Author: admin

ಕೋಲಾರ: ಸಿಬಿಐ ಅಧಿಕಾರಿಗಳೆಂದು ಮನೆಗೆ ನುಗ್ಗಿದ ಐವರು ಅಪರಿಚಿತರ ಗ್ಯಾಂಗ್ ಮನೆಯಲ್ಲಿದ್ದವರಿಗೆ ಬಂದೂಕ ತೋರಿಸಿ 20 ಲಕ್ಷ ನಗದು ಮತ್ತು 1 ಕೆಜಿ ಚಿನ್ನ ದರೋಡೆ ಮಾಡಿರುವ ಘಟನೆ ಇಲ್ಲಿನ ಕೋಲಾರ ನಗರದ ಸಿ.ಬೈರೇಗೌಡ ನಗರದಲ್ಲಿ ಸೋಮವಾರ ರಾತ್ರಿ ನಡದಿದೆ.ಡಕಾಯಿತರಿಂದ ಹಣ ಬಂಗಾರ ಕಳೆದುಕೊಂಡವರನ್ನು ಕೋಲಾರ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಕುಟುಂಬ ಸೋಮವಾರ ರಾತ್ರಿ ಎಂಟು ಗಂಟೆ ಸಮಯದಲ್ಲಿ ಸಿಬಿಐ ಅಧಿಕಾರಿಗಳೆಂದು ಹೇಳಿ ಮನೆಗೆ ನುಗ್ಗಿದ ಐದು ಮಂದಿ ದರೋಡೆಕೋರರು ಮನೆಯ ಯಜಮಾನ ರಮೇಶ್ ಮತ್ತು ಅವರ ಪತ್ನಿ ಪತ್ರನನ್ನು ಹಗ್ಗದಿಂದ ಕಟ್ಟಿ ದೇವರ ಕೋಣೆಯಲ್ಲಿ ಕೂಡಿ ಹಾಕಿ ಸುಮಾರು ಒಂದೂವರೆ ಗಂಟೆಯ ಕಾಲ ಸಂಪೂರ್ಣವಾಗಿ ಮನೆಯನ್ನು ಜಾಲಾಡಿ ದರೋಡೆ ಮಾಡಿದ್ದಾರೆ. ಸೂರ್ಯ ನಟನೆಯ ತೆಲಗು ಸಿನಿಮಾ “ಗ್ಯಾಂಗ್ಯ್” ಶೈಲಿಯಲ್ಲಿ ದರೋಡೆತೆಲಗಿನಲ್ಲಿ “ಗ್ಯಾಂಗ್ಯ್” ಹಾಗು ತಮಿಳುನಲ್ಲಿ “ತಾನಾ ಸೇಂದ್ರ ಕೂಟ” ಎಂದು 2018 ರಲ್ಲಿ ತಮಿಳು ನಟ ಸೂರ್ಯ ಹಾಗು ರಮ್ಯಕೃಷ್ಣ ಮತ್ತು ಕೀರ್ತಿ ಸುರೇಶ್ ನಟಿಸಿದ್ದ ಸಿನಿಮಾ ಶೈಲಿಯಲ್ಲಿ…

