Author: admin

ಶ್ರೀನಿವಾಸಪುರ: ಪಿಯುಸಿ ಪರಿಕ್ಷೇಯಲ್ಲಿ ಸೋಮಯಾಜಲಹಳ್ಳಿಯ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದಾಗಿ ಪ್ರಾಚಾರ್ಯ ನಾರಯಣಪ್ಪ ತಿಳಿಸಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡಿ 2021-22 ಸಾಲಿನ ಪಿ.ಯು ಪರಿಕ್ಷೇಯಲ್ಲಿ ಕಾಲೇಜಿನ 48 ವಿದ್ಯಾರ್ಥಿಗಳಲ್ಲಿ ಮೂರು ಜನ ವಿದ್ಯಾರ್ಥಿಗಳು ಡಿಸ್ಟಂಕ್ಷನ್ ನಲ್ಲಿ ಪಾಸಾಗಿದ್ದು ವಿಜ್ಙಾನ ವಿಭಾಗದ 55.55% ಕಲಾವಿಭಾಗದ 66.07% ವಾಣಿಜ್ಯ ವಿಭಾಗದ 63.92% ವಿಧ್ಯಾರ್ಥಿಗಳು ಸಾಧನೆ ಮಾಡಿದ್ದು ಕಲಾ ವಿಭಾಗದ ವಿಧ್ಯಾರ್ಥಿನಿ ಗಂಗೋತ್ರಿ 556 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಈಕೆ ರಾಜ್ಯಶಾಸ್ತ್ರದಲ್ಲಿ ಮತ್ತು ಮಾಹಿತಿ ತಂತ್ರಘ್ಙಾನದಲ್ಲಿ ತಲಾ 100 ಅಂಕಗಳನ್ನು ಪಡೆದಿರುತ್ತಾಳೆ.ವಿಜ್ಙಾನ ವಿಭಾಗದ ವಿಧ್ಯಾರ್ಥಿನಿ ಲಿಖಿತ 540 ಅಂಕ ಪಡೆದಿದ್ದರೆ ವಾಣಿಜ್ಯ ವಿಭಾಗದಲ್ಲಿ ನವೀನ್ ಎಂಬ ವಿಧ್ಯಾರ್ಥಿ 524 ಅಂಕ ಪಡೆದಿದ್ದಾರೆ. ಕಾಲೇಜಿಗೆ ಮತ್ತು ಬೋಧಕರಿಗೆ ಉತ್ತಮ ಹೆಸರು ತಂದಿದ್ದಾರೆ ಇವರ ಸಾಧನೆ ಸೋಮಯಾಜಲಹಳ್ಳಿ ಗ್ರಾಮಕ್ಕೆ ಗೌರವ ತಂದಿದೆ ಎನ್ನುತ್ತಾರೆ ಪ್ರಾಚಾರ್ಯರು. ಈ ಸಂದರ್ಭದಲ್ಲಿ ಉಪನ್ಯಾಸಕ ಲಕ್ಷ್ಮಣರೆಡ್ಡಿ,ನಾಗರಾಜ್ ಇತರರು ಇದ್ದರು.

