ಶ್ರೀನಿವಾಸಪುರ: ಶತಮಾನೋತ್ಸವ ಅಚರಿಸುತ್ತಿರುವ ಶ್ರೀನಿವಾಸಪುರದ ಶ್ರೀ ಶೃಂಗೇರಿ ಶಂಕರ ಮಠದ ಶತಮಾನೋತ್ಸವ ಹಾಗು ವಿಮಾನ ಗೋಪುರ ಕುಂಭಾಭಿಷೇಕ ಮಹೋತ್ಸವನ್ನು ಶ್ರೀ ಶೃಂಗೇರಿ ಶಂಕರ ಮಠದ ಉತ್ತಾಧಿಕಾರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ನೆವೇರಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವಂತ ಕಾರ್ಯಕ್ರಮದಲ್ಲಿ ಭಾಗವಹಿಸಲು ಲೋಕಕಲ್ಯಾಣಾರ್ಥ ವಿಜಯಿ ಯಾತ್ರೆಯಲ್ಲಿರುವ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸೋಮವಾರ ಸಂಜೆ 5 ಗಂಟೆಗೆ ಶ್ರೀನಿವಾಸಪುರ ಪುರ ಪ್ರವೇಶ ಮಾಡಲಿದ್ದಾರೆ ಅವರನ್ನು ವೇದಘೋಷ ಮಂಗಳ ವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ಮಾಡಲಿರುವುದಾಗಿ ವಿಪ್ರ ಸಂಘದ ದಿವಾಕರ್ ಮತ್ತು ಶಂಕರಮಠದ ಮೇನೆಜರ್ ಶ್ರೀನಿವಾಸನ್ ತಿಳಿಸಿರುತ್ತಾರೆ.ಸೋಮವಾರ ಸಂಜೆ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಗೆ ಶಂಕರ ಮಠದಲ್ಲಿ ಪಾದುಕ ಪೂಜೆ ಫಲ ಸಮರ್ಪಣೆ ಅದ ನಂತರ ಗುರುಗಳಿಂದ ಅನುಗ್ರಹ ಭಾಷಣ ಮತ್ತು ಶ್ರೀ ಚಂದ್ರಮೌಳೇಶ್ವರ ಪೂಜಾ ಅನುಷ್ಠಾನ ಇರುತ್ತದೆ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳ ನಡೆಯಲಿದ್ದು ಬುಧವಾರ ಶ್ರೀ ಗಳಿಂದ ಗುರು ದತ್ತಾತ್ರೇಯ ಆದಿ ಶಂಕರಾಚಾರ್ಯ,ಗಾಯಿತ್ರಿ ಮಹಾ ಪೂಜೆ ಹಾಗು ನವ ಚಂಡಿ…
Author: admin
ಜಮೀನು ಪಕ್ಕದಲ್ಲಿ ಕೆರೆಯಂಗಳದಲ್ಲಿ ಬೆಳೆದಿದ್ದ ಟಮ್ಯಾಟೊಜಿಲ್ಲಾಧಿಕಾರಿಯ ಸೂಚನೆಯಂತೆ ತೆರವುಟಮ್ಯಾಟೊ ಬೆಳೆಗೆ ಕಾಲಾವಕಾಶ ನೀಡದೆ ತೆರವುಮಾಜಿ ಶಾಸಕರ ತಂಡದಿಂದ ಆರ್ಥಿಕ ನೆರವು ಶ್ರೀನಿವಾಸಪುರ: ಇನ್ನೊಂದು ಹತ್ತು-ಹದಿನೈದು ದಿನ ಕಾದಿದ್ದಾರೆ ಬಡ ರೈತ ಕಾರ್ಮಿಕರ ಕುಟುಂಬ ಬೆಳೆಸಿದ್ದ ಟಮ್ಯಾಟೊ ಬೆಳೆ ದುಡ್ಡು ತಂದು ಕೊಡುತಿತ್ತು ಆದರೆ ಶ್ರೀನಿವಾಸಪುರದ ಕಂದಾಯ ಅಧಿಕಾರಿಗಳ ಅಮಾನವಿಯತೆ ವರ್ತನೆಯಿಂದ ಟಮ್ಯಾಟೊ ಬೆಳೆ ನೆಲದ ಪಾಲಾಗಿದೆ ಹಸಿರಾಗಿದ್ದ ಟಮ್ಯಾಟೊ ಗಿಡಗಳು ನೆಲಕ್ಕೆ ಬಿದ್ದು ಒಣಗಿದೆ ಇದಕ್ಕೆ ಬಂಡವಾಳ ಹಾಕಿದ್ದ ರೈತ ಮಹಿಳೆ ಶಾಂತಮ್ಮ ತಹಶೀಲ್ದಾರ್ ಕಚೇರಿ ಮುಂದೆ ಸಾರ್ವಜನಿಕವಾಗಿ ಗೊಳಿಡುತ್ತಿದ್ದಾಳೆ.ಇದೆಲ್ಲ ನಡೆದಿರುವುದು ತಾಲೂಕಿನ ನೆರ್ನಹಳ್ಳಿ ಗ್ರಾಮದಲ್ಲಿ ರೈತ ಮಹಿಳೆ ಶಾಂತಮ್ಮ ಗೊಳಿಗೆ ಕಾರಣವಾಗಿದ್ದು ಶ್ರೀನಿವಾಸಪುರ ತಾಲೂಕು ಕಂದಾಯ ಇಲಾಖೆ ಯಲ್ದೂರು ಹೋಬಳಿಯ ಕಂದಾಯ ವೃತ್ತ ನೀರಿಕ್ಷಕ ದುಂಡಾವರ್ತನೆಯ ಪರಿಣಾಮ ಘಟನೆ ನಡೆದಿರುವುದಾಗಿ ಹೇಳಲಾಗಿದೆ.ನೆರ್ನಹಳ್ಳಿ ಗ್ರಾಮ ಬೌಗೊಳಿಕವಾಗಿ ರೋಣೂರು ಹೋಬಳಿಯ ಸೋಮಯಾಜಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಯಲ್ದೂರು ಹೋಬಳಿಗೆ ಸೇರುತ್ತದೆ ಗ್ರಾಮದ ಅಂಗವಿಕಲ ವ್ಯಕ್ತಿಯ ಪತ್ನಿಯಾದ ಶಾಂತಮ್ಮ ಎಂಬ…
ಶ್ರೀನಿವಾಸಪುರ: ಜನ್ಮಭೂಮಿ ವೇದಿಕೆ ವತಿಯಿಂದ ಭಾನುವಾರ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆಯಲಿರುವ ಸಿಂಹಾಚಲದ ಶ್ರೀ ವರಾಹ ನರಸಿಂಹಸ್ವಾಮಿ ಕಲ್ಯಾಣೋತ್ಸವದ ಅಂಗವಾಗಿ ಹಿಂದಿನ ದಿನವಾದ ಶನಿವಾರ ರಾತ್ರಿ ವರಾಹ ಶ್ರೀ ನರಸಿಂಹಸ್ವಾಮಿ ದೇವಾಲಯದ ರಥವನ್ನು ಪಟ್ಟಣದ ಪುರಬಿದಿಗಳಲ್ಲಿ ಶೋಭಾಯಾತ್ರೆ ಮೂಲಕ ಮೆರವಣಿಗೆ ಮಾಡಲಾಯಿತು.ಸಂಜೆ 6 ಗಂಟೆಗೆ ಸುಮಂಗಲಿಯರಿಂದ ಪೂರ್ಣಕುಂಭಗಳೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಜಾನಪದ ಕಲಾತಂಡಗಳೊಂದಿಗೆ ಸಾಗಿದ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿತ್ತು . ಆಂಧ್ರಪ್ರದೇಶದ ವಿಶಾಕಪಟ್ಟಣಂ ಬಳಿಯ ಸಿಂಹಾಚಲದ ಶ್ರೀ ವರಾಹ ನರಸಿಂಹಸ್ವಾಮಿ ದೇವಾಲಯದ ಉತ್ಸವ ಮೂರ್ತಿಗಳು ಹಾಗು ಪ್ರಚಾರ ರಥ ಶನಿವಾರ ಮ.3ಗಂಟೆಗೆ ಪಟ್ಟಣಕ್ಕೆ ಆಗಮಿಸಿದ್ದು ಸ್ಥಳೀಯರು ಜನ್ಮಭೂಮಿ ವೇದಿಕೆ ಸಂಘಟಕರು ಸೇರಿಮಂಗಳವಾಧ್ಯಗಳೊದಿಗೆ ಉತ್ಸವ ಮೂರ್ತಿಗಳನ್ನು ಸ್ವಾಗತಿಸಿದರು. ಶಂಕರಮಠದ ಬಳಿ ವಿಪ್ರ ಸಂಘದವರಿಂದ ಶೊಭಾಯಾತ್ರೆಯಲ್ಲಿ ಪಾಲ್ಗೋಂಡಿದ್ದವರಿಗೆ ಮಜ್ಜಿಗೆ ಪೊಟ್ಟಣಗಳನ್ನು ವಿತರಿಸಿದರು.
ಶ್ರೀನಿವಾಸಪುರದ: ಶ್ರೀನಿವಾಸಪುರದ ನೆಲದ ಸ್ವಾತಂತ್ಯ ಹೋರಾಟ ಇತಿಹಾಸ ತಿಳಿಯದೆ ಸ್ವಾತಂತ್ರ್ಯಯ ಹೋರಾಟದ ಬಗ್ಗೆ ಪುಸ್ತಕಗಳನ್ನು ಬರೆದು ಈ ನೆಲದ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ ಎಂದು ತಾಲೂಕು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳ ವಾರಸುದಾರರ ವೇದಿಕೆ ಆರೋಪಿಸಿದೆ.ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬಿ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ಕಾರ್ಯಕ್ರಮ ಆಯೋಜಿಸಿದೆ ಇದಕ್ಕೆ ಪೂರಕವಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಶ್ರೀನಿವಾಸಪುರ ಎಂಬ ಹೆಸರಿನಲ್ಲಿ ಪುಸ್ತಕವೊಂದನ್ನು ಹೊರತಂದಿದೆ ಇದನ್ನು ಪ್ರೊ ಕೆ.ಆರ್.ಜಯಶ್ರೀ ಎನ್ನುವರು ಬರೆದಿದ್ದು ಇದರಲ್ಲಿ ಶ್ರೀನಿವಾಸಪುರದ ಸ್ವಾತಂತ್ರ್ಯ ಹೋರಾಟಗಾರ ಹಾಗು ಹೋರಾಟದ ಕುರಿತಾಗಿ ಸಮರ್ಪಕ ಮಾಹಿತಿ ಇಲ್ಲದೆ ಎಲ್ಲವನ್ನೂ ತಿರುಚಿ ಸುಳ್ಳುಗಳ ಸರಮಾಲೆಯನ್ನು ಬರೆದು ಹೋರಾಟಗಾರರನ್ನು ಅಪಮಾನ ಮಾಡಿದ್ದಾರೆ ಎಂದು ಸರ್ವತಾ ತೀವ್ರ ವಿರೋಧ ವ್ಯಕ್ತವಾಗಿದೆ.ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಚಂದ್ರಯ್ಯಶೆಟ್ಟಿಯವರ ಪತ್ನಿ ವನಜಾಕ್ಷಮ್ಮ ಈ ಬಗ್ಗೆ ಹೇಳಿಕೆ ನೀಡಿ ಭಾರತ ಸ್ವಾತಂತ್ರ್ಯ ಗೊಂಡು 75 ವರ್ಷಗಳು ತುಂಬಿದ್ದು ಅಮೃತ ಮಹೋತ್ಸವ ಆಚರಿಸುತ್ತಿರುವ ಕರ್ನಾಟಕ ಸರ್ಕಾರ ಈ…
