ಶ್ರೀನಿವಾಸಪುರ: ತಾಲ್ಲೂಕಿನ ಕಸಬಾ ಹೋಬಳಿ ಕಿರುವಾರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಕೋದಂಡರಾಮ ದೇವರ ದೇವಾಲಯ ಪುನರ್ ಬಿಂಬ ಪ್ರತಿಷ್ಠಾಪನೆ ಕಾರ್ಯಕ್ರಮ ಮಾ.20 ಮತ್ತು ಮಾ21 ರಂದು ಭಾನುವಾರ ಹಾಗು ಸೋಮವಾರ ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಗಣಪತಿ, ಶ್ರೀ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಪರಿವಾರ ಸಮೇತ ಶ್ರೀ ಕೋದಂಡರಾಮ ದೇವರುಗಳ ಸ್ಥಿರಬಿಂಬ ಪ್ರತಿಷ್ಠಾಪನಾ ಕಾರ್ಯಕ್ರಮ ಗ್ರಾಮ ದೇವತೆ ಅನುಗ್ರಹದೊಂದಿಗೆ ಮಾ.20ರಂದು ಭಾನುವಾರ ಸಂಜೆ ಪ್ರಾರಂಭವಾಗಲಿದ್ದು ಮಾ21 ರಂದು ಸೋಮವಾರದ ವರಿಗೂ ನಡೆಯುತ್ತವೆ ಭಾನುವಾರ ಗಣಪತಿ ಪೂಜೆ, ಪುನ್ಯಾಹವಾಚನ, ಪ್ರಾಯಶ್ಚಿತ ಸಂಕಲ್ಪ, ರಕ್ಷಾಬಂದನ, ಮೃತ್ಸಂಗ್ರಹಣ, ಅಂಕುರಾರ್ಪಣೆ, ಕಳಶಾರಾಧನೆ, ಅಗ್ನಿ ಪ್ರತಿಷ್ಟೆ ,ನಡೆಯಲಿದೆ.ಸೋಮವಾರ ಮುಂಜಾನೆ ವೇದ ಪಾರಾಯಣ, ವೇದಿಕಾರ್ಚನೆ, ಮಂತ್ರನ್ಯಾಸ, ನಾಡಿಸಂಧಾನ, ಗಣಪತಿ, ಕಳಾ ಹೋಮ, ಗೋದದರ್ಶನ, ದೇವತಾರ್ಚನೆ ನಂತರ ದೇವಾಲಯ ಲೋಕಾರ್ಪಣೆ ಆಗಲಿದೆ. ದೇವಾಲಯದ ಪೂಜಾ ಕಾರ್ಯಕ್ರಮಗಳನ್ನು ಪ್ರಧಾನ ಆರ್ಚಕರಾದ ಶ್ರೀನಿವಾಸಾಚಾರ್, ಗನಿಬಂಡೆ ಶ್ರೀನಿವಾಸ ದೇವಾಲಯದ ಖ್ಯಾತ ಅರ್ಚಕರಾದ ಶ್ರೀನಾಥ್ ಚಾರ್, ಆರಿಕುಂಟೆ ರಾಜಗೋಪಾಲಾಚಾರ್ ನಡೆಸಿಕೊಡಲಿದ್ದಾರೆ.
