಂಗಡಿಗಳು ಫುಟ್ಪಾತ್ಗಳ ಮೇಲೆ ಟೇಬಲ್, ಕುರ್ಚಿ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ,ಹಣ್ಣು ತರಕಾರಿ ಬಂಡಿಗಳು ಪುಟ್ಬಾತ್ ಅನ್ನು ಆಕ್ರಮಿಸಿಕೊಂಡ್ಡಿದ್ದು, ಬೀಡಿ ಸಿಗರೇಟ್ ಪಾನ್ ಪರಾಗ್ ಅಂಗಡಿಗಳು ಕೂಡ ತಲೆ ಎತ್ತಿವೆ ಇದು ಸಾರ್ವಜನಿಕರ ಒಡಾಟಕ್ಕೆ ಅಡ್ದಗಾಲು ಹಾಕಿವೆ.ಇಷ್ಟೆ ಅಲ್ಲ ನಾಲ್ಕೈದು ತಿಂಗಳ ಹಿಂದೆ ಪಾದಚಾರಿ ಮಾರ್ಗ ಇಲ್ಲದೆ ಇಕ್ಕಾಟದ ವಾಹನ ದಟ್ಟಣೆ ನಡುವೆ ಲಾರಿಗೆ ಸಿಲುಕಿ ಬೈಕ್ ಸವಾರಿ ಮಾಡುತ್ತಿದ್ದ ಯುವಕನೊರ್ವ ಮೃತಪಟ್ಟ ಘಟನೆ ಸಹ ನಡೆದಿದೆ.
ಕಾಲುವೆಯಲ್ಲಿ ನೀರು ಹರಿಯದೆ ಕೊಚ್ಚೆ ಗಬ್ಬು ನಾರುತ್ತಿದೆ
ಪುಟ್ಬಾತ್ ಆತಿಕ್ರಮಿಸಿಕೊಂಡು ಕೊಳಚೆ ನೀರು ಹರಿಯುವ ಕಾಲುವೆ ಮೇಲೆ ಗೂಡಂಗಡಿಗಳು ಪೆಟ್ಟಿಗೆ ಮತ್ತು ತಗಡಿನ ದೊಡ್ಡ ಗಾತ್ರದ ಅಂಗಡಿಗಳು ಇಟ್ಟುಕೊಂಡಿರುವ ಪರಿಣಾಮ ಕೊಳಚೆ ನೀರು ದ್ಹರಿಯುತ್ತಿದ್ದ ಮೋರಿಯನ್ನು ಸ್ವಚ್ಛಮಾಡಲು ಪುರಸಭೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲದ ಕಾರಣ ಕೊಳಚೆ ನೀರು ಹರಿಯಲು ಅಗದೆ ಕೊಳಚೆ ನೀರು ಶೇಖರಣೆಯಾಗಿ ಗಬ್ಬು ನಾರುತ್ತಿದೆ,
ಇದು ಇಲ್ಲಿಗೆ ನಿಂತಿಲ್ಲ ಕೊಳ್ಳೂರುನಿಂದ ಬರುವಂತ ರಾಜಕಾಲುವೆಯನ್ನು ಅತಿಕ್ರಮಿಸಿಕೊಂಡು ಅಂಗಡಿಗಳನ್ನು ನಿರ್ಮಾಣಮಾಡಿದ್ದಾರೆ.
ದಿನನಿತ್ಯ ಕಾಲೇಜು ವಿದ್ಯಾರ್ಥಿನಿಯರು ಹಾಗು ಪ್ರೌಡಶಾಲೆ ಹೆಣ್ಮಕ್ಕಳು ಓಡಾಡುವ ಪ್ರದೇಶದಲ್ಲಿ ಪುಟ್ಬಾತ್ ಅಕ್ರಮಿಸಿಕೊಂಡು ಹೀಗೆಲ್ಲಾ ಅಂಗಡಿಗಳನ್ನು ಸ್ಥಾಪಿಸಿ ಶಾಪಿಂಗ್ ಸ್ಪಾಟ್ ಗೆ ಅವಕಾಶ ಮಾಡಿಕೊಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀನಿವಾಸಪುರ ಪಟ್ಟಣವನ್ನು ಸುಂದರವಾಗಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸುವುದನ್ನು ಬಿಟ್ಟು ಕೊಂಪೆ ಮಾಡಲು ಸ್ಥಳೀಯ ಆಡಳಿತ ವ್ಯವಸ್ಥೆ ಮುಂದಾಗಿರುವುದಕ್ಕೆ ಜನರು ತೀವ್ರ ಅಸಮಧಾನ ವ್ಯಕ್ತಪಡಿಸುತ್ತಾರೆ.