Read More

ನ್ಯೂಜ್ ಡೆಸ್ಕ್: ಬಯಸಿದ ಊಟ-ತಿಂಡಿ ಸಿಕ್ಕಾಗ ಖುಷಿಯಿಂದ ಸೇವಿಸುವುದು ಮನುಷ್ಯನ ಸಾಮಾನ್ಯ ಗುಣ ಊಟದ ನಂತರ ಅಗುವ ಪರಿಣಾಮ ಹೊಟ್ಟೆ ಹುಬ್ಬರ ಸಮಸ್ಯೆ ಉಂಟುಮಾಡುತ್ತದೆ ಪದೇ ಪದೇ ಗಾಸ್ ಬಿಡುಗಡೆಯಾಗುತ್ತದೆ ಇದು ಸಾಕಷ್ಟು ಇರುಸು-ಮುರಿಸು ಉಂಟುಮಾಡುತ್ತದೆ. ಇಂದಿನ ಊಟದ ಶೈಲಿಯೇ ಹಾಗಾಗಿದೆ, ಜೋತೆಗೆ ಇವತ್ತಿನ ಜೀವನ ಶೈಲಿಯಲ್ಲಿ ಊದಿದ ಹೊಟ್ಟೆ ಯನ್ನು ಹೊತ್ತು ತಿರುಗಲು ಅಸಹ್ಯ ಎನ್ನುವಷ್ಟು ಸಮಸ್ಯೆ ಕಾಡುತ್ತದೆ.ಹೆಚ್ಚಾಗಿ ಊಟ ಮಾಡಿದ ನಂತರ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಹೊಟ್ಟೆ ಉಬ್ಬರ. ಊಟದ ನಂತರ ಹೊಟ್ಟೆಯಲ್ಲಿ ಅತೀವವಾದ ಅನಿಲ(ಗ್ಯಾಸ್) ಉತ್ಪಾದನೆ ಅಥವಾ ಜೀರ್ಣಾಂಗದ ಮಾಂಸ – ಖಂಡಗಳ ಅನಿಯಮಿತವಾದ ಚಲನೆ ಸಹಜವಾಗಿಯೇ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ ಸಮಸ್ಯೆಗೆ ಕಾರಣವಾಗುತ್ತದೆ. ಈ ಸಮಸ್ಯೆ ಬಂತೆಂದರೆ ಹೊಟ್ಟೆ ತೊಳಸಿದಂತಾಗಿ ವಾಕರಿಕೆ ಬರುವಂತಾಗುತ್ತದೆ. ಹೊಟ್ಟೆ ನೋವಿನ ಲಕ್ಷಣ ಕಾಣುತ್ತದೆ ಇದು ದೇಹದ ಅಸ್ವಸ್ಥತೆ ಹೆಚ್ಚಾಗಿ, ನಮ್ಮ ಪ್ರತಿ ದಿನದ ಕೆಲಸ ಕಾರ್ಯಗಳಿಗೆ ಗಿಡ್ಡಿನೆಸ್ ಆಗಿ ಕಾಡುತ್ತದೆ.​ಇದಕ್ಕೆಲ್ಲಾ ಕಾರಣವೇನುಊಟದ ನಂತರ ನಿಮ್ಮ ಹೊಟ್ಟೆಯ ಜೀರ್ಣಾಂಗದಲ್ಲಿ ಹೆಚ್ಚಾದ…

