- ಜಾಲಪ್ಪ ನಾರಾಯಣ ಹೃದಯಾಲಯದಿಂದ
- ಪತ್ರಕರ್ತರಿಗೆ ಪ್ರಿವಿಲೇಜ್ ಕಾರ್ಡ್ ವಿತರಣೆ
- ಸೂಕ್ತ ಚಿಕಿತ್ಸೆ ನೀಡಲು ಗೋಪಿನಾಥ್ ಮನವಿ
ಕೋಲಾರ:ಕೋವಿಡ್ ನಂತರದಲ್ಲಿ ಆಗುತ್ತಿರುವ ಹೃದಯಾಘಾತಗಳಿಗೆ ಕೊರೊನಾ ಲಸಿಕೆಯೇ ಇದಕ್ಕೆ ನಿಶ್ಚಿತ ಕಾರಣವಲ್ಲ ಎಂದು ಜಾಲಪ್ಪ ಆಸ್ಪತ್ರೆಯ ತಜ್ಞ ವೈದ್ಯ ಡಾ.ಮುರಳಿ ಬಾಬು ಹೇಳಿದರು ಅವರು ಕೋಲಾರ ನಗರದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆರ್.ಎಲ್.ಜಾಲಪ್ಪ ನಾರಾಯಣ ಹೃದಯಾಲಯ 14 ವರ್ಷಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಆದ್ಯತೆ ಮೇಲೆ ಹಾಗೂ ರಿಯಾಯಿತಿ ದರದ ಚಿಕಿತ್ಸೆಗಾಗಿ ಪ್ರಿವಿಲೇಜ್ ಕಾರ್ಡ್ (ಹೆಲ್ತ್ ಕಾರ್ಡ್) ಅನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿ
ಜುಲೈ 1ರಂದಿನ ಪತ್ರಿಕಾ ದಿನಾಚರಣೆ ಕೊಡುಗೆಯಾಗಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಹಂತವಾಗಿ ಕೋಲಾರ ನಗರದ ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ನೀಡಲಾಗಿದ್ದು ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ನಾರಾಯಣ ಹೃದಯಾಲಯ ಘಟಕವು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. 8 ತಿಂಗಳ ಮಕ್ಕಳಿಂದ ಹಿಡಿದು 72 ವರ್ಷ ವಯೋವೃದ್ಧರವರೆಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ವಿವಿಧ ರೀತಿಯ ಚಿಕಿತ್ಸೆ ನೀಡಿದ್ದೇವೆ. 11 ಸಾವಿರ ಆ್ಯಂಜಿಯೊಗ್ರಾA, 8 ಸಾವಿರ ಸ್ಟೆಂಟ್ ನೆರವೇರಿಸಿದ್ದೇವೆ. ಹೊರ ಹಾಗೂ ಒಳರೋಗಿಗಳು ಸೇರಿದಂತೆ 1.2 ಲಕ್ಷ ಮಂದಿಗೆ ಶಸ್ತ್ರ ಚಿಕಿತ್ಸೆ ಚಿಕಿತ್ಸೆ ನೀಡಲಾಗಿದೆ ಎಂದರು.
ಪತ್ರಕರ್ತರಿಗೆ ಶೇ 10 ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ಹೃದಯ ತಪಾಸಣೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುತ್ತೇವೆ. ನಮ್ಮ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಆರೋಗ್ಯ ವಿಮೆ ಸೌಲಭ್ಯ ಇದ್ದು ಯಶಸ್ವಿನಿ ಯೋಜನೆ ಇನ್ನೂ ನಮ್ಮಲ್ಲಿ ಶುರುವಾಗಿಲ್ಲ. ಸರ್ಕಾರದಿಂದ ನಿರ್ದೇಶನ ಬಂದ ತಕ್ಷಣ ಶುರು ಮಾಡುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮನವಿ ಮೇರೆಗೆ ಪ್ರಿವಿಲೇಜ್ ಕಾರ್ಡುಗಳನ್ನು ಜಿಲ್ಲೆಯ ಎಲ್ಲಾ ಪತ್ರಕರ್ತರಿಗೂ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಮತ್ತು ಪತ್ರಕರ್ತರು ತಮ್ಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಆತ್ಮೀಯವಾಗಿ ಸ್ಪಂದಿಸಿ ಅವರಿಗೆ ಸೂಕ್ತ ಚಿಕ್ಸತೆ ನೀಡುವಂತೆ ಕೋರಿದರು.
ಮೊದಲ ಹಂತದಲ್ಲಿ ಕೋಲಾರ ನಗರದ ಪತ್ರಕರ್ತರಿಗೆ ಕಾರ್ಡ್ಗಳನ್ನು ವಿತರಿಸಲಾಗಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಪತ್ರಕರ್ತರ ಸಂಘದ ಸದಸ್ಯರಿಗೆ ಜುಲೈ ಮೊದಲ ವಾರದಲ್ಲಿ ಆಯಾ ತಾಲ್ಲೂಕುಗಳಲ್ಲಿಯೇ ಕಾರ್ಡುಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ತಜ್ಞ ವೈದ್ಯರಾದ ಡಾ.ಭರತ್ ಕಿರಣ್, ಫೆಸಿಲಿಟಿ ಡೈರಕ್ಟರ್ ನಾಗರಾಜ್, ಮಾರ್ಕೆಂಟಿಂಗ್ ಮ್ಯಾನೇಜರ್ ಶಶಿಧರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಜಿಲ್ಲಾ ಸಂಘದ ಖಜಾಂಚಿ ಎ.ಜಿ.ಸುರೇಶ್ ಕುಮಾರ್ ಹಿರಿಯ ಪತ್ರಕರ್ತರಾದ ಪಿಟಿಐ ಸುರೇಶ್,ಅನಂತರಾಮ್, ಪಿ.ಆರ್.ಓಗಳಾದ ನರೇಶ್, ವೆಂಕಟರಾಮರೆಡ್ಡಿ ಮುಂತಾದವರು ಇದ್ದರು.