- ಪುಲಗೂರಕೋಟೆ ಪಂಚಾಯಿತಿ ಅಧಿಕಾರಿಗಳ
- ನಿರ್ಲಕ್ಷ್ಯ ಕೋಳಿ ಎಸೆದ ಫಾರಂ ಮಾಲಿಕನ
- ವಿರುದ್ದ ಕ್ರಮ ಜರುಗಿಸಲು ರೈತರ ಅಗ್ರಹ
ಶ್ರೀನಿವಾಸಪುರ:ಆಂಧ್ರದ ಕೋಳಿ ಫಾರಂ ಮಾಲೀಕನೊರ್ವ ತನ್ನ ಫಾರಂನಲ್ಲಿ ಹವಾಮಾನ ವೈಪರಿತ್ಯದಿಂದ ಸತ್ತ ಕೋಳಿಗಳನ್ನು
ತಂದು ಆಂಧ್ರ ಗಡಿಯಲ್ಲಿರುವ ಕರ್ನಾಟಕದ ಕೆರೆಯಲ್ಲಿ ಬಿಸಾಡಿರುವ ಘಟನೆ ತಾಲೂಕಿನ ನೆಲವಂಕಿ ಹೊಬಳಿಯ ಪುಲಗೂರಕೋಟೆ ಪಂಚಾಯಿತಿ ವ್ಯಾಪ್ತಿಯ ಬಾಣಲಪಲ್ಲಿಯಲ್ಲಿ ನಡೆದಿರುತ್ತದೆ.
ಆಂಧ್ರದ ಚಂಬಕೂರು-ಮದನಪಲ್ಲಿ ರಸ್ತೆಯಲ್ಲಿರುವ ಆಂಧ್ರದ ವ್ಯಕ್ತಿಗೆ ಸೇರುವ ಕೋಳಿ ಫಾರಂನಲ್ಲಿ ಬಿಸಿಲಿನ ಬೇಗೆ ತಾಳಲಾರದೆ ಸುಮಾರು 500 ಕ್ಕೂ ಹೆಚ್ಚು ಕೋಳಿಗಳು ಸಾವನಪ್ಪಿವೆ ಸತ್ತ ಕೋಳಿಗಳನ್ನು ತಂದು ಗಡಿಯಂಚಿನ ಕರ್ನಾಟಕದ ಕೆರೆಯಲ್ಲಿ ಬಿಸಾಡಲಾಗಿದ್ದು ಕೆರೆಯ ಗುಣಿಗಳಲ್ಲಿ ಇದ್ದಂತ ನೀರಿನಲ್ಲಿ ಸತ್ತ ಕೋಳಿಗಳನ್ನು ಎಸೆದಿದ್ದು ಅದನ್ನು ತಿನ್ನಲು ನಾಯಿಗಳ ಹಿಂಡು ಕೆರೆಯನ್ನು ಆವರಿಸಿಕೊಂಡು ಕೋಳಿಗಳ ಕಳೆಬರಗಳನ್ನು ಎಳೆದಾಡಿ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರನೆಲ್ಲ ಮಲೀನ ಗೊಳಿಸಿವೆ ಎಂದು ಗ್ರಾಮಸ್ಥರು ದೂರುತ್ತಾರೆ.
ಕೆರೆಯಲ್ಲಿದ್ದ ನೀರನ್ನು ಗ್ರಾಮದ ಜಾನುವಾರುಗಳು,ಕುರಿ ಮೆಕೆ ಸಾಕಾಣಿಕೆ ಮಾಡುವ ರೈತರು ತಮ್ಮ ಜಾನುವಾರಗಳಿಗೆ ಇದೆ ನೀರನ್ನೆ ಕುಡಿಸುತ್ತಿದ್ದರು.ಸತ್ತ ಕೋಳಿಗಳನ್ನು ಬಿಸಾಡಿರುವ ಪರಿಣಾಮ ಕೆರೆ ನೀರು ಕೆಂಪು ಬಣ್ಣದಿಂದ ರಕ್ತಮಯವಾಗಿದ್ದು ಇದಕ್ಕೆ ಸ್ಥಳೀಯ ಪಂಚಾಯ್ತಿ ಅಧಿಕಾರಿಗಳ ಕಾರಣ ಎಂದು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಸತ್ತ ಕೋಳಿಗಳನ್ನು ರಾಜಾರೋಷವಾಗಿ ಬಿಸಾಡಿ ಹೋಗಿದ್ದರು ಪುಲಗೂರಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುತ್ತಾರೆ.ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪುಲಗೂರಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಹಕಾರದಿಂದ ಕೃತ್ಯ ಎಸಗಿರುವ ಕೋಳಿಫಾರಂ ಮಾಲಿಕನ ವಿರುದ್ದ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಅಗ್ರಹಿಸುತ್ತಾರೆ.