Read More

ಶ್ರೀನಿವಾಸಪುರ:ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪು ಹಲ್ಲೆಮಾಡಿರುವ ಘಟನೆ ಶನಿವಾರ ತಡ ಸಂಜೆ ನಡೆದಿರುತ್ತದೆ.ಹಲ್ಲೆ ಗೊಳಗಾದ ವ್ಯಕ್ತಿಯನ್ನು ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ವಹಣೆ ಮಾಡುವ ಮೊಗಿಲಹಳ್ಳಿಶಿವಪ್ಪ ಎಂದು ಗುರುತಿಸಲಾಗಿದ್ದು ಗಾಯಾಳು ಶಿವಪ್ಪನನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಶಿವಪ್ಪ ಶ್ರೀನಿವಾಸಪುರದ ಎ.ಪಿ.ಎಂ.ಸಿ ಮಾವು ಮಾರುಕಟ್ಟೆಯಲ್ಲಿ ಶೌಚಾಲಯ ನಿರ್ವಹಣೆ ಗುತ್ತಿಗೆ ಪಡೆದಿದ್ದು ಸ್ಥಳದಲ್ಲಿಯೇ ಪ್ಲಾಸಟಿಕ್ ಕವರ್ ನಲ್ಲಿ ಟೆಂಟ್ ಹಾಕಿಕೊಂಡು ವಾಸವಿರುತ್ತಾನೆ ಶನಿವಾರ ಸಂಜೆ ತಹೇಲ್ ಎನ್ನುವ ವ್ಯಕ್ತಿ ತನ್ನ ಬೊಲೇರೋ ವಾಹನ ತಿರುಗಿಸುವಾಗ ವಾಹನ ಶಿವಪ್ಪನ ಟೆಂಟ್ ಗೆ ತಲುಲಿದೆ ಇದನ್ನು ಶಿವಪ್ಪ ವಿರೋಧಿಸಿದ್ದಾನೆ ಇದರಿಂದ ಇಬ್ಬರ ನಡುವೆ ಮಾತಿನ ಚಕಮುಖಿ ನಡೆದು ಕೈ ಕೈ ಮೀಲಾಯಿಸುವ ಹಂತ ತಲುಪಿದೆ ಸ್ಥಳದಲ್ಲಿದ್ದವರು ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ ನಂತರ ತಹೇಲ್ ತನ್ನ ಸ್ನೇಹಿತ ಶಬ್ರೇಜ್ ಖಾನ್ ಹಾಗು ಇತರನ್ನು ಸ್ಥಳಕ್ಕೆ ಕರೆಸಿಕೊಂಡು ಶಿವಪ್ಪನ ಮೇಲೆ ಕಟ್ಟಿಗೆ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿರುತ್ತಾನೆ ಈ…

