ಕೋಲಾರ:ಕೋಲಾರ ಜಿಲ್ಲೆಗೆ ಆಗಮಿಸಿದ ಆಂಧ್ರ ಪ್ರದೇಶದ ಪ್ರಭಾವಿ ಸಚಿವ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಅವರ ಪುತ್ರ ಹಾಗು ಮಾನವ ಸಂಪನ್ಮೂಲ ಸಚಿವ ನಾರಾ ಲೋಕೇಶ್ ಹಾಗು ಆಂಧ್ರ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ಇಬ್ಬರು ಇಂದು ಕೋಲಾರ ನಗರದ ಆರೋಗ್ಯ ಇಲಾಖೆ ಕಚೇರಿಗೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಟಾಟಾ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿರುವ ಡಿಜಿಟಲ್ ನರ್ವ್ ಸೆಂಟರ್ DINP ನಲ್ಲಿ ಕಾರ್ಯನಿರ್ವಹಣೆ ಕುರಿತಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಕೋಲಾರ ತಾಲೂಕು ವೇಮಗಲ್ ಪ್ರಾಥಮಿಕ ಅರೋಗ್ಯ ಕೇಂದ್ರಕ್ಕೆ ತೆರಳಿ ಅಲ್ಲಿ ಡಿಜಿಟಲ್ ನರ್ವ್ ಸೆಂಟರ್ ಕುರಿತಂತೆ ಅಶಾ ಕಾರ್ಯಕರ್ತರಿಂದ ಪ್ರಾತ್ಯಕ್ಷತೆ ಪಡೆದುಕೊಂಡರು.
ಕನ್ನಡದಲ್ಲೆ ಮಾತನಾಡಿದ ಆರೋಗ್ಯ ಸಚಿವ
ಆಂಧ್ರದ ಧರ್ಮಾವರಂ ಶಾಸಕ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ರವರು ಆಶಾ ಕಾರ್ಯಕರ್ತರನ್ನು ಕನ್ನಡದಲ್ಲೆ ಮಾತನಾಡಿ ಅವರಿಂದ ಕನ್ನಡದಲ್ಲಿ ಮಾಹಿತಿ ಪಡೆದುಕೊಂಡಿದ್ದಲ್ಲದೆ ಆರೋಗ್ಯ ಸೇವೆಗಳ ಕುರಿತಾಗಿ ಆಸ್ಪತ್ರೆ ಬಂದಿದ್ದ ರೋಗಿಗಳಿಂದ ಕನ್ನಡದಲ್ಲಿ ಮಾಹಿತಿ ಪಡೆದುಕೊಂಡಿದ್ದು ವಿಶೇಷವಾಗಿತ್ತು. ನಮ್ಮ ಆರೋಗ್ಯ ಸಚಿವರಿಗೆ ಚನ್ನಾಗಿ ಕನ್ನಡ ಬರುತ್ತದೆ ಕನ್ನಡಲ್ಲೆ ಹೇಳಿ ಎಂದು ಸಚಿವ ಲೋಕೇಶ್ ಹೇಳಿದರು.
ಆಂಧ್ರ ಸಚಿವರಿಗೆ ಸ್ಥಳದಲ್ಲಿ ಇದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್,ಡಾ.ಚಂದನ್, ಡಾ.ಚಾರಿಣಿ, ಡಾ.ನಾರಯಣಸ್ವಾಮಿ,ಕುಷ್ಟರೋಗ ನಿರ್ವಹಣಾಧಿಕಾರಿ ಡಾ.ನಾರಯಣಸ್ವಾಮಿ,ಟಾಟಾ ಸಂಸ್ಥೆಯ ಗೀರಿಶ್.ವಿಷ್ಣು, ಶರಣ್ ಮುಂತಾದವರು ಇದ್ದರು.
