ಶ್ರೀನಿವಾಸಪುರ: ಕೋಲಾರ ಜೆಡಿಎಸ್ ಪಕ್ಷದ ಪ್ರಭಾವಿ ಮುಖಂಡ 2024 ರ ವಿಧನಾಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ಸೋತಿರುವ ಮುಖಂಡ CMR ಶ್ರೀನಾಥ್ ಇಂದು ಶ್ರೀನಿವಾಸಪುರ ತಾಲೂಕಿನ ರೋಣೂರು ಗ್ರಾಮದ ಶ್ರೀ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದು ಈ ಭೇಟಿ ಶ್ರೀನಿವಾಸಪುರ ರಾಜಕೀಯ ವಲಯದಲ್ಲಿ ತೀವ್ರ ಕೂತುಹಲಕ್ಕೆ ಕಾರಣವಾಗಿದೆ.
ದೇವಸ್ಥಾನ ಭೇಟಿ ನೀಡುವ ನೆಪದಲ್ಲಿ CMR ಶ್ರೀನಾಥ್ ತಾಲೂಕಿನ ಕೆಲ ಭಾಗದಲ್ಲಿ ರೌಂಡ್ಸ್ ಮಾಡಿದ್ದಾರೆ ಇದು ಶ್ರೀನಿವಾಸಪುರ ತಾಲೂಕಿನ ಪ್ರತಿಷ್ಟೆ ರಾಜಕೀಯ ವಲಯದಲ್ಲಿ ಚರ್ಚೆಗೆ ದಾರಿಮಾಡಿಕೊಟ್ಟಿದೆ.
CMR ಶ್ರೀನಾಥ್ ಗೆ ಶ್ರೀನಿವಾಸಪುರ ಹೊಸದಲ್ಲ ತಮ್ಮ ಟಮ್ಯಾಟೊ ವ್ಯಾಪಾರ ವ್ಯವಹಾರ ಸಂಭಂದ ನಿರಂತರವಾಗಿ ಇಲ್ಲಿನ ಟಮ್ಯಾಟೊ ಬೇಳೆಗಾರರು ಇತರೆ ತರಕಾರಿ ಬೇಳೆಗಾರರು ಹಾಗು ರೈತರೊಂದಿಗೆ ಸಂಪರ್ಕ ಹೊಂದಿದ್ದಾರೆ ಆದರೆ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದ ನಂತರದಲ್ಲಿ ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರೋಣೂರು ದೇವಾಲಯದ ನಂತರ ದಿಂಬಾಲ ಗ್ರಾಮದ ಪ್ರಸನ್ನ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದ್ದಾಗ ಅಲ್ಲಿನ ಸ್ಥಳೀಯ ಮುಖಂಡರು ಸ್ವಾಗತಿಸಿದ್ದಾರೆ ನಂತರ ಅವರು ವಾಪಸ್ಸು ಬರುವಾಗ ರೋಣೂರು ಭಾಗದ ಪ್ರಭಾವಿ ಮುಖಂಡರೊಬ್ಬರ ಮನೆಗೆ ಕಾಫಿ ಕುಡಿಯುವ ನೆಪದಲ್ಲಿ ಹೋಗಿದ್ದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
CMR ಶ್ರೀನಾಥ್ ತಾಲೂಕಿನ ರೌಂಡ್ಸ್ ಮಾಡುವ ಸಂದರ್ಭದಲ್ಲಿ ಥೀಯೆಟರ್ ಲಕ್ಷ್ಮಣರೆಡ್ಡಿ,ಚೊಕ್ಕರೆಡ್ಡಿ,ಬಂಡಪಲ್ಲಿ ಕೃಷ್ಣಾರೆಡ್ಡಿ ಸೇರಿದಂತೆ ಕೆಲ ಮುಖಂಡರು ಸಾಥ್ ಕೊಟ್ಟಿದ್ದಾರೆ.