ಮದನಪಲ್ಲಿ:ಅಯ್ಯಪ್ಪ ಮಾಲಾಧಾರಿ ಭಕ್ತನ ಮೇಲೆ ಕುಲ್ಲಕ್ಷಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ದೊಡ್ಡ ರಾದ್ದಾಂತಕ್ಕೆ ಕಾರಣವಾಗಿರುವುದು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಮದನಪಲ್ಲಿ ನಗರದಲ್ಲಿ ಬುಧವಾರ ಸಂಜೆ ನಡೆದಿರುತ್ತದೆ.
ವೆಂಕಟೇಶ್ ಎಂಬ ಅಯ್ಯಪ್ಪ ಮಾಲಾಧಾರಿ ಯುವಕ ಬೈಕನಲ್ಲಿ ತನ್ನ ತಾಯಿಯನ್ನು ಕರೆದುಕೊಂಡು ಆರ್ಟಿಸಿ ಬಸ್ ನಿಲ್ದಾಣದ ಮಾರ್ಗವಾಗಿ ಹೋಗುತ್ತಿರುವಾಗ ಮತ್ತೊಬ್ಬ ಬೈಕ ಸವಾರ ಜೋರಾಗಿ ಬಂದಿದ್ದು ಬೈಕ್ ಗೆ ಟಚ್ ಆಗಿದೆ ಇದಕ್ಕೆ ಅಯಪ್ಪ ಮಾಲಾಧಾರಿ ವೆಂಕಟೇಶ್ ವಿರೋಧಿಸಿದಾಗ ಇಬ್ಬರು ಬೈಕ್ ಸವಾರರ ನಡುವೆ ಮಾತಿನ ಚಕಮಕಿಗೆ ನಡೆದಿದೆ ಜೋರಾಗಿ ಬಂದ ಬೈಕ್ ಸವಾರ ಜಿಯಾವುಲ್ ಹಕ್ ಎಂಬ ವ್ಯಕ್ತಿ ಅಯ್ಯಪ್ಪ ಮಾಲಾಧಾರಿಯ ಅಂಗಿ ಹರಿದು ದುರ್ಬಾಷೆಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ವೆಂಕಟೇಶ್ ತಾಯಿ ಕಲಾವತಿ ಆರೋಪಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿ ವೆಂಕಟೇಶ್ ಮೇಲಿನ ಹಲ್ಲೆ ವಿಚಾರ ಮದನಪಲ್ಲಿ ನಗರದಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ ಕ್ಷಣಾರ್ಧಾದಲ್ಲಿ ಅಯ್ಯಪ್ಪ ಮಾಲಾಧಾರಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾವಣೆ ಗೊಂಡು ದಾಳಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮದನಪಲ್ಲಿ ಪೋಲಿಸ್ ಠಾಣೆ ಮುಂದೆ ಪ್ರತಿಭಟಿಸಿದ್ದಾರೆ.ಇದಕ್ಕೆ ವಿವಿಧ ಹಿಂದು ಸಂಘಟನೆಗಳ ಬೆಂಬಲಿಸಿದ್ದು ಕೆಲ ಹೊತ್ತು ಮದನಪಲ್ಲಿ ನಗರದಲ್ಲಿ ಬಿಗುವಿನ ವಾತವರಣ ಏರ್ಪಟ್ಟಿತ್ತು.
ಪೋಲಿಸರ ಸಮಯ ಪ್ರಜ್ಞೆ
ಪೋಲಿಸ್ ಡಿ.ಎಸ್.ಪಿ ಕೊಂಡಯ್ಯನಾಯ್ಡು,ಸಿ.ಐ ರಾಮಚಂದ್ರ ಸಮಯ ಪ್ರಜ್ಞೆಯಿಂದ ಪರಿಸ್ಥಿತಿ ತಿಳಿಯಾಗಿದ್ದು ಹಲ್ಲೆ ನಡೆಸಿದ ಆರೋಪಿ ಜಿಯಾವುಲ್ ಹಕ್ ನನ್ನು ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಜಿಯಾವುಲ್ ಹಕ್ ಮೂಲತಃ ಕರ್ನಾಟಕದ ಬಿದರ್ ನ ವ್ಯಕ್ತಿ ಎಂದು ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ಹೇಳಲಾಗಿದೆ.
ಹಲ್ಲೆ ಗೋಳಗಾದ ಮೇದರ ಬೀದಿ ನಿವಾಸಿ ಅಯ್ಯಪ್ಪ ಮಾಲಾಧಾರಿ ವೆಂಕಟೇಶ್ ರನ್ನು ಮದನಪಲ್ಲಿ ಶಾಸಕ ಷಾಜಹನ್ ಭಾಷ ಭೇಟಿಯಾಗಿ ಧೈರ್ಯ ತುಂಬಿದ್ದಾರೆ.