ಶ್ರೀನಿವಾಸಪುರ:ಇದೊಂದು ರಾಷ್ಟ್ರೀಯ ಹೆದ್ದಾರಿ ಇದು ಮೂರು ರಾಜ್ಯಗಳ ನಡುವೆ ಕೊಂಡಿಯಾಗಿರುವ ರಸ್ತೆ ಪ್ರತಿ ದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಒಡಾಡುತ್ತವೆ ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಸ್ತೆ ಚಿಂತಾಮಣಿವೃತ್ತದಿಂದ ರೈಲ್ವೆ ಸೇತುವೆ ಮಾರ್ಗವಾಗಿ ಎ.ಪಿ.ಎಂ.ಸಿ ಮಾರುಕಟ್ಟೆವರಿಗೂ ರಸ್ತೆಯ ಎರಡು ಬದಿಯಲ್ಲಿ ದಾರಿ ಉದ್ದಕ್ಕೂ ವಾಹನ ರೀಪೇರಿಗಳ ಗ್ಯಾರೆಜು ಕಾಣ ಸಿಗುತ್ತದೆ ಇದರಿಂದಾಗಿ ರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ರಸ್ತೆ ನೋಡಲು ಕೊಂಪೆಯಂತಾಗಿದೆ ಎಂದು ಜನತೆ ದೂರುತ್ತಾರೆ.
ಫುಟ್ ಪಾತ್ ಇಲ್ಲದ ರಾಷ್ಟ್ರೀಯ ಹೆದ್ದಾರಿ.
ಶ್ರೀನಿವಾಸಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಸದಾ ವಾಹನಗಳ ಸಂಚಾರದಿಂದ ಕೂಡಿದ್ದು ಇಲ್ಲಿ ಫುಟ್ ಪಾತ್ ಅತಿಕ್ರಮಣವಾಗಿ ದಾರಿ ಉದ್ದಕ್ಕೂ ವಾಹನ ರಿಪೇರಿಗಳ ಗ್ಯಾರೆಜು ನಿರ್ಮಿಸಿಕೊಂಳ್ಳಲಾಗಿದೆ ಪಾದಚಾರಿ ಮಾರ್ಗವೇ ಇಲ್ಲದಂತಾಗಿ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ. ದಾರಿ ಉದ್ದಕ್ಕೂ ಗ್ಯಾರೆಜ್ ಮಯವಾಗಿದ್ದು ರಿಪೇರಿಗೆ ತರುವಂತ ಕ್ಯಾಂಟರ್ ಟಾಟಾಸುಮೋ ಟಾಟಾ ಲಗ್ಗೇಜ್ ವಾಹನಗಳ ರೀಪೇರಿ ಮಾಡಲು ಪುಟ್ ಪಾತ್ ಹಾಗು ರಸ್ತೆಯ ಕೆಲ ಭಾಗ ಬಳಸಿಕೊಂಡು ದಿನಗಟ್ಟಲೆ ನಿಲ್ಲಿಸಿಕೊಂಡಿರುತ್ತಾರೆ,ಇದು ಚಿಂತಾಮಣಿ ಕಡೆಗೆ ಹೋಗುವ ಬಸ್ಸುಗಳು ಇತರೆ ವಾಹನಗಳು ಇದೇ ಮಾರ್ಗವಾಗಿ ಓಡಾಡಬೇಕು ಇಲ್ಲಿ ಫುಟ್ ಪಾತ್ ಹಾಗು ರಸ್ತೆ ಅತಿಕ್ರಮಣ ಮಾಡಿಕೊಂಡ ಕಾರಣ ಸಂಜೆ ವೇಳೆ ಜನ ದಟ್ಟಣೆ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ ರಸ್ತೆಯಲ್ಲಿ ಬರುವಂತ ವಾಹನಗಳು ದಾರಿ ಉದ್ದಕ್ಕೂ ನಿಲ್ಲುತ್ತವೆ ಎಂದು ರಮೇಶ್ ವೆಂಕಟರವಣರೆಡ್ಡಿ ಆರೋಪಿಸುತ್ತಾರೆ.