Read More

ಶ್ರೀನಿವಾಸಪುರ:- ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಸಾಲಗಾರನಾಗಿದ್ದ ಯುವಕನೊರ್ವ ಹಣದ ದುರಾಸೆಗೆ ತನ್ನ ಕುಟುಂಬದ ಆಪ್ತ ವ್ಯಕ್ತಿಯನ್ನೆ ಕೊಲೆ ಮಾಡಿದ್ದ ಯುವಕನನ್ನು ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.ಪಟ್ಟಣದ ಹೊರವಲಯದಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆ ಹಿಂಬಾಗದ ಮಾವಿನ ತೋಪಿನಲ್ಲಿ ಸೋಮವಾರ ತಾಲೂಕಿನ ಗುಂಡಮನತ್ತ ಗ್ರಾಮದ ಕುರಿ ವ್ಯಾಪಾರಿ ಮುನಿಶಾಮಿ(65) ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪಟ್ಟಣದ ಅಕ್ಬರ್ ರಸ್ತೆ ನಿವಾಸಿ ಮಾಂಸದ ವ್ಯಾಪಾರಿ ಜಾವಿದ್ ಪಾಷ @ ಅಜ್ಜು ಮಗ ನಯಾಜ್ ಪಾಷ ಎಂಬ ಯುವಕನ್ನು ಪೋಲಿಸರು ಬಂಧಿಸಿ ನ್ಯಾಯಾಧಿಶರ ಮುಂದೆ ಹಾಜರು ಪಡಿಸಿದ್ದು ನ್ಯಾಯಧೀಶರು ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಆರೋಪಿ ನಯಾಜ್ ಪಾಷಾ ಕುರಿ ವ್ಯಾಪಾರಿ ಮುನಿಶಾಮಿ(65) ತಂದೆ ಕೊಟ್ಟಿದ್ದ ಹಣ ಪಡೆಯಲು ಕೊಲೆ?ಕುರಿ ವ್ಯಾಪಾರಿ ಮುನಿಶಾಮಿ ಮತ್ತು ಮಾಂಸದ ವ್ಯಾಪಾರಿ ಜಾವಿದ್ ಪಾಷ ಅವರ ಕುಟುಂಬದ ನಡುವೆ ದಶಕಗಳ ವಿಶ್ವಾಸ ಈ ಹಿನ್ನಲೆಯಲ್ಲಿ ಮಾಂಸದ ಅಂಗಡಿಗೆ ಅಗತ್ಯವಾಗಿ ಬೇಕಿರುವ ಕುರಿಗಳನ್ನು ಮುನಿಶಾಮಿ ಮೂಲಕ ತರಿಸುವುದು ಸಾಮಾನ್ಯ…

Read More

ನ್ಯೂಜ್ ಡೆಸ್ಕ್:- ಆಂಧ್ರಪ್ರದೇಶದ ಯುವ ಸಚಿವ ಮೇಕಪಾಟಿ ಗೌತಮ್ ರೆಡ್ಡಿ (49) ಹೃದಾಘತದಿಂದ ನಿಧನರಾಗಿದ್ದಾರೆ. ಸೋಮವಾರ ಬೆಳಗಿನ ಜಾವ ಹೃದಯಾಘಾತಕ್ಕೆ ಒಳಗಾದ ಅವರನ್ನು ಹೈದರಾಬಾದ್‌ನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು ತುರ್ತು ಚಿಕಿತ್ಸಾ ವಿಭಾಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಗೆ ತಲುಪಿದಾಗ ಗೌತಮ್ ಸ್ಥಿತಿ ಗಂಭೀರವಾಗಿತ್ತು ತುರ್ತು ಚಿಕಿತ್ಸೆ ನೀಡಿದರೂ ಫಲಿಸದೆ ಮೃತಪಟ್ಟಿರುವುದಾಗಿ ಅಪೋಲೋ ವೈದ್ಯರು ಗೌತಮ್ ಪತ್ನಿಗೆ ತಿಳಿಸಿರುತ್ತಾರೆ.ಒಂದು ವಾರದ ಹಿಂದೆಯಷ್ಟೆ ದುಬೈ ಟೂರ್ ಹೋಗಿದ್ದ ಅವರು ನಿನ್ನೆ (ಭಾನುವಾರ) ಹೈದರಾಬಾದ್ ಗೆ ಆಗಮಿಸಿದ್ದರು ಎನ್ನಲಾಗಿದ್ದುಅವರ ಹಠಾತ್ ಸಾವಿನಿಂದ ಅಭಿಮಾನಿಗಳು ಮತ್ತು ವೈಸಿಪಿ ಕಾರ್ಯಕರ್ತರು ತೀವ್ರ ದುಖದಲ್ಲಿ ಮುಳುಗಿದ್ದಾರೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ, ಸಂಪುಟ ಸಚಿವರು, ಹಲವಾರು ಶಾಸಕರು, ಎಂಎಲ್ ಸಿಗಳು ಮತ್ತು ವೈಸಿಪಿ ನಾಯಕರು ಗೌತಮ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.ಗೌತಮ್ ರೆಡ್ಡಿ ಅವರು ನವೆಂಬರ್ 2, 1971 ರಂದು ಜನಿಸಿದರು. ಗೌತಮ್ ರೆಡ್ಡಿ ಅವರ ಹುಟ್ಟೂರು ನೆಲ್ಲೂರು ಜಿಲ್ಲೆಯ ಮರ್ರಿಪದವು ಮಂಡಲದ ಬ್ರಾಹ್ಮಣಪಲ್ಲಿ. ಇಂಗ್ಲೆಂಡ್‌ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಎಂ.ಎಸ್.ಸ್ಸಿ ಒದಿರುವ…

