ಶ್ರೀನಿವಾಸಪುರ:ರಾಜ್ಯದಲ್ಲಿ ವಕೀಲರ ಮೇಲೆ ನಡೆಯುತ್ತಿರುವ ಅಮಾನವೀಯ ಹಲ್ಲೆಗಳು ನಡೆಯುತ್ತಿದೆ ಇದು ನಿಲ್ಲಬೇಕು ಎಂದು ಶ್ರೀನಿವಾಸಪುರ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ವಕೀಲರು ಕೋರ್ಟ ಕಲಾಪ ಬಹಿಷ್ಕರಿಸಿ ತಾಲೂಕು ಕಚೇರಿ ವರೆಗು ಮೆರವಣಿಗೆ ಹೋದ ವಕೀಲರು ಇಂದಿರಾ ಭವನ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಳಿಕ ತಾಲೂಕು ಕಚೇರಿಗೆ ತೆರಳಿದ ವಕೀಲರು ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿ ರಾಜ್ಯದಲ್ಲಿ ಕೂಡಲೇ ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಜಯರಾಮೇಗೌಡ, ಖಜಾಂಜಿ ವೆಂಕಟೇಶ್,ಕಾರ್ಯದರ್ಶಿ ಪಿ.ಸಿ.ನಾರಯಣಸ್ವಾಮಿ,ಸೌಭಾಗ್ಯ,ರಾಜಗೋಪಾಲರೆಡ್ಡಿ, ವಿನಯ್ ಕುಮಾರ್ ಮುಂತಾದವರು ಇದ್ದರು.