Read More

ಶ್ರೀನಿವಾಸಪುರ:ದ್ವಿಚಕ್ರವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಬಾಗ ಗುರುವಾರ ಸಂಜೆ ಸುಮಾರು 6ಗಂಟೆ ಸಮಯದಲ್ಲಿ ನಡೆದಿರುತ್ತದೆ.ಮೃತ ಪಟ್ಟಿರುವ ಇಬ್ಬರು ಅಪ್ರಪಾಪ್ತ ಬಾಲಕ ನಿಜಾಮ್ ಹಾಗು ಬಾಲಕಿ ಇಖ್ರಾ ಅಫ್ರೀನ್(13) ಎಂದು ಗುರುತಿಸಲಾಗಿದೆ.ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯಲ್ಲಿ ಕಲ್ಲೂರು ಬಳಿಯ ಆದರ್ಶ ಶಾಲೆಯ ವಿಧ್ಯಾರ್ಥಿನಿ ಇಖ್ರಾ ಅಫ್ರೀನ್ ಳನ್ನು ಕರೆ ತರಲು ನಿಜಾಮ್ ದ್ವಿಚಕ್ರವಾಹನ ತಗೆದುಕೊಂಡು ಹೋಗಿ ಅವಳನ್ನು ವಾಹನದಲ್ಲಿ ಕುರಿಸಿಕೊಂಡು ಬರುತ್ತಿದ್ದಾಗ ಎಪಿಎಂಸಿ ಮಾರುಕಟ್ಟೆ ಬಳಿ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದಿದೆ ಇದರಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ನೆಲಕ್ಕೆ ಬಿದಿದ್ದಾರೆ ಅದೆ ಸಮಯಕ್ಕೆ ಎದುರಿನಿಂದ ಬಂದಂತ ಬೊಲೋರೊ ವಾಹನ ಹರಿದು ಬೈಕ್ ಸವಾರ ನಿಜಾಮ್ ಸ್ಥಳದಲ್ಲೇ ಸಾವು ಮೃತ ಪಟ್ಟರೆ ವಿಧ್ಯಾರ್ಥಿನಿ ಇಖ್ರಾ ಅಫ್ರೀನ್ ಜಾಲಪ್ಪ ಅಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.ಘಟನೆ ನಡೆದ ಸ್ಥಳಕ್ಕೆ ಮುಳಬಾಗಿಲು ಡಿ.ವೈ.ಎಸ್.ಪಿ ಸಂಬಂಧ ಶ್ರೀನಿವಾಸಪುರ ಪಟ್ಟಣ ಇನ್ಸ್ ಪೇಕ್ಟರ್ ನಾರಯಣಸ್ವಾಮಿ ಭೇಟಿ ನೀಡಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಕೋಲಾರ:ಕೋಲಾರ ತಾಲೂಕಿನ ಪ್ರತಿಷ್ಠಿತ ಪಂಚಾಯಿತಿಯಾಗಿ ಖ್ಯಾತಿ ಪಡೆದಿರುವ ನರಸಾಪುರ ಗ್ರಾಮ ಪಂಚಾಯಿತಿ ಪಿಡಿಒ ರವಿ ಅಲಿಯಾಸ್ ಹೋಳೂರುರವಿ ವ್ಯಕ್ತಿಯೊಬ್ಬನಿಂದ ಲಂಚ ತಗೆದುಕೊಳ್ಳುತ್ತಿರುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುತ್ತಾನೆ.ಕೋಲಾರ ತಾಲೂಕು ನರಸಾಪುರ ಗ್ರಾಮಪಂಚಾಯಿತಿ ಕೈಗಾರಿಕ ಪ್ರದೇಶವಾಗಿ ಪ್ರಖ್ಯಾತಿ ಪಡೆದಿದೆ ಇಲ್ಲಿ ಕಾರ್ಯನಿರ್ವಹಿಸುವ ಪಂಚಾಯಿತಿ ಪಿಡಿಒ ರವಿ ಜಮೀನಿನ ಖಾತೆ ಮಾಡಿಕೊಡುವ ಸಂಬಂದ ಮೆಹುಬೂಬ್ ಪಾಷ ಎನ್ನುವರಿಂದ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು ಅದರ ಮೊದಲ ಕಂತು ಎನ್ನುವಂತೆ 45 ಸಾವಿರ ರೂಪಾಯಿಗಳನ್ನು ಭಾನುವಾರವಾದರೂ ಕೋಲಾರ ನಗರದ ಧರ್ಮರಾಯ ನಗರದಲ್ಲಿರುವ ತನ್ನ ನಿವಾಸದ ಬಳಿ ಹಣ ತಗೆದುಕೊಳ್ಳುತ್ತಿರುವಾಗ ಎಸಿಬಿ ದಾಳಿ ಮಾಡಿದ್ದು ಹಣವನ್ನು ವಶಕ್ಕೆ ಪಡೆದು ಲಂಚಬಾಕ ಪಿಡಿಒ ರವಿಯನ್ನು ಎಸಿಬಿ ಪೋಲಿಸರು ಬಂದಿಸಿರುತ್ತಾರೆ. ಎಸಿಬಿ ಡಿವೈಎಸ್ಪಿ ಸುಧೀರ್, ಇನ್ಸ್‌ಪೆಕ್ಟರ್ ಮಂಜುನಾಥ್, ಮತ್ತು ಪಾರೂಕ್ ನೇತೃತ್ವದಲ್ಲಿ ದಾಳಿ ಮಾಡಿರುತ್ತಾರೆ.ಲಂಚ ಪಡೆದು ಎಸಿಬಿ ಪೋಲಿಸರ ಅಥಿತಿಯಾಗಿರುವ ಲಂಚಬಾಕ ಪಿಡಿಒ ರವಿ ಹೋಳೂರು ಮೂಲದವನಾಗಿದ್ದು ಈ ಹಿಂದೆ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಅಧಿಕಾರಿಯಾಗಿ…