Read More

ಶ್ರೀನಿವಾಸಪುರ:- ಸಂತೇಗಳಲ್ಲಿ ಕುರಿ ವ್ಯಾಪಾರ ಮಾಡುತ್ತಿದ್ದ ಕುರಿ ವ್ಯಾಪಾರಸ್ಥನನ್ನು ಪಟ್ಟಣದ ಹೊರ ವಲಯದ ಮಾವಿನ ತೋಟದಲ್ಲಿ ಕತ್ತು ಕೊಯ್ದು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನಡೆದಿರುತ್ತದೆ.ಹತ್ಯೆಯಾದ ವ್ಯಕ್ತಿಯನ್ನು ತಾಲೂಕಿನ ಕಸಬಾ ಹೋಬಳಿ ಗುಂಡಮನತ್ತ ಗ್ರಾಮದ ಮುನಿಶಾಮಿ(65) ಎಂದು ಗುರುತಿಸಲಾಗಿದೆ ಸಂತೇಗಳಲ್ಲಿ ಕುರಿ ವ್ಯಾಪಾರ ಮಾಡುತ್ತಿದ್ದು ವ್ಯಕ್ತಿಯ ಜೇಬಿನಲ್ಲಿ ಸದಾಕಾಲ ಹತ್ತಾರು ಸಾವಿರ ನಗದು ಇರುತಿತ್ತು ಎಂದು ಹೇಳಲಾಗಿದೆ.ಇಂದು ಗುಂಡಮನತ್ತ ಗ್ರಾಮದ ಮನೆಯಿಂದ ಹೊರಟ ಮುನಿಶಾಮಿ ಮಧ್ಯಾಹ್ನ ಹೊತ್ತಿಗೆ ಬಸ್ ನಿಲ್ದಾಣದ ಬಳಿಯಿಂದ ತಮ್ಮ ಬಂಧು ಯುವಕನ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ವೃತ್ತಕ್ಕೆ ಡ್ರಾಪ್ ಪಡೆದುಕೊಂಡಿದ್ದಾರೆ ನಂತರ ಏನಾಯಿತು ಎಂಬ ಮಾಹಿತಿ ಯಾರಿಗೂ ಇಲ್ಲ ನಂತರ ಸಂಜೆ ಹೊತ್ತಿಗೆ ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗು ಇಂದಿರಾ ನಗರದ ಹಿಂಬಾಗದ ನೂರ್ ಎಂಬುವರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದು ಹಂತಕರು ಆತನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ಹೊರಬಿದ್ದಿದೆ ಈ ಬಗ್ಗೆ ಮಾಹಿತಿ ಪಡೆದ ಪೋಲಿಸರು ಮುಳಬಾಗಿಲು…

