ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲೂಕಿನ ಪ್ರಧಾನಿ ಮೋದಿ ಅಭಿಮಾನಿಯೊಬ್ಬ ತನ್ನ ಹೊಸ ಮನೆಗೆ ಶ್ರೀ ನರೇಂದ್ರ ಮೋದಿ ನಿಲಯ ಅಂತ ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ. ನ್ಯೂಜ್ ಡೆಸ್ಕ್:ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಷ್ಟೇ ಅಲ್ಲ,ವಿಶ್ವಾದ್ಯಂತ ಜನಪ್ರಿಯ ನಾಯಕ ಎಂದು ಗುರುತಿಸಲಾಗಿದೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದಿರುವ ಮೋದಿಯನ್ನು ಭಾರತದ ಜನತೆ ಸ್ಥಳೀಯ ರಾಜಕಾರಣದಲ್ಲಿ ಬಿಜೆಪಿ ಅಭ್ಯರ್ಥಿಗಳು ಇಷ್ಟವಾಗದಿದ್ದರೂ ಮೋದಿಯೇ ಭಾರತದ ರಾಜಕೀಯ ಚಿಕ್ಕಾಣಿ ಹಿವಿದು ದೇಶದ ಆಡಳಿತ ನಡೆಸಬೇಕು ಎಂದು ವೋಟ್ ಮಾಡಿ ಗೆಲ್ಲಿಸುವ ಮನೋಭಾವ ಹೊಂದಿದ್ದಾರೆ.ರಾಜಕೀಯದ ಆಗಲ ಆಳ ಗೊತ್ತಿಲ್ಲದ ಜನಸಾಮಾನ್ಯರು. ಸೋಶಿಯಲ್ ಮೀಡಿಯಾಗಳಲ್ಲಿ ನರೇಂದ್ರ ಮೋದಿ ಪರವಾಗಿ ಮಾತನಾಡುತ್ತಾರೆ ಅಲ್ಲೂ ಮೋದಿಯದೆ ಹವಾ! ಕೋಟ್ಯಾಂತರ ಅಭಿಮಾನಿಗಳು, ಫಾಲೋವರ್ಸ್‌ಗಳು ಮೋದಿಯವರಿಗಿದ್ದಾರೆ. ಇದೀಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಮೋದಿ ಅಭಿಮಾನಿ ಗೌಡರ ಹಾಲೇಶ್ ಎಂಬುವರು ತಮ್ಮ ಹೊಸ ಮನೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಟ್ಟಿದ್ದಾರೆ. ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಹೊಸ ಮನೆ ನಿರ್ಮಾಣ ಮಾಡಿ, ಅದಕ್ಕೆ ‘ಶ್ರೀ ನರೇಂದ್ರ ಮೋದಿ ನಿಲಯ…
Author: admin
ಬಿಸಿಲ ಝಳದಿಂದಾಗಿ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿಗೆ ಹಾಹಾಕಾರದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದೆವೃದ್ಧರು,ಬಾಣಂತಿಯರು ಮತ್ತು ಮಕ್ಕಳ ಬಗ್ಗೆಯೂ ಕಾಳಜಿ ವಹಿಸುವುದು ಅವಶ್ಯಕ ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದ ಗಡಿಯಲ್ಲಿರುವ ರಾಯಲಸೀಮೆ ಪ್ರದೇಶ ಎಂದು ಗುರುತಿಸಿರುವ ಬಂಡೆಗಳ ನಾಡು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸೂರ್ಯ ಝಳುಪಿಸುತ್ತಿದ್ದಾನೆ ದಿನೆ ದಿನೆ ತಾಪಮಾನ ಏರಿಕೆಯಾಗುತ್ತಿದೆ ಇದರಿಂದ ಜನ ತತ್ತರಿಸಿದ್ದಾರೆ ವಿಶೇಷವಾಗಿ ನಾಲ್ಕೈದು ದಿನಗಳಿಂದ ಸೂರ್ಯನ ಪ್ರಖರತೆ ಏರಿಕೆಯಾಗುತ್ತಿದೆ ಮುಂಜಾನೆ ಸೂರ್ಯ ಹುಟ್ಟುತ್ತಲೆ ಧಗೆಯನ್ನು ಜೊತೆಗೆ ಕರೆತಂದಿದ್ದಾನೇನೋ ಎನ್ನುವಂತೆ ಶುಕ್ರವಾರದಿಂದ ಇಚಿಗೆ ಬೆಳಗಾನೆ ಸೂರ್ಯನ ಪ್ರಖರತೆ ಇರುತ್ತದೆ, ಮಧ್ಯಾನದ ಹೊತ್ತಿಗೆ ಸೂರ್ಯ ಭೂಮಿಗೆ ಬಂದಿದ್ದಾನೇನೊ ಎನ್ನುವಂತೆ ಭೂಮಿ ಕೆಂಡದಂತೆ ಸುಡುತ್ತಿದೆ ಮನೆಯ ಚಾವಣಿ ಕಾದ ಕಾವಲಿಯಾಗುತ್ತದೆ ಡಾಂಬರು ರಸ್ತೆಗಳು ಬಿಸಿಲ ತಾಪವನ್ನು ಉಗುಳುತ್ತಿವೆ.ಬಿಸಿಲ ಬೇಗೆಗೆ ಮೈತುಂಬಾ ಬೆವರು ಸುರಿಯುತ್ತಿದ್ದು ಬೇಗೆಯಿಂದ ಬೆಂದು ಹೋಗಿರುವ ಜನತೆ ಬಿಸಿಲಿನ ತಾಪದಿಂದಾಗಿ ಹೇಗಪ್ಪಾ ಕಾಲ ಕಳೆಯೋದು ಎನ್ನುತ್ತಾರೆ.ಮನೆಯಲ್ಲಿ ಕಚೇರಿಯಲ್ಲಿ ಕೂತವರ ತಲೆಯ ಮೇಲೆ ಫ್ಯಾನ್ ತಿರುಗುತ್ತಲೆ ಇರಬೇಕು ಇಲ್ಲ ಎಂದರೆ ಇಲ್ಲದ ಕಿರಿಕಿರಿ…
ಶ್ರೀನಿವಾಸಪುರ:- ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಶಾಶ್ವತ ನೀರಾವರಿ ಯೋಜನೆಗಳನ್ನು ಅದ್ಯತೆ ಮೇರೆಗೆ ಜಾರಿಗೆ ತರಲಾಗುವುದು ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ತಾಲೂಕಿಗೆ ಆಗಮಿಸುವ ಜನತಾಜಲಧಾರೆ ರಥ ಕಾರ್ಯಕ್ರಮದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಪಟ್ಟಣದಲ್ಲಿ ಬೃಹತ್ ಬಹಿರಂಗ ಸಭೆ ನಡೆಯಲಿದ್ದು ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆದಂತ ಅನ್ಯಾಯದ ಕುರಿತಾಗಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಜಾರಿಯಾದಂತ ನೀರಾವರಿ ಯೋಜನೆಗಳಿಂದ ಕರ್ನಾಟಕದಲ್ಲಿ ಆದ ಬದಲಾವಣೆ ಕುರಿತಾಗಿ ಪಕ್ಷದ ವರಿಷ್ಠರು ಸಭೆಯಲ್ಲಿ ಮಾತನಾಡಲಿದ್ದಾರೆ ಎಂದರು.ರಾಜ್ಯದ ವಿವಿಧ ನದಿಗಳ ನೀರನ್ನು ಹೊತ್ತು ಬರುವಂತ ಜನತಾಜಲಧಾರೆ ಪವಿತ್ರವಾದ ರಥ ಶ್ರೀನಿವಾಸಪುರಕ್ಕೆ ಈ ತಿಂಗಳ 25 ರಂದು ಆಗಮಿಸಲಿದ್ದು, ಅಂದು ಪಟ್ಟಣದಲ್ಲಿ ಬೃಹತ್ ಸಭೆ ನಡೆಯಲಿದೆ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪಕ್ಷದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ಸೇರಿದಂತೆ ಪ್ರಮುಖ ಮುಖಂಡರು ಆಗಮಿಸಲಿದ್ದಾರೆ ಜನತಾಜಲಧಾರೆ ರಥ ಪಟ್ಟಣದ ಮುಳಬಾಗಿಲು ವೃತ್ತಕ್ಕೆ ಆಗಮಿಸಲಿದ್ದು ಅಲ್ಲಿಂದ ಕನಕಮಂದಿರದ ಹತ್ತಿರ ಮೈಧಾನದ ಬಳಿ…
ಆರು ವಿಧಾನ ಸಭಾ ಕ್ಷೇತ್ರಗಳುಮೂರು ಕಂದಾಯ ವೃತ್ತಗಳುಮೂವತ್ತು ಮಂಡಲ ಕೇಂದ್ರಗಳು ಬಹುದಿನಗಳ ಬೇಡಿಕೆಯಾಗಿದ್ದ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಪುರಸ್ಕಾರ ನೀಡದ ಆಂಧ್ರದ ಜಗನ ಸರ್ಕಾರನ್ಯೂಜ್ ಡೆಸ್ಕ್: ಕರ್ನಾಟಕದ ಶ್ರೀನಿವಾಸಪುರ ತಾಲೂಕಿನ ಉತ್ತರ ಭಾಗಕ್ಕೆ ಇರುವ ರಾಯಲ್ಪಾಡು ಹೋಬಳಿಯ ರಾಯಲ್ಪಾಡು, ಗೌವನಿಪಲ್ಲಿ ಇತ್ತ ನೆಲವಂಕಿ ಹೋಬಳಿಯ ಪುಗೂರಕೋಟೆ ಹಾಗೇ ರೋಣೂರು ಹೋಬಳಿಯ ಸೋಮಯಾಜಲಹಳ್ಳಿ ಗಡಿಯಾಚೆ ಈ ಹಿಂದೆ ಆಂಧ್ರದ ಚಿತ್ತೂರು ಜಿಲ್ಲೆ ಗಡಿಪ್ರದೇಶವಾಗಿತ್ತು ಈಗ ಅಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ “ಅನ್ನಮಯ್ಯ ಜಿಲ್ಲೆ” ಗಡಿಭಾಗವಾಗಿದೆ. ಆಂಧ್ರಪ್ರದೇಶದಲ್ಲಿದ್ದ 13 ಜಿಲ್ಲೆಗಳನ್ನು ಪುನರ್ ವಿಂಗಡನೆ ಮಾಡಿರುವ ಆಂಧ್ರದ ಜಗನ್ ಸರ್ಕಾರ ದೊಡ್ಡ ಜಿಲ್ಲೆಗಳನ್ನು ವಿಂಗಡಿಸಿ ಒಟ್ಟು 26 ಜಿಲ್ಲೆಗಳನ್ನಾಗಿ ಮಾಡಿದೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಉತ್ತರ ಭಾಗದಲ್ಲಿದ್ದ ಚಿತ್ತೂರು ಜಿಲ್ಲೆಯ ಮದನಪಲ್ಲಿಯನ್ನು ಚಿತ್ತೂರು ಜಿಲ್ಲೆಯಿಂದ ಬಿಡುಗಡೆ ಮಾಡಿ ಕಡಪ ಜಿಲ್ಲೆಯಲ್ಲಿದ್ದ ರಾಜಂಪೇಟ, ಮತ್ತು ರಾಯಚೋಟಿ ಮೂರು ಕಂದಾಯ ವಿಭಾಗಗಳನ್ನೂ ಸೇರಿಸಿ ನೂತನವಾಗಿ “ಅನ್ನಮಯ್ಯ ಜಿಲ್ಲೆ” ರಚನೆಮಾಡಲಾಗಿದೆ. ಆರು ವಿಧಾನಸಭಾ ಕ್ಷೇತ್ರಗಳಾದ ರಾಯಚೂಟಿ, ರಾಂಜಪೇಟ, ರೈಲ್ವೆಕೋಡೂರು,…
ಟೋಕನ್‌ಗಳಿಗಾಗಿ ರಣ ಬಿಸಲಲ್ಲಿ ಒದ್ದಾಡಿದ ಜನತೆಕನಿಷ್ಠ ವ್ಯವಸ್ಥೆಗಳಿಲ್ಲದ ಟಿಟಿಡಿ ವಿರುದ್ದ ಜನತೆ ಆಕ್ರೋಶಆಂಧ್ರದ ರಣ ಬಿಸಿಲಿಗೆ ತತ್ತರಿಸಿ ಹೋದ ಜನತೆರಣ ಬಿಸಲಿಗೆ ಬಸವಳಿದ ವೃದ್ದರು ಮತ್ತು ಮಕ್ಕಳು ನ್ಯೂಜ್ ಡೆಸ್ಕ್:ತಿರುಮಲ ಬೆಟ್ಟ ಭಕ್ತರಿಂದ ಗಿಜಿಗುಡುತ್ತಿದೆ. ಸುಮಾರು ಎರಡು ವರ್ಷಗಳ ನಂತರ ವೈಕುಂಠಂ ಕ್ಯೂ ಕಾಂಪ್ಲೆಕ್ಸ್‌ನಲ್ಲಿನ ಕಂಪಾರ್ಟ್‌ಮೆಂಟ್‌ಗಳು ಏಕಾಏಕಿ ಭರ್ತಿಯಾಗಿ ಕ್ಯೂಲೈನ್‌ನಿಂದ ಹೊರಗೂ ಜಂಗುಳಿ ಉಂಟಾಗಿದೆ ತಿರುಮಲದ ಶ್ರೀವಾರಿ ದೇವಸ್ಥಾನದಿಂದ ಅಲಿಪಿರಿಯವರೆಗೂ ಯಾತ್ರಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಟಿಟಿಡಿ ಸೀಮಿತ ಸಂಖ್ಯೆಯ ಟಿಕೆಟ್‌ಗಳು ಮತ್ತು ಟೋಕನ್‌ಗಳನ್ನು ನೀಡುತ್ತಿದ್ದು ಮಾರ್ಚ್ 2020 ರಲ್ಲಿ ಲಾಕ್‌ಡೌನ್ ನಂತರ ಜೂನ್ 8 ರಿಂದ ಲಾಕ್ದೌನ್ ನಿಭಂದನೆಗಳಂತೆ ನಿಯಮಾವಳಿಗಳನ್ನು ರೂಪಿಸಲಾಗಿತ್ತು ಈ ವರ್ಷದ ಫೆಬ್ರವರಿ ಅಂತ್ಯದವರೆಗೆ ಕರೋನಾ ಪ್ರಕರಣಗಳಿಗೆ ಅನುಗುಣವಾಗಿ ದಿನಕ್ಕೆ 30 ರಿಂದ 40 ಸಾವಿರ ಟಿಕೆಟ್‌ಗಳನ್ನು ಮಾತ್ರ ನೀಡುತಿತ್ತು, ಕೋವಿಡ್ ಇಳಿಮುಖವಾದ ಹಿನ್ನಲೆಯಲ್ಲಿ ಮಾರ್ಚ್ ಮೊದಲ ವಾರದಿಂದ ತನ್ನ ಕ್ರಮೇಣ ದಿನಂ ಪ್ರತಿ 60 ರಿಂದ 70 ಸಾವಿರಕ್ಕೆ ಹೆಚ್ಚಿಸುತ್ತ ಬಂದಿದ್ದು ಸೋಮವಾರ ಮಧ್ಯರಾತ್ರಿಯಿಂದಲೇ ಶ್ರೀನಿವಾಸನನ್ನು ನೋಡಲು…
ಶ್ರೀನಿವಾಸಪುರ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಆಡಳಿತ ನಡೆಸಿದಂತ ಇಬ್ಬರು ಮುಖಂದರು ತಾಲ್ಲೂಕಿನ ಅಭಿವೃದ್ಧಿ ಮರೆತು ರಾಜಕೀಯ ಅಧಿಕಾರವನ್ನು ತಮ್ಮ ಸ್ವಂತ ಅನಕೂಲಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ವಿಧಾನಸಭಾ ಕ್ಷೇತ್ರದ ಮುಖಂಡ ಗುಂಜೂರು ಶ್ರೀನಿವಾಸ ರೆಡ್ಡಿ ಆರೋಪಿಸಿದರು.ಅವರು ಯಲ್ದೂರು ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು ತಮ್ಮ ಬಣಕ್ಕೆ ಸೇರ್ಪಡೆಯಾದ ಕಾರ್ಯಕರ್ತರನ್ನು ಬರಮಾಡಿಕೊಂಡು ಮಾತನಾಡಿ ಒಂದು ವರ್ಷದ ಅವಧಿಯಲ್ಲಿ ತಾಲ್ಲೂಕಿನಲ್ಲಿ ನಮ್ಮ ಸೇವಾ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ತಮ್ಮ ಬಣಕ್ಕೆ ಬೇರೆ ಬೇರೆ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಸೇರ್ಪಡೆಯಾಗುತ್ತಿದ್ದು ಇದು ತಾಲೂಕಿನ ರಾಜಕೀಯ ಧ್ರುವೀಕರಣಕ್ಕೆ ಮುನ್ಸೂಚನೆ ಎಂದರು.