ತೆಲಂಗಾಣ ರಾಜ್ಯದಲ್ಲಿನ ಹೈದರಾಬಾದ್ ನಗರಕ್ಕೆ ಹೊಂದಿಕೊಂಡಿರುವ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ನಲ್ಲಿರುವ ದೇವಾಲಯ ಚಿಲುಕುರು ಬಾಲಾಜಿ ದೇವಸ್ಥಾನ ಇದು ವಿಸ ಪಡೆಯಲು ಈ ದೇವರ ಅನುಗ್ರಹ ಇದ್ದರೆ ಶೀಘ್ರವಾಗಿ ವಿಸ ಅಲಾಟ್ ಆಗುತ್ತದೆ ಎಂಬುದು ಪ್ರತೀತಿ ಹಾಗಾಗಿ ವಿಸಾಗೆ ಅರ್ಜಿ ಸಲ್ಲಿಸಿವ ಬಹುತೇಕರು ಮೊದಲು ಚಿಲುಕುರು ಬಾಲಾಜಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ವಿಸ ಪ್ರಯತ್ನ ಮುಂದುವರೆಸುತ್ತಾರೆ.ಇಲ್ಲಿ ಪೂಜೆ ಸಲ್ಲಿಸುವ ಪ್ರಧಾನ ಅರ್ಚಕ ರಂಗರಾಜನ್ ಮತ್ತು ಅವರ ಕುಟುಂಬ ದೇವಾಲಯದ ಆವರಣದಲ್ಲೆ ವಾಸಿಸುತ್ತಿದ್ದಾರೆ ಮೂರ್ನಾಲ್ಕು ದಿನಗಳ ಹಿಂದೆ ಅವರ ಮೇಲೆ ಧರ್ಮದ ಹೇಸರಲ್ಲಿ ಕೆಲವರು ಹಲ್ಲೆ ನಡೆಸಿರುವ ಘಟನೆ ನಡೆದಿರುತ್ತದೆ.
ನ್ಯೂಜ್ ಡೆಸ್ಕ್:ವೀಸಾ ಬಾಲಾಜಿ ದೇವಸ್ಥಾನ ಎಂದು ಪ್ರಸಿದ್ಧಿ ಪಡೆದಿರುವ ತೆಲಂಗಾಣದ ಚಿಲುಕುರು ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ರಂಗರಾಜನ್ ಹಾಗು ಅವರ ಕುಟುಂಬದ ಮೇಲೆ ಹಿಂದೂ ಸಂಘಟನೆ ಹೆಸರಿನಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿದ್ದಾರೆ.
ಈ ಬಗ್ಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವಿ. ಸೌಂದರ್ ರಾಜನ್ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ರಂಗರಾಜನ್ ಮತ್ತು ಅವರ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಥಳಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಘಟನೆ ನಡೆದು ಕೆಲ ದಿನಗಳ ನಂತರ ವಿಷಯ ಬೆಳಕಿಗೆ ಬಂದಿದೆ. ಅರ್ಚಕ ರಂಗರಾಜನ್ Rangarajan chilkur