Read More

ಶ್ರೀನಿವಾಸಪುರ:-ನಾಯಕತ್ವದ ಕೊರತೆ ಹಾಗು ಪಂಚಾಯಿತಿ ಕಾಯ್ದೆ ಮಾಹಿತಿ ಇಲ್ಲದೆ ತಾಲೂಕಿನ ಲಕ್ಷ್ಮಿಸಾಗರ ಪಂಚಾಯತಿಯಲ್ಲಿ ಜೆ.ಡಿ.ಎಸ್ ಅಧಿಕಾರ ಕಳೆದುಕೊಂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ!ರೆಬಲ್ ಕಾಂಗ್ರೆಸ್ ಮುಖಂಡರ ಸಲಹೆ ಪಡೆದ ಶ್ರೀನಿವಾಸಪುರದ ಜೆಡಿಎಸ್ ಮುಖಂಡರು ಪಂಚಾಯಿತಿ ಅಧ್ಯಕ್ಷ ಗಾಧಿಗೆ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳದೆ ದೂರ ಉಳಿದು ಅನಾಯಸವಾಗಿ ಅಧ್ಯಕ್ಷ ಗಾಧಿ ಅಧಿಕಾರವನ್ನು ಕೈ ಚಲ್ಲಿಕೊಂಡಿದೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಾರೆ.ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿದೇವಮ್ಮ ಅಧ್ಯೆಕ್ಷೆ!ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿಯ ಲಕ್ಷ್ಮಿಸಾಗರ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷೆ ಗೀತಮ್ಮ ಅವರ ರಾಜೀನಾಮೆಯಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ 16/02/2022 ಬುಧವಾರ ದಿನಾಂಕ ನಿಗಧಿಯಾಗಿತ್ತು ಅಂದು ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿದೇವಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ದ ಸ್ಪರ್ದಿಸಲು ಜೆ.ಡಿ.ಎಸ್ ಬೆಂಬಲಿತರು ನಾಮ ಪತ್ರ ಸಲ್ಲಿಸದೆ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಕಾರಣ ಚುನಾವಣೆಯನ್ನು 17/02/2022 ಗುರುವಾರಕ್ಕೆ ಮುಂದೂಡಲಾಗಿತ್ತು ಇಂದು ಸಹ ಜೆ.ಡಿ.ಎಸ್ ಬೆಂಬಲಿತ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳದೆ ಕಾರಣ…

Read More

ಶ್ರೀನಿವಾಸಪುರ:-ತಾಲೂಕಿನ ಯಲ್ದೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಶ್ರೀರಾಮಬಾಬು ಆಯ್ಕೆಯಾಗಿರುತ್ತಾರೆ.ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವಾದ ಯಲ್ದೂರು ಗ್ರಾಮ ಪಂಚಾಯಿತಿಯ ಅದ್ಯಕ್ಷ ಗಾದಿ ಏರುವುದು ಇಲ್ಲಿನ ರಾಜಕಾರಣಿಗಳಿಗೆ ಪ್ರತಿಷ್ಠೆಯ ವಿಚಾರ ಇಲ್ಲಿ ಎರಡನೆ ಅವದಿಗೆ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಲ್ಲಿಯೇ ಸಾಕಷ್ಟು ಮಂದಿ ಆಕಾಂಕ್ಷಿಗಳು ಇದ್ದರೂ ಯಲ್ದೂರಿನ ಪ್ರಭಾವಿ ರಾಜಕಾರಣಿ ಸ್ಥಳೀಯ ಶ್ರೀರಾಮಬಾಬು @ ವೈದ್ಯಬಾಬು ಎಂದು ಖ್ಯಾತರಾಗಿರುವ ಬಾಬು ಅಧ್ಯಕ್ಷ ಸ್ಥಾನದ ಪ್ರಭಲ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ದಿಸಿ ಗೆಲವು ಸಾಧಿಸಿರುತ್ತಾರೆ.21 ಸದಸ್ಯ ಬಲದ ಯಲ್ದೂರು ಗ್ರಾಮ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ 11 ಸದಸ್ಯರು ಕಾಂಗ್ರೇಸ್ ಬೆಂಬಲಿತ 10 ಸದಸ್ಯರು ಇದ್ದು ಅದ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಟಿ.ಎ ಶ್ರೀರಾಮಬಾಬು ಕಾಂಗ್ರೇಸ್ ಬೆಂಬಲಿತ ಅಬ್ಯಾರ್ಥಿಯಾಗಿ ಎಸ್. ಮೋಹನ್ ಬಾಬು ನಾಮಪತ್ರ ಸಲ್ಲಿಸಿದ್ದರು ಚುನಾವಣೆಯಲ್ಲಿ ಯಾವುದೇ ಮ್ಯಾಜಿಕ್ ಲಾಜಿಕ್ ನಡೆಯದೆ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತಚಲಾಯಿಸಿದ್ದು ಜೆಡಿಎಸ್ ಅಭ್ಯರ್ಥಿ 11 ಮತಗಳು ಹಾಗು ಕಾಂಗ್ರೆಸ್ ಅಭ್ಯರ್ಥಿ…

Read More

ಶ್ರೀನಿವಾಸಪುರ:ಮಾಸಿಕ ಚುಚ್ಚು ಮದ್ದು ಪಡೆದಿದ್ದ ಮೂರು ತಿಂಗಳ ಹಸುಗೂಸು ಮೃತ ಪಟ್ಟ ಹಿನ್ನಲೆಯಲ್ಲಿ ಹಸುಗೂಸಿನ ಪೋಷಕರು ಹಾಗು ಗ್ರಾಮಸ್ಥರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಹಾಗು ಸಿಬ್ಬಂದಿ ವಿರುದ್ದ ಪ್ರತಿಭಟನೆ ನಡೆಸಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ನಡೆದಿದೆ ಹಸುಗೂಸುಗಳಿಗೆ ಮಾಸಿಕ ಚುಚ್ಚುಮದ್ದು ನೀಡುವ ಸಂಬಂದ ತಾಲೂಕಿನಲ್ಲಿ ಪ್ರತಿ ಗುರುವಾರ ಪೆಂಟಾವೆಲೆಂಟ್ ಚುಚ್ಚು ಮದ್ದು ನೀಡಲಿದ್ದು ಅದರಂತೆ ಸೋಮಯಾಜಲಪಲ್ಲಿ ಗ್ರಾಮದ ಸುಬ್ರಮಣಿ ಮತ್ತು ಗಂಗರತ್ನ ದಂಪತಿಯ ಮೂರು ತಿಂಗಳ ಗಂಡು ಮಗುವಿಗೂ ವೈದ್ಯಕೀಯ ಸಿಬ್ಬಂದಿಯಿಂದ ಚುಚ್ಚು ಮದ್ದು ಕೊಡಿಸಿರುತ್ತಾರೆ ಚುಚ್ಚು ಮದ್ದು ಪಡೆದ ಮಗುವಿಗೆ ತಡರಾತ್ರಿ ಜ್ವರ ಬಂದಿದ್ದು ಮಾರನೆಯ ದಿನ ಇಂದು ಶುಕ್ರವಾರ ಮಗುವನ್ನು ಸೋಮಯಾಜಲಪಲ್ಲಿ ಆರೋಗ್ಯ ಕೇಂದ್ರಕ್ಕೆ ಕರೆತಂದ ತಾಯಿ ಗಂಗರತ್ನ ಅಲ್ಲಿನ ಡಾ.ಸೌಮ್ಯ ಬಳಿ ತಪಾಸಣೆ ಮಾಡಿಸಿರುತ್ತಾರೆ. ಈ ಸಂದರ್ಭದಲ್ಲಿ ಮಗು ತೀವ್ರ ಜ್ವರದಿಂದ ಬಳಲುತ್ತಿದ್ದು ಶ್ರೀನಿವಾಸಪುರದಲ್ಲಿ ತಙ್ಞ ವೈದ್ಯರ ಬಳಿ ತಪಾಸಣೆ ಮಾಡಿಸಿ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿರುತ್ತಾರೆ…