Read More

ಶ್ರೀನಿವಾಸಪುರ:ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಯುವಕನೊರ್ವ ಮುರೇಡಶ್ವರದ ಬಳಿ ಸಮುದ್ರದ ಪಾಲಾಗಿರುತ್ತಾನೆ.ಸಮುದ್ರದ ಪಾಲಾಗಿರುವ ಯುವಕನನ್ನು ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ನಿವಾಸಿ ಕೃಷಿ ಕಾರ್ಮಿಕ ಶೇಖ್ ಅಹ್ಮದ್ ಪಾಷ ಅವರ ಮಗ ಶೇಖ್ ಅರ್ಬಾರ್ ಪಾಷ(26) ಎಂದು ಹೇಳಲಾಗಿದೆ.ಪ್ಯಾರ ಮೆಡಿಕಲ್ ಒದನ್ನು ಇತ್ತಿಚಿಗಷ್ಟೆ ಪುರ್ಣಮಾಡಿಕೊಂಡಿದ್ದು ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದನಂತೆ.ಬುಧವಾರದಂದು ತಾಡಿಗೋಳ್ ಗ್ರಾಮದ ಅರ್ಬಾರ್ ಸೇರಿದಂತೆ ಸುಮಾರು 12 ಮಂದಿ ಯುವಕರ ತಂಡ ಉತ್ತರ ಕಾರ್ನಾಟಕ ಉಡುಪಿ ಸೇರಿದಂತೆ ಇತರಡೆಗೆ ಟಿಟಿ ವಾಹನದಲ್ಲಿ ಪ್ರವಾಸ ಹೊರಟಿದ್ದು ಗುರುವಾರ ಸಂಜೆ ಮುರುಡೇಶ್ವರದ ಬಳಿ ಸಮುದ್ರಕ್ಕೆ ಇಳಿದಿದ್ದಾರೆ ಇಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದೆ ಈ ಮಾಹಿತಿ ಪ್ರವಾಸಿ ಯುವಕರಿಗೆ ಮಾಹಿತಿ ಇಲ್ಲದ ಕಾರಣ ಸಮುದ್ರದಲ್ಲಿ ಈಜಾಡಿದ್ದಾರೆ ಅಲೆಗಳು ದೊಡ್ದಮಟ್ಟದಲ್ಲಿ ಬಂದಾಗ ಎಚ್ಚೆತ್ತುಕೊಂಡ ಯುವಕರ ದಡ ಸೇರಿದ್ದಾರೆ ಈ ಸಂದರ್ಭದಲ್ಲಿ ಮೂವರು ಯುವಕರು ಸಾಹಸ ಪಟ್ಟು ದಡಕ್ಕೆ ಬರುವ ಪ್ರಯತ್ನ ಮಾಡಿರುತ್ತಾರೆ ಆದರೂ ಬರಲು ಸಾಧ್ಯವಾಗದಾಗ ಸ್ಥಳೀಯ ಮೀನುಗಾರ ಸಹಕಾರದಿಂದ ಇಬ್ಬರು ಯುವಕರು ಪ್ರಯಾಸದಿಂದ ದಡಕ್ಕೆ ಬಂದಿದ್ದು ಅರ್ಬಾರ್ ಈಜು…

