ಕಾಶ್ಮೀರಿ ಪಂಡಿತರು ಅನುಭವಿಸಿದ ನರಕಯಾತನೆಯ ಕಥೆ ಆಧಾರಿತ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ದೊಡ್ಡ ಯಶಸ್ಸು ಕಂಡಿದೆ ವಿಮರ್ಶಕರ ಟೀಕೆಗಳ ಹೊರತಾಗಿಯೂ, ಬಹುಪಾಲು ಚಲನಚಿತ್ರ ಗಣ್ಯರು ಮತ್ತು ಪ್ರೇಕ್ಷಕರು ಚಿತ್ರವನ್ನು ನಿರ್ಮಿಸಿದ ನಿರ್ದೇಶಕ ಮತ್ತು ನಿರ್ಮಾಪಕರ ಬಗ್ಗೆ ಪ್ರಶಂಸೆಯ ಸುರಿಮಳೆಗೈದಿರುತ್ತಾರೆ. ಈ ನಿಟ್ಟಿನಲ್ಲಿ ತೆಲಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನಿರ್ಮಾಪಕರನ್ನು ಹೊಗಳಿದ್ದಾರೆ. ಪ್ರಮುಖ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು 1990 ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾತ್ಮಕ ದಂಗೆ, ಗಲಭೆಗಳು ಮತ್ತು ಕಾಶ್ಮೀರಿ ಹಿಂದೂಗಳ ಮೇಲಿನ ದಾಳಿ ದೌರ್ಜನ್ಯಗಳ ಕುರಿತಾಗಿ “ದಿ ಕಾಶ್ಮೀರ್ ಫೈಲ್ಸ್” ಎಂಬ ಚಲನಚಿತ್ರ ನಿರ್ಮಾಣ ಮಾಡಿದ್ದು ಇದರ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರು ನಿರ್ದೇಶಕ ಹರೀಶ್ ಶಂಕರ್ ಜೊತೆಗೂಡಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿದ್ದರು ಈ ಸಂದರ್ಭದಲ್ಲಿ ಚಿತ್ರದ ಅದ್ಧೂರಿ ಯಶಸ್ಸಿಗೆ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಅವರನ್ನು ಪವನ್ ಕಲ್ಯಾಣ್ ಅಭಿನಂದಿಸಿದ್ದಾರೆ.
Author: admin
ಶ್ರೀನಿವಾಸಪುರ:-ಶ್ರೀನಿವಾಸಪುರದಲ್ಲಿ ಮತ್ತೇ ಎಸ್.ಎಲ್.ಎನ್ ಮಂಜನಾಥ್ ಯುಗಾದಿ ಹಬ್ಬದ ಪ್ರಚಾರ ಜೋರಾಗಿದೆ,ಪಟ್ಟಣ ಸೇರಿ ತಾಲೂಕಿನಾದ್ಯಂತ ಎಸ್.ಎಲ್.ಎನ್ ಮಂಜು ಯುಗಾದಿ ಶುಭಾಶಯದ ಫ್ಲೇಕ್ಸ್ ಗಳು ರಾಜಾಜಿಸುತ್ತಿವೆ ಈ ಪ್ರಚಾರ ಕೇವಲ ಫ್ಲೇಕ್ಸ್ ಸೀಮಿತವಾಗುತ್ತದ ಅಥಾವ ಮುಂದಿನ ಚುನಾವಣೆಗೆ ತಾಲೀಮು ನಡೆಸುತ್ತಾರ ಶೋಕಿಗೆ ಬ್ಯಾನರ್ ಹಾಕಿಸಿಕೊಂಡು ಸುಮ್ಮನಾಗುತ್ತಾರ ಎಂಬುದು ಸಾರ್ವಜನಿಕರ ಪ್ರಶ್ನೆ?ಈ ಹಿಂದೆ ಎಸ್.ಎಲ್.ಎನ್ ಮಂಜನಾಥ್ ಬಿಜೆಪಿ ಬ್ಯಾನರ್ ಹಿಡಿದು ಶ್ರೀನಿವಾಸಪುರ ರಾಜಕೀಯ ಅಖಾಡಕ್ಕೆ ಬಂದಾಗ ದೊಡ್ಡಮಟ್ಟದಲ್ಲಿ ಅವರ ಹಿಂದೆ ಯುವಕರ ದಂಡು ಒಡಾಡುತಿತ್ತು ಮಂಜನಾಥ್ ತಾಲೂಕಿನಾದ್ಯಂತ ಒಡಾಡಿದ ಸ್ಪೀಡಿನ ವೇಗ ನೋಡಿದ ಜನತೆ ಮುಂದಿನ ದಿನಗಳಲ್ಲಿ ಹೊಸ ಅಲೆಯ ರಾಜಕೀಯ ಮುನ್ನುಡಿ ಎಂಬ ಮಾತು ಸಹ ಆಡಿದರು ಆದರೆ ಬಿಜೆಪಿ ಡಾ.ವೇಣುಗೋಪಾಲ್ ಅವರಿಗೆ ಮಣೆ ಹಾಕಿದಾಗ ಒಂದಷ್ಟು ಯುವ ಸಮುದಾಯ ಎಸ್.ಎಲ್.ಎನ್ ಮಂಜನಾಥ್ ಪರವಾಗಿ ಬಿಜೆಪಿ ಮುಖಂಡರ ವಾದ ಮಂಡಿಸಿದರಾದರೂ ಎಲ್ಲಾ ಲೆಕ್ಕಾಚಾರದಲ್ಲೂ ಬಿಜೆಪಿ ಮುಖಂಡರ ಅಗ್ರಸಿವ್ ನೆಸ್ ನಿಂದ ಯುವಕರು ತಣ್ಣಗಾದರೂ ಆದರೂ ಇಂದಿಗೂ ಯುವ ಸಮುದಾಯ ಎಸ್.ಎಲ್.ಎನ್ ಮಂಜನಾಥ್ ಸಂಪರ್ಕದಲ್ಲಿದ್ದಾರೆ. ಈ…
ಶ್ರೀನಿವಾಸಪುರ:- ಯುಗಾದಿ ಹೊಸವರ್ಷದ ಪ್ರಯುಕ್ತ ಪಟ್ಟಣದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ಸಮೇತ ಊರ ದೇವರುಗಳ ಜನಜಾತ್ರೆ ಉತ್ಸವ ಅದ್ದೂರಿಯಾಗಿ ನಡೆಸಲಾಯಿತು. ಇದರ ಅಂಗವಾಗಿ ಇದೇ ಪ್ರಥಮ ಬಾರಿಗೆ ಎನ್ನುವಂತೆ ಕರಗ ಮಹೋತ್ಸವ ಸಹ ಆಯೋಜಿಸಲಾಗಿತ್ತು. ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ,ಶ್ರೀ ಲಕ್ಷ್ಮೀನೃಸಿಂಹ, ಶ್ರೀ ಲಕ್ಷ್ಮೀನಾರಾಯಣ, ಶ್ರೀ ಉಗ್ರ ನೃಸಿಂಹ, ಶ್ರೀ ನಗರೇಶ್ವರ,ಶ್ರೀ ವಾಸವಿ ಕನ್ಯಾಕಾ ಪರಮೇಶ್ವರಿ,ಶ್ರೀ ತಿರುಮಲರಾಯ,ಶ್ರೀ ಗಂಗಮ್ಮ,ಗಟ್ಟಹಳ್ಳಿ ಶ್ರೀ ನಡೀರಮ್ಮ, ಗುಂಡಮನತ್ತ ಶ್ರೀ ಅಷ್ಟಮೂರ್ತಮ್ಮ, ಶ್ರೀ ರೇಣುಕಾಎಲ್ಲಮ್ಮ,ಶ್ರೀ ವರದಬಾಲಂಜನೇಯ ದೇವಾಲಯ, ಶ್ರೀಪೀಲೇಕಮ್ಮ,ಶ್ರೀ ಸಪ್ತಮಾತೃಕೇಯರ ದೇವರುಗಳ ಹೂವಿನಿಂದ ಅಲಂಕೃತಗೊಂಡ ಬೆಳ್ಳಿ ಪಲ್ಲಕ್ಕಿ ರಥಗಳ ಶೋಭಾ ಯಾತ್ರೆ ಯುಗಾದಿ ಹಬ್ಬದ ದಿನ ಸಂಜೆ ಪ್ರಾರಂಭಗೊಂಡು