ಶ್ರೀನಿವಾಸಪುರ:ಗದ್ದಲ ಕೂಗಾಟ ಅರಚಾಟಗಳ ನಡುವೆಯೂ ಪುರಸಭೆಯ ವಿಶೇಷ ಸಭೆಯಲ್ಲಿ ಮೂರು ವಿಷಯಗಳಿಗೆ ಒಪ್ಪಿಗೆ ಪಡೆಯಲಾಯಿತು,ಮತ್ತು ಶಾಸಕರು ಶಿಫಾರಸ್ಸು ಮಾಡಿದ್ದ ಯೋಗಿನಾರಯಣ ಪ್ರತಿಮೆ ಸ್ಥಾಪಿಸಲು ಸಭೆ ನಿರ್ಣಯಿಸಿತು.
ಸಾಮಾನ್ಯ ಸಭೆ ನಡಸದೆ ನಿಮ್ಮ ಅಗತ್ಯಗಳಿಗೆ ವಿಶೇಷಸಭೆ ಕರೆದು ನಿಮ್ಮ ಅನಕೂಲಗಳನ್ನು ನೋಡಿಕೊಳ್ಲುತ್ತಿದ್ದಿರಿ ಎಂದು ಸದಸ್ಯ ರಾಜು ಪುರಸಭೆ ಮುಖ್ಯಾಧಿಕಾರಿ ಜಯರಾಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದಾಗ ಸದಸ್ಯ ಅನಂದಗೌಡ ರಸೂಲು ಮುಂತಾದವರು ಸಾಥ್ ನೀಡಿದರು ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲ ಶುರುವಾಯಿತು ಸದಸ್ಯರ ಕೂಗಾಟ ಎಲ್ಲೆ ಮೀರಿತು ಇದರ ನಡುವೆ ಅಡಳಿತ ಪಕ್ಷದ ಭಾಸ್ಕರ್ ಪುರಸಭೆಯಲ್ಲಿ ಜೆಸಿಬಿ ಇದ್ದರು ಹೊರಗಡೆಯಿಂದ ಜೆಸಿಬಿ ಕರೆಸಿ ಕೆಲಸ ಮಾಡಿಸಿ ಅಕ್ರಮವಾಗಿ ಬಿಲ್ಲುಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದಾಗ ತೊತ್ಲಾಶಬ್ಬಿರ್ ಮುಂತಾದವರು ಹೌದು ಅಕ್ರಮಗಳು ನಡೆಯುತ್ತಿದೆ ಎಂದು ಕೂಗಾಡಿದರು.ನಾಮಿನಿ ಸದಸ್ಯ ನಲ್ಲಪಲ್ಲಿರೆಡ್ದೆಪ್ಪ ಮಾತನಾಡಿ ಪುರಸಬೆಗೆ ನೂತನವಾಗಿ ಸೇರಿಸಿಕೊಂಡಿರುವಂತ ಹಳ್ಳಿಗಳ ನಿವೇಶನ ಮನೆಗಳನ್ನು ಪುರಸಬೆಗೆ ಸೇರಿಸುವ ಕುರಿತಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು ಇದಕ್ಕೆ ಪಕ್ಷ ಬೇದ ಮರೆತು ಸದಸ್ಯರು ಬೆಂಬಲಿಸಿದಾಗ ಮುಖ್ಯಾಧಿಕಾರಿ ಈ ಬಗ್ಗೆ ಪ್ರತಿ ಗ್ರಾಮದಲ್ಲೂ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಸರಳಿಕರಣವಾಗಿ ಪುರಸಭೆಯಲ್ಲಿ ಸೇರ್ಪಡೆಮಾಡುವುದಾಗಿ ಭರವಸೆ ನೀಡಿದರು.
ಪೋಸ್ಟಾಪಿಸ್ ರಸ್ತೆಯಲ್ಲಿ ದಕ್ಷಿಣಭಾಗದಲ್ಲಿರುವ 10 ಪುರಸಭೆ ಮಳಿಗೆಗಳು ವಾಸಕ್ಕೆ ಯೋಗವಲ್ಲ ಎಂದು ಪಿಡ್ಲೂಡಿ ಅಧಿಕಾರಿಗಳು ವರದಿ ನೀಡಿದ್ದಾರೆ ಅದರಂತೆ ಅವುಗಳನ್ನು ಕೆಡವುದರ ಬಗ್ಗೆ ವಿಷಯ ಪ್ರಸ್ತಾಪಿಸಿದಾಗ ಸಭೆಯಲ್ಲಿ ಒಕ್ಕೂರಲ ಅನುಮತಿ ದೊರೆಯಿತು ಮತ್ತೆ ಅಲ್ಲಿ ಮಳಿಗೆ ಕಟ್ಟುವ ಕುರಿತಾಗಿ ನಿರ್ಣಯ ಮಾಡುವಲ್ಲಿ ಸಭೆ ಆಸಕ್ತಿ ತೊರಲಿಲ್ಲ, ಎಂ.ಜಿ.ರಸ್ತೆಯಿಂದ ತ್ಯಾಗರಾಜ ಬಡಾವಣೆಗೆ ಹೋಗುವ ರಸ್ತೆಯಲ್ಲಿ ಇರುವ ಮಳಿಗೆ ತೆರವು ಗೊಳಿಸುವ ಕುರಿತಾಗಿ ವಿಷಯ ಚರ್ಚೆಗೆ ಬಂದಾಗ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಕಟ್ಟಡ ಸುಸ್ಥಿಯಲ್ಲಿದೆ ಅದರ ತಂಟೆಗೆ ಹೋಗಬಾರದು ಎಂದು ಒತ್ತಾಯಿಸಿದರು.