ಶ್ರೀನಿವಾಸಪುರ: ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಪುನರ್ ನಿರ್ಮಾಣ ಮಾಡಲಾಗಿರುವ ಭವ್ಯ ದೇಗುಲ ಶ್ರೀ ಕೋದಂಡರಾಮ ದೇವರ ದೇವಾಲಯ ಈ ತಿಂಗಳು ಮೂರು ದಿನಗಳ ಕಾಲ ನಡೆಯುವ ವಿಮಾನಗೋಪುರ,ಸಂಪ್ರೋಕ್ಷಣ ಹಾಗು ಕುಂಬಾಭೀಷೇಕ ಪೂಜಾ ಕಾರ್ಯಕ್ರಮಗಳ ಮೂಲಕ ಲೋಕಾರ್ಪಣೆಯಾಗಲಿದೆ. ಮೇ 20 ರಂದು ಪಂಚಮಿ ತಿಥಿಯಂದು ಸಂಜೆ 5 ಗಂಟೆಗೆ ದೇವತಾ ಪ್ರಾರ್ಥನೆ ವಿಶ್ವಸೇಕ್ಸನ ಪೂಜಾ ಶುದ್ದ ಪುಣ್ಯಾಹ, ಅಂಕುರ್ಪಾಣೆ ವಾಸ್ತುಹೋಮ ಮೂಲಕ ಪ್ರಾರಂಭವಾಗುವ ಪೂಜಾ ಕಾರ್ಯಕ್ರಮಗಳು ಮೇ 21 ರಂದು ಶನಿವಾರ ಅಕ್ಲ್ಮಶ ಹೋಮ ದಾದಾದಿ ಹೋಮ ಸರ್ವ ದೈತ್ಯಹೋಮ ಅಷ್ಟಬಂಧನ ನಡೆಯಲಿದ್ದು,ಸುಂದರವಾಗಿ ರೂಪಗೊಂಡಿರುವ ಪುರಾತನ ಮೂಲದೇವರು ಶ್ರೀ ಲಕ್ಷ್ಮಣ ಸಮೇತ ಶ್ರೀ ಸೀತಾ ಶ್ರೀ ಕೋದಂಡ ರಾಮರ ವಿಗ್ರಹಗಳಿಗೆ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರತ್ನನ್ಯಾಸ ಅಷ್ಟಬಂಧನ ಸಂಜೆ ವಿಮಾನ ಗೋಪುರದ ಮೇಲೆ ಕಳಸ ಸ್ಥಾಪನೆ ಶಯ್ಯಾಧಿವಾಸ ಹೌತ್ರಪ್ರಸಂಶ ಮಹಾಶಾಂತಿ ಜಪ್ಯ ನಡೆಯಲಿದ್ದು ಮೇ 22 ರಂದು ಭಾನುವಾರ ಮೂಲದೇವರಿಗೆ ಪಂಚಾಮೃತ ಅಭಿಷೇಕ ಹಾಗು ಚತುರ್ದಶ ಮಹಾಶಾಂತಿ ಸ್ಥಿರಬಿಂಬ ಪ್ರತಿಷ್ಠಾಪನೆ, ಹಾಗು ಬೆಳಿಗ್ಗೆ…
ಚೆನ್ನೈ:ಬಸ್ ಟಿಕೆಟ್ ಪಡೆಯುವಂತೆ ಹೇಳಿದ ಬಸ್ ಕಂಡೆಕ್ಟರ್ ನನ್ನು ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕಂಡೆಕ್ಟರ್ ನನ್ನು ಬಸ್ ನಿಂದ ಹೊರಗಡೆಗೆ ತಳ್ಳಿ ಸಾಯಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿರುತ್ತದೆ.