ಶ್ರೀನಿವಾಸಪುರ:ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಸಾಂಪ್ರದಾಯಕವಾಗಿ ನಡೆಯಿತು,ಕೋವಿಡ್ ಹಿನ್ನೆಲೆ ಸ್ಥಳೀಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ತಾಲೂಕಿನ ಅರಕೇರಿ ಶ್ರೀ ನಾಗನಾಥೇಶ್ವರ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಬೆಳೆಗ್ಗೆ ವಿಶೇಷ ಹೋಮ ಹವನ ಹಾಗು ಗಿರಿಜಾ ಕಲ್ಯಾಣ ಆಯೋಜಿಸಲಾಗಿತ್ತು, ಮಧ್ಯಾಹ್ನ ನಡೆದಂತ ಬ್ರಹ್ಮರಥೋತ್ಸವ ಸಂಪ್ರದಾಯದಂತೆ ದೇವಾಲಯದ ಧರ್ಮಾಧಿಕಾರಿ ರಮೇಶಬಾಬು ನೇತೃತ್ವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಥ ಎಳೆದು ಪುನಿತರಾದರು, ಭಕ್ತರು ಎಂದಿನಂತೆ ವಿಶೇಷ ಪೂಜಾ ಕಾರ್ಯಗಳು ಹಾಗು ಉತ್ಸವಗಳಲ್ಲಿ ಪಾಲ್ಗೋಂಡು ಭಕ್ತಿಭಾವ ಮೆರೆದರು.
ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ರಮೇಶಕುಮಾರ್,ಕೋಚಿಮುಲ್ ನಿರ್ದೇಶಕ ಹನುಮೇಶ,ಪುರಸಭೆ ಸದಸ್ಯ ರಮೇಶ್ ಕುಮಾರ್,ಆದ್ಯಾತ್ಮಿಕ ಚಿಂತಕ ಬಾಬಾಅಂಕಲ್ ನಾಗರಾಜ್,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ವಿ.ಸುಧಾಕರ್,ಸದಸ್ಯ ನಾರಯಣಸ್ವಾಮಿ,ಮುಖಂಡರಾದ ದೊರೆಸ್ವಾಮಿರೆಡ್ಡಿ,ಲಕ್ಷ್ಮೀಸಾಗರ ಆಶೋಕ್,ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವೆಂಕಟರಮಣಪ್ಪ ಸೇರಿದಂತೆ ಮುಂತಾದವರು ಇದ್ದರು. ವೇದ ಬ್ರಹ್ಮ ಉಮಾಶಂಕರ ಶರ್ಮಾ ಅವರಿಂದ ಪೂಜಾ ಕಾರ್ಯಕ್ರಮಗಳು ನಡೆಯಿತು.
ವರದಿ.ವಿವೇಕ್ ಎಸ್ ಶೆಟ್ಟಿ