ಪಟ್ಟಣದಾದ್ಯಂತ ಸಂಚರಿಸಿ ಮಾರನೆ ದಿನ ಬೆಳಗಿನ ಜಾವದವರಿಗೂ ನಡೆಯಿತು. ಉತ್ಸವಗಳ ಜೊತೆಗೆ ವಿಶೇಷ ಆಕರ್ಷಣೆಯಾಗಿ ಹೊಳೂರಿನಲ್ಲಿ ಕರಗ ಹೊರುವ ವೆಂಕಟೇಶ್ ರವರು ಪಟ್ಟಣದಲ್ಲೂ ಕರಗ ಹೊತ್ತು ಆಕರ್ಷಣೆಯಾಗಿ ನಡೆಸಿಕೊಟ್ಟರು,ಪಟ್ಟಣದ ಕಟ್ಟೆಕೆಳಗಿನ ಪಾಳ್ಯ ವೃತ್ತದಲ್ಲಿ ವಿಶೇಷವಾಗಿ ವೇದಿಕೆ ನಿರ್ಮಿಸಿ ಕರಗದ ನೃತ್ಯ ಏರ್ಪಡಿಸಲಾಗಿತ್ತು.
ಮುಳಬಾಗಿಲು: ಅರ್ಚಕರ ಸಂಘದ ಸ್ಥಾಪನೆಯಾಗಿ ನಿರಂತರ ಹೋರಾಟ ಮಾಡಿದ ಫಲ ಕೇವಲ 2 ರೂಪಾಯಿಂದ 500 ರೂಪಾಯಿ ಇದ್ದ ತಸ್ಥೀಕ್ ಪಡೆಯುತ್ತಿದ್ದ ದೇವಾಲಯಗಳಿಗೆ ಈ ಮೊದಲು 6000 ರೂಪಾಯಿಂದ 12000 ತನಕ ಆಗಿದೆ ಮತ್ತೇ 24000 ಹಾಗು 36000 ಹಾಗೇ 48000 ರೂಪಾಯಿತನ ಏರಿಕೆ ಆಗಿದೆ ಈ ವರ್ಷದ ಬಜೆಟ್ ನಲ್ಲಿ 60000 ರೂಪಾಯಿಗಳಗೆ ಸರ್ಕಾರ ಹೇಚ್ಚಿಸಿದೆ. ಇದು ನಮ್ಮ ಸಂಘದ ಸಾಧನೆ ಎಂದು ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ,ಆಗಮಿಕರ ಮತ್ತು ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಹೇಳಿದರು ಅವರು ಮುಳಬಾಗಿಲು ತಾಲೂಕು ಕಚೇರಿಯಲ್ಲಿ ಮುಳಬಾಗಿಲು ತಾಲೂಕು ತಹಶೀಲ್ದಾರ್ ಶೋಭಿತಾ ಅವರ ಸಮಕ್ಷಮದಲ್ಲಿ ನೂತನ ಸಂವತ್ಸರದ ಕ್ಯಾಲೆಂಡರ್ ಲೋಕಾರ್ಪಾಣೆ ಮಾಡಿ ಮಾತನಾಡಿದರು.ತಸ್ಥೀಕ್ ಹಣವನ್ನು ಒಂದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ನಮ್ಮ ಸಂಘವು ಮುಜರಾಯಿ ಸಚಿವೆ ಶಶಿಕಲಾ ಜೋಲ್ಲೆ, ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಹಾಗು ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂದೂರಿ ಅವರ ಬಳಿ ಮನವಿ ಮಾಡಲಾಗಿತ್ತು ಮನವಿಗೆ ಸ್ಪಂದಿಸಿರುವ…