Author: admin
ಶ್ರೀನಿವಾಸಪುರ: ಪಾಲ್ಗುಣ ಮಾಸದ ಹುಣ್ಣಿಮೆಯಂದು ತಾಲೂಕಿನ ಬಹುತೇಕ ಕಡೆ ರಟೋತ್ಸವಗಳು ನಡೆಯುವುದು ಇಲ್ಲಿನ ಆಚರಣೆ ಪ್ರಮುಖವಾಗಿ ಶ್ರೀನಿವಾಸಪುರದ ಪಟ್ಟಣದ ಪ್ರಸಿದ್ದ ಶ್ರೀ ವರದ ಬಾಲಾಂಜನೇಯ ಕ್ಷೇತ್ರದಲ್ಲಿ ಸಂಭ್ರಮದಿಂದ ರಥೋತ್ಸವ ನಡೆಯಿತು.ಕಳೆದ ಎರಡು ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೋಂಡಿದ್ದು ವಿಶೇಷವಾಗಿತ್ತು. ವೈಖಾನಸ ಆಗಮ ಶಾಸ್ತ್ರಙ್ಞ ಶೇಷಾದ್ರಿ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ,ರಥೋತ್ಸವ ಕಾರ್ಯಕ್ರಮಗಳು ನಡೆಯಿತು.ರಥೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವರದ ಬಾಲಾಂಜನೇಯ ಕ್ಷೇತ್ರದ ಸಂಚಾಲಕ ಗೋಫಿನಾಥರಾವ್ ಶಾಸಕ ರಮೇಶ್ ಕುಮಾರ್,ಮಾಜಿ ಶಾಸಕ ವೆಂಕಟಶಿವಾರೆಡ್ಡಿ, ಇತಿಹಾಸ ತಜ್ಞ ಪ್ರೊ.ನರಸಿಂಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿನಾರಯಣಸ್ವಾಮಿ, ಹಳೇಪೇಟೆ ಮಂಜು ಮುಂತಾದವರು ಪಾಲ್ಗೋಂಡಿದ್ದರು.ನಂಬಿಹಳ್ಳಿ ರಥೋತ್ಸವತಾಲೂಕಿನ ನಂಬಿಹಳ್ಳಿಯ ಕೇಂದ್ರವಾಗಿ ಸುತ್ತಲಿನ ಐದು ಗ್ರಾಮಗಳಲ್ಲಿ ಪಂಚಲಿಂಗ ಕ್ಷೇತ್ರಗಳು ಇಲ್ಲಿದ್ದು ಶ್ರೀ ಪ್ರಸನ್ನ ಸೋಮೇಶ್ವರ ಈ ಭಾಗದಲ್ಲಿ ವಿಶೇಷ ಖ್ಯಾತಿ.ಐತಿಹಾಸಿಕ ಶ್ರೀ ಪ್ರಸನ್ನ ಸೋಮೇಶ್ವರ ದೇವರ ರಥೋತ್ಸವ ನಡೆಯಿತು ಇದರ ಅಂಗವಾಗಿ ಜನ ಜಾತ್ರೆ ನಡೆಯಿತುತಾಲೂಕಿನ ಕೋಟಬಲ್ಲಪಲ್ಲಿ ಶ್ರೀಲಕ್ಷ್ಮೀನರಸಿಂಹ ದೇವರ ರಥೋತ್ಸವ ನಡೆಯಿತು ಅರ್ಚಕ…
ಶ್ರೀನಿವಾಸಪುರ: ಬಲಿಜ ಸಮುದಾಯಕ್ಕೆ ಹಿಂದುಳಿದ 2ಎ ವರ್ಗಕ್ಕೆ ಸೇರಿಸಲು ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಶಾಸಕ ರಮೇಶ್ ಕುಮಾರ್ ಅಶ್ವಾಸನೆ ನೀಡಿದರು. ಅವರು ಇಂದು ತಾಲೂಕು ಬಲಿಜ ಸಂಘ ಹಾಗು ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕೈವಾರ ಶ್ರೀ ಯೋಗಿ ನಾರಯಣ ಯತಿಂದ್ರರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಾತಯ್ಯನವರು ತತ್ವಜ್ಙಾನಿಗಳಾಗಿ ಸಮಾಜದ ಹಿತಕ್ಕಾಗಿ ಕಾಲಜ್ಙಾನ ರಚಿಸಿದ ಯೋಗಿಗಳು ಎಂದು ಹೇಳಿದರು. ಪಾಲ್ಗುಣ ಮಾಸದ ಹುಣ್ಣಿಮೆಯಂದು ಯೋಗಿ ನಾರಯಣ ಯತಿಂದ್ರರ ಜಯಂತಿ ಆಚರಿಸಿದರೆ ಅರ್ಥ ಪೂರ್ಣವಾಗಿರುತ್ತದೆ. ಇದನ್ನು ಮುಂದುವರೆಸಿ ಈ ಬಗ್ಗೆ ಸರ್ಕಾರಕ್ಕೂ ಸಹ ಮನವಿ ಮಾಡುತ್ತೇನೆ, ಬಲಿಜ ಸಮುದಾಯದ ನೀವು ಒಗ್ಗಾಟ್ಟಾಗಿ ಸರ್ಕಾರದಿಂದ ಸಿಗುವ ಸೌಲಭ್ಯಗಳು ಪಡೆಯಲು ಮುಂದಾಗುವಂತೆ ಹೇಳಿದರು.ಶ್ರೀ ಯೋಗಿ ನಾರಯಣ ಯತಿಂದ್ರರ ಜಯಂತಿ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸಮಾಜದ ಸುಧಾರಣೆಗೆ ಶ್ರೀ ಯೋಗಿ ನಾರಯಣ ಯತಿಂದ್ರರು ಸಮಾಜದ ಒಳಿತು ಬಯಸಿ ಕಾಲಜ್ಙಾನ ರಚಿಸಿ ತತ್ವಪದಗಳನ್ನು ಹಾಡುವ ಮೂಲಕ ಜನತೆಯನ್ನು…
ನ್ಯೂಜ್ ಡೆಸ್ಕ್: ಬಹುನಿರೀಕ್ಷಿತ ಬಹು ಭಾಷ ಹಾಗು ಮಲ್ಟಿ ಸ್ಟಾರರ್ ಸಿನಿಮಾ ‘ಆರ್ಆರ್ಆರ್’ RRR ವಿಶ್ವಾದ್ಯಂತ ಅದ್ದೂರಿಯಾಗಿ ರಿಲೀಸ್ ಮಾಡಲು ದಿನಗಣನೆ ಶುರುವಾಗಿದೆ. ಈ ಸಿನಿಮಾ ಪ್ರೀ-ರಿಲಿಜ್ ಕಾರ್ಯಕ್ರಮವನ್ನು ಈ ತಿಂಗಳ 19 ರಂದು ಶನಿವಾರ ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಡೆಸಲು ಸಿನಿಮಾ ತಂಡ ತಯಾರಿ ನಡೆಸಿದೆ.ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ನೂರು ಎಕರೆ ಪ್ರದೇಶದಲ್ಲಿ ಎಲ್ಲಾ ತಯಾರಿಗಳು ನಡೆದಿದ್ದು 25 ಸಾವಿರ ಚದರ ಅಡಿಯ ಬೃಹತ್ ಎಲ್ಇಡಿ ಸ್ಕ್ರೀನ್ ಮತ್ತು 45 ಬೃಹತ್ ಲೇಸರ್ ಲೈಟ್ಗಳ ದೊಡ್ಡ ವೇದಿಕೆ ಸಿದ್ಧವಾಗುತ್ತಿದೆ. ಕನ್ನಡದಲ್ಲಿ ಅನುಶ್ರೀ, ತೆಲಗಿನಲ್ಲಿ ಸುಮಾ ಹಾಗು ಅಕುಲ್ ಬಾಲಾಜಿ, ಅವರುಗಳು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.