ಶ್ರೀನಿವಾಸಪುರ: ಬೆಂಗಳೂರು ಕಳಾಸಿಪಾಳ್ಯಂ ನಿಂದ ಹೊರಟು ಹೆಚ್ ಕ್ರಾಸ್ ಮದನಪಲ್ಲಿ ಮಾರ್ಗವಾಗಿ ತಿರುಪತಿಗೆ ಹೊರಟಿದ್ದ ಖಾಸಗಿ ಬಸ್ಸೊಂದು ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದು ಅಪಘಾತವಾಗಿದೆ,ಬಸ್ಸಿನಲ್ಲಿದ್ದ ಬಹುತೇಕ ಪ್ರಯಾಣಿಕರು ಗಾಯಗಳಾಗಿದ್ದು ಅವರಲ್ಲಿ ಕೆಲವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗುರುವಾರ ಬೆಳೆಗ್ಗೆ 10 ಗಂಟೆಗೆ ರಾಯಲ್ಪಾಡು ಗೆಟ್ ನಿಂದ ಹಾದು ಹೊದ ಭಾರತಿ ಬಸ್ ಸರ್ವಿಸ್ ಆಂಧ್ರಪ್ರದೇಶದ ಮದನಪಲ್ಲಿ ವ್ಯಾಪ್ತಿಯ ಬಾರ್ಲಪಲ್ಲಿ ಬಳಿ ತಿರುವಿನಲ್ಲಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದಿದೆ ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಬಸ್ಸಿನ ಹಿಂಬದಿ ಗಾಜು ಒಡೆದು ಗಾಯಾಳುಗಳನ್ನು ಹೊರತಗೆದು ಮದನಪಲ್ಲಿಯ ಸರ್ಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಅಪಘಾತದಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿದ್ದು 10ಕ್ಕೂ ಹೆಚ್ಚು ಪ್ರಯಾಣಿಕರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆಯೆಂದು ಹೇಳಲಾಗಿದೆ. ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ಬೆಂಗಳೂರಿನವರಾಗಿದ್ದು ತಿರುಪತಿ ಹಾಗೂ ಮದನಪಲ್ಲಿಗೆ ಹೊಗುತ್ತಿದ್ದರು ಎನ್ನಲಾಗಿದೆ ಅಪಘಾತ ಸ್ಥಳಕ್ಕೆ ಮದನಪಲ್ಲಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದನಪಲ್ಲಿ ಆಸ್ಪತ್ರೆಗಳಲ್ಲಿ ಚಿಕಿಸ್ಥೆ ಪಡೆಯುತ್ತಿರುವ ಬಸ್ ಅಪಘಾತದ ಗಾಯಾಳುಗಳನ್ನು ಮದನಪಲ್ಲಿ ಮಾಜಿ ಶಾಸಕ ದೊಮ್ಮಲಪಾಟಿ ರಮೇಶ್ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.
