ಶ್ರೀನಿವಾಸಪುರ:– ತಾಲೂಕಿನ ರಾಯಲ್ಪಾಡು ಹೋಬಳಿಯ ಕೂರಿಗೆಪಲ್ಲಿ ಆಂಧ್ರದ ಬಿ.ಕೊತ್ತಕೋಟ ರಸ್ತೆಯಲ್ಲಿ ಜಮೀನು ಕಡೆಗೆ ಹೋಗಿ ಬರುತ್ತಿದ್ದ ಮಹಿಳೆಯೊಬ್ಬರು ಮಳೆ ನೀರು ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಹೋಗಿರುವ ಧಾರುಣ ಘಟನೆ ನಡೆದಿರುತ್ತದೆ ಮೃತ ಮಹಿಳೆಯನ್ನು ಕೂರಿಗೆಪಲ್ಲಿ ಪಂಚಾಯಿತಿಯ ದಿವಂಗತ ಕೊತ್ತೂರುರೆಡ್ಡೆಪ್ಪ ಅವರ ಪತ್ನಿ ಅಮರಾವತಮ್ಮ (65) ಎಂದು ಗುರುತಿಸಲಾಗಿದೆ.
ತಾಲೂಕಿನ ಬದ್ದಿಪಲ್ಲಿ ನೀರಾವರಿ ಪ್ರಾಜೆಕ್ಟ್ ಬಳಿ ಕೋರಿಗೆಪಲ್ಲಿ ಗ್ರಾಮದಿಂದ ಆಂಧ್ರದ ಬಿ.ಕೊತ್ತಕೋಟಗೆ ಹೋಗುವ ರಸ್ತೆಯಲ್ಲಿ ಹಾದು ಹೋಗುವ ಹಳ್ಳದ ನೀರಿಗೆ ಕಟ್ಟಲಾಗಿದ್ದ ಸೇತುವೆ ಮುರಿದು ಬಿದ್ದು ಅನಾಹುತ ನಡೆದಿದೆ ಎನ್ನಲಾಗಿದೆ.
ನೀರಿನಲ್ಲಿ ಕೊಚ್ಚಿಹೋಗಿರುವ ಅಮಾರವತಮ್ಮ ತೋಟದ ಮಾಲಿ ಬಾಬುರೆಡ್ಡಿ ಯೊಂದಿಗೆ ಬೈಕ್ ನಲ್ಲಿ ತೋಟದ ಕಡೆ ಹೋಗಿ ಸಂಜೆ ವಾಪಸ್ಸು ಬರುತ್ತಿರಬೇಕಾದರೆ ಹಳ್ಳದಾಟುವಾಗ ಸೇತುವೆ ಕುಸಿದು ಬೈಕ್ ಸಮೇತ ಇಬ್ಬರು ಹಳ್ಳದಲ್ಲಿ ಬಿದ್ದಿರುತ್ತಾರೆ ಬೈಕ್ ಒಡಿಸುತ್ತಿದ್ದ ಯುವಕ ಬಾಬು ರೆಡ್ಡಿ ಈಜಿಕೊಂಡು ಪ್ರಾಣಪಯದಿಂದ ಪಾರಾಗಿದ್ದು ಬೈಕ್ ಮತ್ತು ಅಮರಾವತಮ್ಮ ಹಳ್ಳದಲ್ಲಿ ಕೊಚ್ಚಿಕೊಂಡು ಆಂಧ್ರದ ಕಡೆ ಹರಿದುಹೋಗಿರಬಹುದು ಎನ್ನಲಾಗಿದೆ.ಕರ್ನಾಟಕದ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಯಲ್ಲಿ ಬಿಳುವಂತ ಮಳೆಯ ನೀರು ಬಿರಂಗಿ ಕಾಲುವೆಯ ಮೂಲಕ ಕಂದಕೂರು ರಂಗಸಮುದ್ರಂ ಕೆರೆ ಮತ್ತು ಪೆದ್ದತಿಪ್ಪಸಮುದ್ರಂ ಕೆರೆಗಳ ಪಾಲಾಗುತ್ತಿವೆ.
ಭಾರಿ ಮಳೆಯಿಂದಾಗಿ ಕೋಡಿ ಹರಿಯುತ್ತಿರುವ ಅಡ್ಡಗಲ್ ಕೆರೆ,ಕೂರಿಗೆಪಲ್ಲಿ ಹಾಗು ಅಡ್ಡಗಲ್ ಗ್ರಾಮದ ಮಧ್ಯೆ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ.
ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಹಾಗು, ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ಕೊಚ್ಚಿ ಹೋಗಿರುವ ಮಹಿಳೆ ಕುರಿತಾಗಿ ಹುಡುಕಾಟ ನಡೆಸಿದ್ದಾರೆ.
ಯಲ್ದೂರು ಊರ ಕುಂಟೆ ತುಂಬಿ ಹರಿಯುತ್ತಿದೆ.
ತಾಲೂಕಿನ ಯಲ್ದೂರು ಗ್ರಾಮದ ಊರಿನ ಮದ್ಯಭಾಗದಲ್ಲಿದ್ದ ಕುಂಟೆ ಮಳೆಯಿಂದಾಗಿ ತುಂಬಿ ಊರಿನಲ್ಲಿ ಹರಿಯುತ್ತಿದೆ.
ವರದಿ: ಹರ್ಷವರ್ಧನ್