ಇದೊಂದು ಸಮಾಜ ತಲೆ ತಗ್ಗಿಸುವ ಅಮಾನವೀಯ ಕುಕೃತ್ಯ ತಾವೆ ಪಾಠ ಮಾಡಿದ Student ವಿದ್ಯಾರ್ಥಿನಿ ಮೇಲೆ ಶಿಕ್ಷಕರು ಕಿಚಕರಂತೆ ಲೈಂಗಿಕ ದೌರ್ಜನ್ಯ ನಡೆಸಿ ಅತ್ಯಾಚಾರ ಎಸಗಿರುವ ದಾರುಣ ಘಟನೆ ನಡೆದಿದೆ.ಲೈಂಗಿಕ ದೌರ್ಜನ್ಯ NCC ಶಿಭಿರದಲ್ಲಿ ನಡೆದಿದೆ ಎನ್ನಲಾಗಿದ್ದು ಕೃತ್ಯ ನಡೆದು ಆರು ತಿಂಗಳ ಬಳಿಕ ಕೃತ್ಯ ಬೆಳಕಿಗೆ ಬಂದಿದ್ದು ಇದನ್ನು ನಡೆಸಿರುವ ಕಿಚಕ ಶಿಕ್ಷಕರು ಚಿಕ್ಕ ಪ್ರಾಯದ ಯುವಕರಲ್ಲ ಅರ್ದ ಆಯಸ್ಸಿನ ಆಜು ಬಾಜು ಇರುವಂತ ನಿಷ್ಟಾಪಿ ನೀಚರು ಎಂದು ಗುರುತಿಸಲಾಗಿದೆ.ಪೊಲೀಸರು ಕಾಮುಕ ಶಿಕ್ಷಕರನ್ನು ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಕಾಯ್ದೆಗಗಳ ಅಡಿಯಲ್ಲಿ ಬಂಧಿಸಿರುತ್ತಾರೆ.
ನ್ಯೂಜ್ ಡೆಸ್ಕ್: ಮೂವರು ಶಿಕ್ಷಕರು ಶಾಲಾ ಬಾಲಕಿಯುರ್ವಳ ಮೇಲೆ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ (ಅತ್ಯಾಚಾರ)ನಡೆಸಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ Krishnagiri ಜಿಲ್ಲೆಯಲ್ಲಿ ನಡೆದಿದೆ.
ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ಕುರಿತಾಗಿ ಪೊಲೀಸರು ಹೇಳುವಂತೆ 13 ವರ್ಷದ ಬಾಲಕಿ ಕೃಷ್ಣಗಿರಿ Krishnagiri ಬಳಿಯ ಸರ್ಕಾರಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಒಂದು ತಿಂಗಳಿನಿಂದ ಶಾಲೆಗೆ ಬಾರದ ಬಗ್ಗೆ ಶಾಲಾ ಮುಖ್ಯೋಪಾದ್ಯಾಯ ಶಾಲೆಯಲ್ಲಿ ಎಲ್ಲರನ್ನೂ ವಿಚಾರಿಸಿದ್ದಾರೆ ಇದಕ್ಕೆ ಯಾರಿದಂಲೂ ಸಮರ್ಪಕ ಉತ್ತರ ಬಾರದಿದ್ದಾಗ ಆತಂಕಗೊಂಡ ಅವರು ಸ್ವತಃ ವಿದ್ಯಾರ್ಥಿನಿ ಮನೆಗೆ ಹೋಗಿ ಅಕೆಯ ತಾಯಿಯನ್ನು ಕೇಳಿರುತ್ತಾರೆ ಇದಕ್ಕೆ ವಿದ್ಯಾರ್ಥಿನಿ ತಾಯಿ ಮಗಳು ಗರ್ಭಿಣಿಯಾಗಿದ್ದು, ಗರ್ಭಪಾತಕ್ಕಾಗಿ ಆಸ್ಪತ್ರೆಗೆ ಕರೆದೊಯ್ಯುಬೇಕು ಎಂದಿರುತ್ತಾಳೆ ಇದನ್ನು ಕೇಳಿದ ಮುಖ್ಯೋಪಾದ್ಯಾಯ ಆಘಾತಕ್ಕೊಳಗಾಗುತ್ತಾರೆ ತಕ್ಷಣ ಎಚ್ಚೆತ್ತುಕೊಂಡ ಅವರು ಹುಡುಗಿಯ ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಸೂಚಿಸುತ್ತಾರೆ ದೂರು ದಾಖಲಿಸಿಕೊಂಡ ಮಕ್ಕಳ ರಕ್ಷಣಾ ಅಧಿಕಾರಿಗಳು ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗಳನ್ನು ನಡೆಸಿದರು. ನಂತರ, ಬರಗೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಅದರಂತೆ ವಿಚಾರಣೆ ಮಾಡಿದ ಪೋಲಿಸರಿಗೆ ವಿದ್ಯಾರ್ಥಿ ಓದುತ್ತಿದ್ದ ಶಾಲೆಯಲ್ಲಿನ ಮೂವರು ಶಿಕ್ಷಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.
ಮಂಗಳವಾರ ಬರ್ಗೂರ್ ಡಿಎಸ್ಪಿ ನೇತೃತ್ವದ ಮಹಿಳಾ ಪೊಲೀಸರು ಸರ್ಕಾರಿ ಶಾಲಾ ಶಿಕ್ಷಕರಾದ ಪರುರೈನ ಚಿನ್ನಸಾಮಿ (57), ಮಾಥೂರಿನ ಆರುಮುಗಂ (45) ಮತ್ತು ಮೇಳಪಟ್ಟಿಯ ಪ್ರಕಾಶ್ (37) ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ನಂತರ ಮೂವರು ಆರೋಪಿಗಳನ್ನು ಬಂಧಿಸಿರುವುದಾಗಿ ಕೃಷ್ಣಗಿರಿ ಎಸ್ಪಿ ಪಿ. ತಂಗದುರೈ ಹೇಳಿದ್ದು ಸಂತ್ರಸ್ತೆ ವಿದ್ಯಾರ್ಥಿನಿಗೆ ಕೌನ್ಸೆಲಿಂಗ್ ನೀಡಲಾಗುತ್ತಿದೆ ಎಂದು ಕೃಷ್ಣಗಿರಿ ಜಿಲ್ಲಾಧಿಕಾರಿ ಸಿ ದಿನೇಶ್ ಕುಮಾರ್ ಹೇಳಿದ್ದಾರೆ.ತಮಿಳುನಾಡು ಶಿಕ್ಷಣ ಇಲಾಖೆ ಕಿಚಕ ಶಿಕ್ಷಕರನ್ನು ಸೇವೆಯಿಂದ ಅಮಾನತು ಮಾಡಿದೆ.
ಇದನ್ನು ಓದಿ http://Read Also https://www.vcsnewz.com/the-evil-son-who-pushed-his-father-into-the-canal-and-murdered-him/ತಂದೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ ದುಷ್ಟ ಮಗ!