ವರ ಕವಿ ದ.ರಾ.ಬೇಂದ್ರೆಯವರ ಯುಗಾದಿ ಕುರಿತಾಗಿ ಬರೆದಂತ ಕವಿತೆ ಸುಪ್ರಸಿದ್ಧವಾದುದು.”ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆಹೊಂಗೆ ಹೂವ ತೊಂಗಲಲಿ ಭೃಂಗದ ಸಂಗೀತ ಕೇಳಿ ಮತ್ತೆ ಕೇಳಿ ಬರುತ್ತಿದೆಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವ ಕಳೆಯ ತರುತಿದೆವರುಷಕೊಂದು ಹೊಸತು ಜನ್ಮ ವರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆಒಂದೆ ಒಂದು ಜನ್ಮದಲ್ಲಿ ಒಂದೆ ಬಾಲ್ಯ ಒಂದೆ ಹರಯ ನಮಗದಷ್ಟೆ ಏತಕೋನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ ನಮಗೆ ಏಕೆ ಬಾರದೋ”||ಯುಗ ಯುಗಾದಿ ಕಳೆದರು||” ಯುಗಾದಿ ಆಚರಣೆ 01 ಏಪ್ರಿಲ್ 2022 ರಂದು ಬೆಳಿಗ್ಗೆ 11:53 ಕ್ಕೆ ಪ್ರಾರಂಭವಾಗಿ. ಏಪ್ರಿಲ್ 02, 2022 ರಂದು ಬೆಳಿಗ್ಗೆ 11:58 ಕ್ಕೆ ಮುಕ್ತಾಯವಾಗಲಿದೆ.ಮರಗಿಡಗಳ ಹೊಸ ಚಿಗುರು. ಎಲ್ಲೆಡೆ ಹಸಿರು. ಮೊದಲ ಮಳೆ. ಹೊಸದು ಹೊಸತನ, ಹೊಸ ಜೀವನ. ಹೀಗೆ ಎಲ್ಲರದರ ಪ್ರತೀಕ ಯುಗಾದಿ ಹಬ್ಬ. ಕಳೆದ ಎರಡು ವರ್ಷಗಳಿಗಿಂತ ಈ ಬಾರಿ ಯಾವುದೇ…
ತಿರುಪತಿ:- ಮದನಪಲ್ಲಿ-ತಿರುಪತಿ ಮಾರ್ಗದಲ್ಲಿರುವ ಭಾಕರಪೇಟ ಘಾಟ್ ರಸ್ತೆಯ ತಿರುವಿನಲ್ಲಿ ಮದುವೆ ದಿಬ್ಬಣದ ಬಸ್ಸು ಬಿದ್ದು ಭಿಕರ ಅಪಘಾತವಾಗಿದೆ.ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಧರ್ಮಾವರಂನಿಂದ ಮದುವೆ ನಿಶ್ಚಿತಾರ್ಥಕ್ಕೆ ಮದನಪಲ್ಲಿ ಮೂಲಕ ತಿರುಪತಿಗೆ ಹೊರಟಿದ್ದ ಖಾಸಗಿ ಬಸ್ ಭಾಕರಪೇಟ ಘಾಟ್ ರಸ್ತೆಯ ತಿರುವಿನಲ್ಲಿ ಶನಿವಾರ ನಡು ರಾತ್ರಿಯಲ್ಲಿ ನೂರು ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ ಈ ಅಪಘಾತದಲ್ಲಿ ಸುಮಾರು 8 ಮಂದಿ ಮೃತಪಟ್ಟಿರಬಹುದು ಎನ್ನಲಾಗಿದೆ.