Read More

4ನೇ ಬಾರಿ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್1 ಗಂಟೆ 33 ನಿಮಿಷಗಳ ಕಾಲಾವಧಿಯಲ್ಲಿ ಬಜೆಟ್ ಮಂಡನೆಕೊರೊನಾ ನಂತರದ ಆರ್ಥಿಕತೆ ವೃದ್ಧಿಗೆ ಆದ್ಯತೆಶಿಕ್ಷಣ, ಉದ್ಯೋಗ ಕ್ಷೇತ್ರದ ಉತ್ತೇಜನಕ್ಕೆ ಹಲವಾರು ಮಹತ್ವದ ಘೋಷಣೆ60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಪಿಎಂ ಗತಿಶಕ್ತಿ ಯೋಜನೆಯಡಿ ಭಾರತ ರೈಲುಗಳ ಅಭಿವೃದ್ಧಿ ನ್ಯೂಜ್ ಡೆಸ್ಕ್: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ತಿನಲ್ಲಿ ಮಂಡಿಸಿದ 2022-23 ಸಾಲಿನ ಕೇಂದ್ರ ಬಜೆಟಲ್ಲಿ ಶಿಕ್ಷಣ, ಉದ್ಯೋಗ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಉತ್ತೇಜನಕ್ಕಾಗಿ ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ಘೋಷಣೆಯಲ್ಲಿ ಕೇಂದ್ರ ವಿತ್ತ ಸಚಿವರು 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆ ಕೊಟ್ಟಿದ್ದಾರೆ.ಸ್ವಾವಲಂಬಿ ಭಾರತ ಯೋಜನೆಯಡಿ 16 ಲಕ್ಷ ಉದ್ಯೋಗಗಳನ್ನು ನೀಡಲಾಗುವುದು.ಇದೇ ಸಮಯದಲ್ಲಿ 60 ಲಕ್ಷ ಉದ್ಯೋಗಗಳನ್ನು ಮೇಕ್ ಇನ್ ಇಂಡಿಯಾ ಅಡಿ ಸೃಷ್ಟಿಸಲಾಗುವುದು.ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹೊಸದಾಗಿ ಪ್ರಾರಂಭಿಸಲಾಗುವುದು ಹಾಗೂ ಇದರಿಂದ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗಾವಕಾಶ ಹೆಚ್ಚಿಸಬಹುದಾಗಿದೆ ಎಂದಿರುತ್ತಾರೆ.ರಾಷ್ಟ್ರೀಯ ಕೌಶಲ್ಯ ಅರ್ಹತಾ ಕಾರ್ಯಕ್ರಮಗಳು ಕೈಗಾರಿಕೆಗಳ ಅಗತ್ಯಗಳಿಗೆ…

Read More

ಶ್ರೀನಿವಾಸಪುರ: ಶ್ರೀನಿವಾಸಪುರ ಪುರಸಭೆಗೆ ನೂತನವಾಗಿ ನಾಮ ನಿರ್ದೇಶನ ಸದಸ್ಯರಾಗಿರುವ ಬಿಜೆಪಿ ಮುಖಂಡ ನಲ್ಲಪಲ್ಲಿರೆಡ್ಡೆಪ್ಪನವರಿಗೆ ಪಕ್ಷದ ಮುಖಂಡರು ಅಭಿನಂಧನೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ರೈತ ಮೊರ್ಚಾ ಅಧ್ಯಕ್ಷ ಲಕ್ಮಣಗೌಡ ಮಾತನಾಡಿ ಸಂಘಪರಿವಾರ ಮೂಲದ ಹಿರಿಯ ಬಿಜೆಪಿ ಕಾರ್ಯಕರ್ತರಾಗಿರುವ ರೆಡ್ಡೆಪ್ಪನವರನ್ನು ಪುರಸಭೆಗೆ ನಾಮ ನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಿರುವುದು ಪಕ್ಷದ ಸಂಘಟನೆಗೆ ಅನಕೂಲವಾಗಲಿದೆ ಎಂದರು.ನೂತನ ಸದಸ್ಯ ನಲ್ಲಪಲ್ಲಿರೆಡ್ಡೆಪ್ಪ ಮಾತನಾಡಿ ನನ್ನ ನೇಮಕಕ್ಕೆ ಸಹಕರಿಸಿದ ಪಕ್ಷದ ಮುಖಂಡರಿಗೆ ಹಾಗು ವಿಶೇ಼ಷವಾಗಿ ವಿಧಾನಪರಿಷತ್ ಸದಸ್ಯ ವೈ.ಎ.ನಾರಯಣಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಾಂಜಿ ಯುವ ಮುಖಂಡ ಸುರೇಶ್ ನಾಯ್ಕ್,ಚಿರವನಹಳ್ಳಿ ವಿನಯ್ ಗೌಡ ಮುಂತಾದವರು ಇದ್ದರು.