ಕ್ಷೇತ್ರದ ಅಭಿವೃದ್ಧಿಯೇ ನನ್ನ ಮುಖ್ಯ ಧ್ಯೇಯವಾಗಿಟ್ಟುಕೊಂಡು ತಾಲ್ಲೂಕಿನ ರಾಜಕೀಯಕ್ಕೆ ಬಂದಿರುವೆ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತೇ ಇಲ್ಲ, ತಾಲ್ಲೂಕಿನ ಜನತೆ ನೀಡಿದ ಅಧಿಕಾರವನ್ನು ದುರುಪಯೋಗ ಮಾಡಿಕೊಂಡವರನ್ನು ಈ ಚುನಾವಣೆಯಲ್ಲಿ ಬುದ್ದಿಕಲಿಸುವಂತೆ ಹೇಳಿದರು.ಸಮಾರಂಭದಲ್ಲಿ ಯಲ್ದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುನಿಯಪ್ಪ, ಮಾಜಿ ಉಪಾಧ್ಯಕ್ಷ ಆನಂದ್, ಮಾಜಿ…
ಶ್ರೀನಿವಾಸಪುರ:ತಾಲ್ಲೂಕಿನ ಪ್ರತಿ ಪಂಚಾಯಿತಿಗೊಂದು ತರಕಾರಿ, ಹೂವು, ಶೇಖರಿಸುವ ಶೀಥಲ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆ ರೂಪಿಸುತ್ತಿರುವುದಾಗಿ ಮತ್ತು ರೈತರ ಬೆಳೆಗಳನ್ನು ಕಾಪಾಡಲು ಉಗ್ರಾಣ ನಿರ್ಮಾಣ ಕುರಿತಾಗಿ ಸಂಬಂದಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸುವುದಾಗಿ ಶಾಸಕ ರಮೇಶ್ ಕುಮಾರ್ ಹೇಳಿದರು ಅವರು ತಾಲೂಕಿನ ನೆಲವಂಕಿ ಗ್ರಾಮ ಪಂಚಾಯಿತಿಯ ಜೋಡಿ ಕೊತ್ತಪಲ್ಲಿ ಗುಂದೇಡು ಗ್ರಾಮಗಳಲ್ಲಿ ವಿವಿದ ಅಭಿವೃದ್ದಿ ಕಾರ್ಯಗಳ ಪ್ರಾರಂಬೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ನಾವು ಮಾಡಿರುವ ಅಭಿವೃದ್ದಿ ಕಾರ್ಯಗಳೇ ನಮಗೆ ಶ್ರೀರಕ್ಷೆ ಎಂದ ಅವರು, ನಮ್ಮ ಭಾಗದ ರೈತರು ಬೆಳೆದಂತ ಬೆಳೆಗಳನ್ನು ಹೊರ ದೇಶಗಳಿಗೆ ರಪ್ತು ಮಾಡುವ ಉದ್ದೇಶದಿಂದ ನೂತನ ಯೋಜನೆ ಮುಂದಿನ ದಿನಗಳಲ್ಲಿ ರೂಪಿಸಲಾಗುವುದು ಹಾಗೆಯೇ ಪಟ್ಟಣದಲ್ಲಿಯೂ ಕೂಡ ಸುಸಜ್ಜಿತ ಉತ್ತಮ ಮಾರುಕಟ್ಟೆ ಮಾರಾಟ ಕೇಂದ್ರವನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದರು. ಮಾದರಿ ಗ್ರಾಮ ಪಂಚಾಯಿತಿ ನೆಲವಂಕಿತಾಲ್ಲೂಕಿನ ನೆಲವಂಕಿ ಪಂಚಾಯಿತಿಯಲ್ಲಿ ಕಸವಿಲೇವಾರಿ ಘಟಕವನ್ನು ಮಾದರಿಯಾಗಿ ಅಚ್ಚುಕಟ್ಟಾಗಿ ಮಾಡಿರುವುದು ಶ್ಲಾಘನೀಯ ಎಂದರು. ಪಂಚಾಯಿತಿಯಲ್ಲಿ ನಡೆದಿರುವಂತ ಅಭಿವೃದ್ದಿ ಕಾಮಗಾರಿಗಳಾದ…
