ನ್ಯೂಜ್ ಡೆಸ್ಕ್:ಆಂಧ್ರಪ್ರದೇಶ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಹೊಸದೊಂದು ಚರ್ಚೆ ಶುರುವಾಗಿದೆ ಅಲ್ಲಿ ಮತ್ತೊಂದು ಹೊಸ ಪಕ್ಷ ಉದಯವಾಗಲಿದೆ. ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡುವ ಉದ್ದೇಶದಿಂದ ಹೊಸ ರಾಜಕೀಯ ಪಕ್ಷ ಆರಂಭಿಸುವುದಾಗಿ ಪುಂಗನೂರು ಮೂಲದ ಖ್ಯಾತ ಉದ್ಯಮಿ ರಾಮಚಂದ್ರ ಯಾದವ್ ಘೋಷಿಸಿದ್ದಾರೆ. ಜುಲೈ 23 ರಂದು ಹೊಸ ರಾಜಕೀಯ ಪಕ್ಷವನ್ನು ರಚಿಸುವುದಾಗಿ ಈಗಾಗಲೆ ಘೋಷಿಸಿರುವ ಅವರು ವಿಜಯವಾಡದಲ್ಲಿ ಮಾತನಾಡಿ.ಜುಲೈ 23ರಂದು ಗುಂಟೂರು-ವಿಜಯವಾಡ ನಡುವಿನ ನಾಗಾರ್ಜುನ ವಿಶ್ವವಿದ್ಯಾಲಯದ ಎದುರು ಮೈದಾನದಲ್ಲಿ ದೊಡ್ದ ಮಟ್ಟದಲ್ಲಿ ನಡೆಯುವ ಸಮಾವೇಶದಲ್ಲಿ ‘ಪ್ರಜಾ ಸಿಂಹಗರ್ಜನ ಪಕ್ಷ’ ಕ್ಕೆ ಚಾಲನೆ ನೀಡಲಾಗುವುದು ಎಂದಿರುತ್ತಾರೆ.
ಆಂಧ್ರ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ವೈಸಿಪಿ ಸರಕಾರ ವಿರುದ್ದ ಹೋರಾಟ ನಡೆಸಲು ಆಂಧ್ರಕ್ಕೆ ವಿಶೇಷ ಸ್ಥಾನಮಾನ ತರುವ ನಿಟ್ಟಿನಲ್ಲಿ ಮತ್ತು ಎಸ್ಸಿ, ಎಸ್ಟಿ, ಬಿಸಿ, ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಕೆ ಮಾಡಿಕೊಂಡು ಅವರ ವಿರುದ್ದವೆ ದಬ್ಬಾಳಿಕೆ ಮಾಡಿ ವ್ಯವಸ್ಥಿತವಾಗಿ ತುಳಿಯಲಾಗುತ್ತಿದ್ದು ಅದನ್ನು ತಡೆಯಲು ಹಾಗು ಆಂಧ್ರದಲ್ಲಿನ ಫ್ಯಾಕ್ಷನ್ ಮುಖಂಡರು ನಡೆಸುತ್ತಿರುವ ಅಧಿಕಾರವನ್ನು ತಡೆಯಲು ರಾಜಕೀಯ ಬದಲಾವಣೆಗಾಗಿ ಹೊಸ ರಾಜಕೀಯ ಪಕ್ಷ ಎಂದಿರುತ್ತಾರೆ.
ಇಷ್ಟಕ್ಕೂ ಉದ್ಯಮಿ ರಾಮಚಂದ್ರಯಾದವ್ ಯಾರು?
ಆಂಧ್ರದಲ್ಲಿ ಹೊಸ ರಾಜಕೀಯ ಪಕ್ಷ ಕಟ್ಟಲು ಹೋರಟಿರುವ ಉದ್ಯಮಿ ರಾಮಚಂದ್ರಯಾದವ್ ಯಾರು ಎಂಬ ಪ್ರಶ್ನೆ ಏಳುವುದು ಸಹಜ ಉದ್ಯಮಿ ರಾಮಚಂದ್ರಯಾದವ್ ಮೂಲತಃ ಕೋಲಾರ ಜಿಲ್ಲೆಯ ಗಡಿಯಾಚಗಿನ ಚಿತ್ತೂರು ಜಿಲ್ಲೆಯ ಪುಂಗನೂರಿನವರು ಯೋಗಾ ಗುರು ಬಾಬಾರಾಮದೇವ್ ಅವರ ಆಪ್ತ ತಿರುಪತಿ,ಚನೈ,ಮುಂಬೈ ದೆಹಲಿ ಮುಂತಾದ ಕಡೆ ವಿಶೇಷವಾಗಿ ಔಷಧಿ ಉದ್ಯಮಗಳು ಸೇರಿದಂತೆ ವಿವಿಧ ನಮೂನೆಯ ಉದ್ಯಮಗಳ ಮಾಲಿಕತ್ವ ಇರುವಂತ ರಾಮಚಂದ್ರಯಾದವ್ ಆಂಧ್ರದಲ್ಲಿ 2019 ವಿಧಾನ ಸಭೆ ಚುನಾವಣೆಯಲ್ಲಿ ಪುಂಗನೂರು ಕ್ಷೇತ್ರದಿಂದ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರನೆ ಸ್ಥಾನ ಪಡೆದಿದ್ದರು ಇದ್ದಕ್ಕಿದ್ದಂತೆ ಜನಸೇನಾ ಪಕ್ಷದಿಂದ ದೂರ ಸರಿದ ಅವರು ಪುಂಗನೂರಿಗೆ ಸೀಮಿತವಾಗಿ ಸಾಮಜಿಕ ಹಾಗು ರೈತರು ನಿರುದ್ಯೋಗಿಗಳು ಸಾಮಜಿಕವಾಗಿ ಹಿಂದುಳಿದ ಸಮಾಜಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಮಾಜ ಸೇವೆ ಮಾಡಿಕೊಂಡು ರಾಜಕೀಯ ಚಟುವಟಿಕೆಯಿಂದ ಪುಂಗನೂರು ಕ್ಷೇತ್ರದಲ್ಲಿ ವೇರಿ ಆಕ್ಟಿವ್ ಆಗಿ ವೈಸಿಪಿ ಸರ್ಕಾರದ ಪ್ರಭಾವಿ ಸಚಿವ ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ ವಿರುದ್ದ ಢಿ ಎಂದರೆ ಢಿ ಎನ್ನುವಷ್ಟು ರಾಜಕೀಯವಾಗಿ ಬೆಳೆದು ನಿಂತಿರುವ ರಾಮಚಂದ್ರಯಾದವ್ ಅವರ ಬಂಗ್ಲೆ ಮೇಲೆ ವೈಸಿಪಿ ಕಾರ್ಯಕರ್ತರು ದಾಳಿ ನಡೆಸಿದಾಗ ದೆಹಲಿಗೆ ಕೇಂದ್ರ ಸರ್ಕಾರದ ನಂ-2 ಗೃಹ ಸಚಿವ ಅಮಿತ್ ಷಾ ಅವರನ್ನು ಖುದ್ದು ಬೇಟಿ ಮಾಡಿ ತಮ್ಮ ಮೇಲಾದ ದೌರ್ಜನ್ಯಗಳ ಕುರಿತಾಗಿ ಹೇಳಿಕೊಂಡಿದ್ದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅವರಿಗೆ ವೈ ಕೆಟಗಿರಿ ಭದ್ರತೆ ಒದಗಿಸಿದೆ.