ಶ್ರೀನಿವಾಸಪುರ:ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ AAP ಆಮ್ ಆದ್ಮಿ ಪಕ್ಷ ಗಟ್ಟಿಯಾಗಿ ನೆಲೆ ನಿಲ್ಲಲು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಪ್ರತಿ ಗ್ರಾಮದಲ್ಲೂ ಮತದಾರರನ್ನು ಜಾಗೃತ ಗೊಳಿಸುವಂತ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು AAP ಆಮ್ ಆದ್ಮಿ ಪಕ್ಷದ ಚುನಾವಣಾ ಆಕಾಂಕ್ಷಿ ಡಾ.ವೆಂಕಟಾಚಲ ಹೇಳಿದರು ಅವರು ಪಟ್ಟಣದ ಶ್ರೀ ಮಾರುತಿ ಸಭಾ ಭವನದಲ್ಲಿ ಆಯೋಜಿಸಿದ್ದ ಚುನಾವಣೆ ಸಿದ್ದತಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಬದಲಾವಣೆಗೆ ಜನತೆ ಆಮ್ ಆದ್ಮಿ ಪಕ್ಷ ಬೆಂಬಲಿಸುವಂತೆ ಕೋರಿದ ಅವರು
ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಗಳಾಗಿ ಬದಲಾವಣೆ ತಂದಿರುತ್ತಾರೆ ದೆಹಲಿಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ವ್ಯವಸ್ಥೆಯನ್ನು ಮೀರಿಸಿ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಈಗಾಗಲೆ ತಾಲೂಕಿನಾದ್ಯಂತ ಸಾರ್ವಜನಿಕ ಸಂಪರ್ಕ ಅಭಿಯಾನ ಶುರುಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸೂಚನೆಯಂತೆ ತಾಲೂಕಿನ ಐವತ್ತು ಸಾವಿರ ಜನ ಸಂಖ್ಯೆಗೆ ಒಂದು ಘಟಕ ಎಂದು ಹತ್ತು ಸಾವಿರ ಜನ ಸಂಖ್ಯೆಗೆ ಒಂದು ವೃತ್ತ ಎಂದು ವಿಂಗಡನೆ ಮಾಡುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರ್ಯವೈಖರಿ ಕುರಿತಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದರು.
ಆಮ್ ಆದ್ಮಿ ಪಕ್ಷದ ಮತ್ತೊಬ್ಬ ಆಕಾಂಕ್ಷಿ ಅಭ್ಯರ್ಥಿ ಬಾಬುರೆಡ್ಡಿ ಮಾತನಾಡಿ ಎಎಪಿ ಮೊದಲ ಬಾರಿಗೆ ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಮಾದರಿ ಆಡಳಿತ ನೀಡುತ್ತಿದೆ ಇಂದಿನ ವ್ಯವಸ್ಥೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಅಥವಾ ಅನಾರೋಗ್ಯದ ಸಣ್ಣ ಸಮಸ್ಯೆ ಬಗ್ಗೆ ಚಿಕಿತ್ಸೆ ಕೊಡಬೇಕಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ ಇದನ್ನು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ದೆಹಲಿಯಲ್ಲಿ ಮಾಡಿ ತೋರಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎ.ಎ.ಪಿ ಮುಖಂಡರಾದ ಕೋಲಾರದ ಮಾಜಿ ಸಂಸದ ವೆಂಕಟೇಶ್, ರಾಜ್ಯ ಮುಖಂಡ ಸುರೇಶ್ ಬಾಲಕೃಷ್ಣಮ್,ವಕೀಲ ಕೂರಿಗೇಪಲ್ಲಿಶ್ರೀನಿವಾಸ್,ಸಾಮಿಲ್ ವೆಂಕಟ್ರಾಮೇಗೌಡ ಮುಂತಾದವರು ಇದ್ದರು.