ಬಾಹುಬಲಿ ಸಿನಿಮಾ ನಿರ್ದೇಶನ ಮಾಡಿದ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಈಗಾಗಲೇ ಭಾರತೀಯ ಸಿನಿಮಾ ರಂಗದಲ್ಲಿ ದೊಡ್ಡ ಟ್ರೆಂಡ್ ಸೃಷ್ಟಿಮಾಡಿದೆ. ಅಂದಹಾಗೆ ಇಡಿ ಕಾರ್ಯಕ್ರಮವನ್ನು ಕನ್ನಡ ಅಪ್ಪು ಪುನಿತ್ ರಾಜಕುಮಾರ್ ಅವರಿಗೆ ಅರ್ಪಣೆ ಮಾಡಲಿರುವುದಾಗಿ ಹೇಳಲಾಗಿದೆ.ಕಾರ್ಯಕ್ರಮದ ವೇದಿಕೆಯಲ್ಲಿ…
ತಿರುಪತಿ:ತಾಯಿ ಸತ್ತಿರುವ ವಿಷಯ ತಿಳಿಯದೆ ಮಲಗಿರಬಹುದು ಎಂದು ಹತ್ತು ವರ್ಷದ ಬಾಲಕನೊರ್ವ ಮೂರು ದಿನಗಳ ಕಾಲ ತನ್ನ ತಾಯಿಯ ಮೃತ ದೇಹದೊಂದಿಗೆ ಮನೆಯಲ್ಲೇ ಉಳಿದು ಕೊಂಡ ದಾರುಣ ಘಟನೆ ಆಂಧ್ರದ ತಿರುಪತಿ ನಗರದಲ್ಲಿ ನಡೆದಿರುತ್ತದೆ.ಬೊರಲು ಮಲಗಿದ್ದ ತಾಯಿಯನ್ನು ಎಬ್ಬಿಸದೆ ಮನೆಯಲ್ಲಿ ಫ್ರೀಡ್ಜ್ ನಲ್ಲಿದ್ದ ತಿಂಡಿ ತಿಂದುಕೊಂಡು ಸ್ಕೂಲಿಗೂ ಹೋಗಿ ಬಂದ ಮುಗ್ದ ಬಾಲಕನ ಕಥೆಯಿದು.ತನ್ನ ತಾಯಿ ಹುಷಾರಿಲ್ಲದೆ ಮಲಗಿದ್ದಾಳೆ ಅವಳಿಗ್ಯಾಕೆ ತೊಂದರೆ ಕೊಟ್ಟು ಎಬ್ಬಿಸಬೇಕು ಎಂದು ತಾನೆ ಸಾಹಸ ಪಟ್ಟು ಸ್ಕೂಲಿಗೆ ಹೋಗಿಬರುತ್ತಿದ್ದ ಹಾಗೆ ಮೂರು ದಿನಗಳು ಕಳೆದು ಹೋಗಿದೆ ನಾಲ್ಕನೇ ದಿನ ಬಾಲಕನ ಸೋದರ ಮಾವ ಫೋನ್ ಮಾಡಿರುತ್ತಾನೆ ಅದಕ್ಕೆ ಉತ್ತರಿಸಿದ ಬಾಲಕ ಅಮ್ಮ ನಾಲ್ಕು ದಿನದಿಂದ ನಿದ್ದೆ ಮಾಡುತ್ತಿದ್ದಾರೆ ನಾನು ಎಬ್ಬಿಸಿಲ್ಲ ಎಂದಾಗ ಫೋನ್ ಮಾಡಿದ ವ್ಯಕ್ತಿ ಗಾಭರಿಯಿಂದ ಮನೆಗೆ ಬಂದು ನೋಡಿದಾಗ ಬಾಲಕನ ತಾಯಿ ಮೃತಪಟ್ಟಿರುವುದು ಕಂಡುಬಂದಿದೆ,ಮೃತಳನ್ನು ತಿರುಪತಿಯ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುವ ಟಿ.ರಾಜ್ಯಲಕ್ಷ್ಮಿ (41) ಎಂದು ಗುರುತಿಸಲಾಗಿದ್ದು ಕೌಟುಂಬಿಕ ಸಮಸ್ಯೆಯಿಂದ ನಾಲ್ಕು ವರ್ಷಗಳಿಂದ…