ತಮಿಳುನಾಡಿನ ಕೊಯಮತ್ತೂರು ನಿಂದ ವಿಲ್ಲಿಪುರಂ ಗೆ ಶನಿವಾರ ಬೆಳಗಿನ ಜಾವದಲ್ಲಿ ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹೊರಟಿದ್ದ ಸಾರಿಗೆ ಬಸ್ಸಿನಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಹತ್ತಿದ್ದಾನೆ ಬಸ್ ಕಂಡಕ್ಟರ್ ಪ್ರಯಾಣಿಕರಿಗೆ ಟಿಕೆಟ್ ನೀಡುತ್ತ ಪಾನಮತ್ತ ವ್ಯಕ್ತಿಗೆ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದು ಇದರಿಂದ ಕುಪಿತಗೊಂಡ ಕುಡುಕ ವ್ಯಕ್ತಿ ಕಂಡೆಕ್ಟರ್ ಜೊತೆ ಜಗಳ ತಗೆದಿದ್ದಾನೆ ಇದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ತಳ್ಳಾಟ ನೂಕಾಟಗಳು ನಡೆದಿದೆ ಈ ಸಂದರ್ಭದಲ್ಲಿ ಕುಡುಕ ಮುರುಗ ಕಂಡೆಕ್ಟರ್ ನನ್ನು ಬಸ್ಸಿನಿಂದ ತಳ್ಳಿ ಪರಾರಿಯಾಗಿದ್ದಾನೆ .ಬಸ್ಸಿನಿಂದ ಕೆಳಗೆ ಬಿದ್ದ ಕಂಡಕ್ಟರ್ ಪೆರುಮಾಳ್ ತಲೆಗೆ ತೀವ್ರ ಪೆಟ್ಟಾಗಿ ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮೇಲ್ಮರುವತ್ತೂರಿನ ಖಾಸಗಿ ಆಸ್ಪತ್ರೆಗೆ ಸೇಎಇಸಿದ್ದಾರೆ ಆದರೂ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುತ್ತಾನೆ. ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಕುಡುಕ ಮುರುಗನ್ ನನ್ನು…
ಶ್ರೀನಿವಾಸಪುರ: ಶ್ರೀನಿವಾಸಪುರ ಕೇಂದ್ರವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾವು ಬೆಳಯುವ ಶ್ರೀನಿವಾಸಪುರದಲ್ಲಿ ಪ್ರಕೃತಿ ವಿಕೋಪದಿಂದ ಮಾವು ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದಾರೆ ಈ ಬಗ್ಗೆ ನಾನು ಮಾವಿನ ತೋಟಗಳಿಗೆ ಬೇಟಿ ನೀಡಿ ನಷ್ಟಕ್ಕೆ ಒಳಗಾಗಿರುವುದನ್ನು ಖುದ್ದು ಪರಿಶೀಲಿಸಿದ್ದೇನೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.