ಶ್ರೀನಿವಾಸಪುರ ತಾಲೂಕಿನಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಾಗಿದ್ದು ಮಹುಳೆಯೊಬ್ಬಳು ಮೀಟರ್ ಬಡ್ಡಿ ದಂಧೆ ಕೋರರ ಕಾಟಕ್ಕೆ ಬೆಚ್ಚಿಬಿದ್ದು ಭೀತಿಯಿಂದ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಕೈಸಾಲಕ್ಕೆ ಬಡ್ಡಿ ಕಟ್ಟಲಾಗದೇ ಆತ್ಮಹತ್ಯೆಗೆ ಯತ್ನಿಸಿದ್ದು ಅಸ್ವಸ್ಥಗೊಂಡ ಮಹಿಳೆಯನ್ನು ಅಕೆ ಮಗಳು ಸಕಾಲದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೀಟರ್ ಬಡ್ಡಿ ದಂಧೆಕೋರರಿಗೆ ಯಾವುದೆ ಕಾನೂನಿನ ಚೌಕಟ್ಟು ಇಲ್ಲದೆ ಅವ್ಯಾಹುತವಾಗಿ ದಂಧೆ ನಡೆಸಲಾಗುತ್ತಿದೆ ಇದರ ಪರಿಣಾಮ ಸಣ್ಣ-ಪುಟ್ಟ ಸಾಲ ಪಡೆದಂತವರು ಬಡ್ಡಿ ದಂಧೆ ಕೋರರ ಕಾಟಕ್ಕೆ ಊರುಗಳನ್ನೆ ತೊರೆಯುತ್ತಿದ್ದಾರೆ.
ಶ್ರೀನಿವಾಸಪುರ:ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೆಚ್ಚಿದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ಮಗಳ ಮದುವೆ,ವಿದ್ಯಾಭ್ಯಾಸ ಹಾಗೂ ಕುಟುಂಬದ ಅವಶ್ಯಕ್ಕಾಗಿ ಸಾಲ ಮಾಡಿದ್ದ ಮಹಿಳೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಪಡೆದಿದ್ದ ಸಾಲ ತೀರಿಸಲಾಗದೆ ಮೀಟರ್ ಬಡ್ಡಿದಂಧೆಕೋರರ ಕಾಟದಿಂದ ಬೇಸತ್ತು ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಮಹಿಳೆ ಕೋಮಲಾದೇವಿ ಮಹಿಳೆ ಮೀಟರ್ ಬಡ್ಡಿ ಚಕ್ರವೂಹ್ಯಕ್ಕೆ ಸಿಲುಕಿ ಬೆಚ್ಚಿದ ಆಕೆ ಮೀಟರ್ ದಂದೆ ಕೊರರ ಹೆಸರನ್ನು ಪತ್ರದಲ್ಲಿ ಬರೆದಿಟ್ಟು ಪಟ್ಟಣದ ಬಸ್ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳೆ.
ಮಗಳನ್ನು ನೋಡಿ ಜೀವ ಬಿಡಲು ಬಂದಳಂತೆ
ಕಾಲೇಜಿಗೆ ಹೋಗಿದ್ದ ಮಗಳನ್ನು ನೋಡಿ ಜೀವ ಬಿಡಲು ಪಟ್ಟಣಕ್ಕೆ ಬಂದೆ ಎಂದಿರುವ ಕೋಮಲಾದೇವಿ ಮಗಳು ಬರುವುದಕ್ಕೆ ಬಸ್ ನಿಲ್ದಾಣದಲ್ಲಿ ಕಾಯುತ್ತ ಕುಳಿತಿದ್ದು ಮಗಳು ಬರುವುದಕ್ಕೂ ಮುಂಚೆ ಅತಿಯಾಗಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮಗಳು ಬಸ್ ನಿಲ್ದಾಣಕ್ಕೆ ಬಂದಾಗ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ ಮಗಳು ತಕ್ಷಣ ತಾಯಿಯನ್ನು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಕೋಮಲಾದೇವಿ ಬದುಕಲು ಅವಕಾಶ ಸಿಕ್ಕಿದೆ ಎನ್ನಲಾಗಿದೆ.ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲಿಸರ ಸಹಾಯ ಸಿಗಲಿಲ್ಲ
ಸಾಲ ಕೊಟ್ಟವರು ಖಾಲಿ ಚೆಕ್ಕುಗಳಿಗೆ ಸಹಿ ಪಡೆದು ಹಣ ನೀಡಿರುವ ರಾಯಲ್ಪಾಡು ಗ್ರಾಮದ ಕೆಲ ವ್ಯಕ್ತಿಗಳು ಸಾಲ ಹಿಂತಿರುಗಿಸಲು ಕಾಲಾವಕಾಶ ಕೇಳಿದರು ಕೊಡುತ್ತಿಲ್ಲ ಜೊತೆಗೆ ಪ್ರತಿನಿತ್ಯ ಮನೆಯ ಹತ್ರ ಬಂದು ಅವಾಚ್ಯ ಶಬ್ದಗಳಿಂದ ಹಿಯ್ಯಾಳಿಸಿ ಬೈದು ಹಿಂಸೆ ಕೊಡುತ್ತಿದ್ದಾರೆ ಇದಕ್ಕಾಗಿ ರಾಯಲ್ಪಾಡು ಪೊಲೀಸ್ ಠಾಣೆಗೆ ದೂರು ನೀಡಿದರು ಪೊಲೀಸರು ಸ್ಪಂದಿಸಲಿಲ್ಲವೆಂದು ಆರೋಪಿಸಿರುವ ಆಕೆ ಹಣ ಕೊಡದಿದ್ದರೆ ಮಕ್ಕಳನ್ನು ಹಾಗೂ ಗಂಡನನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆಕೆ ಹೇಳುತ್ತಾಳೆ.
ಲೈಸನ್ಸ್ ಇಲ್ಲದಿದ್ದರೂ ಬಡ್ಡಿ ದಂದೆ ಸ್ಟ್ರಾಂಗ್
ತಾಲೂಕಿನಲ್ಲಿ ರಾಯಲ್ಪಾಡು ಗೌವನಪಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಬಡ್ಡಿ ದಂದೆ ನಡೆಸುವಂತ ಬಲಿಷ್ಟರಿಗೆ ಯಾವುದೆ ರೀತಿ ರಿವಾಜು ಕಾನೂನಿನ ಚೌಕಟ್ಟು ಕಟ್ಟು ಪಾಡುಗಳಿಲ್ಲ ಸರ್ಕಾರದ ನಿಯಮಾನುಸಾರ ಯಾವುದೆ ಪರವಾನಗಿ ಪಡೆಯದೆ ಅವ್ಯಾಹುತವಾಗಿ ಬಡ್ಡಿ ದಂದೆ ನಡೆಸುತ್ತಿದ್ದಾರೆ ಕೊಟ್ಯಾಂತರ ರೂಪಾಯಿಗಳ ಚೀಟಿಗಳನ್ನು ನಡೆಸುತ್ತಿದ್ದಾರೆ ಇದರ ಬಗ್ಗೆ ಇಲ್ಲಿ ಸ್ಥಳೀಯ ಪೋಲಿಸರು ನೋಡಿ ನೋಡದಂತೆ ಜಾಣ ಕುರುಡರಾಗಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.