ಚಿತ್ತೂರು(ಆಂಧ್ರಪ್ರದೇಶ್):- ಪಾಠ ಮಾಡುವ ಸರಸ್ವತಿ ನಿಲಯವನ್ನು ಮಾಂಸದ ಹೋಟೆಲ್ ಹಾಗು ಸರಾಯಿ ಕುಡಿಯುವ ಸ್ಥಳವನ್ನಾಗಿ ಮಾಡಿ ತಾನು ಬೋದನೆ ಮಾಡುವ ಪವಿತ್ರ ವೃತ್ತಿಗೆ ಮೇಷ್ಟ್ರೋಬ್ಬ ಕಪ್ಪು ಮಸಿ ಬಳೆದಿರುವ ಘಟನೆ ಆಂಧ್ರದ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಪಾಕಾಲಾ ಮಂಡಲ ಮೊಗರಾಲ ಪಂಚಾಯತ್ ವ್ಯಾಪ್ತಿಯ ಕೃಷ್ಣಪುರಂ ಮಂಡಲ್ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ನಡೆದಿರುತ್ತದೆ.
ಮಕ್ಕಳಿಗೆ ಶಿಸ್ತು ಮತ್ತು ಶಿಕ್ಷಣವನ್ನು ಕಲಿಸಬೇಕಾದ ಶಿಕ್ಷಕ ಶಾಲೆಯಲ್ಲಿಯೇ ಮದ್ಯ ಸೇವಿಸುತ್ತ ಮಾದಕ ವ್ಯಸನಿಯಾಗಿ ಅಲ್ಲೇ ಮಾಂಸ ತಿಂದು ಪವಿತ್ರ ಸ್ಥಳವನ್ನು ಅಪವಿತ್ರ ಗೊಳಿಸಿದ್ದಾನಂತೆ, ಏಕೋಪಾದ್ಯಾಯ ಶಿಕ್ಷಕ ಕೋಟೇಶ್ವರ ರಾವ್,
ಮದ್ಯವೇಸನಿ ಶಿಕ್ಷಕ ಶಾಲಾ ವಿದ್ಯಾರ್ಥಿಗಳನ್ನು ಅಶ್ಲಿಲವಾಗಿ ಬೈಯ್ಯುವುದು ಅವರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ ಎಂಬ ಅಪಾದನೆ ಇದ್ದು, ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಪೈಶಾಚಿಕವಾಗಿ ಅಪಹಾಸ್ಯ ಮಾಡುವುದು ಇದನ್ನು ಕೇಳಲು ಬರುವಂತ ವಿದ್ಯಾರ್ಥಿಗಳ ಪೋಷಕರನ್ನು ಸಹ ಬೈದು ಕಳಿಸುವುದು ಮಾಡುತ್ತಿದ್ದ
ಈ ಬಗ್ಗೆ ಗ್ರಾಮದ ಜನತೆ ಹಾಗು ಪೋಷಕರು ಗುರುವಾರ ಶಾಲೆಗೆ ಬಂದಾಗ ಕಂಠ ಪೂರ್ತಿ ಕುಡಿದಿದ್ದ ಶಿಕ್ಷಕ ಶಾಲೆಯಲ್ಲಿ ಬಿರಿಯಾನಿ ತಿನ್ನುತ್ತ ಕುಳತಿದ್ದ ಜನ ಬಂದಾಗ ಮದ್ಯದ ಅಮಲಿನಲ್ಲಿದ್ದ ಅವನು ಎದ್ದು ನಿಲ್ಲಲು ತ್ರಾಣ ಇರಲಿಲ್ಲವಂತೆ, ಇದನ್ನು ಜನ ಪ್ರಶ್ನಿಸಿ ಶಿಕ್ಷಕನ ವರ್ತನೆ ಬಗ್ಗೆ ವಿಡಿಯೋ ತಗೆಯುತ್ತಿದ್ದಾಗ ಶಿಕ್ಷಕ ಬಟ್ಟೆಗಳನ್ನು ಕಳಚಿ ಎನು ಬೇಕಾದರೂ ತಗೆದುಕೊಳ್ಳಿ ಎಂದು ಜನರೊಂದಿಗೆ ಅಸಭ್ಯವಾಗಿ ವರ್ತಿಸಿದ್ದನ್ನು ನೋಡಿದ ಗ್ರಾಮಸ್ಥರು ಕರ್ತವ್ಯದಲ್ಲಿದ್ದ ಕೋಟೇಶ್ವರ ರಾವ್ ಅವರ ಮೇಲೆ ಕೋಪಗೊಂಡು, ವೀಡಿಯೊವನ್ನು ಶಿಕ್ಷಣ ಅಧಿಕಾರಿಗಳಿಗೆ ಕಳುಹಿಸಿದ್ದಾರೆ.
ಎರಡು ತಿಂಗಳ ಹಿಂದೆ ಕೃಷ್ಣಪುರಂ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದ ಅವನ ವ್ಯವಹಾರ ಶೈಲಿ ಮೊದಲಿನಿಂದಲೂ ಹಾಗೆಯೇ ಇದೆ ಎಂದು ಹೇಳಲಾಗಿದ್ದು ಕುಡುಕ ಶಿಕ್ಷಕನ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದಿಯಂತೆ, ಗ್ರಾಮಸ್ಥರ ದೂರಿನನ್ವಯ ವಿಚಾರಣೆ ನಡೆಸಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕೊಟ್ಟ ದೂರಿನಂತೆ ಚಿತ್ತೂರು ಜಿಲ್ಲೆಯ ಡಿಇಒ ನರಸಿಂಹ ರಾವ್ ಗುರುವಾರ ರಾತ್ರಿ ಮದ್ಯವೆಸನಿ ಶಿಕ್ಷಕ ಕೋಟೇಶ್ವರ ರಾವ್ ಅವನನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಿಸಿದ್ದಾರೆ.
ಸ್ಥಳೀಯ ಸರ್ಪಂಚ್, ಶಾಲಾ ಸಮಿತಿ ಅಧ್ಯಕ್ಷರು, ಸಿಆರ್ಸಿ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಲಾಯಿತು.
ಮಗುವಿನ ಪೋಷಕರ ಸಮ್ಮುಖದಲ್ಲಿ ಅಧಿಕಾರಿಗಳು ಕೋಟೇಶ್ವರ ರಾವ್ ಅವರನ್ನು ವಿಚಾರಣೆ ನಡೆಸಿರುತ್ತಾರಂತೆ.