ನ್ಯೂಜ್ ಡೆಸ್ಕ್: ಸಪ್ತಸಾಗರಳಾಚಗಿನ ಅಮೆರಿಕದ ಹುಡುಗನೊಂದಿಗೆ ಆಂಧ್ರದ ಹುಡುಗಿಗೆ ಮದುವೆಯಾಗಿದೆ ಇಂತಹದೊಂದು ಕುತೂಹಲಕಾರಿ ಮದುವೆ..!ತಿರುಪತಿಯಲ್ಲಿ ನಡೆದಿದ್ದು
ಆಂಧ್ರದ ಹರ್ಷವಿ ಮತ್ತು ಅಮೇರಿಕಾದ ಫ್ರಾಂಕ್ ಮದುವೆಯಾಗಿರುವ ದಂಪತಿ ಹರ್ಷವಿ ಮತ್ತು ಫ್ರಾಂಕ್ ಇಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುವುದರಿಂದ ಪ್ರತಿದಿನ ಮಾತನಾಡಿಕೊಳ್ಳುತ್ತಿದ್ದರು. ಹೀಗೆ ಇಬ್ಬರ ಅಭಿಪ್ರಾಯಗಳು ಒಂದಾಗಿದ್ದು ಅವರು ಒಬ್ಬರನ್ನೊಬ್ಬರು ಇಷ್ಟಪಡಲು ನಿರ್ಧರಿಸಿದ್ದಾರೆ ಇನ್ನೇನಿದೆ ಲವ್ ಇನ್ ಅಮೇರಿಕಾ ಕಥೆ ಶುರುವಾಗಿದೆ, ಪ್ರೀತಿಗೆ ಜಾತಿ, ಧರ್ಮ, ಪ್ರಾದೇಶಿಕತೆ ಯಾವುದು ಬೇಕಿಲ್ಲ ಎಂದು ಎರಡು ಮನಸ್ಸುಗಳು ತಮ್ಮ ಭಾವನೆಗಳನ್ನು ಹಂಚಿಕೊಂಡು ತೊರಿಸಿದೆ.
ಪ್ರೀತಿಗೆ ಪರಸ್ಪರ ನಂಬಿಕೆ ಇದ್ದರೆ ಸಾಕು ಪ್ರೇಮಾಂಕುರ ಗಟ್ಟಿಯಾಗುತ್ತದೆ ಎನ್ನುವಂತಾಗಿದೆ. ಸಾಮಾನ್ಯವಾಗಿ ಅಮೇರಿಕಾ ಹೋದ ಹುಡುಗ ವಾಪಸ್ಸಾಗುವುದಿಲ್ಲ ಅಲ್ಲೆ ಬಿಳಿ ಹೆಂಡ್ತಿನ ಕಟ್ಟಿಕೊಳ್ತಾನೆ ಎನ್ನುವ ಮಾತು ಕೆಲ ಕುಟುಂಬಗಳಲ್ಲಿ ಕೇಳಿಬರುವುದು ಸಹಜ ಆದರೆ ಇಲ್ಲಿ ಊಹೆ ಉಲ್ಟಾ ಆಗಿದೆ. ಕೆಲಸದ ನಿಮಿತ್ತ ಅಮೇರಿಕಾಕ್ಕೆ ಹೋದ ಆಂಧ್ರದ ಹುಡುಗಿ ಅಲ್ಲಿಂದ ತನ್ನ ಹೆತ್ತವರಿಗೆ ಅಳಿಯನನ್ನು ಕರೆದುಕೊಂಡು ಬಂದಿದ್ದಾಳೆ ಆರಂಬದಲ್ಲಿ ಹುಡುಗಿಯೆ ಪ್ರೇಮ ಕಥೆಗೆ ಆಕೆಯ ಹೆತ್ತವರು ಬೆಚ್ಚಿಬಿದ್ದರಾದರೂ ನಂತರ ಅಳಿಯನನ್ನು ಆತ್ಮೀಯವಾಗಿ ಆಹ್ವಾನಿಸಿ ಮಗಳ ಪ್ರೇಮಕ್ಕೆ ಗೌರವ ನೀಡಿ ಆಂಧ್ರ ಸಂಪ್ರದಾಯದಂತೆ ಅವರಿಗೆ ಮದುವೆ ಮಾಡಿದ್ದಾರೆ.
ಆಂಧ್ರಪ್ರದೇಶದ ತಿರುಪತಿಯ ಜಯಚಂದ್ರ ರೆಡ್ಡಿ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ ಹರ್ಷವಿ ಬಿ.ಟೆಕ್ ಮುಗಿಸಿ ಅಮೆರಿಕದ ಬೋಸ್ಟನ್ ನಗರದಲ್ಲಿರುವ ಅಥೇನಾ ಹೆಲ್ತ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಳು ಅದೇ ಕಂಪನಿಯಲ್ಲಿ ಹುಡುಗ ಫ್ರಾಂಕ್ ಜೆನರಲ್ ಮೇನಿಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಮಾತು ಮೌನ ಒಂದಾಗಿ ಪ್ರೇಮಾನುರಾಗವಾಗಿದೆ ಹೀಗೆ ಇಬ್ಬರ ಅಭಿಪ್ರಾಯಗಳು ಜೊತೆಯಾಗಿದೆ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಲು ಮುಂದಾಗಿದ್ದಾರೆ
ಇದರೊಂದಿಗೆ ಹುಡುಗ ಫ್ರಾಂಕ್ ತನ್ನ ಕುಟುಂಬ ಸದಸ್ಯರೊಂದಿಗೆ ತಿರುಪತಿಗೆ ಬಂದಿದ್ದಾನೆ ಹರ್ಷವಿ ಕುಟುಂಬಸ್ಥರು ಫ್ರಾಂಕ್ ಪೋಷಕರನ್ನು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ ಮದುವೆಯಲ್ಲಿ ವರನ ತಂದೆ ಸ್ಕಾಟ್ ಬುಶಾರ್ಡ್, ತಾಯಿ ಅನ್ನಾ ಬುಶಾರ್ಡ್,ವರನ ಕಿರಿಯ ಸಹೋದರ ಮತ್ತು ಅವರ ಪತ್ನಿ ಭಾಗವಹಿಸಿದ್ದು ಅಲ್ಲದೆ ಈ ನೆಲದ ಸಾಂಪ್ರದಾಯಿಕ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಮಧುವೆ ಕಾರ್ಯದಲ್ಲಿ ಭಾಗವಹಿದ್ದರು ಆಂಧ್ರದ ಹುಡುಗಿಗೆ ಆಮೇರಿಕಾದ ಹುಡುಗನಿಗೆ ಹಿಂದು ಸಂಪ್ರದಾಯದಂತೆ ಹರ್ಷವಿ ಬಂಧುಗಳ ಸಮಕ್ಷಮದಲ್ಲಿ ತಿರುಪತಿಯ ಹೋಟೆಲೊಂದರಲ್ಲಿ ಅದ್ದೂರಿಯಾಗಿ ಮದುವೆ ಮಾಡಲಾಗಿದ್ದು ಅಲ್ಲದೆ ಮದುವೆ ಹೆಣ್ಣನ್ನು ಸಂಪ್ರದಾಯದಂತೆ ವರನಿಗೆ ಹಸ್ತಾಂತರ ಕಾರ್ಯಕ್ರಮವನ್ನೂ ಆಯೋಜಿಸಿ ಅಮೆರಿಕದ ಸೊಸೆಯಾಗಿ ಕಳುಹಿಸಿದ್ದಾರೆ.