ಎಂ.ಜಿ.ರಸ್ತೆಯ ಇಂದಿರಾಭವನ್ ವೃತ್ತದಿಂದ ಪೋಸ್ಟ್ ಆಫಿಸ್ ರಸ್ತೆಯ ಮೂಲಕ ಚಿಂತಾಮಣಿ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ ರಸ್ತೆ ಅಗಲೀಕರಣ ಸಂಬಂದ ಸಾಮಾನ್ಯ ಜನತೆ ತಮ್ಮ ಮನೆ ಅಂಗಡಿಗಳನ್ನು ತೆರವು ಗೊಳಿಸಿ ಸಹಕಾರ ನೀಡಿರುತ್ತಾರೆ ವಿಚಾರದಲ್ಲಿ ಪುರಸಭೆ ಅಧಿಕಾರಿಗಳು ಆಸಕ್ತಿ ತೋರಿ ತೆರವು ಮಾಡದೆ ಉಳಸಿಕೊಂಡಿರುವ ಕಟ್ಟಡಗಳನ್ನು ತೆರವುಮಾಡುವಂತೆ ಸಭೆಯಲ್ಲಿ ಅಡಳಿತ ಪಕ್ಷದ ಕೆಲ ಸದಸ್ಯರು ಒತ್ತಾಯಿಸಿದರು, ಇದಕ್ಕೆ ಅಧಿಕಾರಿಗಳು ಪ್ರತಿಕ್ರಿಯೆ ವ್ಯಕ್ತಪಡಿಸಿ ಕೆಲ ಕಟ್ಟಡಗಳ ಮಾಲಿಕರು ಕಾನೂನು ಮೊರೆ ಹೋಗಿದ್ದಾರೆ ಎಂದರು ಇದಕ್ಕೆ ನಾಮಿನಿ ಸದಸ್ಯ ಜಯಣ್ಣ ಕಾನೂನಾತ್ಮಕವಾಗಿ ಅಳತೆ ಮಾಡಿ ಅಗತ್ಯ ಇದ್ದರೆ ಖಾತ್ರಿ ಪಡಿಸುವಂತೆ ಒತ್ತಾಯಿಸಿದರು.
ಗದ್ದಲದ ನಡುವೆ ಸಭೆಯಲ್ಲಿ ಹೊರಗುತ್ತಿಗೆ ಅಧಾರದ ಮಾನವ ಸಂಪನ್ಮೂಲ ಏಜೆನ್ಸಿಗೆ ಟೆಂಡರ್ ಕರೆಯಲು ಸೇರಿದಂತೆ ಇತರೆ ಎರಡು ವಿಷಯಗಳಿಗೆ ಅಂಗೀಕಾರ ಪಡೆಯಲಾಯಿತು ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿ ಶಂಕರ್ ಕಂದಾಯ ನೀರಿಕ್ಷಕ ಆರೋಗ್ಯ ನೀರಿಕ್ಷಕ ರಮೇಶ್ ಗೌಡ,ಕಂದಾಯ ಅಧಿಕಾರಿ ನಾಗರಜ್, ಕಂದಾಯ ನಿರಕ್ಷಕಿ ಫಾತಿಮಾ, ಅಭಿಯಂತರೆ ರೂಪ,ಶ್ರೀನಾಥ್,ಚಂದು, ಶ್ರೀನಾಥರೆಡ್ಡಿ ಮುಂತಾದವರು ಇದ್ದರು.
ಆಕ್ರೋಶಗೊಂಡ ಉಪಾಧ್ಯಕ್ಷೆ
ಅಭಿವೃದ್ದಿ ವಿಚಾರವಾಗಿ ಆಡಳಿತಾರೂಡ ಸದಸ್ಯರು ಜೆಡಿಎಸ್ ನವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುತ್ತಿಲ್ಲ ಎಂಬ ಉಪಾಧ್ಯಕ್ಷೆ ಅಯಿಷಾನಯಾಜ್ ಆರೋಪಕ್ಕೆ ಅಡಳಿತ ಪಕ್ಷದ ಮುನಿರಾಜು ಅನುಚಿತವಾಗಿ ಮಾತನಾಡಿದರು ಎಂದು ಜೆಡಿಎಸ್ ಸದಸ್ಯರು ಏಕಾಏಕಿ ಮುನಿರಾಜು ವಿರುದ್ದ ತಿರುಗಿಬಿದ್ದರು ಇದರಿಂದ ಸಭೆಯಲ್ಲಿ ಗದ್ದಲ ಶುರುವಾಗಿ ಮಾತಿನ ಚಕಮುಖಿ ನಡೆಯಿತು ಯಾರು ಏನು ಮಾತನಾಡಿದ್ದಾರೆ ಎಂಬುದೆ ಕೇಳದಾಯಿತು.