ಪ್ರಭಾಸ್-ಪೂಜಾ ಹೆಗ್ಡೆ ನಟನೆಯ ಸಿನಿಮಾ”ರಾಧೆ ಶ್ಯಾಮ್: ಸಿನಿಮಾ ಕುರಿತು ಮಿಶ್ರ ಪ್ರತಿಕ್ರಿಯೆ ಪ್ರಭಾಸ್ ವೀರಾಭಿಮಾನಿಯ ಆತ್ಮಹತ್ಯೆಆಂಧ್ರದ ಕರ್ನೂಲ್ ನಗರದಲ್ಲಿ ಘಟನೆ ನ್ಯೂಜ್ ಡೆಸ್ಕ್: ಬಾಹುಬಲಿ ಪ್ರಭಾಸ್ ನಟನೆಯ ಬಹುನೀರಿಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್’ ಎರಡು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದೆ ಈ ಸಿನಿಮಾ ಕುರಿತಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಭಾಸ್ ವೀರಾಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿರುತ್ತದೆ.ಮೃತ ಪ್ರಭಾಸ್ ಅಭಿಮಾನಿಯನ್ನು ಕರ್ನೂಲ್ ನಗರದ ತಿಲಕ್ ನಗರ ಪ್ರದೇಶದ ವೆಲ್ಡಿಂಗ್ ಕೆಲಸಗಾರ ರವಿತೇಜ (24) ಎಂದು ಗುರುತಿಸಲಾಗಿದೆ.ಸಿನಿಮಾ ನಟನ ಮೇಲಿನ ಅಭಿಮಾನದಿಂದ ಅವಿವೇಕದ ಆತುರದ ನಿರ್ಧಾರ ತೆಗೆದುಕೊಳ್ಳುವಮೂಲಕ ತನ್ನ ಕುಟುಂಬವನ್ನು ದುಖಃದ ಮಡುವಿಗೆ ನೂಕಿದ್ದಾನೆ. ಪ್ರಭಾಸ್ ನಾಯಕನಾಗಿ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ರಾಧೆ ಶ್ಯಾಮ್’ ಮಾರ್ಚ್ 11 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಚಿತ್ರವು ಸಿನಿಮಾ ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿತ್ತು ವಿಮರ್ಶೆಗಳನ್ನು ಸಹಿಸದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಬ್ಲಾಕ್ ನಲ್ಲಿ ಟಿಕೆಟ್ ಖರಿದಿಸಿ…
ನನ್ನ ದೇಶ ನನ್ನ ಹೆಮ್ಮೆಉಕ್ರೇನ್ ತೊರೆಯುವ ದಾವಂತದಲ್ಲಿ ಇರುವಂತ ಸಂಕಷ್ಟ ಪರಿಸ್ಥಿತಿಯಲ್ಲಿ ಉಕ್ರೇನ್ ನಲ್ಲಿರುವ ಭಾರತದ ಧೂತವಾಸದ ಕಛೆರಿ ಸಿಬ್ಬಂದಿಯ ಜವಾಬ್ದಾರಿಯಾಗಿ ನಡೆದುಕೊಂಡ ಬಗ್ಗೆ ನಮಗೆ ಹೆಮ್ಮೆಯಿದೆ,ನಾವು ವಿದ್ಯಾರ್ಥಿಗಳು ಎಷ್ಟು ಸಂಕಷ್ಟದಲ್ಲಿ ಇದ್ದವೊ ಭಾರತದ ಧೂತವಾಸದ ಕಛೆರಿ ಸಿಬ್ಬಂದಿ ಸಹ ನಮ್ಮಷ್ಟೆ ಇಕ್ಕಟ್ಟಿನಲ್ಲಿ ಇದ್ದರು ಅವರ ಮೇಲೆ ಅರೋಪ ಮಾಡುವುದು ತರವಲ್ಲ ನಮ್ಮಂತೆ ಇತರರು ಉಕ್ರೇನ್ ತೊರೆಯುವ ದಾವಂತದಲ್ಲಿರುವ ಸಂದರ್ಭದಲ್ಲಿ ವೈಯುಕ್ತಿಕ ಹಿತಾಸಕ್ತಿ ಗಣನೆಗೆ ತಗೆದುಕೊಳ್ಳಬಾರದು. ಉಕ್ರೇನ್ ವೈದ್ಯಕೀಯ ವಿದ್ಯಾರ್ಥಿ ಗೋವರ್ಧನ್ ಶ್ರೀನಿವಾಸಪುರ: ರಷ್ಯಾ ದಾಳಿಯಿಂದ ಉಕ್ರೇನ್ ಸರ್ವನಾಶವಾಗುತ್ತಿದೆ ಇಂತಹ ಯುದ್ದಭೂಮಿಯಿಂದ ಶ್ರೀನಿವಾಸಪುರದ ವೈದ್ಯಕೀಯ ವಿದ್ಯಾರ್ಥಿ ಗೋವರ್ಧನ್ ನೆಮ್ಮದಿಯಿಂದ ಉಕ್ರೇನ್ ತೊರೆದು ಹಂಗೇರಿ ದೇಶದ ಮೂಲಕ ಭಾರತಕ್ಕೆ ವಾಪಸ್ಸು ಬಂದಿರುತ್ತಾನೆ.ಶ್ರೀನಿವಾಸಪುರದ ಪಡತಿಮ್ಮನಹಳ್ಳಿ ಗ್ರಾಮದ ಶಿವಾರೆಡ್ಡಿ-ಗೀತಮ್ಮನ ಹಿರಿಯ ಪುತ್ರ ಗೋವರ್ದನ್ ಊರಿಗೆ ಬಂದಿರುತ್ತಾನೆ ವೈದ್ಯಕೀಯ ವಿದ್ಯಾಬ್ಯಾಸಕ್ಕಾಗಿ ಉಕ್ರೇನ್ ದೇಶದ ವಿನ್ನಿಟ್ಸಿಯಾ ನಗರದ ನ್ಯಾಷನಲ್ ಪಿರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯ, VNMU ಸೇರಿದ್ದು ನಾಲ್ಕನೇಯ ವರ್ಷದ ವೈದ್ಯಕೀಯ ಕೋರ್ಸ್ ಮುಗಿಯುವ ಹಂತಕ್ಕೆ ಬಂದಿದ್ದು ಯುದ್ದದ…
ಶ್ರೀನಿವಾಸಪುರ:- ಪ್ರೇಮಿಗಳಿಬ್ಬರು ನೇಣಿಗೆ ಶಾರಣಾಗಿರುವ ಘಟನೆ ಇಂದು ನಡೆದಿರುತ್ತದೆ ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿ ಯಲವಹಳ್ಳಿ ಗ್ರಾಮದ ವ್ಯಾಪ್ತಿಯ ಮಾವಿನ ತೋಟದಲ್ಲಿ ಯುವ ಪ್ರೇಮಿಗಳಿಬ್ಬರು ಒಂದೇ ಮಾವಿನ ಮರದಲ್ಲಿ ಪ್ರತ್ಯಕವಾಗಿ ನೇಣು ಹಾಕಿಕೊಂಡು ಮೃತ ಪಟ್ಟಿರುವ ಘಟನೆ ಸೋಮವಾರ ಸಂಜೆ ಪತ್ತೆಯಾಗಿದೆ.