ಅವರು ಪ್ರತಿಕಾಗೋಷ್ಟಿ ನಡೆಸಿ ಮಾತನಾಡಿ ಈ ವರ್ಷ ಮಾವು ಆರಂಭದಿಂದಲೆ ಪ್ರಾಕೃತಿಕ ಅವಕೃಪೆಗೆ ಒಳಗಾಗಿ ಶೇ30% ರಷ್ಟು ಮಾತ್ರ ಫಸಲು ಬಂದಿತ್ತು ಅದು ಸಹ 3-4 ದಿನಗಳಿಂದ ಬೀಸುತ್ತಿರುವ ಗಾಳಿ ಆಲಿಕಲ್ಲು ಮಳೆಯಿಂದಾಗಿ ಅರ್ದ ಫಸಲು ನಷ್ಟಕ್ಕೆ ಒಳಗಾಗಿದೆ ಇದರಿಂದ ಮಾವಿನ ಬೆಳೆಗಾರರು ಸಂಕಷ್ಟಲ್ಲಿ ಇದ್ದಾರೆ .ಅವರಿಗೆ ಎನ್‌ಡಿಆರ್‌ಎಫ್,ಎಸ್‌ಡಿಆರ್‌ಎಫ್ ಅಡಿಯಲ್ಲಿ ಪರಿಹಾರ ಕೊಟ್ಟರೆ ಅವರಿಗೆ ರೈತರಿಗೆ ಏನು ಪ್ರಯೋಜನವಾಗುವುದಿಲ್ಲ ಇದಕ್ಕೆ ಭಾರತೀಯ ಜನತಾ ಪಕ್ಷದ ಸರ್ಕಾರ ವಿಶೇಷವಾಗಿ ರೈತರ ಪರ ಕಾಳಜಿ ವಹಿಸಿ ಕಳೆದ ವರ್ಷ ಎನ್‌ಡಿಆರ್‌ಎಫ್‌ನ ಗೈಡಲೈನ್ಸ್ ಮೀರಿ ಹೆಕ್ಟೇರ್‌ಗೆ 18ಸಾವಿರ ರೂಪಾಯಿಗಳನ್ನು ಇತರೆ ಬೆಳೆ ನಾಶದ ಸಂದರ್ಭದಲ್ಲಿ ನೀಡಿತ್ತು ಅದರಂತೆ ಮಾವಿನ ಬೆಳೆಗಾರರರು ಬಿಜೆಪಿ…
ಶ್ರೀನಿವಾಸಪುರ: ಸೋಮವಾರ ರಾತ್ರಿ ಬೀಸಿದ ರಣ ರಕ್ಕಸ ಬಿರುಗಾಳಿ ಮತ್ತು ಆಲಿ ಕಲ್ಲು ಮಳೆಗೆ ನೂರಾರು ಎಕರೆಯಲ್ಲಿನ ಮಾವಿನ ಫಸಲು ಟನ್ ಗಟ್ಟಲೆ ನೆಲಕ್ಕೆ ಉದರಿ ಬಿದ್ದಿದೆ.ತಾಲೂಕಿನಲ್ಲಿ ಸುಮಾರು ಸಾವಿರದ ನೂರ ಅರವತ್ತು ಹೆಕ್ಟೇರ್ ಪ್ರದೇಶದಲ್ಲಿ ಜೀವನಾಡಿ ಮಾವು ನೆಲದ ಪಾಲಾಗಿದ್ದರೆ ಹತ್ತು ಹೆಕ್ಟೇರ್ ಪ್ರದೇಶದಲ್ಲಿ ಟಮ್ಯಾಟೋ ಹಾಗು ಇತರೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಕೆ ಅಧಿಕಾರಿಗಳು ಅಂದಾಜಿಸಿರುತ್ತಾರೆ.ಈ ಬಾರಿ ಕಡಿಮೆಯಂದರೆ ಕಡಿಮೆ ಫಸಲು ಬಿಟ್ಟಿದ್ದು ಅಂದಾಜು ಶೇಖಡವಾರು 20 ರಿಂದ 30 ಮಾತ್ರ ಫಸಲು ಬಂದಿತ್ತು ಕಳೆದ 3-4 ದಿನಗಳ ಹಿಂದೆ ಬೀಸಿದ ಗಾಳಿ ಮಳೆಯಿಂದಾಗಿ ಕಸಬಾ ಹೋಬಳಿಯ ಬಹುತೇಕ ಭಾಗದಲ್ಲಿ ಮಾವು ಫಸಲು, ಟಮ್ಯಾಟೋ ನೆಲದ ಪಾಲಾಗಿದ್ದರೆ ನಿನ್ನೆ ರಾತ್ರಿ ಬೀಸಿದ ಆರ್ಭಟದ ಬಿರುಗಾಳಿ ಮಳೆಯಿಂದ ತಾಲೂಕಿನ ರೋಣೂರು,ನೆಲವಂಕಿ,ಯಲ್ದೂರು ಹೋಬಳಿಗಳಲ್ಲಿ ಮಾವಿನ ಫಸಲು ಧರೆಗೆ ಬಿದ್ದಿದೆ. ಪಕ್ವವ ಗೊಂಡು ಕೊಯ್ಲು ಹಂತದಲ್ಲಿದ್ದ ಮಾವಿನ ಕಾಯಿಗಳು ಗಾಯಗೊಂಡಿವೆ.ಯಲ್ದೂರು ಹೋಬಳಿಯ ಅರಕೇರಿ ಗ್ರಾಮದಲ್ಲಿ ರಣರಕ್ಕಸ ಬಿರುಗಾಳಿಗೆ ಮಾವಿನ ತೋಪಿನಲ್ಲಿ…