ಶ್ರೀನಿವಾಸಪುರ:ಕಾಂಗ್ರೆಸ್ ಪಕ್ಷ ಮುಸ್ಲಿಂರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡದೆ ಕೆವಲ ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿಧಾನಪರಿಷತ್ ಮುಖ್ಯಸಚೇತಕ ವೈ.ಎ. ನಾರಾಯಣಸ್ವಾಮಿ ಆರೋಪಿಸಿದರು ಅವರು ತಮ್ಮ ಸ್ವಗ್ರಾಮ ಹೆಚ್ಚನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಆಯೋಜಿಸಿದ್ದ ಶ್ರೀ ಸೀತಾರಾಮ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದ ಅವರು ಗಂಗಾಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾದ ವಿವಿಧ ಸಮುದಾಯದ ಫಲಾನುಭವಿಗಳಿಗೆ ಆದೇಶ ಪತ್ರಗಳು ಮತ್ತು ಶ್ರಮ ಶಕ್ತಿಯೋಜನೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ನೇರ ಸಾಲ ವಿತರಣೆ ಮಾಡಿದ ಅವರು ಭಾರತೀಯ ಜನತಾ ಪಕ್ಷ ಯಾವುದೇ ಕಾರಣಕ್ಕೂ ಮುಸ್ಲಿಂ ವಿರೋಧಿ ಅಲ್ಲ ಎಂದು ಹೇಳಿದರು.ಎಲ್ಲಾ ಜಾತಿ ಧರ್ಮದ ಮಹಿಳೆಯರಿಗೆ ಅನಕೂಲ ಆಗಬೇಕು ಎಂದು ವಿಶೇಷವಾಗಿ ಮುಸ್ಲಿಂ ಮಹೆಳೆಯರು ಯೋಜನೆಯ ಪ್ರಯೋಜನ ಪಡೆಯಲು ಹತ್ತು ಸಾವಿರ ನೇರ ಸಾಲ ಯೋಜನೆಯನ್ನು ಪ್ರಧಾನಿ ಮೋದಿ ಜಾರಿಗೆ ತಂದಿರುವುದಾಗಿ ಹೇಳಿದರು.ಕೆಸಿ ವ್ಯಾಲಿ ಎರಡನೇಯ ಹಂತಕೆಸಿ ವ್ಯಾಲಿ ಯೋಜನೆಯ ಎರಡನೆಯ ಹಂತಕ್ಕೆ ಸರ್ಕಾರ ನಾಲ್ಕನೂರ ಐವತ್ತು ಕೋಟಿ ಹಣ ಬೀಡುಗಡೆ ಮಾಡಲಾಗಿದ್ದು ಈ ಯೋಜನೆ ಅಡಿಯಲ್ಲಿ ಮುದುವಾಡಿ ಕೆರೆಯಿಂದ ಹೆಚ್ಚನಳ್ಳಿ…
ಶ್ರೀನಿವಾಸಪುರ: ತಾಲೂಕಿನಲ್ಲಿ ಐತಿಹಾಸಿಕ ವೈಷ್ಣವ ಪುಣ್ಯಕ್ಷೇತ್ರ ಶ್ರೀ ಕೋದಂಡರಾಮ ದೇವರು ನೆಲೆನಿಂತಿರುವ ಯಲ್ದೂರಿನಲ್ಲಿ ಗ್ರಾಮದ ಜನತೆ ಅದ್ದೂರಿಯಾಗಿ ರಾಮನವಮಿ ಆಚರಿಸಿರುತ್ತಾರೆ. ಸಾರ್ವಜನಿಕವಾಗಿ ಹಂಚಲು ಗ್ರಾಮದಾದ್ಯಂತ ಹಮ್ಮಿಕೊಂಡಿದ್ದ ಪಾನಕ ಹೆಸರಬೆಳೆ ಸೇವೆ ಕಾಣಸಿಗುತಿತ್ತು. ಸಂಜೆ ವೆಳೆಗೆ ಇದೆ ಪ್ರಥಮಬಾರಿಗೆ ಯುವಕರ ದಂಡು ರಾಮೋತ್ಸವ ಆಚರಿಸಲು ಮುಂದಾಗಿ ಇಡಿ ಗ್ರಾಮದಲ್ಲಿ ಕೆಸರಿ ಧ್ವಜಗಳಿಂದ ಕಟ್ಟಲಾಗಿತ್ತು, ದೇವಾಲಯಕ್ಕೂ ಕೆಸರಿ ಬಣ್ಣದ ಬಾವುಟಗಳಿಂದ ಅಲಂಕರಿಸಿ,ಕೆಸರಿ ಶಾಲುಗಳನ್ನು ಧರಿಸಿದ್ದ ಯುವಕರು ವಿಶೇಷವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಶ್ರೀ ರಾಮನ ಪಠ ಸ್ಥಾಪಿಸಿ ಗ್ರಾಮದಲ್ಲಿ ಡಿಜೆ ಹಾಡುಗಳೊಂದಿಗೆ ಶೋಭಾ ಯಾತ್ರೆ ಮಾಡಿರುತ್ತಾರೆ.
ಶ್ರೀನಿವಾಸಪುರ : ತಾಲೂಕಿನ ಉತ್ತರ ಭಾಗದ ವಾಣಿಜ್ಯಪೇಟೆ ಎಂದು ಖ್ಯಾತಿ ಪಡೆದು ಪ್ರತಿಷ್ಟಿತ ಪಂಚಾಯಿತಿಯಾಗಿ ಗುರುತಿಸಿಕೊಂಡಿರುವ ಗೌನಿಪಲ್ಲಿ ಗ್ರಾ.ಮಪಂಚಾಯಿತಿ ಎರಡನೆಯ ಅವಧಿಯ ಅಧ್ಯಕ್ಷ ಗಾದಿ ಚುನಾವಣೆಯಲ್ಲಿ ಜೆಡಿಎಸ್‌ನ ಬೆಂಬಲಿತ ಅಭ್ಯರ್ಥಿ ಶೇಷಾದ್ರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.23 ಸದಸ್ಯರ ಗೌನಿಪಲ್ಲಿ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 14 ಸದಸ್ಯರು, ಕಾಂಗ್ರೆಸ್ ಬೆಂಬಲಿತ 9 ಸದಸ್ಯರಿದ್ದು, ಜೆಡಿಎಸ್ ಅಧಿಕಾರದಲ್ಲಿದ್ದ ಪಂಚಾಯಿತಿಯಲ್ಲಿ ಹಿಂದಿನ ಅಧ್ಯಕ್ಷರ ರಾಜಿನಾಮೆ ಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಶೇಷಾದ್ರಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಎಂ ಮುನಿರಾಜು ಸ್ಪರ್ದಿಸಿದ್ದರು ಜೆಡಿಎಸ್ ಶೇಷಾದ್ರಿ 14 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.ಚುನಾವಣಾ ಅಧಿಕಾರಿಯಾಗಿ ಜಿಲ್ಲಾಪಂಚಾಯಿತಿ ಇಂಜನಿಯರ್ ವಿಭಾಗದ ಎಇಇ ನಾರಾಯಣಸ್ವಾಮಿ ಕಾರ್ಯನಿರ್ವಹಿಸಿದ್ದು ಪಿಡಿಒ ಗೌಸ್ ಪಾಷ ಇದ್ದರು.ನೂತನ ಅಧ್ಯಕ್ಷನಿಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿಯಿಂದ ಶುಭಾಶಯ.ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಸಿ ಜನಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ನೀಡಿ ಜನಸ್ನೇಹಿ ಅಡಳಿತ…