Read More

ಶ್ರೀನಿವಾಸಪುರ: ತೆಲಗಿನ ಖ್ಯಾತ ನಟ ನಂದಮೂರಿಬಾಲಕೃಷ್ಣ ಅವರ 62 ನೇ ವರ್ಷದ ಜನುಮ ದಿನವನ್ನು ತಾಲೂಕಿನಾದ್ಯಂತ ಅವರ ಅಭಿಮಾನಿಗಳು ಸಂಭ್ರಮ ಸಡಗರದಿಂದ ಅಚರಿಸಿದ್ದಾರೆ. ತಾಲೂಕಿನ ಪ್ರಭಾವಿ ರಾಜಕಾರಣಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ತಮ್ಮ ಸ್ವಗ್ರಾಮವಾದ ದಿಂಬಾಲದಲ್ಲಿ ತಮ್ಮ ಸ್ನೇಹಿತರು ಬಾಲಕೃಷ್ಣ ಅಭಿಮಾನಿಗಳೊಂದಿಗೆ ಸೋಮೇಶ್ವರ ದೇವಾಲಯದ ಮುಂಬಾಗದಲ್ಲಿ ಕೆಕ್ ಕತ್ತರಿಸಿ ಅಚರಿಸಿದರು ಈ ಸಂಸರ್ಭದಲ್ಲಿ ಮಾತನಾಡಿದ ಅವರು ಬಾಲಕೃಷ್ಣ ಪ್ರತಿ ಸಿನಿಮಾದಲ್ಲೂ ಸಮಾಜಿಕ ಕಳಕಳಿಯ ಸಂದೇಶ ಇರುತ್ತದೆ ಎಂದರು.ಪಟ್ಟಣದ ಬಾಲಕೃಷ್ಣ ಅಭಿಮಾನಿಗಳು ಮೋಬಲ್ ಮಂಜು ನೇತೃತ್ವದಲ್ಲಿ ಸ್ಡೂಡಿಯೋ ಕಾಂಪ್ಲೇಕ್ಸ್ ನಲ್ಲಿ ಸಡಗರದಿಂದ ಕೆಕ್ ಕತ್ತರಿಸಿ ಅಚರಿಸಿದರೆ. ರಾಯಲ್ಪಾಡನಲ್ಲಿ ಸ್ಥಳೀಯ ಯುವ ಮುಖಂಡ ವೆಂಕಟ್ ತಮ್ಮ ಸ್ನೇಹಿತರೊಂದಿಗೆ ಸೇರಿ ಅಭಿಮಾನಿಗಳು ಕೆಕ್ ಕತ್ತರಿಸಿ ಸಂಭ್ರಮದಿಂದ ಪಟಾಕಿಸಿ ಸಿಡಿಸಿ ಜನ್ಮದಿನ ಆಚರಿಸಿದರು.

Read More

ಶ್ರೀನಿವಾಸಪುರ: ಶ್ರಮವಹಿಸಿ ಜೀವನ ಮಾಡುವಂತವರು ಉನ್ನತ ಸ್ಥಾನ ಗಳಿಸುತ್ತಾರೆ ಅವರ ಬದುಕು ಸುಗಮವಾಗಿರುತ್ತದೆ ಎಂದು ಶೃಂಗೇರಿ ಶಾರದ ಪೀಠದ ಜಗದ್ಗುರು ಶಂಕರಾಚಾರ್ಯ 37 ನೇ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಮಾತನಾಡಿದರು.ಲೋಕ ಕಲ್ಯಾಣಾರ್ಥವಾಗಿ ವಿಜಯಿಯಾತ್ರದ ಪ್ರವಾಸದಲ್ಲಿರುವ ಅವರು ಶ್ರೀನಿವಾಸಪುರ ಶಂಕರ ಮಠ 100 ವರ್ಷಗಳು ಕಳೆದಿರುವ ಹಿನ್ನಲೆಯಲ್ಲಿ ಇಲ್ಲಿನ ಆಡಳಿತ ಮಂಡಳಿ ಶತಮಾನೋತ್ಸವ ಆಚರಿಸಿದ್ದು ಪ್ರಯುಕ್ತ ಶಂಕರಮಠದ ವಿಮಾನ ಗೋಪುರದ ಕುಂಭಾಭಿಷೇಕ, ಶ್ರೀನಿವಾಸಪುರ ಪಟ್ಟಣದ ಶ್ರೀ ವಾಸವಿ ದೇವಾಲಯ,ರಾಯಲ್ಪಾಡಿವಿನ ಶ್ರೀ ಕಾಶಿ ವಿಶ್ವನಾಥ ದೇವಾಲಯದ ವಿಶೇಷ ಪೂಜಾ ಕಾರ್ಯಕ್ರಮಗಳು ಸೇರಿದಂತೆ ಪ್ರಖ್ಯಾತ ಕುರುಡುಮಲೆ ಶ್ರೀ ವಿನಾಯಕ ದೇವಾಸ್ಥಾನದಲ್ಲಿನ ದೇವರ ದರುಶನ ಪೂಜಾ ಕಾರ್ಯಕ್ರಮಗಳು ಮತ್ತು ಮುಳಬಾಗಿಲು ಶಂಕರ ಮಠ ನಿರ್ಮಾಣಕ್ಕೆ ಶಿಲನ್ಯಾಸ ಪೂಜಾ ಕಾರ್ಯಕ್ರಮಗಳು ನೇರವೇರಿಸಿ ಶ್ರೀನಿವಾಸಪುರದಲ್ಲಿ ಭಕ್ತರನ್ನು ಉದ್ದೇಶಿಸಿ ಅನುಗ್ರಹ ಭಾಷಣ ಮಾಡಿ ಮಾತನಾಡಿದರು.ನಮ್ಮ ಪ್ರಯತ್ನ ಸಫಲವಾಗಬೇಕೆಂದರೆ ಭಗವಂತನ ಅನುಗ್ರಹ ಮುಖ್ಯ, ಸನಾತನ ಧರ್ಮದಲ್ಲಿ ಅಚರಣೆಗಿಂತಲೂ ನಮ್ಮ ವೇದಗಳು ಸಂಸೃತಿ ಪರಂಪರೆ ಎಲ್ಲರಿಗೂ ತಲುಪುವಂತಾಗಬೇಕು ಇವು…