ಅವರು ವೀಸಾ ಬಾಲಾಜಿ ದೇವಸ್ಥಾನ Chilukur Balaji Temple ಎಂದೂ ಕರೆಯಲ್ಪಡುವ ಚಿಲುಕೂರು ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಮೊಯಿನಾಬಾದ್ನಲ್ಲಿರುವ ದೇವಾಲಯದ ಬಳಿ ಅರ್ಚಕರು ತಮ್ಮ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದಾರೆ.ಮೂರ್ನಾಲ್ಕು ದಿನಗಳ ಹಿಂದೆ ಎಂದಿನಂತೆ ದೇವಾಲಯದಲ್ಲಿ ಪೂಜಾ ಕರ್ತವ್ಯ ಮುಗಿಸಿದ ಅರ್ಚಕ ರಂಗರಾಜನ್ ತಮ್ಮ ನಿವಾಸಕ್ಕೆ ತೆರಳಿದ್ದಾರೆ ಏತನ್ಮಧ್ಯೆ ಮನೆಯ ಬಳಿಗೆ ಕೆಲ ಅಪರಿಚಿತ ವ್ಯಕ್ತಿಗಳು ಬಂದು ರಾಮರಾಜ್ಯ ಸ್ಥಾಪನೆಗೆ ಬೆಂಬಲ ನೀಡುವಂತೆ ಅರ್ಚಕರಿಗೆ ಹೇಳಿದ್ದಾರೆ ಅರ್ಚಕ ಅವರನ್ನು ಮನೆಯೊಳಗೆ ಕರೆದು ಆಹ್ವಾನಿಸಿ ಅವರ ಮಾತುಗಳನ್ನು ಆಲಿಸಿದ್ದಾರೆ ಬಂದವರು ಅನುಚಿತವಾಗಿ ನಡೆದುಕೊಂಡಿರುವುದಲ್ಲದೆ ಭಾಷೆ ಬಳಕೆಯಲ್ಲೂ ವ್ಯತ್ಯಾಸ ವಾಗಿದ ಕಾರಣ ನಿಮಗೆ ಬೆಂಬಲಿಸಲು ಸಾಧ್ಯವಾಗದು ಎಂದು ಅರ್ಚಕ ನಿರಾಕರಿಸಿದ್ದಾರೆ ಇದಕ್ಕೆ ಪ್ರತಿಕ್ರಿಸಿದ ಬಂದಂತ ವ್ಯಕ್ತಿಗಳು ರಂಗರಾಜನ್ ಮತ್ತು ಅವರ ಮಗನ ಮೇಲೆ ಹಲ್ಲೆ ನಡೆಸಿದ್ದಾರೆ ತೀವ್ರವಾಗಿ ಥಳಿಸಿದ್ದಾರೆ ಘಟನೆಯ ಬಗ್ಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವಿ. ಸೌಂದರ್ ರಾಜನ್ ಪೊಲೀಸರಿಗೆ ದೂರು ನೀಡಿದ್ದಾರೆ. ದಾಳಿಕೋರರನ್ನು ಮತ್ತು ಅವರ ಸಹಯೋಗಿಗಳನ್ನು ಬಂಧಿಸುವಂತೆ ಅವರು ಮನವಿ ಮಾಡಿದ್ದು ಅದರಂತೆ ತನಿಖೆ ನಡೆಸಿದ ಪೊಲೀಸರು, ದಾಳಿಯಲ್ಲಿ ಭಾಗವಹಿಸಿದ್ದವರ ಪೈಕಿ ಪ್ರಮುಖ ಎಂದು ವೀರರಾಘವ ರೆಡ್ಡಿ ಸೇರಿದಂತೆ ಆತನೊಂದಿಗೆ ದಾಳಿಯಲ್ಲಿ ಭಾಗವಹಿಸಿದ್ದ ಸುಮಾರು 20 ಜನರನ್ನು ಪೋಲಿಸರು ಬಂಧಿಸಿದ್ದಾರೆ.
ದಾಳಿಗೆ ಖಂಡನೆ
ಪ್ರಧಾನ ಅರ್ಚಕ ರಂಗರಾಜನ್ ಮೇಲಿನ ದಾಳಿಯನ್ನು ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿವೆ ವಿಶೇಷವಾಗಿ ಪ್ರಮುಖ ರಾಜಕಾರಣಿಗಳು ಅವರನ್ನು ಖುದ್ದಾಗಿ ಭೇಟಿಯಾಗಿ ಸ್ವಾಂತನದ ಮಾತುಗಳನ್ನಾಡಿದ್ದಾರೆ.
And Also Read http://And Also Read https://www.vcsnewz.com/man-arrested-for-entering-ayodhya-ram-temple-with-hidden-camera/ಅಯೋಧ್ಯೆ ರಾಮಾಲಯಕ್ಕೆ ರಹಸ್ಯ ಕ್ಯಾಮರಾದೊಂದಿಗೆ ಪ್ರವೇಶಿಸಿದ್ದ ವ್ಯಕ್ತಿ ವಶಕ್ಕೆ!