ಪುಟ್ಬಾತ್ ವ್ಯಾಪಾರಸ್ಥರ ರಕ್ಷಣೆಗೆ ಲೋಕಲ್ ರಾಜಕಾರಣಿಗಳು!
ಒಂದೊಂದು ಪೆಟ್ಟಿಗೆ ಅಂಗಡಿ ಟೀ ಹೋಟೆಲ್ ಗಳ ಹಿಂದೆ ಒಬ್ಬೊಬ್ಬ ಮರಿ ರಾಜಕಾರಣಿ ಅಥಾವ ಕೆಲ ಪುರಸಭಾ ಸದಸ್ಯರ ಪರೋಕ್ಷ ಬೆಂಬಲ ಇರುವ ಹಿನ್ನಲೆಯಲ್ಲಿ ರಾಜಾರೋಷವಾಗಿ ಪುಟ್ಬಾತ್ ಅತಿಕ್ರಮಿಸಿಕೊಂಡು ಅಂಗಡಿ ಮುಂಗಟ್ಟುಗಳನ್ನು ತೆರದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ, ಇದರಿಂದ ಪುರಸಭೆ ಅಧಿಕಾರಿಗಳು ಜಾಣಕುರುಡರಾಗಿದ್ದಾರೆ ಎನ್ನುವ ಆರೋಪ ಸಹ ಇದೆ.ಫುಟ್ಪಾತ್ ಮತ್ತು ರಸ್ತೆಗಳನ್ನು ಅಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು ನಿತ್ಯ ಭರ್ಜರಿ ವ್ಯಾಪಾರ-ವಹಿವಾಟು ನಡೆಸುತ್ತ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ.ಇವರಿಂದ ಪುರಸಭೆಗೆ ನಯಾ ಪೈಸೆ ತೆರಿಗೆ ಬರುವುದಿಲ್ಲ.ಇತ್ತ ಸಾರ್ವಜನಿಕರು ಮಾತ್ರ ನಿತ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ, ಪುಟ್ಬಾತ್ ಇಲ್ಲದೆ ಜನತೆ ರಸ್ತೆ ಮೇಲೆ ಒಡಾಡುತ್ತಿರುವುದರಿಂದ ಅದರಲ್ಲೂ ವಿದ್ಯಾರ್ಥಿಗಳು ಹಾಗು ವೃದ್ಧರು ವಾಹನಗಳಿಗೆ ಸಿಲುಕಿ ಅಪಘಾತಗಳು ಆಗುತ್ತಿರುವುದು ಸಾಮಾನ್ಯವಾಗುತ್ತಿವೆ ಪುಟ್ಬಾತ್ ಅತಿಕ್ರಮಣ ತೆರವು ಮಾಡಿಸಿ ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ ಸೆಕ್ಷನ್ 288 ಡಿ ಪ್ರಕಾರ ನಗರ ವ್ಯಾಪ್ತಿಯ ಎಲ್ಲಾ ರೀತಿಯ ಶಾಶ್ವತ ಹಾಗೂ ತಾತ್ಕಾಲಿಕ ಅತಿಕ್ರಮಣವನ್ನು ನೋಟಿಸ್ ನೀಡದೆ ತೆರವುಗೊಳಿಸಬೇಕು ಈ ತೆರವು ಕಾರ್ಯಾಚರಣೆಗೆ ಪೊಲೀಸರು ಸಹಕಾರ ನೀಡಬೇಕು ಎಂದು ನ್ಯಾಯಾಲಯ ಆದೇಶ ಇದೆಯಾದರೂ ಇದನ್ನು ಯಾರು ಜಾರಿಗೆ ತರುವಂತ ಕನಿಷ್ಠ ಪ್ರಯತ್ನ ಮಾಡಿಲ್ಲ ಎನ್ನುತ್ತಾರೆ..