ಯಲವಳ್ಳಿ ರೆಡ್ಡ್ಡೆಪ್ಪ ಎಂಬುವವರ ಮಾವಿನ ತೋಪಿನಲ್ಲಿ ನೇಣಿಗೆ ಶಾರಣಾಗಿರುವ ಪ್ರೇಮಿಗಳಲ್ಲಿ ಯುವತಿ ಶಾಲಾ ಸಮವಸ್ತ್ರದಲ್ಲಿಯೇ ನೇಣಿಗೆ ಕೊರಳೋಡಿದ್ದಾಳೆ. ಯುವಕ ಅದೇ ಮರದ ಮತ್ತೊಂದು ಟೊಂಗೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ ಯುವತಿಯನ್ನು ಶ್ರೀನಿವಾಸಪುರದ ನಿವಾಸಿಯಾಗಿ ಕೋಲಾರ ತಾಲೂಕಿನ ಮದ್ದೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಲಿಖಿತ ಎಂದು ಮತ್ತು ಯುವಕನನ್ನು ಹಳೇಪೇಟೆ ನಿವಾಸಿ ಗಂಗಾಧರ ಎಂದು ಗುರುತಿಸಲಾಗಿದ್ದು ಇವನು ವೃತ್ತಿಯಲ್ಲಿ ಮರ ಕಾರ್ಪೇಂಟರ್ ಕೆಲಸ ಮಾಡುತ್ತಿದ್ದು ಇಬ್ಬರು ಶ್ರೀನಿವಾಸಪುರ ಪಟ್ಟಣದ ಹಳೇಪೇಟೆ ನಿವಾಸಿಗಳು ಎಂದಿರುತ್ತಾರೆ. ಮದುವೆಯಾಗುವುದಾಗಿ ನಂಬಿಸಿ ಕರೆತಂದಿದ್ದ! ಯುವಕ ಸುಮಾರು 25 ವರ್ಷದ ಗಂಗಾಧರ ಅಪ್ರಾಪ್ತ ಯುವತಿ ಲಿಖಿತಳ ಕುಟುಂಬಕ್ಕೆ ಪರಿಚಿತನಾಗಿದ್ದು ಹಲವಾರು ದಿನಗಳಿಂದ ಲಿಖಿತಳನ್ನು ಪ್ರಿತಿಸುತ್ತಿದ್ದನಂತೆ ಇದಕ್ಕೆ ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿ…
ಶ್ರೀನಿವಾಸಪುರ:- ತಾಲೂಕಿನ ಕೆಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಕೆಲಸ ಮಾಡಿಕೊಡದೆ ರೈತರನ್ನು ಕಚೇರಿಗಳಿಗೆ ಅಲೆದಾಡಿಸುತ್ತ ಹಣ ಪೀಕಲು ಸಬೂಬು ಹೇಳುತ್ತ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಕಾರ್ಯಕರ್ತರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಉಪತಹಶೀಲ್ದಾರ್ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ವೀರಬದ್ರಸ್ವಾಮಿ ಮಾತನಾಡಿ ಕಂದಾಯ ಇಲಾಖೆ.ತೋಟಗಾರಿಕೆ ಇಲಾಖೆ,ಕೃಷಿ ಇಲಾಖೆ ತಾಲೂಕು ಪಂಚಾಯಿತಿ, ರೇಷ್ಮೇ ಇಲಾಖೆಗಳಲ್ಲಿ ರೈತರ ಮತ್ತು ಸಾರ್ವಜನಿಕರಿಗೆ ಸ್ಪಂದನೆ ಇಲ್ಲ ಸಣ್ಣ ಕೆಲಸವಾದರೂ ಕನಿಷ್ಟ ಎರಡು ಮೂರು ತಿಂಗಳುಗಳ ಕಾಲ ಕಚೇರಿಗಳಿಗೆ ಅಲೆದಾಡಿಸುತ್ತಾರೆ ಇಲ್ಲವಾದರೆ ಲಂಚ ಕೇಳುತ್ತಾರೆ ಇದರಿಂದ ತಾಲೂಕು ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ನೇರವಾಗಿ ಆರೋಪಿಸಿದರು.