ನ್ಯೂಜ್ ಡೆಸ್ಕ್:ಆಂಧ್ರ ಸಿನಿಮಾಗಳಲ್ಲಿ ಕಂಟಿನ್ಯೂ ಹಿಟ್ ಸಿನಿಮಾಗಳನ್ನೆ ನೀಡುತ್ತ ತೆಲಗು ಸಿನಿಮಾ ಪರಿಶ್ರಮದಲ್ಲಿ ತನ್ನದೆ ಆದ ಛಾಪು ಮೂಡಿಸಿರುವ ಹಿರಿಯ ನಟ ನಂದಮೂರಿಬಾಲಕೃಷ್ಣ ತೆಲಗು ರಾಜಕೀಯ ವಲಯದಲ್ಲೂ ರಾಯಸೀಮಾ ಪ್ರಾಂತ್ಯವಾದ ಹಿಂದೂಪುರದಲ್ಲಿ ಎರಡು ಬಾರಿ ಗೆದ್ದು ಶಾಸಕರಾಗಿದ್ದಾರೆ ತಾವು ಪ್ರತಿನಿಧಿಸುವ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರು ತನ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗೆ ತನ್ನ ಸ್ವಂತ ಹಣದಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಒದಗಿಸಿ ಮಾದರಿ ಆಸ್ಪತ್ರೆಯನ್ನಾಗಿಸಿದ್ದಾರೆ,ಹಣ್ಣು ತರಕಾರಿ ಮಾರುಕಟ್ಟೆಯನ್ನು ವಿನೂತಾತ್ಮಕವಾಗಿ ನಿರ್ಮಿಸಿ ಜನರಿಂದ ಶಭ್ಬಾಸ್ ಗಿರಿ ಪಡೆದಿದ್ದಾರೆ,ಕೊಟ್ಯಾಂತರ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಒದಗಿಸಿದ್ದಾರೆ ಹೀಗೆ ತನ್ನದೆ ಜೇಬಿನಿಂದ ಹಣ ಖರ್ಚು ಮಾಡಿ ಮೂಲಸೌಕರ್ಯಗಳ ಅಭಿವೃದ್ಧಿ ಮಾಡುವ ಮೂಲಕ ಕ್ಷೇತ್ರದಲ್ಲಿ ಸೈ ಅನಿಸಿಕೊಂಡಿದ್ದಾರೆ. ಈಗ ಮತ್ತೆ ಚುನಾವಣೆ ಬಂದಿದ್ದು ಹ್ಯಾಟ್ರಿಕ್ ಗೆಲವು ಸಾಧಿಸುವ ನಿಟ್ಟಿನಲ್ಲಿ ಕ್ಷೇತ್ರಾದ್ಯಂತ ಒಡಾಡುತ್ತಿದ್ದಾರೆ.
ಆಂಧ್ರಪ್ರದೇಶದ ಅವಿಭಜಿತ ಅನಂತಪುರ ಜಿಲ್ಲೆಯಾಗಿದ್ದು ಈಗ ಶ್ರೀ ಸತ್ಯಸಾಯಿ ಪುಟ್ಟಪರ್ತಿ ಜಿಲ್ಲೆಯಾಗಿರುವ ಕನ್ನಡ ಭಾಷಿಕರೆ ಹೆಚ್ಚಾಗಿರುವ ಹಿಂದೂಪುರ ವಿಧಾನಸಭೆ ಕ್ಷೇತ್ರ ಆರಂಬದಿಂದಲೂ ತೆಲುಗು ದೇಶಂ ಪಕ್ಷದ ಭದ್ರಕೋಟೆ,1983 ರಲ್ಲಿ ರಚನೆಯಾದ ತೆಲಗು ದೇಶಂ ಪಕ್ಷ ಹಿಂದುಪುರಂ ಕ್ಷೇತ್ರದಲ್ಲಿ ಇದುವರಿಗೂ ಸೋತಿಲ್ಲ ಅವಿಭಜಿತ ಆಂಧ್ರ ಮಾಜಿ ಮುಖ್ಯಮಂತ್ರಿ ದಿವಂಗತ ಎನ್ಟಿ ರಾಮರಾವ್ ಇಲ್ಲಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರೆ,ಪಾಮಿಶೆಟ್ಟಿ ರಂಗನಾಯಕುಲು ಹಾಗೂ ನಂದಮೂರಿ ಬಾಲಕೃಷ್ಣ ತಲಾ ಎರಡು ಬಾರಿ ಗೆದ್ದಿದ್ದಾರೆ.2019 ಚುನಾವಣೆಯಲ್ಲಿ ಇಡಿ ಆಂಧ್ರಪ್ರದೇಶದಲ್ಲಿ ತೆಲಗು ದೇಶಂ ಪಕ್ಷ ಎರಂಡಂಕಿಗೆ ಸುಸ್ತಾಗಿತ್ತು ಅಂತಹ ಸಂಕಷ್ಟದಲ್ಲೂ ಹಿಂದುಪುರಂ ಕ್ಷೇತ್ರದಲ್ಲಿ ಎರಡನೆಯ ಬಾರಿಗೆ ಬಾರಿ ಬಹುಮತದೊಂದಿಗೆ ನಟ ಬಾಲಕೃಷ್ಣ ಚುನಾಯಿತರಾಗಿದ್ದರು ಇಂತಹ ತೆಲಗುದೇಶಂ ಭದ್ರಕೋಟೆಯನ್ನು ಚಿದ್ರಮಾಡಲು ಅಲ್ಲಿನ ಆಡಾಳಿತಾರೂಡ ವೈಎಸ್ಆರ್ ಕಾಂಗ್ರೆಸ್ “ವೈ ನಾಟ್ ಹಿಂದುಪುರಂ” ಎಂಬ ಘೋಷಣೆಯೊಂದಿಗೆ ಚುನಾವಣೆ ಎದರಿಸಲು ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದೆ ಮೂಲತಃ ಆಂಧ್ರದವರಾಗಿ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಟಿ.ಎನ್.ದೀಪಿಕಾ ಅವರನ್ನು ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿದೆ.
2014 ಹಾಗು 2019 ರಲ್ಲಿ ವಿಜಯ ಸಾಧಿಸಿ ಹ್ಯಾಟ್ರಿಕ್ ನೀರಿಕ್ಷೆಯಲ್ಲಿರುವ ನಟ ಬಾಲಕೃಷ್ಣ ಗೆಲುವಿಗೆ ಬ್ರೇಕ್ ಹಾಕಲು ವೈಎಸ್ಆರ್ ಕಾಂಗ್ರೆಸ್ ಹಿಂದುಳಿದ ಪ್ಲೇಕಾರ್ಡ್ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.ವೈಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಮೂಲತಃ ಕುರುಬ ಸಮಾಜದವರು ಆದರೆ ಅವರು ಹಿಂದೂಪುರದರಾಗಿ ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ವೈಎಸ್ಆರ್ ಕಾಂಗ್ರೆಸ್ ಮುಖಂಡ ವೇಣುರೆಡ್ಡಿ ಅವರನ್ನು ಮದುವೆಯಾಗಿದ್ದು ಈ ಇಬ್ಬರು ಈಗ ಬೆಂಗಳೂರಿನಲ್ಲಿ ಉದ್ಯಮಿಗಳಾಗಿದ್ದಾರೆ ಬೆಂಗಳೂರಿನ ಹೆಚ್.ಎಸ್.ಆರ್.ಲೇಔಟ್ ನಲ್ಲಿ ನೊಂದಾಯಿತ ಕಚೇರಿ ಹೊಂದಿರುವ ಸೋರಾ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಪ್ರಮುಖ ಪಾಲುದಾರರಾಗಿದ್ದಾರೆ, ಮದುವೆಯಾಗುವುದಕ್ಕೂ ಮುಂಚೆ ದೀಪಿಕಾ ಸಾಫ್ಟ್ ವೇರ್ ಇಂಜನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸಮಾಡಿಕೊಂಡಿದ್ದರಂತೆ ಮದುವೆಯ ನಂತರ ಸ್ವಂತ ಉದ್ಯಮ ಕಟ್ಟಿಕೊಂಡಿದ್ದಾರೆ ಎನ್ನಲಾಗಿದ್ದು, ದೀಪಿಕಾ ಹಿಂದುಳಿದ ವರ್ಗದವರಲ್ಲ ಅವರು ಮದುವೆಯಾದ ನಂತರ ತಮ್ಮ ಗಂಡನ ಜಾತಿಯನ್ನು ಪಡೆಯುತ್ತಾರೆ ಹಾಗಾಗಿ ಆಕೆ ಹಿಂದುಳಿದ ವರ್ಗದವರು ಎಂದು ಹೇಳಲು ಬರುವುದಿಲ್ಲ ಎಂದು ತೆಲಗುದೇಶಂ ಮುಖಂಡರು ಹೇಳುತ್ತಾರೆ.
