ಚಿಂತಾಮಣಿ:- ಚಿಂತಾಮಣಿ ತಾಲೂಕಿನ ಚಿಲಕಲನೆರ್ಪು ಹೋಬಳಿ ಮಿಟ್ಟಹಳ್ಳಿ ಗ್ರಾಮದ ಸುತ್ತಮುತ್ತ ಮಂಗಳವಾರ ಭೂಕಂಪಿಸಿದ ಬೆನ್ನಲ್ಲೆ ಮತ್ತೇ ಬುಧವಾರ ಮದ್ಯರಾತ್ರಿ ನಸುಕಿನಲ್ಲಿ ಎರಡು ಬಾರಿ ಹಾಗು ಗುರುವಾರ ಬೆಳಿಗ್ಗೆ ಮತ್ತೇ ಬಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಜನತೆ ಆತಂಕಗೊಂಡು ಊರು ಬಿಡುತ್ತಿದ್ದಾರೆ! ಹಳೇಯ ಮನೆಗಳನ್ನು ಹೊಂದಿರುವಂತ ಬಹುತೇಕ ಗ್ರಾಮಸ್ಥರು ಊರು ಕಾಲಿ ಮಾಡಿದ್ದು ಊರಿನಲ್ಲಿ ಉಳಿದುಕೊಂಡಿರುವ ಜನರು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ.ಮನೆಯಲ್ಲಿ ಇರಲು ಕಂಪನದ ಭಯ ಒಂದಡೆಯಾದರೆ ಮನೆಯಿಂದ ಹೊರಬಂದರೆ ಜಡಿ ಮಳೆ,ಇದರಿಂದ ಜನತೆ ಮತ್ತಷ್ಟು ಭಯಗೊಂಡಿದ್ದಾರೆ.
ಈ ಕುರಿತು ಗ್ರಾಮಸ್ಥರು ಸುದ್ದಿಗಾರರೊಂದಿಗೆ ಮಾತನಾಡಿ ಹವಾಮಾನ ವೈಪರಿತ್ಯದಿಂದ ಭೂಮಿಯಲ್ಲಿ ತೆವಾಂಶ ಹೆಚ್ಚಾಗಿ ಭೂಕಂಪನ ಅಗಿರಬಹುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಹೇಳುತ್ತಿದೆ,ಈ ಬಗ್ಗೆ ಅಧಿಕಾರಿಗಳ ಹೇಳಿಕೆಯಲ್ಲಿ ಯಾವುದೆ ನಿಖರತೆ ಇಲ್ಲ ವೈಙ್ಞಾನಿಕವಾಗಿ ಯಾವುದೇ ಮಾಪನ ಮಾಡದೆ ಅಂದಾಜಿನಲ್ಲಿ ಹೇಳುವುದು ಸರಿಯಲ್ಲ ಜಿಲ್ಲಾಡಳಿತ ಈ ವಿಚಾರವನ್ನು ತೀವ್ರವಾಗಿ ಪರಿಗಣಿಸಬೇಕು ಎಂದು ಅಗ್ರಹಿಸಿದ್ದಾರೆ.
ಇಂದು ಗ್ರಾಮಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಹನುಮಂತರಾಯಪ್ಪ ಅವರನ್ನು ಗ್ರಾಮದ ಮಹೆಳೆಯರು ಮುತ್ತಿಗೆ ಹಾಕಿ ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.
ಗ್ರಾಮಗಳಿಗೆ ಶಾಸಕ ಕೃಷ್ಣಾರೆಡ್ಡಿ ಭೇಟಿ
ಚಿಂತಾಮಣಿ ತಾಲೂಕಿನ ಚಿಲಕಲನೆರ್ಪು ಹೋಬಳಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಟ್ಟಿದ್ದರು ಮಾನವೀಯತೆ ದೃಷ್ಟಿಯಿಂದ ಚಿಂತಾಮಣಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಭೂಕಂಪಿಸಿದ ಗ್ರಾಮಗಳಿಗೆ ಭೇಟಿನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿರುವ ಅವರು ಈ ಕುರಿತಾಗಿ ಅಗತ್ಯಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತದೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.