ಶ್ರೀನಿವಾಸಪುರ:ಕಲ್ಲೂರಿನ ಗ್ರಾಮದೇವತೆ ಚೌಡೇಶ್ವರಿದೇವಿ ದರ್ಶನ ಪಡೆದು ಪುನೀತನಾದೆ ಅಮ್ಮನ ದರ್ಶನದಿಂದ ನೆಮ್ಮದಿ ಸಿಕ್ಕಿದಂತಾಗಿದೆ ಇದು ನನ್ನ ಪುಣ್ಯ ಎಂದು ತೋಟಗಾರಿಕೆ ಹಾಗು ಕೋಲಾರ ಜಿಲ್ಲೆ ಉಸ್ತವಾರಿ ಸಚಿವ ಮುನಿರತ್ನ ಹೇಳಿದರು ಅವರು ತಾಲೂಕಿನ ಕಸಬಾ ಹೋಬಳಿ ಕಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿ ನವೀಕರಣವಾಗುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬೇಕಾದ ರಸ್ತೆ, ಹೈಮಾಸ್ಕ್ ಲೈಟ್ ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.ಬೆಂಗಳೂರಿನಲ್ಲಿ ಖ್ಯಾತರಾಗಿರುವ ಎಂಡೋಕ್ರೈನಾಲಜಿ ತಜ್ಞ ವೈದ್ಯ ಕಲ್ಲೂರು ಮೂಲದ ಡಾ.ಸೋಮಶೇಖರರೆಡ್ಡಿ ನಮ್ಮ ಕುಟುಂಬಕ್ಕೆ ಆಪ್ತರು ಅವರು ನೀಡಿದ ಆಹ್ವಾನದ ಮೇರೆಗೆ ಇಂದು ಗ್ರಾಮಕ್ಕೆ ಬೇಟಿ ನೀಡಿದ್ದೇನೆ ಎಂದರು.ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರನ್ನು ಗೌರವಿಸಿದರು. ತಹಸೀಲ್ದಾರ್ ಶರೀನ್‌ತಾಜ್,ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಸಚಿವರ ಆಪ್ತ ಡಾ.ಸೋಮಶೇಖರರೆಡ್ಡಿ,ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್‌ರೆಡ್ಡಿ, ಮುಖಂಡರಾದ ಲಕ್ಷ್ಮಣಗೌಡ,ರಾಮಾಂಜಿ,ರೋಣೂರುಚಂದ್ರು, ಎ.ವೆಂಕಟರೆಡ್ಡಿ, ಕೆ.ಕೆ.ಮಂಜು, ನಿವೃತ್ತ ಉಪನ್ಯಾಸಕ ವಿಚೌಡರೆಡ್ಡಿ ಚಂದ್ರಶೇಖರ್, ಸೀತಾರಾಮರೆಡ್ಡಿ,ಫಾರೆಸ್ಟರ್‌ಅಶ್ವತ್ಥರೆಡ್ಡಿ ನಾರಾಯಣಸ್ವಾಮಿ, ರತ್ನಪ್ಪ, ರಾಮಕೃಷ್ಣಾರೆಡ್ಡಿ ಮುಂತಾದವರು ಇದ್ದರು.