ಅಪಘಾತವಾಗಿ ಸುಮಾರು ಎರಡು ಘಂಟೆಗಳ ನಂತರ ಅಪಘಾತ ವಿಷಯ ಹೊರಜಗತ್ತಿಗೆ ತಿಳಿದಿರುತ್ತದೆ. ಕಡಿದಾದ ಬೆಟ್ಟಗಳು ಮತ್ತು ಕಣಿವೆಗಳ ನಡುವೆ ಹಾದು ಹೋಗುವ ಘಾಟ್ ರಸ್ತೆಯಲ್ಲಿ ಯಾವುದೇ ಸೆಲ್ ಫೋನ್ ಸಿಗ್ನಲ್ ಸಿಗುವುದಿಲ್ಲ ಪ್ರಪಾತಕ್ಕೆ ಬಿದ್ದ ಬಸ್‌ನಲ್ಲಿದ್ದ ಐದು ಜನ ಪ್ರಯಾಣಿಕರು ನಡುರಾತ್ರಿಯಲ್ಲಿ ಅಷ್ಟಕಷ್ಟಗಳನ್ನು ಬಿದ್ದು ಪ್ರಯಾಸದಿಂದ ಆಳದಿಂದ ಮೆಲೆ ಹತ್ತಿ ಮುಖ್ಯರಸ್ತೆಗೆ ಬಂದು ದಾರಿಯಲ್ಲಿ ಹೋಗುತ್ತಿದ್ದ ವಾಹನ ಚಾಲಕರ ಸಹಾಯದಿಂದ ಭಾಕರಪೇಟೆಯ ಹೊರವಲಯದ ಚೆಕ್‌ಪೋಸ್ಟ್ ಪೋಲಿಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರ ಬಳಿಯಿದ್ದ ಬ್ಯಾಟರಿ ಬೆಳಕಿನಲ್ಲಿ ಬಸ್ ಅಪಘಾತವಾದ ಸ್ಥಳವನ್ನು ತಲುಪಿ…
ನ್ಯೂಜ್ ಡೆಸ್ಕ್:-ಆಂಧ್ರದ ಕರಾವಳಿಯಲ್ಲಿ ಬ್ರೀಟಿಷರ ವಿರುದ್ದ ಸಮರ ಸಾರಿದ್ದ ಸ್ವಾತಂತ್ರ್ಯ ಸಮರ ಯೋಧ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ರಾಮಚರಣ್ ಮತ್ತು ಧ್ವನಿ ಇಲ್ಲದವರ ಧ್ವನಿಯಾದ ಕೊಮುರಂ ಭೀಮನಾಗಿ jr NTR ನಟನೇಯ RRR ಸಿನಿಮಾ ನಾಲ್ಕು ವರ್ಷಗಳ ಹಿಂದೆ ಇಬ್ಬರು ಸ್ಟಾರ್ ಕಾಸ್ಟ್ ಗಳ ಸಿನಿಮಾ ಶುರುವಾದ ದಿನದಿಂದಲೇ ಚಿತ್ರದ ಮೇಲಿನ ನಿರೀಕ್ಷೆಗಳು ಗರಿಗೆದರಿವೆ. ರಾಷ್ಟ್ರವ್ಯಾಪ್ತಿ ಪ್ರಚಾರದಲ್ಲಿದ್ದ ರಾಜಮೌಳಿ ಶೈಲಿಯ ಮೇಕಿಂಗ್ ಹಿನ್ನಲೆಯಲ್ಲಿ RRR ಚಿತ್ರಕ್ಕೆ ದುಪ್ಪಟ್ಟು ನಿರೀಕ್ಷೆಗಳನ್ನು ಹೆಚ್ಚಿಸಿತು ಕರೋನಾ ದುರಂತ, ಥಿಯೇಟರ್‌ಗಳು ಮತ್ತು ಆಂಧ್ರದಲ್ಲಿ ಟಿಕೆಟ್ ದರಗಳ ರಗಳೆ ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಿಡುಗಡೆಗೆ ವಿಳಂಬವಾಗಿದ್ದ ಚಿತ್ರ ಅಂತಿಮವಾಗಿ ಶುಕ್ರವಾರ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಏತನ್ಮಧ್ಯೆ, ಬ್ರಿಟಿಷ್ ಗವರ್ನರ್ ಸ್ಕಾಟ್ ಅದಿಲಾಬಾದ್‌ಗೆ ಭೇಟಿ ನೀಡುತ್ತಾನೆ ಮತ್ತು ಮಲ್ಲಿ ಎಂಬ ಗೊಂಡ ಮಗುವನ್ನು ದೆಹಲಿಗೆ ಕರೆದೊಯ್ಯುತ್ತಾನೆ. ಗೊಂಡ ಬುಡಕಟ್ಟಿನ ಕಾವಲುಗಾರನಾದ ಕೊಮುರಂ ಭೀಮ್ ಮಗುವನ್ನು ತನ್ನ ತಾಯಿಯ ಬಳಿಗೆ ಕರೆದೊಯ್ಯಲು ದೆಹಲಿಗೆ ಪ್ರಯಾಣಿಸುತ್ತಾನೆ. ಮಲ್ಲಿಗೆ ಬ್ರಿಟಿಷರ ಕೋಟೆ ಆಚೆಗೆ ತರುವುದು ಕಷ್ಟ.…