ಹಿಂದುಪುರಂ ಲೋಕಸಭಾ ಕ್ಷೇತ್ರದಲ್ಲೂ ಕನ್ನಡದ ಮಹಿಳೆ
ಹಿಂದೂಪುರ ವಿಧಾನಸಭೆ ಕ್ಷೇತ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರಿನ ಉದ್ಯಮಿ ದೀಪಿಕ ಸ್ಪರ್ದಿಸಿದ್ದರೆ, ಹಿಂದೂಪುರಂ ಲೋಕಸಭಾ ಕ್ಷೇತ್ರದಲ್ಲೂ ಕನ್ನಡದ ಮಹಿಳೆ ಜೊಳದಾರಾಶಿ ಶಾಂತ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.ಶಾಂತ ಮೂಲತಃ ಬಳ್ಳಾರಿಯ ಮಾಜಿ ಸಚಿವ ಶ್ರೀರಾಮಲು ಸಹೋದರಿ ಆಕೆ ಒಮ್ಮೆ ಬಳ್ಳಾರಿ ಲೊಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿ ಸಂಸದೆಯಾಗಿ ಆಯ್ಕೆಯಾಗಿದ್ದರು ನಂತರದಲ್ಲಿ ಆಂಧ್ರ ಸೇರಿದ್ದ ಅವರು ಅಲ್ಲಿ ತೀರಾ ಇತ್ತಿಚಿಗೆ ವೈಎಸ್ಆರ್ ಕಾಂಗ್ರೆಸ್ ಸೇರ್ಪಡೆಯಾದ ಅವರಿಗೆ ಕೆಲವೆ ದಿನಗಳಲ್ಲಿ ಲೊಕಸಭೆ ಅಭ್ಯರ್ಥಿಯಾಗಿ ಸ್ಪರ್ದಿಸುವ ಅದೃಷ್ಠ ಕೂಡಿ ಬಂದಿದೆ.ಜೊಳದಾರಾಶಿ ಶಾಂತ ಸಹ ಆಂಧ್ರದಲ್ಲಿ ಮಹಿಳೆ ಹಾಗು ಹಿಂದುಳಿದ ವರ್ಗ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ವತಿಯಿಂದ ಕಾರ್ಡ್ ಪ್ಲೇ ಮಾಡಲಾಗುತ್ತಿದೆ.
ಇಬ್ಬರು ಮಹಿಳಾ ರಾಜಕಾರಣಿಗಳನ್ನು ಎದುರಿಸುವ ಅನಿವಾರ್ಯತೆ ಬಾಲಕೃಷ್ಣಗೆ
ನೇಮ್ ಆಂಡ್ ಫೇಮ್ ಇರುವಂತ ನಟ ಬಾಲಕೃಷ್ಣರ ಹ್ಯಾಟ್ರಿಕ್ ಗೆಲವಿಗೆ ಇಬ್ಬರು ಮಹಿಳ ರಾಜಕಾರಣಿಗಳು ಬ್ರೇಕ್ ಹಾಕುತ್ತಾರ ಎಂಬುದೆ ರಾಯಲಸೀಮಾ ರಾಜಕಾರಣದ ಹಾಟ್ ಟಾಪಿಕ್ ಆಗಿದೆ.