ತಾಲೂಕು ಸಂಘದ ಅಧ್ಯಕ್ಷ ನಂಬಿಹಳ್ಳಿಶ್ರೀರಾಮರೆಡ್ಡಿ ಮಾತನಾಡಿ ಭೂದಾಖಲಾತಿ ಮತ್ತು ಸರ್ವೆ ಇಲಾಖೆಗಳಲ್ಲಿ ಅಧಿಕಾರಿಗಳು ದುಡ್ಡಿಗೆ ಪ್ರಾಮುಖ್ಯತೆ ಹೆಚ್ಚು ನೀಡುತ್ತಾರೆ ಎಂದ ಅವರು ತಾಲೂಕಿನ ಆಡಳಿತ ವ್ಯವಸ್ಥೆಯಲ್ಲಿನ…
ಶ್ರೀನಿವಾಸಪುರ: ರಷ್ಯಾ ದಾಳಿಯಿಂದ ಉಕ್ರೇನ್ ಅಕ್ಷರಶಃ ಯುದ್ದಭೂಮಿಯಾಗಿದೆ ಉಕ್ರೇನ್ ದೇಶದಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ಭಾರತದ ವೈದ್ಯ ವಿದ್ಯಾರ್ಥಿಗಳು ಆತಂಕ ಗೊಂಡಿದ್ದಾರೆ ಇಂತಹ ಭಾರತದ ಸಾವಿರಾರು ವಿದ್ಯಾರ್ಥಿಗಳಲ್ಲಿ ಶ್ರೀನಿವಾಸಪುರದ ಪಡತಿಮ್ಮನಹಳ್ಳಿ ಗ್ರಾಮದ ಗೋವರ್ಧನ್ ಎಂಬ ನಾಲ್ಕನೇಯ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿ ಯುದ್ದದ ತೀವ್ರತೆ ಹೆಚ್ಚಾದ ಹಿನ್ನಲೆಯಲ್ಲಿ ಸಾಹಸ ಪಟ್ಟು ಉಕ್ರೇನ್ ತೊರೆದು ಪಕ್ಕದ ದೇಶವಾದ ಹಂಗೇರಿಗೆ ಬಂದಿರುವುದಾಗಿ ತನ್ನ ಪೋಷಕರಿಗೆ ಸಂದೇಶ ಕಳಿಸಿ ಜೊತೆಗೆ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿದ್ದಾನೆ.ವೃತ್ತಿಯಲ್ಲಿ ಶಿಕ್ಷಕರಾಗಿರುವ ತಾಲೂಕಿನ ಕಸಬಾ ಹೋಬಳಿ ಕೊಡಿಚರವು ಗ್ರಾಮಕ್ಕೆ ಹೊಂದಿಕೊಂಡಿರುವ ಪಡತಿಮ್ಮನಹಳ್ಳಿ ಗ್ರಾಮದ ಶಿವಾರೆಡ್ಡಿ ತನ್ನ ಮಗನ ವೈದ್ಯಕೀಯ ಶಿಕ್ಷಣದ ಆಸೆ ಪೊರೈಸುವ ಸಲುವಾಗಿ ಬೆಂಗಳೂರಿನ ಶೈಕ್ಷಣಿಕ ಮದ್ಯವರ್ತಿಯೊಬ್ಬರ ಮೂಲಕ ಉಕ್ರೇನ್ ದೇಶದ ವಿನ್ನಿಟ್ಸಿಯಾ ನಗರದ ನ್ಯಾಷನಲ್ ಪಿರೋಗೋವ್ ಸ್ಮಾರಕ ವೈದ್ಯಕೀಯ ವಿಶ್ವವಿದ್ಯಾಲಯ, VNMU ಸೇರಿದ್ದು ನಾಲ್ಕನೇಯ ವರ್ಷದ ವೈದ್ಯಕೀಯ ಕೋರ್ಸ್ ಮುಗಿಯುವ ಹಂತಕ್ಕೆ ಬಂದಿದ್ದು ಯುದ್ದದ ಕಾರ್ಮೊಡ ಹಿನ್ನಲೆಯಲ್ಲಿ ವಿದ್ಯಾರ್ಥಿ ಉಕ್ರೇನ್ ತೊರೆದಿರುತ್ತಾನೆ. ತಾನು ವಾಸವಿದ್ದ ಉಕ್ರೇನ್ ದೇಶದ…