ಶ್ರೀನಿವಾಸಪುರ:ಎರಡು ಗ್ರಾಮಗಳ ನಡುವೆ ಇದ್ದ ಬಂಡಿದಾರಿ(ಎತ್ತಿನ ಗಾಡಿ ಒಡಾಡುತ್ತಿದ್ದ ರಸ್ತೆ) ಹಲವಾರು ಕಾರಣಗಳಿಗೆ ಒತ್ತುವರಿಯಾಗಿದ್ದು ಇದನ್ನು ತೆರವು ಮಾಡಿಸಿಕೊಳ್ಳುವಲ್ಲಿ ಗ್ರಾಮಸ್ಥರ ಕೈಯಲ್ಲಿ ಸಾಧ್ಯವಾಗದ ಹಿನ್ನಲೆಯಲ್ಲಿ ಗ್ರಾಮಪಂಚಾಯಿತಿ ಸದಸ್ಯ ಹೆಬ್ಬಟಅನಂದ್ ಕಂದಾಯ ಇಲಾಖೆ ಅಧಿಕಾರಿಗಳ ಮತ್ತು ಒತ್ತುವರಿ ದಾರರ ನಡುವೆ ಸಮನ್ವಯತೆ ಮೂಡಿಸಿ ಒತ್ತುವರಿ ದಾರರ ಮನವೊಲಿಸಿ ದಾರಿ ತೆರವು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀನಿವಾಸಪುರ ತಾಲ್ಲೂಕಿನ ಯಲವಳ್ಳಿ ಯಿಂದ ಕೋಲಾರ-ಶ್ರೀನಿವಾಸಪುರ ಮುಖ್ಯ ರಸ್ತೆಯ ತನಕ ಇದ್ದ ಬಂಡಿದಾರಿ ಈಗ್ಗೆ 30 ವರ್ಷಗಳ ಹಿಂದೆ ಒತ್ತುವರಿ ಮಾಡಿಕೊಂಡು ವ್ಯವಸಾಯ ಮಾಡುತ್ತಿದ್ದರು ಇದನ್ನು ತೆರವು ಮಾಡಿಸಲು ತಾಲೂಕು ದಂಡಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು ಸಮಸ್ಯೆ ಇತ್ಯರ್ಥವಾಗಲಿಲ್ಲ ಪುನಃ ತಹಶೀಲ್ದಾರ್ ಅವರಿಗೆ ಮನವಿ ಪತ್ರ ತೀವ್ರವಾಗಿ ಒತ್ತಾಯಿಸಿದ್ದರು ಈ ಸಂದರ್ಭದಲ್ಲಿ ಸ್ಥಳಕ್ಕೆ ಕಂದಾಯ ಇಲಾಖೆ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸರ್ವೇ ಮಾಡಿ ಒತ್ತುವರಿಯಾಗಿದ್ದ ಬಂಡಿದಾರಿ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದು ಯಶಸ್ವಿಯಾಗದ ಹಿನ್ನಲೆಯಲ್ಲಿ ಪಂಚಾಯತಿ ಸದಸ್ಯ ಆನಂದ್ ಜಮೀನು ಒತ್ತುವರಿ ದಾರರ ಮನವೊಲಿಸಿ ರಸ್ತೆ ತೆರವುಗೊಳಿಸಲು ಸಹಕಾರ ನೀಡಿದ್ದು ಅದರಂತೆ ಅಧಿಕಾರಿಗಳು ರಸ್ತೆ ಗುರುತಿಸಿ ರಸ್ತೆ ಮಾಡಿಸಿಕೊಟ್ಟಿರುತ್ತಾರೆ.
ರಸ್ತೆ ಸಮಸ್ಯೆ ಬಗೆಹರಿಸುವಲ್ಲಿ ಸಹಕಾರ ನೀಡಿದ ಪಂಚಾಯತಿ ಸದಸ್ಯ ಆನಂದ್ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಧನ್ಯವಾದಗಳು ತಿಳಿಸಿದರು.