Read More

ಚಿತ್ತೂರು:ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೆಲೆ ನಡೆಯುತ್ತಿದ್ದ ದಾಳಿಗಳು ಕಡಿಮೆಯಾಗುತ್ತಿದೆ ಅನ್ನುವಷ್ಟರಲ್ಲಿ ದುಷ್ಕರ್ಮಿಗಳು ಕಾಣಿಪಾಕಂ ದೇವಾಲಯದ ರಥಚಕ್ರಗಳಿಗೆ ಬೆಂಕಿಹಚ್ಚಿದ್ದಾರೆಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕಾಣಿಪಾಕಂ ಶ್ರೀ ವರಸಿದ್ದಿ ವಿನಾಯಕ ದೇವಸ್ಥಾನದ ಹಳೆಯ ರಥದ ಚಕ್ರಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ್ದಾರೆ. ಗೋಶಾಲೆ ಪಕ್ಕದಲ್ಲಿ ದಾಸ್ತಾನು ಕೊಠಡಿ ಬಳಿಯಲ್ಲಿ ಸಂಗ್ರಹಿಸಿಟ್ಟಿದ್ದ ಹಳೆಯ ರಥದ ಚಕ್ರಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ.ಇದು ದುಷ್ಕರ್ಮಿಗಳ ಕೃತ್ಯವೆ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ಬೆಂಕಿಹಚ್ಚಿದ್ದಾರ ಎಂದು ದೇವಾಲಯದ ಅಧಿಕಾರಿಗಳು ಈ ಬಗ್ಗೆ ಪೋಲಿಸರಿಗೆ ದೂರು ನೀಡಿದ್ದಾರೆ.ಆಂಧ್ರದಲ್ಲಿ ದೇವಾಯಲಗಳ ಮೆಲೆ ದಾಳಿ ಮಾಡುವುದು ರಥಗಳಿಗೆ ಬೆಂಕಿಹಚ್ಚುವ ಕೃತ್ಯಗಳು ನಡೆಯುತ್ತಿದ್ದು ತೀರಾ ಇತ್ತಿಚಿಗೆ ಇಂತಹ ಯಾವುದೇ ಪ್ರಕರಣಗಳು ನಡೆದಿರಲಿಲ್ಲ.ಇದುವರಿಗೂ ದೇವಾಲಯಗಳ ಮೆಲೆ ನಡೆದ ದಾಳಿಗಳುಕರಾವಳಿ ಆಂಧ್ರದ ಪ್ರಮುಖ ವೈಷ್ಣವ ಪುಣ್ಯಕ್ಷೇತ್ರ ಅಂತರವೇದಿ ಶ್ರೀನರಸಿಂಹಸ್ವಾಮಿ ದೇವಾಸ್ಥಾನದ ರಥವನ್ನು ಸುಟ್ಟುಹಾಕಿದ್ದು ಭಾರೀ ಸಂಚಲನ ಮೂಡಿಸಿತ್ತು ಪ್ರಕರಣವನ್ನು ಸಿಬಿಐಗೆ ವಹಿಸಲು ಆಂಧ್ರ ಸರ್ಕಾರ ನಿರ್ಧರಿಸಿದೆ.ಇಂದಿಗೂ ನಿಗೂಢವಾಗಿಯೇ ಉಳಿದಿದೆ. ನೆಲ್ಲೂರು ಜಿಲ್ಲೆಯ ಬೋಗೋಳದ ಶ್ರೀ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ…

Read More