ನ್ಯೂಜ್ ಡೆಸ್ಕ್:ಪಾರಿವಾಳಗಳನ್ನು ಸಾಕುವುದನ್ನು ಕೆಲವರು ಹವ್ಯಾಸವಾಗಿಸಿಕೊಂಡಿದ್ದಾರೆ ಇನ್ನೂ ಕೆಲವರು ತಮ್ಮ ಮಹಡಿಗಳ ಮೆಲೆ ಪಾರಿವಾಳಗಳಿಗಾಗಿ ಕಾಳು ಹಾಕುತ್ತ ಸಂಭ್ರಮಿಸುತ್ತಾರೆ ಅದನ್ನು ತಿನ್ನಲು ಬರುವಂತ ನೂರಾರು ಸಂಖ್ಯೆಯ ಪಾರಿವಾಳಗಳು ಮಹಡಿಗಳ ಮತ್ತು ವಿದ್ಯುತ್ ತಂತಿಗಳ ಮೇಲೆ ಬಂದು ಕೂರುತ್ತವೆ ಇದೊಂದು ಮಾನವೀಯ ಕಾರ್ಯ ಎಂದು ಕೆಲವರು ಭಾವಿಸುತ್ತಾರೆ ಆದರೆ ಅದೆ ಪಾರಿವಾಳಗಳಿಂದ ತೀವ್ರ ಉಸಿರಾಟದ ಕಾಯಿಲೆಗಳು ಬರುವ ಅಪಾಯವಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪಾರಿವಾಳದಲ್ಲಿ ವಿಭಿನ್ನ ಜೈವಿಕ ವೈವಿಧ್ಯವಿದ್ದು ವಿಶೇಷವಾಗಿ ಪಾರಿವಾಳದ ಗರಿಗಳ ಮೇಲೆ,ವಿಶೇಷ ಬ್ಯಾಕ್ಟೀರಿಯಾಗಳಿವೆ. ದೇಹದ ಇತರ ಭಾಗಗಳಲ್ಲಿ ವಿವಿಧ ರೀತಿಯ ವೈರಸ್ ಗಳಿವೆ. ಅವೆಲ್ಲವೂ ಸೋಂಕನ್ನು ಉಂಟುಮಾಡುವ ರೋಗಲಕ್ಷಣಗಳನ್ನು ಹೊಂದಿದ್ದು ಪಾರಿವಾಳದ ಸಂಪರ್ಕದಿಂದ ಮಾನವನ ದೇಹದ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಗಳಿವೆ ಇದರಿಂದ ತೀವ್ರ ಅಲರ್ಜಿಗೆ ಕಾರಣವಾಗಬಹುದು ಎಂಬುದು ವೈದ್ಯಕೀಯ ಕ್ಷೇತ್ರದ ಮಾತು.
ಪಾರಿವಾಳಗಳಿಂದ ಬರುವಂತ ರೋಗಗಳು.
ಪಾರಿವಾಳಗಳಿಂದ ವಿವಿಧ ರೀತಿಯ ಶ್ವಾಸಕೋಶದ ಕಾಯಿಲೆಗಳಿಗೆ ಕಾರಣವಾಗಬಹುದು. ಎರಡನೆಯದು ನ್ಯುಮೋನಿಯಾ-ಸಿಟ್ಟಾಕೋಸಿಸ್ಗೆ ಕಾರಣವಾಗಬಹುದು, ಇದು ಬ್ಯಾಕ್ಟೀರಿಯಾದ ಸೋಂಕಾಗಿದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ 15 ಪ್ರತಿಶತದಷ್ಟು ಜನರು ಸಾವಿಗೆ ಕಾರಣವಾಗಬಹುದು. ಹಿಸ್ಟೋಪ್ಲಾಸ್ಮಾಸಿಸ್ ಸಮಸ್ಯೆ ಕೂಡ ಇದರಿಂದ ಉಂಟಾಗುತ್ತದೆ. ಇದು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವ ಶಿಲೀಂಧ್ರಗಳ ಸೋಂಕಾಗಿದೆ. ಕ್ರಿಪ್ಟೋಕೊಕಲ್ ಸೋಂಕುಗಳು ಇಮ್ಯುನೊಕೊಪ್ರೊಮೈಸ್ಡ್ ಹೋಸ್ಟ್ ಹೊಂದಿರುವ ಕೆಲವು ಜನರಲ್ಲಿ ಪಲ್ಮನರಿ ಅಥವಾ ಮೆನಿಂಜಿಯಲ್ ಸೋಂಕುಗಳಿಗೆ ಕಾರಣವಾಗಬಹುದು.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ ಅವರ ಪತಿಯ ಸಾವಿಗೂ ಪಾರಿವಾಳಕ್ಕೂ ಸಂಬಂಧವಿದೆ ಎನ್ನುವ ಮಾತಿದೆ ಪಾರಿವಾಳದ ಹಿಕ್ಕೆಯಿಂದ ಬಂದ ವಾಸನೆಯಿಂದಾಗಿ ಮೀನಾ ಅವರ ಪತಿಯ ಶ್ವಾಸಕೋಶದ ಸೋಂಕು ಉಂಟಾಗಿ ಅದು ಅವರ ಸಾವಿಗೆ ಕಾರಣವಾಗಿತ್ತು ಎಂದೆಲ್ಲಾ ವರದಿಗಳು ಬಂದಿದ್ದವು.
Breaking News
- ಹೋಳೂರು ಶ್ರೀಶೈಲೇಂದ್ರ ವಿದ್ಯಾಮಂದಿರದ 44ನೇ ವಾರ್ಷಿಕೋತ್ಸವ
- ಕೋಲಾರ ಕ್ಲಾಕ್ ಟವರ್ ವೃತ್ತದಲ್ಲಿ ಸಾಗಿದ RSS ಪಥ ಸಂಚಲನ
- ಜನಪರ ಹೋರಾಟಗಾರ ಬಯ್ಯಾರೆಡ್ಡಿ ಕೃತಕ ಉಸಿರಾಟ ಕೊನೆಗೂ ನಿಂತುಹೋಯಿತ?
- KSRTC ಬಸ್ಸು ದರ ಇವತ್ತು ಮಧ್ಯರಾತ್ರಿಯಿಂದಲೇ ಏರಿಕೆ!
- ALEART:ಪಾರಿವಾಳ ಸಂಪರ್ಕದಿಂದ ಶ್ವಾಸಕೋಶದ ಸೋಂಕು!ಮಿಸ್ ಮಾಡದೇ ಓದಿ!
- KSRTC ಉಚಿತ ಪ್ರಯಾಣ ಕುರಿತು ಅಧ್ಯಯನಕ್ಕೆ ಬಂದ ಆಂಧ್ರ ಮಂತ್ರಿಗಳು!
- ಹೊಸವರ್ಷ ಆಚರಣೆಯಲ್ಲಿ ಸಿಡಿದ ಪಟಾಕಿಯಿಂದ ವ್ಯಕ್ತಿ ಸಾವು!
- ವಿದ್ಯಾರ್ಥಿನಿಗೆ Love ಪಾಠ ಮಾಡಿ ಮದುವೆಯಾದ ಮೇಷ್ಟ್ರು!
- Infosys ಕ್ಯಾಂಪಸ್ ಗೆ ಬಂದ ಚಿರತೆ! ಹಿಡಿಯಲು ಸಜ್ಜಾದ ಅರಣ್ಯ ಪಡೆ
- ಕರೋನಾ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣ ಇಂದಿಗೆ ಐದು ವರ್ಷ!
Monday, January 6