ಶ್ರೀನಿವಾಸಪುರ:ಜಮೀನು ವಿವಾದಕ್ಕೆ ಸಂಬಂದಿಸಿದಂತೆ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ದಾರುಣ ಘಟನೆ ತಾಲೂಕಿನ ರೋಣೂರು ಹೋಬಳಿ ನಿಲಟೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿರುತ್ತದೆ.ಮೃತ ಯುವಕನನ್ನು ನಿಲಟೂರು ಗ್ರಾಮದ ಪ್ರಸಾದ್(30) ಎಂದು ಗುರುತಿಸಲಾಗಿದೆ.
ನಿಲಟೂರು ಗ್ರಾಮ ವ್ಯಾಪ್ತಿಯ ರೋಣೂರು ರಸ್ತೆಯಲ್ಲಿರುವ ಸುಮಾರು ಐದು ಎಕರೆ ಮಾವಿನ ತೋಪಿನ ವಿಚಾರದಲ್ಲಿ ಮೃತ ಯುವಕ ಪ್ರಸಾದ್ ತಂದೆ ಈರನ್ನಗಾರಿ ಶ್ರೀರಾಮರೆಡ್ಡಿ ಮತ್ತು ಆರೋಪಿ ಎನ್ನಲಾದ ಕಿರಣ್ ಕುಟುಂಬಗಳ ನಡುವಿನ ವಿವಾದ ಕೋರ್ಟ್ ಮೇಟ್ಟಿಲೇರಿತ್ತು ನ್ಯಾಯಾಲಯದ ಹೋರಾಟದಲ್ಲಿ ಕಿರಣ್ ಪರ ತೀರ್ಪು ಬಂದ ಹಿನ್ನಲೆಯಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ವೈಷಮ್ಯ ಇದ್ದು ಎರಡು ಮೂರು ದಿನಗಳ ಹಿಂದೆ ಜಮೀನಿನಲ್ಲಿರುವ ಮಾವಿನ ಕಾಯಿ ಕೊಯ್ಲು ವಿಚಾರಕ್ಕೆ ಎರಡು ಕುಟುಂಬಗಳು ಪೋಲಿಸ್ ಠಾಣೆ ಮೆಟ್ಟಿಲೇರಿದ್ದವು,ಇಂದು ಬೆಳ್ಳಂ ಬೆಳಿಗ್ಗೆ ಎರಡು ಕುಟುಂಬದವರು ಮತ್ತೆ ಗಲಾಟೆಗೆ ಬಿದ್ದು ದೊಣ್ಣೆಗಳನ್ನು ಹಿಡಿದು ಕಲ್ಲುಗಳಿಂದ ದಾಳಿಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಮೃತ ಪ್ರಸಾದ್ ಕುಟುಂಬದ ಸದಸ್ಯರು ಕಿರಣ್ ನನ್ನು ಅಟ್ಟಾಡಿಸಿಕೊಂಡು ಹೋಗಿದ್ದು ಈ ಸಂದರ್ಭದಲ್ಲಿ ಕಿರಣ್ ಕಡೆಯವರು ಕಾರದಪುಡಿ ಎರಚಿದ್ದಾರೆ ಎನ್ನಲಾಗಿದ್ದು ಈ ನಡುವೆ ಸಿನಿಮೀಯ ರೀತಿಯಲ್ಲಿ ಚಾಕುವಿಂದ ಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಲಾಗುತ್ತಿದೆ.ಗಾಯಗೊಂಡ ಪ್ರಸಾದ್ ನನ್ನು ಶ್ರೀನಿವಾಸಪುರದ ಖಾಸಗಿ ಆಸ್ಪತ್ರೆಗೆ ರವಾನಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ಮಧ್ಯೆ ಪ್ರಸಾದ್ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಆರೋಪಿ ಕಿರಣ್ ಪೋಲಿಸರ ವಶಕ್ಕೆ
ಚಾಕು ಇರಿದ ಆರೋಪ ಹೊತ್ತಿರುವ ಕಿರಣ್ ನನ್ನು ಶ್ರೀನಿವಾಸಪುರ ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ನೀಲಟೂರು ಗ್ರಾಮದಲ್ಲಿ ತ್ವೇಷಮಯ ವಾತವರಣ ಇದ್ದು ಬೀಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದಾರೆ.ಘಟನಾ ಸ್ಥಳಕ್ಕೆ ಕೋಲಾರ ಜಿಲ್ಲಾ ರಕ್ಷಣಾಧಿಕಾರಿ ನಾರಯಣ್,ಮುಳಬಾಗಿಲು ಡಿ.ವೈ.ಎಸ್.ಪಿ ಜೈಶಂಕರ್,ಮುಳಬಾಗಿಲು ಇನ್ಸಪೇಕ್ಟರ್ ಲಕ್ಷ್ಮಿಕಾಂತ್,ಶ್ರೀನಿವಾಸಪುರ ಇನ್ಸಪೇಕ್ಟರ್ ನಾರಯಣಸ್ವಾಮಿ,ಗ್ರಾಮಾಂತರ ಇನ್ಸಪೇಕ್ಟರ್ ಜಯಾನಂದ್, ಗೌವನಪಲ್ಲಿ ಎಸ್.ಐ ರಾಮು ಮುಳಬಾಗಿಲು ಎಸ್.ಐ ಪ್ರದೀಪ್, ಸೇರಿದಂತೆ ಪೋಲಿಸ್ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಶೀಲನೆ ನಡೆಸಿರುತ್ತಾರೆ,ಜಿಲ್ಲಾ ಪೊಲಿಸ್ ಮೀಸಲು ಪಡೆ ತಂಡ ನಿಲಟೂರು ಗ್ರಾಮದಲ್ಲಿ ಬೀಡು ಬಿಟ್ಟಿದೆ.
ಆರೋಪಿ ಕಿರಣ್ ಹಾಗು ಮೃತ ಪ್ರಸಾದ್ ಕುಟುಂಬಗಳು ದೊಣ್ಣೆಗಳನ್ನು ಹಿಡಿದು ಹೋಡೆದಾಡಿಕೊಳ್ಳುತ್ತಿರುವ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.