Read More

ಮುಳಬಾಗಿಲು:ಮುಳಬಾಗಿಲು ನಗರದ ಮುತ್ಯಾಲಪೆಟೆಯಲ್ಲಿರುವ ಪ್ರಖ್ಯಾತ ಗಂಗಮ್ಮ ದೇವಾಲಯದ ಅವರಣದಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಮುಂಜಾನೆ ನಸುಕಿನಲ್ಲಿ ನಡೆದಿದೆ.ದುಷ್ಕರ್ಮಿಗಳಿಂದ ಹತ್ಯೆಯಾದ ವ್ಯಕ್ತಿಯನ್ನು ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ (50) ಎಂದು ಗುರುತಿಸಲಾಗಿದೆ ನಗರದ ಮತ್ಯಾಲಪೇಟೆಯಲ್ಲಿ ತಮ್ಮ ನಿವಾಸದ ಬಳಿಯಿರುವ ಗಂಗಮ್ಮ ದೇವಾಲಯಕ್ಕೆ ಮುಂಜಾನೆ ೫ ಗಂಟೆ ಸಮಯದಲ್ಲಿ ಜಗನಮೋಹನ್ ರೆಡ್ಡಿ ಹೋಗಿರುತ್ತಾರೆ ಈ ಸಂದರ್ಭದಲ್ಲಿ ಹೊರಗೆ ಕಾಯುತ್ತಿದ್ದ ದುಷ್ಕರ್ಮಿಗಳು ರೆಡ್ಡಿ ಮೇಲೆ ಲಾಂಗು, ಮಚ್ಚುಗಳಿಂದ ದಾಳಿಮಾಡಿ ಕೊಲೆಗೈದು ಪರಾರಿಯಾಗಿರುತ್ತಾರೆ.ಪೂಜೆ ಮಾಡುಲು ಹೋಗಿದ್ದರುಜಗನ್ ಮೋಹನ್ ರೆಡ್ಡಿ ಗಂಗಮ್ಮನಿಗೆ ಪೂಜೆ ಸಲ್ಲಿಸಲು ಹೋಗಿದ್ದು ಪೂಜೆ ಮುಗಿಸಿ ಹೊರಬರುತ್ತಿದ್ದಂತೆ ಆತನ ಮೇಲೆ ಎರಗಿರುವ ದುಷ್ಕರ್ಮಿಗಳು ಮರಾಕಾಸ್ತ್ರಗಳಿಂದ ಹತ್ಯೆಮಾಡಿರುತ್ತಾರೆ. ಹತ್ಯೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕೆಮೆರಾಗಳಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ.ಮುಳಬಾಗಲು ತಾಲೂಕು ಆವಣಿ ಮೂಲದವರಾದ ಜಗನ್ ಮೋಹನ್ ರೆಡ್ಡಿ ಎರಡನೆ ಬಾರಿಗೆ ನಗರಸಭಾ ಸದಸ್ಯನಾಗಿ ಮಾಜಿ ಶಾಸಕ ಕೊತ್ತೂರು ಮಂಜುನಾಥ ಆಪ್ತನಾಗಿದ್ದ ಹಾಗು ಹಾಲಿ ಶಾಸಕ…