ರಸ್ತೆ ಬದಿ ಮಣ್ಣು ಸಂಗ್ರಹ
ಲಗ್ಗೇಜ್ ವಾಹನಗಳನ್ನು ಮತ್ತು ಟ್ರ್ಯಾಕ್ಟರ್ ಹಾಗು ಇತರೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸಿಕೊಂಡು ರಿಪೇರಿ ಮಾಡುವುದರಿಂದ ವಾಹನದಲ್ಲಿ ಇರುವಂತ ಮಣ್ಣು ಕಸಕಡ್ದಿ ರಸ್ತೆ ಬದಿ ಬಿಳುತ್ತದೆ ಮಣ್ಣು ಶೇಖರಣೆಯಾಗುತ್ತದೆ ಮತ್ತು ಮಣ್ಣಿನ ಮೇಲೆ ಸಾಲಾಗಿ ವಾಹನಗಳು ನಿಂತಿರುತ್ತದೆ ಇದರಿಂದಾಗಿ ಪುರಸಭೆ ಸಿಬ್ಬಂದಿ ಮಣ್ಣು ತೆರವು ಗೊಳಿಸಲು ಸಾದ್ಯವಾಗದೆ ಹಾಗೆ ಬಿಟ್ಟಿದ್ದು ದಿನದಿಂದ ದಿನಕ್ಕೆ ಹೆಚ್ಚಾಗುತ್ತ ದೊಡ್ಡಮಟ್ಟದಲ್ಲಿ ಮಣ್ಣು ಶೇಖರಣೆಯಾಗಿ ದ್ವಿಚಕ್ರ ವಾಹನ ಸಂಚಾರಕ್ಕೂ ಮಣ್ಣು ಅಡ್ಡಿಯಾಗುತ್ತದೆ ಗಾಳಿ ಬಂದಾಗ ಮಣ್ಣು ರಸ್ತೆಯಲ್ಲ ಹರಡುತ್ತದೆ.
ರಾಜಕೀಯ ಇಚ್ಚಾಶಕ್ತಿ ಇಲ್ಲದ ವ್ಯವಸ್ಥೆ!
ಶ್ರೀನಿವಾಸಪುರ ಪಟ್ಟಣಕ್ಕೆ ತೀರಾ ಹತ್ತಿರದ ಚಿಂತಾಮಣಿ ನಗರವನ್ನು ಸ್ವಚ್ಚ ಚಿಂತಾಮಣಿ ಮಾಡಲು ಮುಂದಾಗಿರುವ ಅಲ್ಲಿನ ಶಾಸಕರು ಇತ್ತಿಚಿಗೆ ಪುಟ್ ಪಾತ್ ತೆರವು ಮಾಡಿಸಿ ಸುಂದರವಾದ ಹಾಗು ಮಾದರಿ ನಗರ ಮಾಡಲು ಹೋರಟಿದ್ದಾರೆ ಜಿಲ್ಲಾ ಕೇಂದ್ರವಾದ ಕೋಲಾರದ ರಸ್ತೆಗಳು ಅಗಲೀಕರಣವಾಗಿದೆ ವಿಶಾಲವಾದ ರಸ್ತೆಗಳು ನಿರ್ಮಾಣ ಆಗಿದೆ ಮುಳಬಾಗಿಲು ನಗರದಲ್ಲಿ ಸುಗಮ ಸಂಚಾರಕ್ಕೆ ಅನವು ಮಾಡಿಕೊಡುವ ನಿಟ್ಟಿನಲ್ಲಿ ಅಲ್ಲಿನ ಶಾಸಕರು ಖುದ್ದಾಗಿ ನಿಂತು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಆದರೆ ಶ್ರೀನಿವಾಸಪುರ ಪಟ್ಟಣದಲ್ಲಿ ಇರುವ ರಸ್ತೆಗಳಲ್ಲಿ ಸುಗಮ ಸಂಚಾರ ಆಗಲು ತೊಂದರೆ ಏನು ಅನ್ನುವುದು ಜನರ ಪ್ರಶ್ನೆ ರಸ್ತೆ ಸಾರಿಗೆ ಹೀಗೆ ಏನೊಂದು ಕಾರ್ಯ ಆಗದೆ ಇರುವ ಬಗ್ಗೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಅಭಿವೃದ್ಧಿ ಇಚ್ಚಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಸಾರ್ವಜನಿಕರು ವಿಷಾದ ವ್ಯಕ್ತಪಡಿಸುತ್ತಾರೆ.
