ಶ್ರೀನಿವಾಸಪುರ:ತಾಲೂಕಿನ ಮುತ್ತಕಪಲ್ಲಿ ಪಂಚಾಯಿತಿ ವ್ಯಾಪ್ತಿಯ ಮಟಕನ್ನಸಂದ್ರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಮಹಿಳೆಯೊಬ್ಬರು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರ ಇಂತಹದೊಂದು ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ, ಅನುಮಾನಸ್ಪದ ರೀತಿಯಲ್ಲಿ ಮೃತ ಪಟ್ಟಿರುವ ಮಹಿಳೆಯನ್ನು ಗ್ರಾಮದ ಮುನಿವೆಂಕಟರೆಡ್ಡಿ ಅವರ ಪತ್ನಿ ನಾರಯಣಮ್ಮ(58) ಎಂದು ಗುರುತಿಸಲಾಗಿದೆ.
ತಾಲೂಕಿನ ಮಟಕನ್ನಸಂದ್ರ ಗ್ರಾಮದಲ್ಲಿ ವೆಂಕಟರಮಣಪ್ಪ ಮತ್ತು ಮುನಿವೆಂಕಟರೆಡ್ಡಿ ರವರ ಕುಟುಂಬಗಳ ನಡುವೆ ನಿವೇಶನ ಹಾಗು ದಾರಿ ವಿಚಾರವಾಗಿ ವಿವಾದ ಇದ್ದು, ಈ ಜಮೀನಿಗೆ ಸಂಬಂದಿಸಿದಂತೆ ಶ್ರೀನಿವಾಸಪುರ ನ್ಯಾಯಾಲಯದಲ್ಲಿ ವೆಂಕಟರಮಣಪ್ಪ ಪ್ರಕರಣ ದಾಖಲಿಸಿದ್ದಾರೆ ನ್ಯಾಯಲಯದಲ್ಲಿ ಇದೇ ತಿಂಗಳು ವಿಚಾರಣೆ ನಡೆಯಲಿದ್ದು ಪ್ರತ್ಯರ್ಥಿಗಳಿಗೆ ನ್ಯಾಯಾಲಯದಿಂದ ನೋಟಿಸ್ ಜಾರಿಯಾಗಿದೆ ಇದು ಮುನಿವೆಂಕಟರೆಡ್ಡಿ ಕುಟುಂಬಸ್ಥರನ್ನು ಆತಂಕಕ್ಕೆ ಈಡು ಮಾಡಿದೆ ಅವರ ಪತ್ನಿ ನಾರಾಯಣಮ್ಮ ನಮ್ಮ ಕುಟುಂಬಕ್ಕೆ ಆದ ಅಪಮಾನ ಎಂದು ಭಾವಿಸಿ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಎಲ್ಲಡೆ ಕೇಳಿಬರುತ್ತಿದೆ.
ಆತ್ಮಹತ್ಯೆ ಗ್ರಾಮದಲ್ಲಿ ಗಲಭೆಗೂ ಕಾರಣವಾಯಿತ
ಮುನಿವೆಂಕಟರೆಡ್ಡಿ ಅವರ ಪತ್ನಿ ನಾರಯಣಮ್ಮ ಆತ್ಮಹತ್ಯೆ ವಿಚಾರವಾಗಿ ಮುನಿವೆಂಕಟರೆಡ್ಡಿ ಮತ್ತು ವೆಂಕಟರವಣಪ್ಪ ಕುಂಟುಂಬಗಳ ನಡುವೆ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ ಎರಡು ಕುಟುಂಬಗಳ ನಡುವೆ ಮಾತಿನ ಚಕಮಕಿಯಾಗಿದೆ ಬೈದಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ ಪರಸ್ಪರ ಮನೆಗಳ ಮೇಲೆ ಕಲ್ಲುತೂರಾಟ ಮಾಡಿಕೊಂಡಿದ್ದಾರೆ ಈ ಸಮಯದಲ್ಲಿ ಸುರೇಶ್ ಹಾಗೂ ಅನಿತಾ ಎಂಬುವರು ಗಾಯಗೊಂಡಿದ್ದಾರೆ ಇವರನ್ನು ಚಿಕಿತ್ಸೆಗಾಗಿ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಗಲಭೆ ವಿಚಾರದಲ್ಲಿ ವೆಂಕಟರಮಣಪ್ಪ ಸೇರಿದಂತೆ ಸುಮಾರು 11 ಮಂದಿ ಮೇಲೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗ್ರಾಮಕ್ಕೆ ಅಡಿಷನಲ್ ಎಸ್ಪಿ ರವಿಶಂಕರ್ ಡಿವೈಎಸ್ಪಿ ನಂದಕುಮಾರ್ ಭೇಟಿ ನೀಡಿದ್ದು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿರುತ್ತಾರೆ ಪೋಲಿಸರು ಹೇಳುವಂತೆ ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದ್ದು
ವಕೀಲನ ಬಂಧನ ಕಲಾಪದಿಂದ ದೂರ ಉಳಿದ ವಕೀಲರು
ಮಟ್ಟಕನ್ನಸಂದ್ರ ಗ್ರಾಮದ ಜಮೀನು ಗಲಾಟೆ ವಿಚಾರದಲ್ಲಿ ಗ್ರಾಮದ ವಕೀಲ ಲೋಕೇಶ್ ರವರು ಗಲಾಟೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಪೋಲಿಸರು ಬಂಧಿಸಿದ್ದಾರೆ. ಇದು ಅಕ್ರಮ ಬಂಧನ ಎಂದು ವಿರೋಧಿಸಿ ಶ್ರೀನಿವಾಸಪುರದ ವಕೀಲರ ಸಂಘ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿದ್ದಾರೆ ಈ ಕುರಿತು ತಾಲೂಕು ವಕೀಲರ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ ವಕೀಲ ಸಂಘದ ಸದಸ್ಯರು ಆದ ಲೊಕೇಶ್ ಎಂಬುವವರನ್ನ ಅಧ್ಯಕ್ಷರ ಗಮನಕ್ಕೆ ತಾರದೆ ವಕೀಲರ ರಕ್ಷಣಾ ಕಾಯ್ದೆ -2023 ರ ಮಾನದಂಡಗಳನ್ನು ಅನುಸರಿಸದೆ ಶ್ರೀನಿವಾಸಪುರ ಪೊಲೀಸರು ವಕೀಲರನ್ನು ಅಕ್ರಮವಾಗಿ ಬಂದನಕ್ಕೆ ಒಳಪಡಿಸಿರುವುದು ಖಂಡನೀಯ, ವಕೀಲರ ಸಂಘದ ಸಭೆಯಲ್ಲಿ ಚರ್ಚಿಸಿ ನಡೆಯುವ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.