ಶ್ರೀನಿವಾಸಪುರ:- ಶ್ರೀನಿವಾಸಪುರ ಪಟ್ಟಣದಲ್ಲೂ ಗುಂಜೂರು ಶ್ರೀನಿವಾಸರೆಡ್ಡಿ ಬಣದ ಕಾರ್ಯಚಟುವಟಿಕೆಗಳು ಫುಲ್ ಜೋಶ್ ಪಡೆದುಕೊಂಡಿದೆ ಪಟ್ಟಣದ ಪ್ರತಿಷ್ಠಿತ ನೆತ್ತೊಳ್ಳು ಕುಟುಂಬದ ಬಹುತೇಕ ಸದಸ್ಯರು ಗುಂಜೂರುಶ್ರೀನಿವಾಸರೆಡ್ಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ನೆತ್ತೊಳ್ಳು ಕುಟುಂಬದ ಹಿರಿಯ ಸದಸ್ಯ ಸಿತಾರಾಮಪ್ಪ ನೇತೃತ್ವದಲ್ಲಿ ಕೆಲ ಸದಸ್ಯರು ಬಿ.ಎಲ್.ಪ್ರಕಾಶ್ ಸಮ್ಮಖದಲ್ಲಿ ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾಗಿದ್ದು ಈ ಸಂದರ್ಭದಲ್ಲಿ ಮುಖಂಡ ಗುಂಜೂರುಶ್ರೀನಿವಾಸರೆಡ್ಡಿ ಮಾತನಾಡಿ ಬಿ.ಎಲ್. ಪ್ರಕಾಶ್ ಮಾರ್ಗದರ್ಶನದಲ್ಲಿ ನನ್ನ ಬಣಕ್ಕೆ ಬಂದಿದ್ದೀರಾ ನಿಮಗೆ ಎಲ್ಲಾ ರಿತಿಯಲ್ಲೂ ಬೆಂಬಲ ಇರುತ್ತದೆ ನನ್ನ ರಾಜಕಾರಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯವಾಗಿ ಬೇಕು ನನ್ನ ನಾಯಕತ್ವದಲ್ಲಿ ಯುವ ನಾಯಕತ್ವಕ್ಕೆ ಹೆಚ್ಚು ಆದ್ಯತೆ ನೀಡುವುದಾಗಿ ಹೇಳಿದರು. ಬಿ.ಎಲ್.ಪ್ರಕಾಶ್ ಮಾತನಾಡಿ ತಾಲೂಕಿನ ಸಂಪ್ರದಾಯಿಕ ರಾಜಕಾರಣಕ್ಕೆ ಬದಲಾವಣೆ ಅಗತ್ಯವಾಗಿದೆ ಇದಕ್ಕಾಗಿ ಜನರ ಹಿತ ಬಯಸಿ ಬದಾಯವಣೆಯತ್ತ ಸಾಗೋಣ ಎಂದರು. ಶ್ರೀನಾಥ್,ಕೃಷ್ಣಪ್ಪ,ರಾಮಕೃಷ್ಣ,ನರೇಶ್,ಸತ್ಯಪ್ಪ,ನಾಗೇಶ್, ಮಿಶನ್ ವೆಂಕಟ್ರಾಮಪ್ಪ ಮುಂತಾದವರು ಗುಂಜೂರು ಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾದರು.ಕಾರ್ಯಕ್ರದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರರೆಡ್ಡಿ ಹಿಂದುಳಿದ ಯುವ ಮುಖಂಡ ಶ್ರೀರಾಮ್ ಬೈಚಪ್ಪ ಮುಂತಾದವರು ಇದ್ದರು.
ಶ್ರೀನಿವಾಸಪುರ: ತಾಲೂಕಿನ ರೋಣೂರು ಹೋಬಳಿ ಆರಿಕುಂಟೆ ಗ್ರಾಮ ಒಂದು ಕಾಲದ ಜೆ.ಡಿ.ಎಸ್. ಬದ್ರಕೋಟೆಯಾಗಿತ್ತು ಅಂತಹ ಗ್ರಾಮದಲ್ಲಿ ಸಮಾಜಸೇವಕ ಮುಂದಿನ ಶಾಸಕ ಸ್ಥಾನದ ಆಕಾಂಕ್ಷಿಯಾಗಿರುವ ಗುಂಜೂರುಶ್ರೀನಿವಾಸರೆಡ್ದಿಗೆ ಅಲ್ಲಿನ ಕೆಲ ಮುಖಂಡರು ಸ್ವತಃ ಶ್ರೀನಿವಾಸರೆಡ್ದಿ ಅವರನ್ನು ಗ್ರಾಮಕ್ಕೆ ಕರೆಯಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.ವೆಂಕಟಶಿವಾರೆಡ್ದಿ ಪರ ಒನ್ ವೇ ಆಗಿದ್ದ ಆರಿಕುಂಟೆ!ಆರಿಕುಂಟೆ ಗ್ರಾಮ ಕಳೆದ ಮೂರು ನಾಲ್ಕು ದಶಕಗಳಿಂದಲೂ ವೆಂಕಟಶಿವಾರೆಡ್ದಿ ಬೆಂಬಲಕ್ಕೆ ನಿಂತಿದ್ದ ಗ್ರಾಮ ಅಲ್ಲಿ ಪ್ರತಿಪಕ್ಷವೇ ಇರಲಿಲ್ಲ ನಂತರದಲ್ಲಿ ಬಹುಶಃ ಎರಡು ದಶಕಗಳ ಹಿಂದೆ ಹಾಲಿ ಶಾಸಕ ರಮೇಶ್ ಕುಮಾರ್ ಪರ ಬ್ಯಾಟಿಂಗ್ ಬೀಸಲು ಹಿರಿಯ ಮುಖಂಡ ಲಕ್ಷ್ಮಣರೆಡ್ದಿ ನೇತೃತ್ವದಲ್ಲಿ ಪರ್ಯಾಯ ನಾಯಕತ್ವ ಸೃಷ್ಟಿ ಆಗಿ ಗ್ರಾಮದ ಸುಮಾರು 40% ಮತಗಳು ರಮೇಶ್ ಕುಮಾರ್ ನಾಯಕತ್ವಕ್ಕೆ ಸಿಕ್ಕಿದ್ದಲ್ಲದೆ ಎರಡು ಅವಧಿಗೆ ಆರಿಕುಂಟೆ ಗ್ರಾಮಪಂಚಾಯಿತಿಯಲ್ಲಿ ಶಾಸಕ ರಮೇಶ್ ಕುಮಾರ್ ಹಿಂಬಾಲಕರು ಅಧಿಕಾರದ ಚುಕಾಣಿ ಹಿಡದಿದ್ದರು. ಇಂತಹ ಆರಿಕುಂಟೆ ಗ್ರಾಮದಲ್ಲಿ ಪರ್ಯಾಯ ಎಂಬಂತೆ ಮೂರನೆಯ ನಾಯಕತ್ವ ಸೃಷ್ಠಿಯಾಗಿದೆ ಗ್ರಾಮದ ಕಾಂಗ್ರೆಸ್ ಮುಖಂಡ ನರಸಿಂಹಾರೆಡ್ಡಿ ರವರ ನೇತೃತ್ವದಲ್ಲಿ ಗುಂಜೂರುಶ್ರೀನಿವಾಸರೆಡ್ದಿ ಬಣ…