Read More

ಶ್ರೀನಿವಾಸಪುರ:ಜನ್ಮ ಭೂಮಿ ವೇದಿಕೆಯಿಂದ ಆಯೋಜಿಸಿದ್ದ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ನಡೆದ ಖ್ಯಾತ ತೆಲಗು ಗಾಯಕಿ ಮಂಗ್ಲಿ ರಸಸಂಜೆ ಕಾರ್ಯಕ್ರಮದಲ್ಲಿ ಹಳೇಯ ಎನ್ಟಿಆರ್ ಹಾಡುಗಳಿಗೆ ಶಾಸಕ ರಮೇಶ್ ಕುಮಾರ್ ಹೆಜ್ಜೆ ಹಾಕಿದರು ದಿವಂಗತ NTR ನಟಿಸಿದ್ದ ಹಳೇಯ ಗೀತೆಗಳಿಗೆ ಸ್ಟೆಪ್ ಹಾಕಿ ಯುವಕರನ್ನು ರಂಜಿಸಿದ ವಿಡಿಯೋ ಎಲ್ಲೇಡೆ ವೈರಲ್ ಆಗಿದೆ.ಅರಂಬದಲ್ಲಿ ನಾಗೇಶ್ವರಾವ್ ನಟಿಸಿದ್ದ ಒಕ ಲೈಲಾ ಕೋಸಂ ಹಾಡಿಗೆ ಪ್ರಕ್ಷಕರ ಸಾಲಿನಲ್ಲಿ ಕುಳಿತು ಕೈ ಆಡಿಸುತ್ತಿದ್ದ ಅವರನ್ನು ಗಾಯಕಿ ಮಂಗ್ಲಿ ಸ್ಟೇಜ್ ಮೇಲೆ ಬರುವಂತೆ ಕರೆದಾಗ ಸ್ಟೇಜ್ ಹತ್ತಿದ ಅವರು ಅಲ್ಲಿ ಸಿನಿಯರ್ NTR ನಟನೆಯ ವೇಟಗಾಡು ಸಿನಿಮಾದ ಆಕು ಚಾಟು ಪಿಂದೆ ತಡಿಸೆ ಮತ್ತು “ಗಜದೊಂಗ ಸಿನಿಮಾದ ನಿ ಇಲ್ಲು ಬಂಗಾರಮ್ ಕಾನು” ಹಾಗೇ ಭರತ್ ಅನೆ ನೇನು ಸಿನಿಮಾದ ದಂಡಾಲಯ್ಯೊ ಸಾಮಿ ಹಾಡುಗಳಿಗೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿ ಕುಣಿದರು.ಇವರ ನೃತ್ಯಕ್ಕೆ ಗಾಯಕ ಹಾವ ಭಾವದ ಮೂಲಕ ನೃತ್ಯ ಹೇಳಿಕೊಡುತಿದ್ದ.ಕುಣಿದು ಕುಪ್ಪಳಿಸಿದ ನಂತರ ಮಾತನಾಡಿದ ಅವರು ಭಾರತ…

Read More