ನ್ಯೂಜ್ ಡೆಸ್ಕ್:ಬಂಡೆಗಳ ನಾಡು ಒಣಭೂಮಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿ ಬೆಟ್ಟಗಳಿಂದ ಹರಿದು ಹೋಗಲಿದ್ದ ನೀರಿಗೆ ಸುಮಾರು ಒಂದು ಹೆಕ್ಟೇರ್ ಪ್ರದೇಶದಲ್ಲಿ ವಿಶಾಲ ಕೆರೆ ನಿರ್ಮಾಣಕ್ಕೆ ಶಾಸಕ ರಮೇಶ್ ಕುಮಾರ್ ಗುದ್ದಲಿ ಪೂಜೆ ಮಾಡಿದ್ದಾರೆನದಿ ಮೂಲಗಳಿಲ್ಲದ ಈ ಪ್ರದೇಶ ಮಳೆಯಾಶ್ರಿತ ನೀರನ್ನು ನಂಬಿದ್ದ ಜನರು ಇರುವಂತಹದು.ಶ್ರೀನಿವಾಸಪುರ ತಾಲೂಕಿನ ಕಟ್ಟ ಕಡೆಯ ಗ್ರಾಮವಾಗಿರುವ ರಾಯಲ್ಪಾಡು ಹೋಬಳಿಯ ಮೂಲಗೊಲ್ಲಪಲ್ಲಿ ಎನ್ನುವಂತ ಕುಗ್ರಾಮದಲ್ಲಿ ಸಣ್ಣದೊಂದು ಕೆರೆ ಇತ್ತು ಅದು ಹೂಳು ತುಂಬಿದ ಹಿನ್ನಲೆಯಲ್ಲಿ ನೀರು ನಿಲ್ಲುವುದಕ್ಕೆ ಯಾವುದೇ ಇತರೆ ವ್ಯವಸ್ಥೆ ಇರಲಿಲ್ಲ ಸುತ್ತ-ಮುತ್ತಲೂ ಬೆಟ್ಟಗುಡ್ಡಗಳಿದ್ದರೂ,ಮಳೆಯಾದರೆ ನೀರು ಆಂಧ್ರಕ್ಕೆ ಹರಿದು ಹೋಗುತ್ತದೆ. ಹೀಗಾಗಿ ಗ್ರಾಮದ ಜನರು ನೀರಾವರಿಗಾಗಿ ಬೋರ್‍ವೆಲ್‍ಗಳನ್ನ ಅವಲಂಬಿಸಿದ್ದರು. ಬೇಸಿಗೆಯಲ್ಲಿ ಬೋರ್‍ವೆಲ್ ಕೈ ಕೊಡುತ್ತಿದ್ದು, ಕೃಷಿ ಚಟುವಟಿಕೆ ನಡೆಸೋದು ಕಷ್ಟಕರವಾದಂತ ಪರಿಸ್ಥಿತಿ ಇದೆ. ಹೀಗಾಗಿ ಇಲ್ಲೊಂದು ಕೆರೆ ನಿರ್ಮಾಣ ಮಾಡಿಕೊಡಬೇಕು ಎಂದು ಗ್ರಾಮದ ಕೆಲ ಯುವಕರು ಶಾಸಕ ರಮೇಶ್ ಕುಮಾರ್ ಬಳಿ ಮನವಿ ಸಲ್ಲಿಸಿದ್ದರು ಅದರಂತೆ ಅವರು 2020 ರ ಅಕ್ಟೋಬರ್ ತಿಂಗಳಲ್ಲಿ ಈ ಬಗ್ಗೆ ಅಧ್ಯಯನ…