ಕೋಲಾರ: ಕೋಲಾರ ನಗರದ ಹೆಗ್ಗುರುತು ಕ್ಲಾಕ್ ಟವರ್(ಗಡಿಯಾರ ಗೋಪುರ) ಮೇಲೆ ಜಿಲ್ಲಾಡಳಿತ ರಾಷ್ಟ್ರಧ್ವಜ ಹಾರಿಸಿ ಕೋಲಾರ ನಗರ ಸೇರಿದಂತೆ ರಾಷ್ಟ್ರ ಪ್ರೇಮಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.ಕೋಲಾರ ನಗರದ ಪ್ರಮುಖ ವೃತ್ತ ಕ್ಲಾಕ್ ಟವರ್(ಗಡಿಯಾರ ಗೋಪುರ) ವೃತ್ತ ಎಂದೆ ಖ್ಯಾತಿ ಅಲ್ಲಿನ 40 ಅಡಿ ಗೋಪುರದ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮಾಜದವರು ಹೆಚ್ಚು ಜನ ತಮ್ಮ ವ್ಯಾಪಾರ ವ್ಯವಹಾರ ನಡೆಸುತ್ತ ವಾಸಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಹಸಿರು ಬಣ್ಣ ಬಳಿಯಲಾಗಿತ್ತು ಇದರಿಂದ ಮತ್ತಷ್ಟು ವಿವಾದ ಗ್ರಸ್ತ ವಿಚಾರವಾಗಿ ಮಾರ್ಪಟ್ಟಿತು ಹಬ್ಬದ ಸಂದರ್ಭಗಳಲ್ಲಿ ಹಸಿರು ಭಾವುಟ ಹಾರಿಸುವುದು ಹಸಿರು ಬಣ್ಣದ ಸುನೇರಿ ಪೇಪರ್ ಗಳನ್ನು ಅಂಟಿಸುವುದು ವೃತ್ತವನ್ನು ಹಸಿರುಮಯವಾಗಿ ಮಾಡುವುದು ಸಾಮಾನ್ಯವಾಗಿತ್ತು ಇದು ಹಲವರ ಕೆಂಗಣ್ಣಿಗೆ ಕಾರಣವಾಗಿ ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿತ್ತು.ಕೋಲಾರದ ಸಂಸದ ಮುನಿಸ್ವಾಮಿ ಕ್ಲಾಕ್ ಟವರ್ ಪ್ರದೇಶದ ಹಸಿರು ಚಟುವಟಿಕೆಗಳಿಗೆ ವಿರೋಧಮಾಡುತ್ತಿದ್ದರು ನಂತರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ರ‍್ಯಾಲಿ ನಡೆಸಿದಾಗ ಮೆರವಣಿಗೆ ಹೋರಟ ಬಿಜೆಪಿ ಕಾರ್ಯಕರ್ತರ ಗುಂಪು ಕ್ಲಾಕ್‌ಟವರ್ ಪ್ರವೇಶಕ್ಕೆ ಜಿಲ್ಲಾಡಳಿತ ನಿಷೇಧ…