ಇದು ರಾಷ್ಟ್ರೀಯ ಹೆದ್ದಾರಿ 69
ಇದು ರಾಷ್ಟ್ರೀಯ ಹೆದ್ದಾರಿ 69 ಹಿಂದೆ ಈ ರಾಷ್ಟ್ರೀಯ ಹೆದ್ದಾರಿಯನ್ನು NH 234 ಎಂದು ಕರೆಯುತ್ತಿದ್ದರು.ಆದಕ್ಕೂ ಹಿಂದೆ ಇದನ್ನು ಮುಳಬಾಗಿಲು-ಮೂಡಗೆರೆ ರಾಜ್ಯ ಹೆದ್ದಾರಿಯಂದು ಗುರತಿಸಲಾಗಿತ್ತು ರಸ್ತೆ ಹೆಚ್ಚು ತಮಿಳುನಾಡು-ಕರ್ನಾಟಕ ಸಂಪರ್ಕದ ವಾಹನಗಳು ಒಡಾಡುತ್ತಿದ್ದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿಸಿದರು,
ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಪಶ್ಚಿಮ ಟರ್ಮಿನಲ್ ಹೊನ್ನಾವರ ಬಳಿ NH 66 ರ ಜಂಕ್ಷನ್ನಲ್ಲಿದೆ, ಸಿರಾ ಬಳಿ NH 48 ಅನ್ನು ಸಂಪರ್ಕಿಸುತ್ತದೆ, ಚಿಕ್ಕಬಳ್ಳಾಪುರ ಬಳಿ NH 44 ಅನ್ನು ಸಂಪರ್ಕಿಸುತ್ತದೆ, ಮುಳಬಾಗಿಲು ಬಳಿ NH 75 ಅನ್ನು ಸಂಪರ್ಕಿಸುತ್ತದೆ ಮತ್ತು ರೇಣಿಗುಂಟದ ಪೂರ್ವ ತುದಿಯಲ್ಲಿ ಕೊನೆಗೊಳ್ಳುತ್ತದೆ. ಇದು ಹೊನ್ನಾವರದಿಂದ ಪ್ರಾರಂಭವಾಗಿ ಸಾಗರ, ಶಿವಮೊಗ್ಗ, ತರೀಕೆರೆ, ಕಡೂರು, ಬಾಣಾವರ, ಹುಳಿಯಾರ್, ಬುಕ್ಕಪಟ್ಟಣ, ಸಿರಾ, ಮಧುಗಿರಿ, ಕೋಟಾಲದಿನ್ನೆ, ಗೌರಿಬಿದನೂರು, ಮಂಚೇನಹಳ್ಳಿ, ಚಿಕ್ಕಬಳ್ಳಾಪುರ, ಸಿದ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಲು, ನಂಗಲಿ ಮೂಲಕ ಕರ್ನಾಟಕದಲ್ಲಿ ಹಾದು ಹೋಗಿ ಆಂಧ್ರದ ಪಲಮನೇರ್, ಚಿತ್ತೂರು, ಪಲ್ಲಿಪಟ್ಟು ಮೂಲಕ, ಪುತ್ತೂರು ಮತ್ತು ರೇಣಿಗುಂಟದಲ್ಲಿ ಕೊನೆಗೊಳ್ಳುತ್ತದೆ. ಕರ್ನಾಟಕದಲ್ಲಿ 570 ಕಿಮೀ ಸಾಗುವ ಹೆದ್ದಾರಿ ಆಂಧ್ರ ಪ್ರದೇಶದಲ್ಲಿ 162 ಕಿಮೀ ಸಾಗುತ್ತದೆ.
ಹಾಳು ಕೊಂಪೆಯಂತೆ ಕಾಣುವ ಶ್ರೀನಿವಾಸಪುರ ಪಟ್ಟಣ
ಹಳೇಯ ಮಾವು ಮಾರುಕಟ್ಟೆ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ವಾಹನ ಸ್ಕ್ರಾಪ್ ಗೊಡೌನ್ ಇದ್ದು ಹಳೆಯ ವಾಹನಗಳ ಗಾಜು ಬಾಗಿಲುಗಳು ಗೊಡೌನ್ ಇದ್ದು ಅಲ್ಲಿ ಸಹ ರಾಶಿ ರಾಶಿ ಗುಜರಿ ಸರಕು ಹೈವೆ ರಸ್ತೆ ಒತ್ತುವರಿ ಮಾಡಿಕೊಂಡು ರಸ್ತೆಯಲ್ಲೆ ಸುರಿಯಲಾಗಿದೆ, ಅದರ ಮುಂಬಾಗದಲ್ಲಿ ಹಳೆ ಪ್ಲಾಸ್ಟಿಕ್ ಲೊಡಗಟ್ಟಲೆ ಸರಕು ರಸ್ತೆ ಆವರಿಸಿಕೊಂಡು ಸುರಿದಿದ್ದು ಈ ಭಾಗದ ರಸ್ತೆ ನೋಡಿದರೆ ಶ್ರೀನಿವಾಸಪುರ ಪಟ್ಟಣ ಹಾಳು ಕೊಂಪೆಯಂತೆ ಕಾಣುತ್ತದೆ ಇವಲ್ಲವನ್ನು ನೋಡಿ ನೊಡದಂತೆ ಇಲ್ಲಿನ ಆಡಳಿತ ಹಾಗು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ದಿವ್ಯ ಮೌನ ವಹಿಸಿದೆ ಎಂದು ಜನರ ಆರೋಪ.