- ಕೋಲಾರದಲ್ಲಿ ಇಂದು ಕೊರೋನಾ ರುದ್ರ ನರ್ತನ
- ಕೊರೊನ ರೂಲ್ಸ್ ಬ್ರೇಕ್ ಮಾಡಿದವರಿಗೆ ಲಾಠಿ ರುಚಿ
- ಬೇಕಾರಿಗಳಿಗೆ ಲಾಠಿ ಬೀಸಿದ ಪುರಸಭೆ ಸಿಬ್ಬಂದಿ
- ಲಾಕ್ಡೌನ್ ನಲ್ಲೂ ನಮಾಜಿಗೆ ಬಂದ ಶಿಕ್ಷಣ ಇಲಾಖೆ ಜೀಪ್ ಡ್ರೈವರ್.
- ಜೀಪ್ ವಶಕ್ಕೆ ಪಡೆದ ಪೊಲೀಸರು.
- ಆಂಧ್ರದ ಚಿತ್ತರೂ ಜಿಲ್ಲೆಯಲ್ಲೂ ಲಾಕ್ಡೌನ್.
ಶ್ರೀನಿವಾಸಪುರ:ಲಾಕ್ಡೌನ್ ಮೊದಲನೆ ದಿನ ಶ್ರೀನಿವಾಸಪುರ ತಾಲೂಕಾದ್ಯಂತ ಪೂರ್ತಿಯಾಗಿ ಯಶಸ್ವಿಯಾಗಿದ್ದು ಬೆಳೆಗ್ಗೆ 10 ಗಂಟೆಗೆಲ್ಲ ಅವಶ್ಯ ವಸ್ತುಗಳ ವ್ಯಾಪಾರ ವ್ಯವಹಾರ ಸಂಪೂರ್ಣವಾಗಿ ಬಂದ್ ಆಗಿ ರಸ್ತೆಗೆಳೆಲ್ಲ ನಿರ್ಮಾನುಷ್ಯವಾಯಿತು.
ನಂತರ ಬೇಕಾ ಬಿಟ್ಟಿ ಒಡಾಡುತ್ತಿದ್ದವರಿಗೆ ಒಂದಡೆ ಪೋಲಿಸರು ಲಾಠಿ ರುಚಿ ತೊರಿಸಿ ಬುದ್ದಿ ಹೇಳುತ್ತಿದ್ದರೆ ಮತ್ತೊಂದಡೆ ಪುರಸಭೆ ಸಿಬ್ಬಂದಿ ಲಾಠಿ ಹಿಡಿದು ಬಾರಿಸುತ್ತಿದ್ದರು.
ಕಳ್ಳತನವಾಗಿ ಕದ್ದುಮುಚ್ಚಿ ಟಿ ಕಾಫಿ ಮಾರುತ್ತಿದ್ದವರನ್ನು ಬಿಡದೆ ಪುರಸಭೆಯವರು ಮುಚ್ಚಿಸಿದರು.
ಸಂಜೆ ಚಿಂತಾಮಣಿ ವೃತ್ತದಲ್ಲಿ ಅನಾವಶ್ಯಕವಾಗಿ ಒಡದಾಡಿದವರಿಗೆ ಪೋಲಿಸರು ಲಾಠಿ ರುಚಿ ತೋರಿಸಿದ್ದಾರೆ ಈ ಸಂದರ್ಭದಲ್ಲಿ ಅತಿವೇಗ ಹಾಗು ಅಜಾಗುರುಕತೆಯಿಂದ ಚಾಲನೆ ಮಾಡಿಕೊಂಡು ಬಂದ ಬಿ.ಇ.ಒ ಜಿಪ್ ಅನ್ನು ನಿಲ್ಲಿಸಿದಾಗ ಜೀಪಿನಲ್ಲಿ ಚಾಲಕ ಬಿಟ್ಟರೆ ಯಾರು ಇರಲಿಲ್ಲ ಅತಿವೇಗದಿಂದ ಬಂದ ಚಾಲಕನನ್ನು ಪೋಲಿಸರು ಪ್ರಶ್ನಿಸಿದಾಗ ಚಾಲಕ ಉದ್ದಟತನವಾಗಿ ವರ್ತಿಸಿದ ಹಿನ್ನಲೆಯಲ್ಲಿ ಪೋಲಿಸರು ಜೀಪ್ ಅನ್ನು ವಶಕ್ಕೆ ಪಡೆದಿರುತ್ತಾರೆ.
ಕೋಲಾರದಲ್ಲಿ ಕೊರೋನಾ ರುದ್ರ ನರ್ತನ
ಒಂದೇ ದಿನ ಜಿಲ್ಲೆಯಲ್ಲಿ 1194 ಕೇಸುಗಳು ದಾಖಲಾಗಿದೆ.
ತಾಲೂಕು ವಾರು ವರದಿ ಹೀಗಿದೆ ಕೋಲಾರ259,ಮಾಲೂರು210,ಬಂಗಾರಪೇಟೆ 170,ಕೆ.ಜಿ.ಎಫ್120, ಮುಳಬಾಗಿಲು206, ಶ್ರೀನಿವಾಸಪುರ129,
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ637 ಚಿಂತಾಮಣಿ 216
ಆಂಧ್ರದ ಚಿತ್ತರೂ ಜಿಲ್ಲೆಯಲ್ಲೂ ಭಾಗಶಃ ಲಾಕ್ಡೌನ್
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲೂ ಮೊದಲ ದಿನದ ಲಾಕ್ಡೌನ್ ಭಾಗಶಃ ಯಶಸ್ವಿಯಾಗಿ ಜಾರಿಯಾಗಿದೆ. ಈ ಹಿಂದೆ ಘೋಷಿಸಿದಂತೆ ಎಲ್ಲಾ ರೀತಿಯ ಅಂಗಡಿಗಳು ಮತ್ತು ಹೋಟೆಲ್ಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿದ್ದು, ಜನಸಂದಣಿ ಇಲ್ಲದೆ ರಸ್ತೆಗಳು ನೀರಸವಾಗಿದ್ದವು. ತಿರುಪತಿಯಲ್ಲಿ ಮಧ್ಯಾಹ್ನ 2 ರಿಂದ ಅಂಗಡಿಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಲಾಯಿತು.ಚಿತ್ತೂರಿನಲ್ಲಿ ಅಂಗಡಿಗಳನ್ನು ಮಧ್ಯಾಹ್ನ ಒಂದು ಗಂಟೆಯಿಂದ ಮುಚ್ಚಲಾಗಿದೆ. ಮಧ್ಯಾಹ್ನ 2 ಗಂಟೆಯವರೆಗೆ ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಮದನಪಲ್ಲಿಯಲ್ಲಿ ಮಧ್ಯಾಹ್ನ ಒಂದು ಗಂಟೆಯ ನಂತರ ಅಂಗಡಿಗಳನ್ನು ಮುಚ್ಚಲಾಯಿತು.ಪಲಮನೇರು ಮತ್ತು ಪುಂಗನೂರಿನಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ಅಂಗಡಿಗಳನ್ನು ಮುಚ್ಚಲಾಯಿತು.ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಪುಂಗನೂರಿನಲ್ಲಿ ಸಂಜೆ 5 ರಿಂದ 7 ರವರೆಗೆ ಮಸೀದಿಗಳ ಬಳಿ ಅಂಗಡಿಗಳು ತೆರೆಯಲು ನಿಯಮಾವಳಿಗಳ ಪ್ರಕಾರ ಅವಕಾಶ ನೀಡಲಾಗಿದಿಯಂತೆ.